ಪೋಸ್ಟ್‌ಗಳು

Tippu Sulthan ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಬಂಟ್ವಾಳದ 'ನೆತ್ತರ ಕೆರೆ' ಮತ್ತು ಟಿಪ್ಪು ಸುಲ್ತಾನನ ರಕ್ತ ಚರಿತೆ...!

ಇಮೇಜ್
 ದಕ್ಷಿಣ ಕನ್ನಡ: ಬ್ರಿಟೀಷರ ವಿರುದ್ದ ಸ್ವಾತಂತ್ರ್ಯದ ರಣಕಹಳೆ ಊದಿದ ಮೈಸೂರಿನ  ಹುಲಿ ಟಿಪ್ಪು ಸುಲ್ತಾನ್‌  ಅನೇಕರಿಗೆ ಅಪ್ರತಿಮ ದೇಶಭಕ್ತನೆಂದು ಕಂಡರೂ  ಅನೇಕರ ಪಾಲಿಗೆ ಆತ ವಿಲನ್  ಆಗಿದ್ದ ಅದರಲ್ಲೂ ಕರಾವಳಿಯ ಕ್ರೈಸ್ತರು ಮತ್ತು ಕೊಡಗಿನ  ಕೊಡವರ ಪಾಲಿಗೆ ಆತ ನರ ಹಂತಕನಾಗಿದ್ದ ಎಂದೂ ಇತಿಹಾಸ ಹೇಳುತ್ತೆ. ಬ್ರಿಟೀಷರ ಪರವಾಗಿ ಇವರು ಕೆಲಸ ಮಾಡುತ್ತಾರೆ ಎಂಬ ಊಹಪೋಹಕ್ಕೆ ಆತ ಕ್ರೈಸ್ತರು ಮತ್ತು ಕೊಡವರ ಮಾರಣ ಹೋಮವನ್ನೇ ಮಾಡಿದ್ದ. ಇದನ್ನು ಪುಷ್ಟಿಕರಿಸುವಂತೆ ದಕ್ಷಿಣ ಕನ್ನಡ ಜಿಲ್ಲೆಯ  ಬಂಟ್ವಾಳ ತಾಲೂಕಿನ ಈ ಕೆರೆಗೂ ಟಿಪ್ಪುಸುಲ್ತಾನನ (Tippusultan) ಚರಿತ್ರೆಗೂ ಹತ್ತಿರದ ನಂಟಿದೆ.    ಟಿಪ್ಪು ಸುಲ್ತಾನ್  ಅಬಲೆಯರು, ವೃದ್ದರು, ಸೇರಿ  ಕರಾವಳಿಯ  ಸಾವಿರಾರು ಕ್ರೈಸ್ತರನ್ನು ಸೆರೆ ಹಿಡಿದು ಶ್ರೀರಂಗಪಟ್ಟಣಕ್ಕೆ  ಕೊಂಡುಹೋಗುವಾಗ  ಸಂದರ್ಭದಲ್ಲಿ  ಸೆರೆಯಿಂದ ತಪ್ಪಿಸಿ ಓಡಲು ಯತ್ನಿಸಿದ್ದವರನ್ಜು, ನಡೆದುಕೊಂಡು ಹೋಗಲು ಅಶಕ್ತರಾದವನ್ನು ಇದೇ ಕೆರೆಯ ಬಳಿ ತಲೆ ಕಡಿದು ಕೊಂದು‌ ಹಾಕಿದ್ದನಂತೆ. ಈ ಘಟನೆಗೆ ಸಂಬಂಧಿಸಿದಂತೆ0 ಟಿಪ್ಪುವಿನ ಜೀವನ ಚರಿತ್ರೆಯಲ್ಲೂ ಉಲ್ಲೇಖಗಳಿವೆ ಎನ್ನುವುದು ಇತಿಹಾಸದಿಂದ ತಿಳಿದು ಬರುತ್ತದೆ. ಆ ಕ್ರೌರ್ಯಕ್ಕೆ ಸಾಕ್ಷಿಯಾದ ಕೆರೆಯಾದ‌ ಕಾರಣ ಈ ಕೆರೆಗೆ ನೆತ್ತರಕೆರೆ ಎನ್ನುವ ಹೆಸರು ಬಂತೆನ್ನಲಾಗಿದೆ.  ಇದೇ ಕಾರಣಕ್ಕೆ ...

ಸುಲ್ತಾನ್ ಬತ್ತೇರಿ

ಇಮೇಜ್
ಸುಲ್ತಾನ್ ಬತ್ತೇರಿ 1940ರಲ್ಲಿ ಕರಾವಳಿ ನಗರ ಮಂಗಳೂರು ಹಲವಾರು ಐತಿಹಾಸಿಕ ಪ್ರದೇಶಗಳಿಗೆ ಹೆಸರು ವಾಸಿಯಾಗಿದೆ. ಹಾಗೂ ಯಾತ್ರಿಕರ ಪ್ರವಾಸಿ ತಾಣವೂ ಹೌದು. ಆನಮೇಕ ರಾಜ ಮಹರಾಜರು ಈ ಪ್ರದೇಶದ ಮೇಲೆ ತಮ್ಮ ಅಧಿಪತ್ಯವನ್ನು ಸ್ಥಾಪಿಸಿದ್ದರು. ಇದರಲ್ಲಿ ಮಂಗಳೂರಿನ ಬೋಳುರಿನ ಸುಲ್ತಾನ್ ಬತ್ತೇರಿ ಒಂದು. ಬ್ರಿಟಿಷ್‌ ನೌಕೆಗಳು ಗುರುಪುರ ನದಿಯನ್ನು ಪ್ರವೇಶಿಸುವುದನ್ನು ತಡೆಗಟ್ಟಲು, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಹೋರಾಟಗಾರ ಮೈಸೂರು ಹುಲಿ ಟಿಪ್ಪುಸುಲ್ತಾನನು 1784 ರಲ್ಲಿ ಇದನ್ನು ನಿರ್ಮಿಸಿದನು. ಐತಿಹಾಸಿಕವಾಗಿ ಮಹತ್ವವಾಗಿರುವ ಈ ರಾಷ್ಟ್ರೀಯ ಸ್ಮಾರಕವು ಇತ್ತೀಚಿಗೆ ನವೀಕರಣಗೊಂಡಿದ್ದು, ಸ್ವಾತಂತ್ರ್ಯ ಹೋರಾಟದ ದಿವ್ಯ ಕುರುಹಾಗಿ ಉಳಿದಿದೆ. ಈ ಕೋಟೆಯನ್ನು ಕಪ್ಪು ಕಲ್ಲಿನಿಂದ ನಿರ್ಮಿಸಲಾಗಿದೆ. ಇದು ಒಂದು ಚಿಕ್ಕ ಕಾವಲು ಗೋಪುರ ಮಾದರಿಯ ಕೋಟೆಯಾಗಿದ್ದರೂ ಕೋಟೆಯ ಸುತ್ತಮುತ್ತ ಫಿರಂಗಿಗಳನ್ನು ಸ್ಥಾಪಿಸಲಾಗಿದೆ. ಮತ್ತು ವೈರಿಗಳ ಚಲನವಲನಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ  ರಚಿತವಾಗಿದೆ. ಈ ಕೋಟೆಯ ಅಡಿಭಾಗದಲ್ಲಿ ಸೈನಿಕರ ವಿಶ್ರಾಂತಿ ಕೋಣೆ ಇದೆ. ಮತ್ತು ಸುರಂಗ ಮಾರ್ಗವೂ ಇದೆ ಆದರೆ ಈಗ  ಸಾರ್ವಜನಿಕರಿಗೆ ಇದನ್ನು ನಿರ್ಬಂಧಿಸಲಾಗಿದೆ. ರಾಷ್ಟ್ರಿಯ ಸ್ಮಾರಕವಾಗಿ ಇದು ಘೋಷಣೆ ಯಾದ್ದರಿಂದ ಕೇಂದ್ರ ಪುರತತ್ವ ಇಲಾಖೆ ಇದರ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ.  ಸುಲ್ತಾನ್ ಬತ್ತೇರಿ ಸೂರ್ಯಾಸ್ತದ ವಿಹಂಗ...