Posts

Showing posts with the label British mangalore

ಪಡುಪಣಂಬೂರಿನಲ್ಲಿ ಭೋಳಾರ ಭೋಜರಾವ್‌ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ

Image
ಮಂಗಳೂರಿನಲ್ಲಿ 1930ರ ಎ. 13ರಂದು ಮುಂಜಾನೆ ಉಪ್ಪು ತಯಾರಿಸಲು ಸಿದ್ಧರಾದ ಸತ್ಯಾಗ್ರಹಿಗಳ ಗುಂಪು ಬಂದರು ಪ್ರದೇಶಕ್ಕೆ ಹೊರಟಿತು. ಸತ್ಯಾಗ್ರಹಿಗಳು ಮೆರವಣಿಗೆಯಲ್ಲಿ ಹೋಗುತ್ತಿರುವಾಗ, ಪಿ. ಎಲ್‌. ಪುಣಿಚಿತ್ತಾಯರು ಬರೆದಿದ್ದ ಗೀತೆಯನ್ನು ಹಾಡುತ್ತಿದ್ದರು: ಉಪ್ಪಿನ ಕದನಕ್ಕೆ ಹೋರಾಡುವ ಜನರೆ ಉಪ್ಪಿಗೆ ಬೇಕಾಗಿ ಹೋರಾಡಿ ಭಟರೆ ಉಪ್ಪಿಗೂ ಗತಿ ಇಲ್ಲ. ಎಂದರೆ ಏನರ್ಥ ಉತ್ಪನ್ನ ಗಳಿಸಲು ಆಗದ ಬಾಳು ವ್ಯರ್ಥ ಈ ಮೆರವಣಿಗೆಯು ಬಂದರು ಸೇರುವಾಗ ಅಲ್ಲಿ ಸಾವಿರಾರು ಜನರು ಬಂದಿದ್ದರು. ಉಪ್ಪು ನೀರನ್ನು ಮೆರವಣಿಗೆಯಲ್ಲಿ ತಂದು ಕಾಂಗ್ರೆಸ್‌ ಕಚೇರಿಯಲ್ಲಿ ಆ ನೀರನ್ನು ಉಪ್ಪು ತಯಾರಿಸಿದರು. ಮಧ್ಯಾಹ್ನ ಪೊಲೀಸ್‌ ತಂಡದೊಂದಿಗೆ ಸರ್ಕಲ್‌ ಇನ್ಸ್‌ಪೆಕ್ಟರ್‌ ಬಂದು ಅಲ್ಲಿ ತಯಾರಿಸಿದ ಉಪ್ಪನ್ನು ಅದಕ್ಕೆ ಉಪಯೋಗಿಸಿದ ಪಾತ್ರೆಯನ್ನು ಉಳಿಸಿ ಉಳಿದ ಕಟ್ಟಿಗೆಯನ್ನು ಒಯ್ದರು. ಅಂದು ಸಂಜೆ ಕೇಂದ್ರ ಮೈದಾನಿನಲ್ಲಿ ಆರ್‌. ಕೆ. ಪ್ರಭು ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿತು. ಉಪ್ಪನ್ನು ಏಲಂ ಮಾಡಲು ಆರಂಭಿಸಲಾಯಿತು. ಆಗ ಪೊಲೀಸರು ಬಂದು ಉಪ್ಪನ್ನು ಸೆಳೆದುಕೊಂಡರು. ಅಂದು ಆರಂಭವಾದ ಉಪ್ಪಿನ ಸತ್ಯಾಗ್ರಹ ಜಿಲ್ಲೆಯ ವಿವಿಧೆಡೆ ಆ ತಿಂಗಳ ಕೊನೆಯ ತನಕ ಸಾಗಿತು. ಪಾನ ನಿಷೇಧಕ್ಕೆ ಒತ್ತಾಯಿಸಿ ಜಿಲ್ಲೆಯಾದ್ಯಂತ ಶೇಂದಿ, ಶರಾಬು ಅಂಗಡಿಗಳ ಎದುರು 1930ರಲ್ಲಿ ಪಿಕೆಟಿಂಗ್‌ ನಡೆಯಿತು. ಮೇ 5ನ್ನು ಮದ್ಯ ನಿಷೇಧ ದಿನವೆಂದು ಆಚರಿಸಲಾಯಿತು. ಆ ದಿನ ಮೆ...

"ನೆಲ್ಲಿತೀರ್ಥ" ಪವಿತ್ರ ಗುಹಾತೀರ್ಥದ ಸನ್ನಿಧಿ

Image
ತುಳುನಾಡಿನ ಪ್ರಾಚೀನ ದೇವಾಲಯಗಳಿಗೆಲ್ಲ ಒಂದು ಭವ್ಯ ಪರಂಪರೆಯಿದೆ. ಹಿಂದೆ ಈ ಪ್ರದೇಶವನ್ನು ಆಳಿದ್ದ ಆಳುಪ, ವಿಜಯನಗರ, ಕೆಳದಿ ಸಂಸ್ಥಾನಗಳಿಂದಲೂ, ಸ್ಥಳೀಯ ರಾಜವಂಶೀಯರಿಂದಲೂ ಆರಾಧಿಸಲ್ಪಡುತ್ತಿದ್ದ ಅನೇಕ ದೇವಾಲಯಗಳು ಇಲ್ಲಿವೆ. ದೇವಾಲಯಗಳ ವಿನಿಯೋಗಗಳು ಸಾಂಗವಾಗಿ ನಡೆಯಬೇಕೆಂಬ ಸದುದ್ದೇಶದಿಂದ, ಅಂದಿನ ಅರಸರು ಬಿಟ್ಟುಕೊಟ್ಟ ದತ್ತಿ ಶಾಸನಗಳ ಸಂಖ್ಯೆ ಅಪರಿಮಿತವಾಗಿದೆ. ಇಲ್ಲಿಯ ತುಂಡರಸರಲ್ಲಿ ಚೌಟರು ಸುಪ್ರಸಿದ್ಧರು.  ಇವರು ಮೂಲತಃ ಕರಾವಳಿಯ ಉಳ್ಳಾಲದವರಾಗಿದ್ದು, ಮುಂದೆ ಪುತ್ತಿಗೆ, ಮೂಡಬಿದಿರೆಗಳಲ್ಲಿ ಕೇಂದ್ರಸ್ಥಾನವನ್ನೇರ್ಪಡಿಸಿ ರಾಜ್ಯಭಾರ ಮಾಡುತ್ತಿದ್ದರು. ಇವರು ಸೋಮನಾಥ ದೇವರ ಭಕ್ತರಾಗಿದ್ದರು. ಆದಕಾರಣದಿಂದ ಇವರು ಆಳಿಕೊಂಡಿದ್ದ ಭಾಗದಲ್ಲಿ ಅನೇಕ ಸೋಮನಾಥ ದೇವಾಲಯಗಳಿವೆ. ಉಳ್ಳಾಲ, ಪುತ್ತಿಗೆ, ಅಮ್ಮೆಂಬಳ, ಪೆರ್ಮುದೆ, ಪೋರ್ಕೋಡಿ, ಗುರುಪುರ, ಇರಾ, ನೆಲ್ಲಿತೀರ್ಥ ಮೊದಲಾದ ಸೋಮನಾಥ ದೇವಾಲಯಗಳು ಇಲ್ಲಿವೆ. ಇವುಗಳಲ್ಲಿ ನೆಲ್ಲಿತೀರ್ಥವು ಪವಿತ್ರ ಗುಹಾತೀರ್ಥದ ಸನ್ನಿಧಿಯಲ್ಲಿದ್ದು ಅತಿಮಹಿಮಾನ್ವಿತವಾಗಿದೆ. ಪೂರ್ವಕಾಲದಲ್ಲಿ ಇದು ಜಾಬಾಲಿಮುನಿಯ ಸಿದ್ಧಾಶ್ರಮವಾಗಿತ್ತೆಂದು ಪುರಾಣೋಕ್ತಿಯಿದೆ. ಶ್ರ್‍ಈಕ್ಷೇತ್ರದಲ್ಲಿರುವ ಅರಸರ ಮಂಚ, ಅರಸುಕಟ್ಟೆಗಳು ಇಲ್ಲಿಗೆ ಚೌಟರಸರು ಆಗಾಗ ಭೇಟಿ ಕೊಡುತ್ತಿದ್ದರೆಂಬುದಕ್ಕೆ ಮೂಕಸಾಕ್ಷಿಗಳಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸವನ್ನು ಬರೆದಿರುವ ದಿ. ಗಣಪತಿರಾವ್ ಐ...

ಗಡಾಯಿ ಕಲ್ಲು(ಜಮಲಾಬಾದ್ ಕೋಟೆ)

Image
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕೆಂದರೆ ಎಲ್ಲರ ಮುಂದೆ ಮೂಡುವ ದೃಶ್ಯ `ಗಡಾಯಿ ಕಲ್ಲು'. ಬೆಳ್ತಂಗಡಿ ತಾಲೂಕಿನಲ್ಲೇ ಅತ್ಯಂತ ಆಕರ್ಷಣೆಯ, ಚಾರಣಿಗರಿಗೆ, ಪ್ರವಾಸಿಗರಿಗೆ ಪ್ರಿಯ ತಾಣವಾಗಿ ಈ ಕಲ್ಲು ವಿರಾಜಿಸುತ್ತಿದೆ.  ಕು ದುರೆ ಮುಖ ರಾಷ್ಟ್ರೀಯ ಉದ್ಯಾನವನದಲ್ಲಿರುವ  `ನಡ' ಗ್ರಾಮಕ್ಕೆ ಸೇರಿರುವ  ಮತ್ತು ರಾಜ್ಯ ಹೆದ್ದಾರಿಗೆ ಸನಿಹದಲ್ಲಿರುವ ಈ ಗಡಾಯಿಕಲ್ಲು ಹಲವಾರು ಐತಿಹ್ಯಗಳನ್ನೂ ಚಾರಿತ್ರಿಕ ದಾಖಲೆಗಳನ್ನೂ ಹೊಂದಿದೆ. ಅದಮ್ಯ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಈ ಕಲ್ಲು ಪಶ್ಚಿಮ ಘಟ್ಟದ ಹಿನ್ನಲೆಯೊಂದಿಗೆ ಶೋಭಿಸುತ್ತಾ ಚಾರಣಿಗರನ್ನು, ಪ್ರಕೃತಿ ಪ್ರಿಯರನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿದೆ.   ಸಮುದ್ರ ಮಟ್ಟದಿಂದ 1788 ಅಡಿ ಎತ್ತರದಲ್ಲಿದೆ ಗಡಾಯಿಕಲ್ಲು. ಇದರ ಮೇಲ್ಭಾಗದಲ್ಲಿ ನರಸಿಂಹಗಡ ಅಥವಾ ಜಮಲಾಗಡ ಎಂಬ ಕೋಟೆ ಕಾಣಬಹುದಾಗಿದೆ. 2,800 ಮೆಟ್ಟಿಲುಗಳನ್ನೇರಿದಾಗ ಜಮಲಾಗಡದ ಮೇಲ್ಭಾಗ ತಲುಪಬಹುದು. ಗಡಾಯಿಕಲ್ಲಿನ ಮೇಲಕ್ಕೇರುತ್ತಾ ಸಾಗಿದಂತೆ ಒಂದು ದ್ವಾರ ಸಿಗುತ್ತದೆ. ಈ ದ್ವಾರದ ನಂತರ ಕಲ್ಲನ್ನೇ ಕಡಿದು ವಿನ್ಯಾಸಗೊಳಿಸಿ ಮೆಟ್ಟಿಲು ರಚಿಸಲ್ಪಟ್ಟಿದೆ. ತುಂಬಾ ಕಡಿದಾದ ಈ ಮೆಟ್ಟಿಲುಗಳ ಮೇಲೆ ಸಾಗುವುದೇ ಒಂದು ಪ್ರಯಾಸ ಮತ್ತು ಸಾಹಸದ ಕಾರ್ಯ. ಇಂಡೋ ಸಾರ್ಸೆನಿಕ್ ಶೈಲಿಯನ್ನು ಹೋಲುವ ಶಿಲ್ಪ ಚಿತ್ರಗಳು ಇಲ್ಲಿನ ಒಂದನೇ ಮಹಾ ದ್ವಾರಗಳಲ್ಲಿ ಕಂಡುಬರುತ್ತವೆ. ಗಡಾಯಿಕಲ್ಲಿನ ಮೇಲ್ಭ...

ಮಂಗಳೂರಿನ ನಿಜವಾದ ರೂವಾರಿ ಯು.ಶ್ರೀನಿವಾಸ ಮಲ್ಯ

Image
ಉಳ್ಳಾಲ ಶ್ರೀನಿವಾಸ ಮಲ್ಯ ಈ ಹೆಸರು ಮಂಗಳೂರಿನ ಇತಿಹಾಸದ ಪುಟಗಳಲ್ಲಿ ಇಂದಿಗೂ ಅಮರ,ಅವರು ಆ ಕಾಲದಲ್ಲಿ ಮಂಗಳೂರಿನ ಕನಸನ್ನು ಕಟ್ಟಿರದಿದ್ದರೆ ಬಹುಷ ನಾವು ಇಂದು ಕಾಣುವ  ಭವ್ಯ ಮಂಗಳೂರನ್ನು ಊಹಿಸಲಿ ಆಸಾಧ್ಯ. ಸದ್ದುಗದ್ದಲ ಇಲ್ಲದೆ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ನೀಡಿದ ಕೊಡುಗೆ ಅನನ್ಯ. ಪ್ರಸಕ್ತ ಅವಿಭಜಿತ ದಕ್ಷಿಣ ಕನ್ನಡದ ಅಭಿವೃದ್ಧಿ ಚಿಂತನೆಯ ಮಟ್ಟಿಗೆ ಯು.ಎಸ್. ಮಲ್ಯರು ಪ್ರಾತಃಸ್ಮರಣೀಯರು.  ಅಸಾಧಾರಣ ಬುದ್ಧಿವಂತಿಕೆ, ವ್ಯವಹಾರ ಕುಶಲತೆ ಹೊಂದಿರುವ ನಮ್ಮ ಕರಾವಳಿಯ ಕೊಂಕಣ ಸಾರಸತ್ವರು ಮತ್ತು ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯ ಈ ನೆಲದ ವಿಭಿನ್ನ ರಂಗಗಳಿಗೆ ಅಸಂಖ್ಯ ಮಹನೀಯರನ್ನು ನೀಡಿದೆ. ದೇಶಭಕ್ತ ಕಾರ್ನಾಡ್ ಸದಾಶಿವರಾಯರು, ಸಾಮಾಜಿಕ ಪರಿವರ್ತನೆಯ ಹರಿಕಾರ ಕುದ್ಮುಲ್ ರಂಗರಾಯರು, ಬ್ಯಾಂಕಿಂಗ್ ಆಂದೋಲನದ ರೂವಾರಿಗಳಲ್ಲೊಬ್ಬರಾದ ಅಮ್ಮೆಂಬಳ ಸುಬ್ಬರಾಯರು, ರಾಷ್ಟ್ರಕವಿ ಎನಿಸಿದ ಗೋವಿಂದ ಪೈಗಳು… ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಉಳ್ಳಾಲ ಶ್ರೀನಿವಾಸ ಮಲ್ಯ ಕೂಡಾ ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದಿಂದ ಬಂದವರೇ. ಶ್ರೀನಿವಾಸ ಮಲ್ಯರು 1902 ಇಸವಿ ನವಂಬರ 21ರಂದು ಜಿಲ್ಲೆಯ ಹೆಸರಾಂತ ಉಳ್ಳಾಲ ಮಲ್ಯ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಶ್ರೀ ಉಳ್ಳಾಲ ಮಂಜುನಾಥ ಮಲ್ಯ ಮತ್ತು ತಾಯಿ ಸರಸ್ವತಿ ಯಾನೆ ರುಕ್ಮಾಬಾಯಿ. ಹಿರಿಯ ಅಣ್ಣ ಮಾಧವ ಮಲ್ಯ, ಇನ್ನೊಬ್ಬ ತಮ್ಮ ಜಿಲ್ಲೆಯ ಹೆಸರಾಂತ ಸಾಮಾಜಿಕ ...

ಸರ್ ಜಾನ್ ಸ್ಟರಕ್ : ಕಲೆಕ್ಟರ್ ಆಫ್ ಸೌತ್ ಕೆನರಾ

Image
ಸರ್ ಜಾನ್ ಸ್ಟರಕ್ , ಈ ಹೆಸರು ಮಂಗಳೂರಿನ ಇಂದಿನ ಪೀಳಿಗೆಗೆ ಕಡಿಮೆ ಪರಿಚಯ.18 ನೇ ಶತಮಾನದಲ್ಲಿ ಕರಾವಳಿ ಜಿಲ್ಲೆಯನ್ನು ಆಳಿದ ಬ್ರಿಟೀಷ್ ಅಧಿಕಾರಿ.ಜಿಲ್ಲಾ ಕಲೆಕ್ಟರರಾಗಿ ಅನೇಕ ಉತ್ತಮ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾದವರು.1881 ರಲ್ಲಿ ಕರಾವಳಿಯ ಈ ಭಾಗ ಮದ್ರಾಸ್ ಆಡಳಿತಕ್ಕೆ ಒಳಪಟ್ಟಿದ್ದ ಈ ಸಂದರ್ಭದಲ್ಲಿ ಈ ಜಿಲ್ಲೆಯಲ್ಲಿ ಸ್ಟರಕ್ ಅವರು ಕಲೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದರು.ಇದಕ್ಕೂ ಮುನ್ನ ಅವರು ಈ ಜಿಲ್ಲೆಯಲ್ಲಿ ಅನೇಕ ಕಡೆ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. 1866-67 ರಲ್ಲಿ ಅವರು ಸೌತ್ ಕೆನರಾ ಜಿಲ್ಲೆಯ ಎಸಿಸ್ಟೆಂಟ್ ಕಲೆಕ್ಟರ್ ಆಗಿ ನೇಮಕವಾಗಿದ್ದರು. ( ಮಂಗಳೂರು ಹಳೇ ಬಂದರಿನಲ್ಲಿನ ಸ್ಟರಕ್ ವೃತ್ತ) 1873 ರಲ್ಲಿ ಸೌತ್ ಕೆನರಾ ಮತ್ತು ಮೈಸೂರು ಜಿಲ್ಲೆಗಳ ಮಹತ್ವದ ಗಡಿ ವಿವಾದವನ್ನು ಪರಿಹರಿಸುವ ನಿಟ್ಟಿನಲ್ಲಿ 750 ರೂಪಾಯಿಗಳ ವಿಶೇಷ ಸಂಭಾವನೆಯೊಂದಿಗೆ ಅವರನ್ನು ಕಮೀಶನರ್ ಆಗಿ ಬ್ರೀಟಿಷ್ ನೇಮಕ ಮಾಡಿತ್ತು.ಸ್ಥಳಿಯ ಸಮಸ್ಯೆಗಳನ್ನು ಬಗೆ ಹರಿಸಲು ಇಲ್ಲಿನ ಸ್ಥಳಿಯ ಭಾಷೆಯ ಅಗತ್ಯತೆಯನ್ನು ಕಂಡು, ಅವರು ಕನ್ನಡ, ತುಳು ಭಾಷೆಯನ್ನು ಕಲಿತರು ಮಾತ್ರವಲ್ಲ ನಿರರ್ಗಳವಾಗಿ ಮಾತಾಡುತ್ತಿದ್ದರು. ತುಳು ಭಾಷೆಯಲ್ಲಿ ಅಪಾರ ಪಾಂಡಿತ್ಯವನ್ನು ಪಡೆದಿದ್ದ ಬ್ರಾಹ್ಮಣರಿಂದ ತುಳು ಭಾಷೆಯನ್ನು ಕಲಿತರು. ಈ ಹಿನ್ನೆಲೆಯಲ್ಲಿ 1872 ರಲ್ಲಿ ಕನ್ನಡ ಭಾಷಾ ಅನುವಾದಕರಾಗಿ ಸರ್ಕಾರದಿಂದ ನೇಮಕಗೊಂಡರ...

ಮಂಗಳೂರಿನ ಹಂಪನಕಟ್ಟಾ ಸರ್ಕಾರಿ ಕಾಲೇಜ್

Image
ಮಂಗಳೂರು ಕೇಂದ್ರವಾಗಿರುವ ಈ ಶೈಕ್ಷಣಿಕ ಇತಿಹಾಸದಲ್ಲಿ ಈ ಕೆಂಪು ಕಲ್ಲಿನ ಸರ್ಕಾರಿ ಕಾಲೇಜು ತನ್ನದೇ ಆದ ಇತಿಹಾಸ ಮತ್ತು ಮಹತ್ವವನ್ನು ಪಡೆದಿದೆ. ನಗರದ ಹೃದಯ ಭಾಗದಲ್ಲಿ ಸುಮಾರು 8 ಎಕರೆ ಪ್ರದೇಶದಲ್ಲಿ ಹರಡಿರುವ ಈ ಕಾಲೇಜಿನಲ್ಲಿ ಮೂರು ಪಾರಂಪರಿಕ ಕಟ್ಟಡಗಳಿವೆ. ಆಡಳಿತ ಕಚೇರಿ, ರವಿಂದ್ರ ಕಲಾಭವನ, ಹಾಗೂ ಕಾಮರ್ಸ್ ಬ್ಲಾಕ್ ಗಳನ್ನು ಇದು ಹೊಂದಿದೆ.  ಅದ್ಬುತ ವಾಸ್ತು ಹಾಗೂ ಇಂಡೋ ಸಾರಸೆನಿಕ್ ಶೈಲಿಯಲ್ಲಿ ಕೇವಲ ಕೆಂಪುಮುರ ಕಲ್ಲು  ಹಾಗೂ ಮರಳು ಹಾಗೂ ಮಂಗಳೂರು ಹೆಂಚು ಬಳಸಿ ಕಟ್ಟಲಾದ ಈ  ಕಟ್ಟಡಗಳು ಶತಮಾನವನ್ನು ದಾಟಿವೆ. ಸಾಹಿತಿ ಮತ್ತು ಸ್ವಾತಂತ್ರ ಹೋರಾಟಗಾರರಾದ ಪಂಜೆ ಮಂಗೇಶ್ ರಾವ್, ಮಂಜೇಶ್ವರ ಗೋವಿಂದ ಪೈ, ಬೆನೆಗಲ್ ರಾಂ ರಾವ್, ಡಾ. ಶಿವರಾಂ ಕಾರಂತ್,ಡಾ. ಎ.ಬಿ. ಶೆಟ್ಟಿ, ಕಾರ್ನಾಡ್ ಸದಾಶಿವ ರಾವ್, ಡಾ.ಯು.ಪಿ ಮಲ್ಯ, ಕುದ್ಮುಲ್ ರಂಗ ರಾವ್, ಸೂರ್ಯ ನಾರಾಯಣ್ ಅಡಿಗ, ಎ.ಬಿ. ಶೆಟ್ಟಿ, ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಎ.ಬಿ. ರಾಮ್ ರಾವ್, ಕೆನರಾ ಬ್ಯಾಂಕಿನ ಸ್ಥಾಪಕ ಅಮ್ಮೆಂಬಳ ಸುಬ್ಬರಾವ್, ಹಿರಿಯ ಸಹಕಾರಿ ಮೊಳಹಳ್ಲಿ ಶಿವರಾವ್ , ಕಮಲಾ ದೇವಿ ಚಟ್ಟೋಪಾಧ್ಯಾಯ, ಅನೇಕ ಮಹಾನ್ ಸಾಧಕರು ಈ ಶಾಲೆಯಲ್ಲಿ ಕಲಿತವರು.! ಈಗಿನ ಡಾ. ವೀರಪ್ಪ ಮೊಯಿಲಿ, ಪಿ.ಎಂ. ಸಾಯಿದ್, ಡಿ.ಕೆ. ಚೌಟ, ಸಂತೋಷ್ ಕುಮಾರ್ ಗುಲ್ವಾಡಿ, ಎಂ.ವಿ. ಕಾಮತ್, ಜಸ್ಟಿಸ್ ಜಗನ್ನಾಥ ಶೆಟ್ಟಿ, ಬಿ.ರಮನಾಥ ರೈ, ಹೀಗೇ ಅನೇಕ ಮಹನೀಯರು ಇಲ್ಲಿನ ಹಳೇ ವಿದ್ಯಾರ್ಥಿ...