ಮಂಗಳೂರು ಟೈಲ್ಸ್..
ಒಂದು ಕಾಲಕ್ಕೆ ಮಂಗಳೂರು ಹೆಂಚು ಇಲ್ಲಿನ ಜನರ ಜೀವನಾಡಿಯಾಗಿತ್ತು. ಬಡವರು ಮನೆ ಕಟ್ಟಲು ಮುಳಿಹುಲ್ಲನ್ನು ಆಶ್ರಯಿಸುತ್ತಿ ದ್ದರೆ, ಶ್ರೀಮಂತರು ಹೆಂಚನ್ನು ಬಳಸುತ್ತಿದ್ದರು.ಸ್ವಾತಂತ್ರಪೂರ್ವದಲ್ಲೇ ಅವಿಭಜಿತ ದಕ್ಷಿಣ ಕನ್ನಡ ಹೆಂಚು ಉದ್ಯಮಕ್ಕೆ ಹೆಸರುವಾಸಿಯಾಗಿತ್ತು. ಇಲ್ಲಿನ ಹೆಂಚು ಗಳು ‘ಮಂಗಳೂರು ಹೆಂಚು’ ಎಂದೇ ಪ್ರಸಿದ್ಧಿ ಪಡೆದಿತ್ತು. ಬ್ರಿಟಿಷರು ಕೂಡ ಇಲ್ಲಿನ ಹೆಂಚಿಗೆ ತಲೆ ತೂಗಿದ್ದರು. ಯುರೋಪ್, ಆಫ್ರಿಕಾ ಖಂಡ ಗಳಿಗೆ ಹಾಗೂ ದೇಶಾ ದ್ಯಂತ ಇಲ್ಲಿಂದಲೇ ಹೆಂಚುಗಳು ರಫ್ತಾಗುತ್ತಿದ್ದವು. ನೂರಾರು ಕುಟುಂಬಗಳು ಈ ಉದ್ಯಮವನ್ನು ಆಶ್ರ ಯಿಸಿದ್ದವು. ಸಾವಿರಾರು ಕಾರ್ಮಿಕರ ಬದುಕನ್ನು ಇದು ಹಸನುಗೊಳಿಸಿತ್ತು.ಆದರೆ, ಬರಬರುತ್ತಾ ಹೆಂಚಿನ ಮನೆ, ಅಂಗಡಿಗಳು ಕಾಂಕ್ರಿಟ್ ಮಯವಾಗ ತೊಡಗಿತು. ಶ್ರೀಮಂತರು ಮಾತ್ರವಲ್ಲ ಮಧ್ಯಮ ವರ್ಗದ ಜನರೂ ಆರ್‌ಸಿಸಿ ಕಟ್ಟಡ ನಿರ್ಮಾಣ ಶುರುವಿಟ್ಟರು. ಹಾಗಾಗಿ ಇದೀಗ ನಗರ ಮಾತ್ರವಲ್ಲ ಗ್ರಾಮಾಂತರ ಪ್ರದೇಶಗಳಲ್ಲೂ ಆರ್‌ಸಿಸಿ ಮನೆಗಳನ್ನು ಕಾಣಬಹುದು. ಹೆಂಚಿನ ಮನೆ ನಿರ್ಮಾಣಕ್ಕೆ ಮುಂದಾ ದರೆ ಅಂತಹವರನ್ನು ತಾತ್ಸಾರದ ಭಾವನೆ ಯಿಂದ ನೋಡುವವರಿಗೂ ಇಂದಿನ ಕಾಲದಲ್ಲಿ ಕೊರತೆ ಇಲ್ಲ. ಹಾಗಾಗಿ ಈಗ ಎಲ್ಲೆಡೆ ಕಾಂಕ್ರಿಟ್ ಕಟ್ಟಡ ಗಳೇ ನಿರ್ಮಾಣ ವಾಗುತ್ತಿದೆ. ಇದರ ನೇರ ಪರಿಣಾಮ ಹೆಂಚು ಉದ್ಯಮದ ಮೇಲಾಗಿದೆ.ಸ್ವರ್ಣ ಯುಗ ದಲ್ಲಿದ್ದ ಮಂಗ ಳೂರು ಹೆಂಚಿನ ಸ್ಥಿತಿ ಇದೀಗ ಆದೋ ಗತಿಗೆ ಇಳಿಸಿದ್ದು, ಯಾರೂ ಕೇಳುವವರಿಲ್ಲದ ಸ್ಥಿತಿ ನಿರ್ಮ...