ಮಂಗಳೂರಿನ ಹಂಪನಕಟ್ಟಾ ಸರ್ಕಾರಿ ಕಾಲೇಜ್
ಮಂಗಳೂರು ಕೇಂದ್ರವಾಗಿರುವ ಈ ಶೈಕ್ಷಣಿಕ ಇತಿಹಾಸದಲ್ಲಿ ಈ ಕೆಂಪು ಕಲ್ಲಿನ ಸರ್ಕಾರಿ ಕಾಲೇಜು ತನ್ನದೇ ಆದ ಇತಿಹಾಸ ಮತ್ತು ಮಹತ್ವವನ್ನು ಪಡೆದಿದೆ. ನಗರದ ಹೃದಯ ಭಾಗದಲ್ಲಿ ಸುಮಾರು 8 ಎಕರೆ ಪ್ರದೇಶದಲ್ಲಿ ಹರಡಿರುವ ಈ ಕಾಲೇಜಿನಲ್ಲಿ ಮೂರು ಪಾರಂಪರಿಕ ಕಟ್ಟಡಗಳಿವೆ. ಆಡಳಿತ ಕಚೇರಿ, ರವಿಂದ್ರ ಕಲಾಭವನ, ಹಾಗೂ ಕಾಮರ್ಸ್ ಬ್ಲಾಕ್ ಗಳನ್ನು ಇದು ಹೊಂದಿದೆ. ಅದ್ಬುತ ವಾಸ್ತು ಹಾಗೂ ಇಂಡೋ ಸಾರಸೆನಿಕ್ ಶೈಲಿಯಲ್ಲಿ ಕೇವಲ ಕೆಂಪುಮುರ ಕಲ್ಲು ಹಾಗೂ ಮರಳು ಹಾಗೂ ಮಂಗಳೂರು ಹೆಂಚು ಬಳಸಿ ಕಟ್ಟಲಾದ ಈ ಕಟ್ಟಡಗಳು ಶತಮಾನವನ್ನು ದಾಟಿವೆ. ಸಾಹಿತಿ ಮತ್ತು ಸ್ವಾತಂತ್ರ ಹೋರಾಟಗಾರರಾದ ಪಂಜೆ ಮಂಗೇಶ್ ರಾವ್, ಮಂಜೇಶ್ವರ ಗೋವಿಂದ ಪೈ, ಬೆನೆಗಲ್ ರಾಂ ರಾವ್, ಡಾ. ಶಿವರಾಂ ಕಾರಂತ್,ಡಾ. ಎ.ಬಿ. ಶೆಟ್ಟಿ, ಕಾರ್ನಾಡ್ ಸದಾಶಿವ ರಾವ್, ಡಾ.ಯು.ಪಿ ಮಲ್ಯ, ಕುದ್ಮುಲ್ ರಂಗ ರಾವ್, ಸೂರ್ಯ ನಾರಾಯಣ್ ಅಡಿಗ, ಎ.ಬಿ. ಶೆಟ್ಟಿ, ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಎ.ಬಿ. ರಾಮ್ ರಾವ್, ಕೆನರಾ ಬ್ಯಾಂಕಿನ ಸ್ಥಾಪಕ ಅಮ್ಮೆಂಬಳ ಸುಬ್ಬರಾವ್, ಹಿರಿಯ ಸಹಕಾರಿ ಮೊಳಹಳ್ಲಿ ಶಿವರಾವ್ , ಕಮಲಾ ದೇವಿ ಚಟ್ಟೋಪಾಧ್ಯಾಯ, ಅನೇಕ ಮಹಾನ್ ಸಾಧಕರು ಈ ಶಾಲೆಯಲ್ಲಿ ಕಲಿತವರು.! ಈಗಿನ ಡಾ. ವೀರಪ್ಪ ಮೊಯಿಲಿ, ಪಿ.ಎಂ. ಸಾಯಿದ್, ಡಿ.ಕೆ. ಚೌಟ, ಸಂತೋಷ್ ಕುಮಾರ್ ಗುಲ್ವಾಡಿ, ಎಂ.ವಿ. ಕಾಮತ್, ಜಸ್ಟಿಸ್ ಜಗನ್ನಾಥ ಶೆಟ್ಟಿ, ಬಿ.ರಮನಾಥ ರೈ, ಹೀಗೇ ಅನೇಕ ಮಹನೀಯರು ಇಲ್ಲಿನ ಹಳೇ ವಿದ್ಯಾರ್ಥಿ...