ಮಂಗಳೂರು - ಚೆನೈ ಭಾಂಧವ್ಯ
ಭಾರತ ದೇಶದ ನಾಲ್ಲ್ಕು ಮಹಾ ನಗರಗಳಲ್ಲಿ ಚೆನೈ ಒಂದು. ಕರಾವಳಿ ನಗರವಾದ ಮಂಗಳೂರು ಮತ್ತು ದೂರದ ಚೆನೈ ಗೆ ನೇರವಾದ ಸಂಬಂಧವಿದೆ.ಅನೇಕ ದಶಕಗಳಿಂದ ಈ ಭಾಗ ಚೆನೈ ಎಂದರೆ ಆಗಿನ ಮದ್ರಾಸ್ ಗವರ್ನರ್ ಆಳ್ವಿಕೆಯ ನೇರ ಆಡಳಿತಕ್ಕೆ ಒಳಪಟ್ಟಿತ್ತು.! ದೇಶ ಸ್ವಾತಂತ್ರ್ಯ ಪಡೆದ ಮೇಲು ಇದು ಮುಂದುವರೆದಿತ್ತು. ಈ ನಂಟಿನ ಅನೇಕ ಕುರುಹುಗಳು ಇಂದಿಗೂ ಕಾಣ ಸಿಗುತ್ತವೆ. ಮೀನುಗಾರಿಕೆಗೆ ಹುಟ್ಟಿದ ಸುಂದರ ಕರಾವಳಿ ನಾಡು ಚೆನೈ.ತಮಿಳುನಾಡಿನ ರಾಜಧಾನಿಯಾದ ಚೆನೈಗೆ ಸುಮಾರು 369 ವರ್ಷಗಳ ಇತಿಹಾಸವಿದೆ.ವಿಜಯ ನಗರ ಅರಸರು ಇದನ್ನು ಆಳಿದ ಬಗ್ಗೆ ಉಲ್ಲೇಖವಿದೆ.1639 ರ ಆಗಸ್ಟ್ 22 ರ0ದು ಇಂಗ್ಲೆಡಿನ ಫ್ರಾನ್ಸಿಸ್ ಎಂಬಾತ ಆಗ ಈ ಪ್ರಾಂತವನ್ನು ಆಳುತ್ತಿದ್ದ ಚೆನ್ನಪ್ಪ ನಾಯ್ಕರ್ ಎಂಬತನಿಂದ ಮದ್ರಾಸ್ ಪ್ರಾಂತವನ್ನು ಕಟ್ಟಲು ಅನುಮತಿ ಪಡೆದ ದಾಖಲೆಗಳು ಲಭ್ಯವಾಗಿವೆ. ಈ ಬಾರಿ ಈ ಚೆನೈ ಗೆ 370 ನೇ ಹುಟ್ಟು ಹಬ್ಬದ ಸ0ಭ್ರಮ.ಕಾಲಂತರದಲ್ಲಿ ಆನೇಕ ಹೆಸರುಗಳನ್ನು ಪಡೆದ ಚೆನೈ 1996 ರಲ್ಲಿ ಮತ್ತೆ ತನ್ನ ಮೂಲ ನಾಮಕ್ಕೆ ಮರು ನಾಮಕರಣ ಪಡೆಯಿತು.