Saturday, May 25, 2013

ಪಾಣೆ ಮಂಗಳೂರು ಸೇತುವೆ

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48 ರ ನೇತ್ರಾವತಿ ನದಿಗೆ ಹಾಕಲಾದ ಪಾಣೆಮಂಗಳೂರು ಸೇತುವೆ ಇತಿಹಾಸ ಉಳ್ಳದ್ದು.   ದಿ ಹಾರ್ಸ್ ವೇ ಎಂಬ ಬ್ರಿಟಿಷ್ ಕಂಪೆನಿ ಈ  ಸೇತುವೆಯನ್ನು ನಿರ್ಮಾಣ ಮಾಡಿತ್ತು. 1914 ರಲ್ಲಿ ಇದರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು 1918 ರಲ್ಲಿ ಪೂರ್ಣಗೊಂಡಿತ್ತು.  ಭಾರತದಲ್ಲಿ ಉಕ್ಕು ಉತ್ಪಾದನೆ ಇಲ್ಲದ ಕಾರಣ ಇದಕ್ಕೆ ಬಳಸಿದ ಉಕ್ಕನ್ನು  ಇಂಗ್ಲೇಡಿನಿಂದ ಆಮದು ಮಾಡಲಾಗಿತ್ತು. ಸನಿಹದಲ್ಲೇ ಹೊಸ ಸೇತುವೆ ನಿರ್ಮಾಣ ಮಾಡಿದ್ದರಿಂದ 2002 ರಲ್ಲಿ ಈ ಸೇತುವೆ ಸಂಚಾರದಿಂದ ಮುಕ್ತವಾಗಿತ್ತು. ಇವತ್ತಿಗೂ ಗಟ್ಟಿಮುಟ್ಟಾಗಿರುವ ಸೇತುವೆಯ ಕಬ್ಬಿಣ ಕರಾವಳಿಯ ಬಿಸಿಲು, ಮಳೆ-ಗಾಳಿಗೆ ಮೈಯೊಡ್ಡಿದ್ದರೂ ತುಕ್ಕು ಹಿಡಿಯದೆ ಇರುವುದು ವಿಶೇಷವೇ ಸರಿ. ಒಂದು ಕಾಲದಲ್ಲಿ ಐತಿಹಾಸಿಕ ನಾಡಾಗಿ ಪ್ರಸಿದ್ದಿ ಪಡೆದುಕೊಂಡಿದ್ದ ಪಾಣೆಮಂಗಳೂರು ಆ ಬಳಿಕ ಇಲ್ಲಿನ ಬ್ರಿಟಿಷರ ಕಾಲದ ಹಳೆಯ ನೇತ್ರಾವತಿ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡ ಬಳಿಕ ಈ ಸೇತುವೆ ಮೇಲಿಂದ ಘನ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಇದರಿಂದಾಗಿ ಸಾರಿಗೆ ವಾಹನಗಳು ಸೇರಿದಂತೆ ಘನ ವಾಹನಗಳು ಪಾಣೆಮಂಗಳೂರು ಪೇಟೆಯೊಳಗೆ ಸಂಚರಿಸದೆ ರಾಷ್ಟ್ರೀಯ ಹೆದ್ದಾರಿ ಬಳಸಿ ಸಂಚರಿಸಲು ಪ್ರಾರಂಭಿಸಿತು. ಇದರಿಂದಾಗಿ ಪರ ಊರಿನ ಜನತೆ, ಚಿಲ್ಲರೆ ವ್ಯಾಪಾರಿಗಳು ಪಾಣೆಮಂಗಳೂರು  ಬರು ಬದಲು  ಬಿ ಸಿ ರೋಡು, ಬಂಟ್ವಾಳ ಅಥವಾ ಇನ್ನಿತರ ಪೇಟೆಗಳನ್ನು ಆಶ್ರಯಿಸಿಕೊಳ್ಳುವಂತಾಯಿತು. ಪರಿಣಾಮ ಇತಿಹಾಸವುಳ್ಳ ಪಾಣೆಮಂಗಳೂರು ಪೇಟೆ ವ್ಯಾಪಾರ-ವಹಿವಾಟುಗಳು ಇಲ್ಲದೇ ಅದೂ ಕಾಲ;ಗರ್ಭಕ್ಕೆ ಸೇರಿದರೆ ಅತಿಶೋಯಿಕ್ತಿ ಆಗಲಾರದು.   

1 comment: