Posts

Showing posts with the label Karnad Sadashiva Rao

ದಕ್ಷಿಣಕನ್ನಡದ ಗಾಂಧಿ ಕಾರ್ನಾಡ್ ಸದಾಶಿವರಾಯ

Image
ಕಾರ್ನಾಡ್ ಸದಾಶಿವ ರಾವ್ ರವರು ಕರ್ನಾಟಕದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರು . ಇವರು ಮಂಗಳೂರನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು . ಕಾರ್ನಾಡ್ ಸದಾಶಿವರಾಯರು ಹುಟ್ಟಿದ್ದು ಮಂಗಳೂರಿನಲ್ಲಿ ೧೮೮೧ ರಲ್ಲಿ . ಅವರು ಅತ್ಯಂತ ಶ್ರೀಮಂತ ವಕೀಲರಾಗಿದ್ದ ರಾಮಚಂದ್ರರಾಯರ ಏಕಮಾತ್ರ ಪುತ್ರ . ಹುಡುಗನಾಗಿದ್ದಾಗಲೂ ಕೊಡುವುದರಲ್ಲಿಯೇ ಸಂತೋಷ . ತನ್ನ ಪುಸ್ತಕ , ಆಟದ ಸಾಮಾನುಗಳನ್ನು ಬಡ ಹುಡುಗರಿಗೆ ಹಂಚಿ ಬಂದು ತಂದೆಯಿಂದ ಬೈಸಿಕೊಂಡದ್ದು ಅನೇಕ ಬಾರಿ . ಸದಾಶಿವರಾಯರು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದಿ ನಂತರ ಮುಂಬೈನಲ್ಲಿ ವಕೀಲಿ ಶಿಕ್ಷಣ ಪಡೆದರು .           ಆಗ ದೇಶದಲ್ಲಿ ಬಿರುಗಾಳಿಯಂತೆ ಹಬ್ಬುತ್ತಿದ್ದ ಸ್ವದೇಶೀ ಆಂದೋಲನ ಅವರನ್ನು ಸೆಳೆದು ಕೊಂಡಿತು . ತಾವೂ ಅತ್ಯಂತ ಸರಳ ಜೀವನ ನಡೆಸಲು ತೀರ್ಮಾನ ಮಾಡಿ , ತಮ್ಮ ಹೆಂಡತಿ ಶಾಂತಾಬಾಯಿಯವರೊಂದಿಗೆ ಬಾಲವಿಧವೆಯರ , ಹರಿಜನರ ಪುನರ್ವಸತಿ ಕಾರ್ಯಕ್ರಮಗಳನ್ನು ನಡೆಸಿದರು . ದಕ್ಷಿಣ ಕನ್ನಡದ ದೇವಸ್ಥಾನಗಳಲ್ಲಿ ಹರಿಜನರ ಪ್ರವೇಶವನ್ನು ಜನರ ಮನವೊಲಿಸಿ ಸಾಧಿಸಿದರು . 1919 ರಲ್ಲಿ ಗಾಂಧೀಜಿ ಸ್ವಾತಂತ್ರ್ಯ ಹೋರಾಟದ ಕಹಳ...