Monday, May 11, 2015

ಪಡುಪಣಂಬೂರಿನಲ್ಲಿ ಭೋಳಾರ ಭೋಜರಾವ್‌ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ

ಮಂಗಳೂರಿನಲ್ಲಿ 1930ರ ಎ. 13ರಂದು ಮುಂಜಾನೆ ಉಪ್ಪು ತಯಾರಿಸಲು ಸಿದ್ಧರಾದ ಸತ್ಯಾಗ್ರಹಿಗಳ ಗುಂಪು ಬಂದರು ಪ್ರದೇಶಕ್ಕೆ ಹೊರಟಿತು. ಸತ್ಯಾಗ್ರಹಿಗಳು ಮೆರವಣಿಗೆಯಲ್ಲಿ ಹೋಗುತ್ತಿರುವಾಗ, ಪಿ. ಎಲ್‌. ಪುಣಿಚಿತ್ತಾಯರು ಬರೆದಿದ್ದ ಗೀತೆಯನ್ನು ಹಾಡುತ್ತಿದ್ದರು:

ಉಪ್ಪಿನ ಕದನಕ್ಕೆ
ಹೋರಾಡುವ ಜನರೆ
ಉಪ್ಪಿಗೆ ಬೇಕಾಗಿ
ಹೋರಾಡಿ ಭಟರೆ
ಉಪ್ಪಿಗೂ ಗತಿ ಇಲ್ಲ.
ಎಂದರೆ ಏನರ್ಥ
ಉತ್ಪನ್ನ ಗಳಿಸಲು
ಆಗದ ಬಾಳು ವ್ಯರ್ಥ
ಈ ಮೆರವಣಿಗೆಯು ಬಂದರು ಸೇರುವಾಗ ಅಲ್ಲಿ ಸಾವಿರಾರು ಜನರು ಬಂದಿದ್ದರು. ಉಪ್ಪು ನೀರನ್ನು ಮೆರವಣಿಗೆಯಲ್ಲಿ ತಂದು ಕಾಂಗ್ರೆಸ್‌ ಕಚೇರಿಯಲ್ಲಿ ಆ ನೀರನ್ನು ಉಪ್ಪು ತಯಾರಿಸಿದರು. ಮಧ್ಯಾಹ್ನ ಪೊಲೀಸ್‌ ತಂಡದೊಂದಿಗೆ ಸರ್ಕಲ್‌ ಇನ್ಸ್‌ಪೆಕ್ಟರ್‌ ಬಂದು ಅಲ್ಲಿ ತಯಾರಿಸಿದ ಉಪ್ಪನ್ನು ಅದಕ್ಕೆ ಉಪಯೋಗಿಸಿದ ಪಾತ್ರೆಯನ್ನು ಉಳಿಸಿ ಉಳಿದ ಕಟ್ಟಿಗೆಯನ್ನು ಒಯ್ದರು. ಅಂದು ಸಂಜೆ ಕೇಂದ್ರ ಮೈದಾನಿನಲ್ಲಿ ಆರ್‌. ಕೆ. ಪ್ರಭು ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿತು. ಉಪ್ಪನ್ನು ಏಲಂ ಮಾಡಲು ಆರಂಭಿಸಲಾಯಿತು. ಆಗ ಪೊಲೀಸರು ಬಂದು ಉಪ್ಪನ್ನು ಸೆಳೆದುಕೊಂಡರು. ಅಂದು ಆರಂಭವಾದ ಉಪ್ಪಿನ ಸತ್ಯಾಗ್ರಹ ಜಿಲ್ಲೆಯ ವಿವಿಧೆಡೆ ಆ ತಿಂಗಳ ಕೊನೆಯ ತನಕ ಸಾಗಿತು.
ಪಾನ ನಿಷೇಧಕ್ಕೆ ಒತ್ತಾಯಿಸಿ ಜಿಲ್ಲೆಯಾದ್ಯಂತ ಶೇಂದಿ, ಶರಾಬು ಅಂಗಡಿಗಳ ಎದುರು 1930ರಲ್ಲಿ ಪಿಕೆಟಿಂಗ್‌ ನಡೆಯಿತು. ಮೇ 5ನ್ನು ಮದ್ಯ ನಿಷೇಧ ದಿನವೆಂದು ಆಚರಿಸಲಾಯಿತು. ಆ ದಿನ ಮೆರವಣಿಗೆಯಲ್ಲಿ ಸಹಸ್ರಾರು ಜನರು ಭಾಗವಹಿಸಿದ್ದರು. ಈ ಸತ್ಯಾಗ್ರಹ ಸತತವಾಗಿ ನಡೆಯಿತು. ಸ್ವಯಂ ಸೇವಕರ ಮೇಲೆ ಗುತ್ತಿಗೆದಾರರೇ ಹಲ್ಲೆ ನಡೆಸಿದ ಘಟನೆಗಳಾದವು. ಅವರು ಮೌನವಾಗಿ ಸಹಿಸಿಕೊಂಡರು. ಬಳಿಕ ಈ ಸತ್ಯಾಗ್ರಹಿಗಳ ಮೇಲೆ ಬ್ರಿಟಿಷ್‌ ಆಡಳಿತವೇ ಕೈ ಮಾಡಿತು. ಈ ಸತ್ಯಾಗ್ರಹದ ಸಮಯದಲ್ಲಿ ಮೆರವಣಿಗೆ ಸಭೆಗಳನ್ನು ನಿಷೇಧಿಸುವುದಕ್ಕಾಗಿ ಸೆಕ್ಷನ್‌ 144ರನ್ವಯದ ನಿಷೇಧಾಜ್ಞೆ ಜಾರಿಯಾಯಿತು. ಕಾನೂನು ಮುರಿದವರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸುವುದೇ ಅಸಾಧ್ಯ ಎಂಬಷ್ಟರ ಮಟ್ಟಿಗೆ ಸತ್ಯಾಗ್ರಹ ಸಾಗಿತು. ಆಗ ಸರಕಾರ ಲಾಠಿ ಹೊಡೆತ ಎಂಬ ನವೀನ ಅಸ್ತ್ರ ಪ್ರಯೋಗಿಸಿತು. ಮೇ 31ರಂದು ಪಾನನಿರೋಧ ಸತ್ಯಾಗ್ರಹ ಬೃಹತ್‌ ಸ್ವರೂಪದಲ್ಲಿ ಆರಂಭವಾಯಿತು. ಸತ್ಯಾಗ್ರಹಿಗಳು ಮೆರವಣಿಗೆಯಲ್ಲಿ ಪಿಕೆಟಿಂಗ್‌ ಮಾಡ ತೊಡಗಿದರು. ಶೇಂದಿ, ಶರಾಬು ಅಂಗಡಿಗಳೆದುರು ಪಿಕೆಟಿಂಗ್‌ ಮಾಡತೊಡಗಿದರು. ಮೆರವಣಿಗೆಯಲ್ಲಿ ಸಾಗುವಾಗ ಎನ್‌. ಮಾರಪ್ಪ ಶೆಟ್ಟಿ ಅವರು ಬರೆದ ಕವಿತೆಯನ್ನು ಹಾಡಿದರು:
ಗಂಗಸರೊ ಗಂಗಸರೊ
ಪರಡೆ ಕಳಿ ಗಂಗಸರೊ
ಕೆಬಿತ್ತ ಮುರು ದೆತ್ತ್ದ್‌ಕೊರು
ಕಿದೆತ್ತ ಎರು ಗಿತ್ತ್ದ್‌ಕೊರು
ಅಟ್ಟೊದ ಬಿತ್ತ್ ದೆತ್ತ್ದ್‌ ಕೊರು
ಪರ್‌ಂಡ ಕಳಿ ಗಂಗಸರೊ....
ಸತ್ಯಾಗ್ರಹಿಗಳನ್ನು ಪೊಲೀಸರು ಚಿತ್ರಹಿಂಸೆಗೆ ಒಳಪಡಿಸಿದರು.
260 ಮಂದಿ ಸೆರೆಮನೆ ಸೇರಿದರು. ಹೀಗೆ ಸತ್ಯಾಗ್ರಹ ಮುಂದುವರಿಯುತ್ತಿರುವಾಗ ಗಾಂಧಿ-ಇರಿÌನ್‌ ಒಪ್ಪಂದವಾಗಿ ಸತ್ಯಾಗ್ರಹಿಗಳ ಬಿಡುಗಡೆಯಾಯಿತು.
ಕ್ವಿಟ್‌ ಇಂಡಿಯಾ-ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಹೋರಾಟ ದೇಶವ್ಯಾಪ್ತಿಯಾಗಿ ನಡೆಯಿತು. 9-9-1942ರಂದು ಪೂರ್ವಾಹ್ನ ಮಂಗಳೂರಿನಲ್ಲಿ ಸ್ವಯಂ ಸೇವಕ ದಳವು ಜಿಲ್ಲಾ ಕೋರ್ಟಿನ ಬಳಿ ಪಿಕೆಟಿಂಗ್‌ ನಡೆಸಿತು. ಹೆಚ್ಚಿನ ವಕೀಲರು ಅಂದು ಕೋರ್ಟಿಗೆ ಬಂದಿರಲಿಲ್ಲ. ಸ್ವಯಂ ಸೇವಕರ ವಿನಂತಿಯನ್ನು ಕೇಳಿ ಕೆಲವರು ಹಿಂತಿರುಗಿದರು. ಪಿಕೆಟಿಂಗ್‌ ವೇಳೆ ಮಧ್ಯಾಹ್ನ ಅಲ್ಲಿಗೆ ಬಂದ ಪೊಲೀಸ್‌ ಪಡೆ ಸ್ವಯಂಸೇವಕರನ್ನು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿತು. ಈ ಹೋರಾಟದಲ್ಲಿ ಹೆಚ್ಚಿನ ಕೀರ್ತಿ ವಿದ್ಯಾರ್ಥಿಗಳಿಗೆ ಸಲ್ಲುತ್ತದೆ. ಚದುರದೆ ಮುಂದೆ ಬಂದ ಸತ್ಯಾಗ್ರಹಿಗಳನ್ನು ಪೊಲೀಸರು ಬಂಧಿಸಿದರು. ಪೊಲೀಸ್‌ ವಾಹನದಲ್ಲಿ ತುರುಕಿದರು.

ಅಂದು ಸಂಜೆ ಕೇಂದ್ರ ಮೈದಾನಿನಲ್ಲಿ ಮೆರವಣಿಗೆ ಸಹಿತ ಸಭೆ ಸೇರಿತು. ಎಂ. ಡಿ. ಅಧಿಕಾರಿ ಅವರು ಸಭಾಧ್ಯಕ್ಷರಾಗಿದ್ದರು. ಮಹಿಳೆಯರು ವಂದೇ ಮಾತರಂ ಹಾಡಿದೊಡನೆ ಎಂ. ಡಿ. ಅಧಿಕಾರಿ ಅವರು ಭಾಷಣ ಆರಂಭಿಸಿದರು. ಅಷ್ಟರೊಳಗೆ ಪೊಲೀಸರು ಅಲ್ಲಿಗೆ ಬಂದು ಅಮಾನುಷವಾಗಿ ಲಾಠಿ ಪ್ರಹಾರಕ್ಕೆ ತೊಡಗಿದರು. ಎಂ. ಡಿ. ಅಧಿಕಾರಿ ಅವರ ತಲೆಗೆ ಏಟುಬಿದ್ದು ಅವರು ಕೆಳಕ್ಕೆ ಉರುಳಿದರು. ಅವರನ್ನು ಕೂಡಲೇ ಡಾ| ಯು. ಪಿ. ಮಲ್ಯರ ನರ್ಸಿಂಗ್‌ ಹೋಂಗೆ ಒಯ್ಯಲಾಯಿತು. ಪೊಲೀಸರು ಮೃಗಗಳನ್ನು ಬೇಟೆಯಾಡುವಂತೆ ಜನರನ್ನು ಅಟ್ಟಿಸಿ ಅಟ್ಟಿಸಿ ಹೊಡೆಯುತ್ತಿದ್ದರು. ಇದಾದ ಕೆಲವು ದಿನಗಳವರೆಗೆ ಮಂಗಳೂರು ನಗರದಲ್ಲಿ ಪೊಲೀಸರ ಪಥಚಲನೆಯಾಗುತ್ತಿತ್ತು. ಸಿಕ್ಕಿದವರನ್ನು ಹೊಡೆಯುತ್ತಿದ್ದರು. ಮಾರ್ಗದಲ್ಲಿದ್ದವರು ಲಾಠಿಯ ಏಟಿಗೆ ಹೆದರಿ ಮಾರ್ಗದ ಬದಿಯ ಅಂಗಡಿಗಳಿಗೆ ಮನೆಗಳಿಗೆ ಪ್ರವೇಶಿಸಿದರೆ ಅಲ್ಲಿಗೂ ಬೆನ್ನಟ್ಟಿ ಹೊಡೆಯುತ್ತಿದ್ದರು.
ಸಂಜೆ ಆರು ಗಂಟೆಗೆ ಸಾರ್ವಜನಿಕ ಸಭೆ ಎಂದಿದ್ದರೂ ಆ ಮೊದಲೇ ಜನಸ್ತೋಮ ಕೇಂದ್ರ ಮೈದಾನಿನಲ್ಲಿ ಸೇರಿತ್ತು. ವರ್ತಕ ವಿಲಾಸದಲ್ಲಿದ್ದ ದೇಶಭಕ್ತರು ಆರಕ್ಕೆ ಸರಿಯಾಗಿ ಮೈದಾನಿಗೆ ಬಂದು ವೇದಿಕೆಯಲ್ಲಿ ಕುಳಿತರು. ಖಾನ್‌ ಬಹಾದ್ದೂರ್‌ ಅಬ್ದುಲ್ಲಾ ಸಾಹೇಬರು ಸ್ವಾಗತಿಸಿದರು. ಮೊದಲು ಮಾತನಾಡಿದ ಗಾಂಧೀಜಿಯವರು, ತಮ್ಮ ಭಾಷಣದ ಪ್ರಾರಂಭದಲ್ಲೇ- ಮೊದಲು ಸ್ವಾಗತ ಉಪಚಾರಗಳನ್ನು ಮಾಡಿದ ಮಂಗಳೂರು ನಿವಾಸಿಗಳನ್ನು ವಂದಿಸಿದರು. ದೇಹದ ಅಶಕ್ತಿಯಿಂದಾಗಿ ತಮಗೆ ನಿಂತುಕೊಂಡು ಮಾತನಾಡಲು ಅನಾನುಕೂಲವಾಗಿರುವುದರಿಂದ ಕುಳಿತುಕೊಂಡೇ ಮಾತನಾಡಬೇಕಾಗಿ ಬಂದುದಕ್ಕೆ ವಿಷಾದ ವ್ಯಕ್ತಪಡಿಸಿದರು.

ತಾರೀಕು 15-8-1947ರಂದು ಬ್ರಿಟಿಷರು ತಮ್ಮ ಆಳ್ವಿಕೆಯನ್ನು ಮುಕ್ತಾಯಗೊಳಿಸಿ ಭಾರತದಿಂದ ತೊಲಗಿದರು. ಮಹಾತ್ಮಾಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಸ್ವಾತಂತ್ರÂ ಹೋರಾಟಕ್ಕೆ ಜಯವಾಯಿತು. ಮಂಗಳೂರು ನಗರದಲ್ಲಿ, ತಾಲೂಕಿನ ಪ್ರಮುಖ ಕೇಂದ್ರಗಳಲ್ಲಿ ಸ್ವಾತಂತ್ರೊÂàತ್ಸವವು ವಿಜೃಂಭಣೆಯಿಂದ ನೆರವೇರಿತು. ಮಂಗಳೂರಿನ ಕೇಂದ್ರ ಮೈದಾನಿನಲ್ಲಿ ಹಾಕಿದ ತಳಿರು ತೋರಣಗಳಿಂದ ಕೂಡಿದ ಚಪ್ಪರದಲ್ಲಿ ಈ ಉತ್ಸವವು ಜರಗಿತು. ಆಗ ಇಲ್ಲಿನ ಜಿಲ್ಲಾ ಕಲೆಕ್ಟರ್‌ ಆಗಿದ್ದ ಸ್ಯಾಂಡರ್ ಎಂಬವರು ಎಲ್ಲಾ ವ್ಯವಸ್ಥೆಗಳನ್ನು ದಕ್ಷತೆಯಿಂದ ಮಾಡಿಸಿದ್ದರು. ಅಂದು ಸೂರ್ಯೋದಯದೊಡನೆ ಸ್ವತಂತ್ರ ಭಾರತದ ಉದಯವೂ ಆಯಿತು.
1934ರಲ್ಲಿ ಮಂಗಳೂರಿನಲ್ಲಿ ಮಹಾತ್ಮಾಗಾಂಧೀಜಿ ಅವರು ಕೃಷ್ಣಮಂದಿರಕ್ಕೆ ಶಿಲಾನ್ಯಾಸಗೈದ ಟಾಪಿ. ಇದೀಗ ಕೆನರಾ ಪ್ರೌಢಶಾಲೆಯಲ್ಲಿದೆ.

No comments:

Post a Comment