Posts

Showing posts from May, 2010

ಪರಶುರಾಮ ಸೃಷ್ಟಿ ಮಂಗಳೂರು...

Image
'ಮಂಗಳೂರು' ಹೆಸರೇ ಸೂಚಿಸುವಂತೆ ಮಂಗಳಾ ದೇವಿಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ.ನೆರೆಯ ಕೇರಳಿಗರಿಗೆ ಇಂದಿಗೂ ಇದು ಮಂಗಳಾಪುರ.ಇದರ ಹಿನ್ನೆಲೆ ಗಮನಿಸಿದರೆ ಇದು ಹೌದು ಕೂಡ.ಸ್ಥಳೀಯ ದೇವತೆಯಾದ ಮಂಗಳಾ ದೇವಿಯಿಂದ ಮಂಗಳೂರು ತನ್ನ ಹೆಸರನ್ನು ಪಡೆದುಕೊಂಡಿದೆ.ಮತ್ಸ್ಯೇಂದ್ರ ನಾಥನೆಂಬ ನಾಥ್ ಪಂಥದ ಸಂತ, ಪೆರುಮಳಾದೇವಿ ಎಂಬ ಕೇರಳದ ರಾಜಕುಮಾರಿಯ ಜೊತೆ ಇಲ್ಲಿಗೆ ಬಂದಿದ್ದ. ಅವನು ರಾಜಕುಮಾರಿಯನ್ನು ತನ್ನ ಪಂಥಕ್ಕೆ ಪರಿವರ್ತಿಸಿಕೊಂಡು "ಮಂಗಳಾದೇವಿ" ಎಂದು ಮರುನಾಮಕರಣ ಮಾಡಿದನು. ಸ್ವಲ್ಪ ಸಮಯದ ಅನಾರೋಗ್ಯದಿಂದ ಮಂಗಳಾದೇವಿಯು ನಿಧನ ಹೊಂದಿದ್ದರಿಂದ ಅವರು ತಮ್ಮ ಪ್ರಯಾಣವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವಳ ಹೆಸರಿನಲ್ಲಿ ಬೋಳಾರದಲ್ಲಿ ಒಂದು ದೇವಸ್ಥಾನವನ್ನು ನಿರ್ಮಿಸಲಾಯಿತು.ಇದುವೇ ಇತಿಹಾಸ ಪ್ರಸಿದ್ದ ಮಂಗಳಾ ದೇವಿ ದೇವಸ್ಥಾನ. ಅದು ನಂತರ ಕ್ರಿ.ಶ.968 ರಲ್ಲಿ ಅಲೂಪ ದೊರೆ ಕುಂದ ವರ್ಮನಿಂದ ಜೀರ್ಣೋ ದ್ಧಾರಕ್ಕೆ ಒಳಪಟ್ಟಿತು.ಈ ನಗರದ ಹಲವು ಪುರಾತನ ಉಲ್ಲೇಖಗಳಲ್ಲಿ ಒಂದನ್ನು ಪಾಂಡ್ಯ ರಾಜ ಚೆಟ್ಟಿಯನ್ ನೀಡಿದ್ದಾನೆ. ಅವನು ಕ್ರಿ.ಶ.719 ರಲ್ಲಿ ಇದನ್ನು ಮಂಗಲಾಪುರಂ ಎಂದು ಕರೆದಿದ್ದ. 11 ನೇ ಶತಮಾನದ ಅರಬ್ಬಿ ಪ್ರಯಾಣಿಕ ಇಬ್ನ ಬತೂತ ಮಂಗಳೂರನ್ನು ಮಂಜರೂರ್ ಎಂದು ಉಲ್ಲೇಖಿಸಿದ್ದಾನೆ.ಅತೀ ಸಂಪತ್ಭರಿತ ಪ್ರದೇಶವಾದ ಇದು ಕದಂಬರು, ಆಳುಪರು,ವಿಜಯನಗರದ ಅರಸರು,ಹೈದರಾಲಿ-ಟಿಪ್ಪು ಸುಲ್ತಾನರು ಆಳ್ವಿಕೆಯಲ್ಲಿತ್ತು....