ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಪೋಲಿಸರ ಪಾತ್ರ ಮಹತ್ವದ್ದು,ಇಂದಿನ ಸಂಘರ್ಷಮಯ ವಾತಾವರಣದ ಸಮಾಜದಲ್ಲಿ ಪೋಲಿಸರಿಲ್ಲದ ಸಾಮಾಜ ಊಹೆಗೂ ನಿಲುಕದ್ದು. ಆರಂಭದಲ್ಲಿ ಯಾವುದಾರೊಂದು ಗಲಭೆ, ಆಶಾಂತಿ ಸಾಮಾಜದಲ್ಲಿ ಉಂಟಾದಗ ಆ ಸಮಾಜದ ಮುಖಂಡ ತಮ್ಮ ಯೋಧರನ್ನೇ ಬಳಸುತ್ತಿದ್ದ. ಇಟಲಿಯ ರೋಮ್ ರಾಜ್ಯದ ಚಕ್ರವರ್ತಿ ಸೀಸರ್ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಪೋಲಿಸ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದ ಎಂದು ಇತಿಹಾಸ ಹೇಳುತ್ತಿದೆ. ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದೇ ಇದರ ಕೆಲಸವಾಗಿತ್ತು. ಈ ವ್ಯವಸ್ಥೆ ಸುಮಾರು 300 ವರ್ಷಗಳ ವರೆಗೆ ಹಾಗೇ ಮುಂದು ವರೆದಿತ್ತು. ಸುಮಾರು 7 ನೇ ಶತಮಾನದಲ್ಲಿ ಭದ್ರತೆಗಾಗಿ ಪೋಲಿಸ್ ವ್ಯವಸ್ಥೆ ಬೇಕೆಂಬ ಆಲೋಚನೆ ಮೂಡಿಬಂತು. ಈ ಪೋಲಿಸ್ ಪಡೆ ಕೇವಲ ರಾಜಾಜ್ಣೆಯನ್ನು ಪಾಲಿಸುವುದಕಿಂತ ಜನತೆ ಮತ್ತು ನಾಡಿನ ಶಾಸನವನ್ನು ಕಾಪಾಡಬೇಕೆಂಬ ಗತ್ಯ ಭಾವನೆ ಜನರಲ್ಲಿ ಮೂಡಿತು. ಇದೇ ವಿಚಾರ ಆಮೇರಿಕಾ ಮತ್ತು ಬ್ರಿಟನ್ ದೇಶಗಳಿಗೂ ಹಬ್ಬಿ ಪೋಲಿಸ್ ವ್ಯವಸ್ಥೆ ಜಾರಿಗೆ ಬಂತು. ಇಂಗ್ಲೀಷರು ತಮ್ಮ ರಕ್ಷಣೆಗಾಗಿ ಈ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರು.ಅವರದೇ ಆಡಳಿತವಿದ್ದ ಭಾರತ ದೇಶದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯವರು1792 ಡಿಸೆಂಬರ್ 7 ರಂದು ಈ ವ್ಯವಸ್ಥೆಯನ್ನು ಜಾರಿಗೆ ತಂದರು.1861 ರಲ್ಲಿ ಪೋಲಿಸ್ ಕಾಯಿದೆ ಜಾರಿಗೆ ಬಂತು. ಆದರೆ ಅಂದಿನಿಂದ ಇಂದಿನವರೆಗೆ ಪೋಲಿಸ್ ಸಮವಸ್ತ್ರದಲ್ಲಿ ಹಲವಾರು ಬದಲಾವಣೆಗಳಾಗಿವೆ.
ಭಾರತ ದೇಶದ ಎಲ್ಲಾ ಪೋಲಿಸ್ ವ್ಯವಸ್ಥೆಗಳಲ್ಲಿ ಕರ್ನಾಟಕ ಪೊಲಿಸರಿಗೆ ವಿಶೇಷ ಸ್ಥಾನವಿದೆ. ಅದರಲ್ಲಿ ದಕ್ಷಿಣ ಕನ್ನಡದ ಪೊಲಿಸರಿಗೆ ವಿಶೇಷ ಗೌರವವಿದೆ.ಸ್ವಾತಂತ್ರ್ಯ ಪೂರ್ವ ಇತಿಹಾಸವನ್ನು ಇಲ್ಲಿನ ಪೊಲೀಸ್ ಇಲಾಖೆ ಹೊಂದಿದೆ.ರಾಜ್ಯವನ್ನು ಗಣನೆಗೆ ತೆಗೆದು ಕೊಂಡರೆ ಈ ಭಾಗದಲ್ಲಿ ಪೋಲಿಸ್ ವ್ಯವಸ್ಥೆ ಹೊಸತಲ್ಲ. ವಿಜಯ ನಗರ ಸಾಮ್ರಜ್ಯ ಅನಂತರ ಆಳಿದ ಕೆಳದಿ ಮತ್ತು ಹೈದರಾಲಿ ಹಾಗು ಟಿಪ್ಪು ಸುಲ್ತಾನರ ಆಡಳಿತದಲ್ಲೂ ಪೋಲಿಸಿಂಗ್ ವ್ಯವಸ್ಥೆ ಜಾರಿಯಲ್ಲಿತ್ತು.ಕಾಲಕ್ರಮೇಣ 1799 ರಲ್ಲಿ ಬ್ರಿಟೀಷ್ ಆಡಳಿತ ಈ ಭಾಗದಲ್ಲಿ ಬಂದ ನಂತರ ಪೋಲಿಸ್ ವ್ಯವಸ್ಥೆಗೆ ಹೆಚ್ಚಿನ ಮಹತ್ವ ಬಂತು. ಆಗ ಮದ್ರಾಸ್ ಪ್ರಾಂತದ ಗವರ್ನರ್ ಆಡಳಿತದಲ್ಲಿ ಕರಾವಳಿಯ ಸೌತ್ ಕೆನರಾ ಜಿಲ್ಲೆ ಕೇರಳದ ಕಾಸರಗೋಡಿನಿಂದ ಉಡುಪಿಯ ಬಾರ್ಕೂರು ವರೆಗೆ ವ್ಯಾಪ್ತಿಯನ್ನು ಹೊಂದಿತ್ತು. ಅಲ್ಲದೇ ಲಕ್ಷದ್ವೀಪಗಳು ಇಲ್ಲಿನ ಆಡಳಿತಕ್ಕೆ ಒಳಪಟ್ಟಿತ್ತು..! ಮಂಗಳೂರು, ಉಡುಪಿ, ಪುತ್ತೂರು, ಬೇಕಲ, ಬಂಟ್ವಾಳ, ಬಾರ್ಕೂರು, ತಾಲೂಕುಗಳ 10 ಉಪವಿಭಾಗಗಳಲ್ಲಿ ಆಡಳಿತ ನಡೆಯುತ್ತಿತ್ತು. 1859 ರ ಹೊತ್ತಿಗೆ ಬ್ರಟೀಷರು ಆಡಳಿತದಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಿದರು. ಪೋಲಿಸ್ ವ್ಯವಸ್ಥೆಯನ್ನು ಕಂದಾಯ ಇಲಾಖೆಗೆ ವಹಿಸಿತ್ತು. ಆಂಗ್ಲ ಪ್ರಜೆಯಾದ ಜಿಲ್ಲಾಧಿಕಾರಿಯೇ ಸುಪ್ರಿಮೊ..!ಅಲ್ಲದೇ ಇಲಾಖೆಯ ಪ್ರಮುಖ ಹುದ್ದೆಗಳಲ್ಲೂ ಅವರೇ ಇರುತ್ತಿದ್ದರು.ಪ್ರಥಮ ಜಿಲ್ಲಾ ಎಸ್ಪಿಯಾಗಿ 4-10-1860 ರಲ್ಲಿ ಕರ್ನಲ್ ಹೆನ್ಕಿನ್ಸ್ ಅವರು ಅಧಿಕಾರ ವಹಿಸಿದ್ದರು. ಈ ಲೇಖನ ಬರೆಯುವ ಹೊತ್ತಿನಲ್ಲಿ ಡಾ, ಸುಬ್ರಹ್ಮಣ್ಯೇಶ್ವರ ರಾವ್ ಅವರು ಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ..
No comments:
Post a Comment