ಮಂಗಳೂರಿನಲ್ಲಿ ಪೋಲಿಸ್ ಇತಿಹಾಸ..
ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಪೋಲಿಸರ ಪಾತ್ರ ಮಹತ್ವದ್ದು,ಇಂದಿನ ಸಂಘರ್ಷಮಯ ವಾತಾವರಣದ ಸಮಾಜದಲ್ಲಿ ಪೋಲಿಸರಿಲ್ಲದ ಸಾಮಾಜ ಊಹೆಗೂ ನಿಲುಕದ್ದು. ಆರಂಭದಲ್ಲಿ ಯಾವುದಾರೊಂದು ಗಲಭೆ, ಆಶಾಂತಿ ಸಾಮಾಜದಲ್ಲಿ ಉಂಟಾದಗ ಆ ಸಮಾಜದ ಮುಖಂಡ ತಮ್ಮ ಯೋಧರನ್ನೇ ಬಳಸುತ್ತಿದ್ದ. ಇಟಲಿಯ ರೋಮ್ ರಾಜ್ಯದ ಚಕ್ರವರ್ತಿ ಸೀಸರ್ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಪೋಲಿಸ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದ ಎಂದು ಇತಿಹಾಸ ಹೇಳುತ್ತಿದೆ. ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದೇ ಇದರ ಕೆಲಸವಾಗಿತ್ತು. ಈ ವ್ಯವಸ್ಥೆ ಸುಮಾರು 300 ವರ್ಷಗಳ ವರೆಗೆ ಹಾಗೇ ಮುಂದು ವರೆದಿತ್ತು. ಸುಮಾರು 7 ನೇ ಶತಮಾನದಲ್ಲಿ ಭದ್ರತೆಗಾಗಿ ಪೋಲಿಸ್ ವ್ಯವಸ್ಥೆ ಬೇಕೆಂಬ ಆಲೋಚನೆ ಮೂಡಿಬಂತು. ಈ ಪೋಲಿಸ್ ಪಡೆ ಕೇವಲ ರಾಜಾಜ್ಣೆಯನ್ನು ಪಾಲಿಸುವುದಕಿಂತ ಜನತೆ ಮತ್ತು ನಾಡಿನ ಶಾಸನವನ್ನು ಕಾಪಾಡಬೇಕೆಂಬ ಗತ್ಯ ಭಾವನೆ ಜನರಲ್ಲಿ ಮೂಡಿತು. ಇದೇ ವಿಚಾರ ಆಮೇರಿಕಾ ಮತ್ತು ಬ್ರಿಟನ್ ದೇಶಗಳಿಗೂ ಹಬ್ಬಿ ಪೋಲಿಸ್ ವ್ಯವಸ್ಥೆ ಜಾರಿಗೆ ಬಂತು. ಇಂಗ್ಲೀಷರು ತಮ್ಮ ರಕ್ಷಣೆಗಾಗಿ ಈ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರು.ಅವರದೇ ಆಡಳಿತವಿದ್ದ ಭಾರತ ದೇಶದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯವರು1792 ಡಿಸೆಂಬರ್ 7 ರಂದು ಈ ವ್ಯವಸ್ಥೆಯನ್ನು ಜಾರಿಗೆ ತಂದರು.1861 ರಲ್ಲಿ ಪೋಲಿಸ್ ಕಾಯಿದೆ ಜಾರಿಗೆ ಬಂತು. ಆದರೆ ಅಂದಿನಿಂದ ಇಂದಿನವರೆಗೆ ಪೋಲಿಸ್ ಸಮವಸ್ತ್ರದಲ್ಲಿ ಹಲವಾರು ಬದಲಾವಣೆಗಳಾಗಿವೆ...