Saturday, April 7, 2012

ಸರ್ ಜಾನ್ ಸ್ಟರಕ್ : ಕಲೆಕ್ಟರ್ ಆಫ್ ಸೌತ್ ಕೆನರಾ

ಸರ್ ಜಾನ್ ಸ್ಟರಕ್, ಈ ಹೆಸರು ಮಂಗಳೂರಿನ ಇಂದಿನ ಪೀಳಿಗೆಗೆ ಕಡಿಮೆ ಪರಿಚಯ.18 ನೇ ಶತಮಾನದಲ್ಲಿ ಕರಾವಳಿ ಜಿಲ್ಲೆಯನ್ನು ಆಳಿದ ಬ್ರಿಟೀಷ್ ಅಧಿಕಾರಿ.ಜಿಲ್ಲಾ ಕಲೆಕ್ಟರರಾಗಿ ಅನೇಕ ಉತ್ತಮ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾದವರು.1881 ರಲ್ಲಿ ಕರಾವಳಿಯ ಈ ಭಾಗ ಮದ್ರಾಸ್ ಆಡಳಿತಕ್ಕೆ ಒಳಪಟ್ಟಿದ್ದ ಈ ಸಂದರ್ಭದಲ್ಲಿ ಈ ಜಿಲ್ಲೆಯಲ್ಲಿ ಸ್ಟರಕ್ ಅವರು ಕಲೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದರು.ಇದಕ್ಕೂ ಮುನ್ನ ಅವರು ಈ ಜಿಲ್ಲೆಯಲ್ಲಿ ಅನೇಕ ಕಡೆ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. 1866-67 ರಲ್ಲಿ ಅವರು ಸೌತ್ ಕೆನರಾ ಜಿಲ್ಲೆಯ ಎಸಿಸ್ಟೆಂಟ್ ಕಲೆಕ್ಟರ್ ಆಗಿ ನೇಮಕವಾಗಿದ್ದರು.


( ಮಂಗಳೂರು ಹಳೇ ಬಂದರಿನಲ್ಲಿನ ಸ್ಟರಕ್ ವೃತ್ತ)
1873 ರಲ್ಲಿ ಸೌತ್ ಕೆನರಾ ಮತ್ತು ಮೈಸೂರು ಜಿಲ್ಲೆಗಳ ಮಹತ್ವದ ಗಡಿ ವಿವಾದವನ್ನು ಪರಿಹರಿಸುವ ನಿಟ್ಟಿನಲ್ಲಿ 750 ರೂಪಾಯಿಗಳ ವಿಶೇಷ ಸಂಭಾವನೆಯೊಂದಿಗೆ ಅವರನ್ನು ಕಮೀಶನರ್ ಆಗಿ ಬ್ರೀಟಿಷ್ ನೇಮಕ ಮಾಡಿತ್ತು.ಸ್ಥಳಿಯ ಸಮಸ್ಯೆಗಳನ್ನು ಬಗೆ ಹರಿಸಲು ಇಲ್ಲಿನ ಸ್ಥಳಿಯ ಭಾಷೆಯ ಅಗತ್ಯತೆಯನ್ನು ಕಂಡು, ಅವರು ಕನ್ನಡ, ತುಳು ಭಾಷೆಯನ್ನು ಕಲಿತರು ಮಾತ್ರವಲ್ಲ ನಿರರ್ಗಳವಾಗಿ ಮಾತಾಡುತ್ತಿದ್ದರು. ತುಳು ಭಾಷೆಯಲ್ಲಿ ಅಪಾರ ಪಾಂಡಿತ್ಯವನ್ನು ಪಡೆದಿದ್ದ ಬ್ರಾಹ್ಮಣರಿಂದ ತುಳು ಭಾಷೆಯನ್ನು ಕಲಿತರು. ಈ ಹಿನ್ನೆಲೆಯಲ್ಲಿ 1872 ರಲ್ಲಿ ಕನ್ನಡ ಭಾಷಾ ಅನುವಾದಕರಾಗಿ ಸರ್ಕಾರದಿಂದ ನೇಮಕಗೊಂಡರು.1884 ರಲ್ಲಿ ಆಗಿನ ಸ್ಥಳಿಯ ಆಡಳಿತಕ್ಕೆ ಸಂಬಂಧಿಸಿದಂತೆ ಅಂಕಿ ಅಂಶಗಳನ್ನೊಳಗೊಂಡಂತೆಮೊದಲ ಗೆಜೆಟಿಯರನ್ನು ಪ್ರಪ್ರಥಮ ಬಾರಿಗೆ ಬರೆದು ಮುದ್ರಿಸುವ ಕಾರ್ಯಕ್ಕೆ ಕೈ ಹಾಕಿದ್ದರು. ಇದಕ್ಕಾಗಿ ಅವರು ನಾಲ್ಕು ವರ್ಷಗಳ ಕಾಲ ಪರಿಶ್ರಮ ಪಡಬೇಕಾಯಿತು. ನೆರೆಯ ಕಾಸರಗೋಡಿನಿಂದ ಉತ್ತರ ಕನ್ನಡದ ಪ್ರತೀ ಊರು ಕೇರಿಗಳನ್ನು ಸುತ್ತಾಡಿ ಮಾಹಿತಿ ಕಲೆ ಹಾಕುತ್ತಿದ್ದರು. ಎಲ್ಲವನ್ನೂ ಖುದ್ದಾಗಿ ತಿಳಿದುಕೊಳ್ಳಬೇಕೆಂಬ ಹಂಬಲ ಆದ್ದರಿಂದ ಬೆಟ್ಟ- ಗುಡ್ಡಗಳನ್ನು ಏರುವುದರ ಜೊತೆಗೆ, ನದೀ- ಹಳ್ಳಗಳಿಗೆ, ಸ್ವತ ಇಳಿದು ಆಳ ನೊಡುತ್ತಿದ್ದರು. ಇವತ್ತಿಗೂ ಇವರ ಗಜೆಟಿಯರೇ ನಮ್ಮ ಜಿಲ್ಲಾಡಳಿತಗಳಿಗೆ ಮಾರ್ಗ ಸೂಚಿ ಮತ್ತು ದಾಖಲೆ.ಎಪ್ರಿಲ್ 13,  1881 ರಲ್ಲಿ ಸರ್ ಜಾನ್ ಸ್ಟರಕ್ ಅವರು ಸೌತ್ ಕೆನರಾ ಜಿಲ್ಲೆಯ ಕಲೆಕ್ಟರ್ ಆಗಿ ಅಧಿಕಾರ ಸ್ವೀಕರಿದರು. ಸತತ 6 ವರ್ಷಗಳ ಕಾಲ ಜಿಲ್ಲೆಯ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ ನೆರೆಯ ಕೊಡಗು ಜಿಲ್ಲೆಯಲ್ಲೂ ವಿಶೇಷ ಕರ್ತವ್ಯ ಅಧಿಕಾರಿಯಾಗಿ,ರೆವೆನ್ಯೂ ಬೋರ್ಡಿನ ಸದಸ್ಯರಾಗಿ,ಕೊಯಮತ್ತೂರಿನ ಜಿಲ್ಲಾಧಿಕಾರಿಯಾಗಿ,ಸೇನೆ ನೀಡಿ 1894 ರಲ್ಲಿ ತಮ್ಮ ಸೇವೆಯಿಂದ ನಿವೃತ್ತರಾದರು.ಅನೇಕ ಜನಪರ ಕಾರ್ಯಕ್ರಮಗಳನ್ನು ಅವರ ಅಧಿಕಾರ ಅವಧಿಯಲ್ಲಿ ಮಾಡಿದ್ದರು.ಈ ಹಿನ್ನೆಲೆಯಲ್ಲಿ ಅವರ ನೆನಪಿಗಾಗಿ ಮಂಗಳೂರು ನಗರದ ಫಳ್ನಿರಿನ ರಸ್ತೆಗೆ ಇವರ ಹೆಸರನ್ನು ಇಡಲಾಗಿದೆ, ಮತ್ತು ಮಂಗಳೂರಿನ ಹಳೇ ಬಂದರು ರಸ್ತೆಯ ಒಂದು ವೃತ್ತಕ್ಕೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.

No comments:

Post a Comment