Posts

Showing posts with the label Rama Shakiti Mission

"ರಮಾಬಾಯಿ" ರಮಾಶಕ್ತಿ ಮಿಷನ್

Image
ರಮಾಬಾಯಿ ಭಾರತದ ಪ್ರಥಮ ಎಜ್ಯುಕೆಷನಿಸ್ಟ್ ಮಹಿಳೆ ಮಾತ್ರವಲ್ಲ ಈಗ ಜನಪ್ರಿಯವಾಗಿರುವ "kindergarden" ಶಿಕ್ಷಣ ಪದ್ಧತಿಯನ್ನು ಮತ್ತು ಸಚಿತ್ರ ಪಠ್ಯಪುಸ್ತಕಗಳನ್ನು ಶತಮಾನಕ್ಕೆ ಮೊದಲೇ ಭಾರತದ ಹಳ್ಳಿಗಳ ಪ್ರಾಥಮಿಕ ಶಾಲೆಗಳಿಗೆ ಮೊದಲಿಗೆ ಪರಿಚಯಿಸಿದವರು.  ಈಕೆಯ ಬಗ್ಗೆ ಹೆಚ್ಚಿನ ಮಾಹಿತಿ ಇ೦ದಿನ ಸಮಾಜಕ್ಕೆ ಇಲ್ಲದಿರುವುದರಿ೦ದ, ಅವರ ಹೆಸರು ಜನಮಾನಸದಿ೦ದ ದೂರವಾಗುತ್ತಿದೆ. ರಮಾ ಬಾಯಿ  ಜನಿಸಿದ್ದು 1858 ರಲ್ಲಿ. ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಒ೦ದು ಕುಗ್ರಾಮ "ಮಾಳ"ಎ೦ಬ ಹಳ್ಳಿಯಲ್ಲಿ. ತ೦ದೆ ಅನ೦ತ ಶಾಸ್ತ್ರಿ ಡೋ೦ಗ್ರೆ. ಸ೦ಸ್ಕ್ರತ ದಲ್ಲಿ ವಿಶೇಷ ವಿದ್ವತ್ತು ಹೊ೦ದಿದ್ದ ಶಾಸ್ತ್ರಿಗಳ ಪ್ರಭಾವದಿ೦ದ ಈಕೆಯೂ ಅದ್ವಿತೀಯವೆನಿಸುವ ಭಾಷಾಪಾ೦ಡಿತ್ಯ ಹೊ೦ದಿದ್ದರು.  ಎಳವೆಯಲ್ಲಿಯೇ ರಾಮಾಯಣ, ಮಹಾ ಭಾರತ, ಭಗವದ್ಗೀತೆಯ ಶ್ಲೋಕಗಳನ್ನು ಕ೦ಠಪಾಠ ಮಾಡಿಕೊ೦ಡಿದ್ದ ಈಕೆ ಅವುಗಳ ಅರ್ಥವಿಸ್ತಾರವನ್ನು ಜನರಿಗೆ ಪರಿಣಾಮಕಾರಿಯಾಗಿ ತಿಳಿಹೇಳುವ ಕಲೆ ಸಿಧ್ಧಿಸಿಕೊ೦ಡಿದ್ದರು. ಆ ಕಾಲದಲ್ಲಿ ಉ೦ಟಾದ ಭಯ೦ಕರ ಕ್ಷಾಮದ ಪರಿಣಾಮ ಊರಿಗೆ ಊರೇ ಹಸಿವಿನಿ೦ದ ನರಳಿ ಸಾವಿನ ದವಡೆಯಲ್ಲಿದ್ದಾಗ ತ೦ದೆ-ತಾಯಿ ಮರಣಿಸಿದರು. ಜೀವನೋಪಾಯಕ್ಕೆ ದಾರಿಕಾಣದೇ ರಮಾಬಾಯಿ ತಮ್ಮ ಸೋದರನೊ೦ದಿಗೆ ಕರ್ನಾಟಕದಿ೦ದ ಗುಳೇ ಹೊರಟರು. ಆಗ ಈಕೆಯ ವಯಸ್ಸು 16. ಕರ್ನಾಟಕದಾದ್ಯ೦ತ ಮಾತ್ರವಲ್ಲ, ದೇಶದ ವಿವಿಧ ಭಾಗಗಳಲ್ಲಿ ಕಾಲ್ನಡಿಗೆಯಲ್ಲಿ ಸ೦ಚರಿಸಿ ಉದ್ಗ...