Monday, July 4, 2011
ಮಂಗಳೂರು ಟೈಲ್ಸ್..
ಒಂದು ಕಾಲಕ್ಕೆ ಮಂಗಳೂರು ಹೆಂಚು ಇಲ್ಲಿನ ಜನರ ಜೀವನಾಡಿಯಾಗಿತ್ತು. ಬಡವರು ಮನೆ ಕಟ್ಟಲು ಮುಳಿಹುಲ್ಲನ್ನು ಆಶ್ರಯಿಸುತ್ತಿ ದ್ದರೆ, ಶ್ರೀಮಂತರು ಹೆಂಚನ್ನು ಬಳಸುತ್ತಿದ್ದರು.ಸ್ವಾತಂತ್ರಪೂರ್ವದಲ್ಲೇ ಅವಿಭಜಿತ ದಕ್ಷಿಣ ಕನ್ನಡ ಹೆಂಚು ಉದ್ಯಮಕ್ಕೆ ಹೆಸರುವಾಸಿಯಾಗಿತ್ತು. ಇಲ್ಲಿನ ಹೆಂಚು ಗಳು ‘ಮಂಗಳೂರು ಹೆಂಚು’ ಎಂದೇ ಪ್ರಸಿದ್ಧಿ ಪಡೆದಿತ್ತು. ಬ್ರಿಟಿಷರು ಕೂಡ ಇಲ್ಲಿನ ಹೆಂಚಿಗೆ ತಲೆ ತೂಗಿದ್ದರು. ಯುರೋಪ್, ಆಫ್ರಿಕಾ ಖಂಡ ಗಳಿಗೆ ಹಾಗೂ ದೇಶಾ ದ್ಯಂತ ಇಲ್ಲಿಂದಲೇ ಹೆಂಚುಗಳು ರಫ್ತಾಗುತ್ತಿದ್ದವು. ನೂರಾರು ಕುಟುಂಬಗಳು ಈ ಉದ್ಯಮವನ್ನು ಆಶ್ರ ಯಿಸಿದ್ದವು. ಸಾವಿರಾರು ಕಾರ್ಮಿಕರ ಬದುಕನ್ನು ಇದು ಹಸನುಗೊಳಿಸಿತ್ತು.ಆದರೆ, ಬರಬರುತ್ತಾ ಹೆಂಚಿನ ಮನೆ, ಅಂಗಡಿಗಳು ಕಾಂಕ್ರಿಟ್ ಮಯವಾಗ ತೊಡಗಿತು. ಶ್ರೀಮಂತರು ಮಾತ್ರವಲ್ಲ ಮಧ್ಯಮ ವರ್ಗದ ಜನರೂ ಆರ್‌ಸಿಸಿ ಕಟ್ಟಡ ನಿರ್ಮಾಣ ಶುರುವಿಟ್ಟರು. ಹಾಗಾಗಿ ಇದೀಗ ನಗರ ಮಾತ್ರವಲ್ಲ ಗ್ರಾಮಾಂತರ ಪ್ರದೇಶಗಳಲ್ಲೂ ಆರ್‌ಸಿಸಿ ಮನೆಗಳನ್ನು ಕಾಣಬಹುದು. ಹೆಂಚಿನ ಮನೆ ನಿರ್ಮಾಣಕ್ಕೆ ಮುಂದಾ ದರೆ ಅಂತಹವರನ್ನು ತಾತ್ಸಾರದ ಭಾವನೆ ಯಿಂದ ನೋಡುವವರಿಗೂ ಇಂದಿನ ಕಾಲದಲ್ಲಿ ಕೊರತೆ ಇಲ್ಲ. ಹಾಗಾಗಿ ಈಗ ಎಲ್ಲೆಡೆ ಕಾಂಕ್ರಿಟ್ ಕಟ್ಟಡ ಗಳೇ ನಿರ್ಮಾಣ ವಾಗುತ್ತಿದೆ. ಇದರ ನೇರ ಪರಿಣಾಮ ಹೆಂಚು ಉದ್ಯಮದ ಮೇಲಾಗಿದೆ.ಸ್ವರ್ಣ ಯುಗ ದಲ್ಲಿದ್ದ ಮಂಗ ಳೂರು ಹೆಂಚಿನ ಸ್ಥಿತಿ ಇದೀಗ ಆದೋ ಗತಿಗೆ ಇಳಿಸಿದ್ದು, ಯಾರೂ ಕೇಳುವವರಿಲ್ಲದ ಸ್ಥಿತಿ ನಿರ್ಮಾಣಗೊಂಡಿದೆ. ಹೆಂಚು ಉದ್ಯಮಗಳಿಗೆ ತವರೂರಾಗಿದ್ದ ಮಂಗಳೂರಿನಲ್ಲಿ ಇದೀಗ ಬರೇ ಬೆರಳೆಣಿಕೆಯಷ್ಟು ಹೆಂಚು ಉದ್ಯಮಗಳು ಮಾತ್ರ ಜೀವನ್ಮಣದಿಂದ ಹೋರಾಟ ನಡೆಸುತ್ತಾ ಬರುತ್ತಿವೆ.೧೯೭೦ ಹೆಂಚು ಉದ್ಯಮದ ತುತ್ತ ತುದಿ ಅವಧಿ. ಮುಳಿಹುಲ್ಲು, ಟೆಂಟ್ ಹೀಗೆ ಇದ್ದ ಮನೆಗಳನ್ನು ಹೆಂಚಿನ ಮನೆಗಳಾಗಿ ಪರಿವರ್ತಿಸುತ್ತಿದ್ದ ಕಾಲ. ಈ ಸಮಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೪೩ ಹೆಂಚಿನ ಉದ್ಯಮಗಳು ಯಶಸ್ವಿಯಾಗಿ ಸಾವಿರಾರು ಮಂದಿ ಕಾರ್ಮಿಕರಿಗೆ ಆಸರೆ ನೀಡಿದ ಉದ್ಯಮ ಇದೀಗ ಇನ್ನೊಬ್ಬರ ಆಸರೆಗಾಗಿ ಕಾಯುತ್ತಿವೆ. ಇದೀಗ ಮಂಗಳೂರಿನಲ್ಲಿ ಬರೇ ಐದು ಹೆಂಚಿನ ಉದ್ಯಮಗಳು ಮಾತ್ರ ಕಾರ್‍ಯನಿರ್ವಹಿಸುತ್ತಿವೆ. ಅಂದರೆ ೩೮ ಘಟಕಗಳು ಬಾಗಿಲು ಹಾಕಿಕೊಂಡು ಹೋಗಿವೆ.ಗುಣಮಟ್ಟ, ಪೂರೈಕೆ ಎಲ್ಲದರಲ್ಲೂ ಎಲ್ಲರಿಂದ ಸೈ ಎನಿಸಿಕೊಂಡಿದ್ದ ಉದ್ಯಮ, ಇಂದು ಜೀನನ್ಮರಣ ಹೋರಾಟದಲ್ಲಿ ಮುನ್ನಡೆಯುತ್ತಿದೆ.ಮಂಗಳೂರಿನಲ್ಲಿ ಮೊದಲ ಹೆಂಚು ಉದ್ಯಮಕ್ಕೆ ೧೪೦ ವರ್ಷಗಳ ಇತಿಹಾಸವಿದೆ. ೧೮೬೫ರಲ್ಲಿ ಮೊದಲ ಹೆಂಚು ಉದ್ಯಮ ಜರ್ಮನ್ ಮಿಶನರೀಸ್ ಎಂಬ ಸಂಸ್ಥೆಯು ಮಂಗಳೂರಿನ ಜೆಪ್ಪು ಬಳಿ ಹರಿಯುತ್ತಿರುವ ನೇತ್ರಾವತಿ ನದಿ ತೀರದಲ್ಲಿ ಆರಂಭಗೊಂಡಿತ್ತು. ಪ್ರಸ್ತುತ ಈ ಸಂಸ್ಥೆಯು ಮರು ನಾಮರಣಗೊಂಡು ಕಾಮನ್ ವೆಲ್ತ್ ಟ್ರಸ್ಟ್ ಲಿಮಿಟೆಡ್ ಎಂದು ಪರಿವರ್ತಿತಗೊಂಡಿದೆ.ಮರಮಟ್ಟು, ಮಣ್ಣು, ಕಡಿಮೆ ದರಕ್ಕೆ ದೊರೆಯುತ್ತಿದ್ದ ಕಾರ್ಮಿಕರಿಂದಾಗಿ ಹೆಂಚು ಉದ್ಯಮ ಜಿಲ್ಲೆಯಲ್ಲಿ ಉತ್ತಮ ಪ್ರಗತಿಯನ್ನು ಕಂಡುಕೊಂಡಿತು. ಆರಂಭದಿಂದಲೇ ಜರ್ಮನಿ ತಂತ್ರeನ ಬಳಸಿಕೊಂಡು ಹೆಂಚು ತಯಾರಿಸಿರುವುದರಿಂದ ಬೇಡಿಕೆಯೂ ಏರತೊಡಗಿತು. ಇದರಿಂದಾಗಿ ಸ್ಥಳೀಯ ಸಂಸ್ಥೆಗಳು ತಂತ್ರeನ ಮೇಲ್‌ದರ್ಜೆಗೆ ಏರಿಸುವ ಮೂಲಕ ಸ್ಪರ್ಧೆಗೆ ಇಳಿದವು.೧೮೬೮ರಲ್ಲಿ ಅಲೆಕ್ಸ್ ಅಲ್ಬುಕರ್ಕ್ ಪೈ ಮತ್ತು ೧೮೭೪ರಲ್ಲಿ ಹೆನ್ರಿ ಮತ್ತು ಚಾರ್ಲಿ ಮೊರ್ಗನ್ ಅವರು ಹೆಂಚು ಉದ್ಯಮಕ್ಕೆ ಇನ್ನಷ್ಟು ಪುಷ್ಠಿ ಎಂಬಂತೆ ಬೃಹತ್ ಪ್ರಮಾಣದಲ್ಲಿ ಕ್ಷೇತ್ರಕ್ಕೆ ಧುಮುಕಿದರು. ೧೮೭೫ರಿಂದ ೧೯೬೦ರ ನಡುವೆ ಹೆಂಚಿನ ಉದ್ಯಮದ ಸ್ವರ್ಣಯುಗ ಎಂದೇ ಹೇಳಬಹುದು.ದಕ್ಷಿಣ ಕನ್ನಡ ಜಿಲ್ಲೆಯ ಬೋಳಾರ, ಜಪ್ಪು, ಬೋಳೂರು, ಕುತ್ತಾರ್, ಉಳ್ಳಾಲ, ಗುರುಪುರ, ಕುದ್ರೋಳಿ, ಬೊಕ್ಕಪಟ್ಟಣ, ಎಡಪದವು, ಗಂಜಿಮಠ, ಉಡುಪಿ ಜಿಲ್ಲೆಯ ಕುಂದಾಪುರ ಹೀಗೆ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸುಮಾರು 30ಕ್ಕೂ ಅಧಿಕ ಹೆಂಚು ಕಾರ್ಖಾನೆ ಗಳಿದ್ದವು. 20 ವರ್ಷದ ಹಿಂದೆ ಈ ಎಲ್ಲ ಕಾರ್ಖಾನೆ ಗಳಲ್ಲಿ ಪ್ರತೀ ದಿನ ಲಕ್ಷಗಟ್ಟಲೆ ಹೆಂಚು ಉತ್ಪಾದನೆಯಾಗುತ್ತಿದ್ದವು ಮಾತ್ರವಲ್ಲ ಸಾವಿರಾರು ಕುಟುಂಬಗಳೂ ಇದನ್ನೇ ಆಶ್ರಯಿಸಿದ್ದುವು.ಆದರೆ, ಪ್ರಸ್ತುತ ಶೇ.95 ರಷ್ಟು ಜನರು ಕಾಂಕ್ರಿಟ್ ಕಟ್ಟಡ ಗಳತ್ತ ಆಸಕ್ತಿ ವಹಿಸಿದ ಮೇಲೆ ಹೆಂಚು ಉದ್ಯಮ ಕ್ಕೆ ಗರ ಬಡಿ ದಿದೆ. ಹಿಂದೆ ಗುಣ ಮಟ್ಟಕ್ಕೆ ತಕ್ಕಂತೆ ಬೇಡಿಕೆ ಯೂ ಇತ್ತು. ಉತ್ಪಾ ದಿಸಿದ ಹೆಂಚುಗಳೆಲ್ಲಾ ಕ್ಷಣಾ ರ್ಧದಲ್ಲಿ ಖಾಲಿಯಾಗುತ್ತಿದ್ದವು. ಬೇಡಿಕೆಯ ತೀವ್ರತೆ ಎಷ್ಟಿತ್ತೆಂದರೆ ಮುಂಗಡ ಬುಕ್ಕಿಂಗ್ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಈಗ ಅಂತಹ ವಾತಾವರಣವೇ ಇಲ್ಲ. ಕಾಂಕ್ರಿಟ್ ಕಟ್ಟಡಗಳ ಮೇಲಿನ ವ್ಯಾವೋಹ ಮಾತ್ರವಲ್ಲ, ದ.ಕ.ಜಿಲ್ಲೆಯ ಹವಾಮಾನ ಕೂಡ ಹೆಂಚು ಉತ್ಪಾದನೆಗೆ ಒಗ್ಗಿಕೊಳ್ಳುತ್ತಿಲ್ಲ. ಈ ಹಿಂದೆ ಮುಳಿ ಹುಲ್ಲಿನ ಛಾವಣಿಯನ್ನು ಹೊತ್ತಿದ್ದ ಮನೆಗಳು ಕ್ರಮೇಣ ಹೆಂಚನ್ನು ಅಳವಡಿಸುತ್ತಾ ಬಂದಿರುವುದರಿಂದ ಕ್ಷೇತ್ರದಲ್ಲಿ ಹಲವಾರು ಬದಲಾವಣೆ ಹಾಗೂ ಕ್ರಾಂತಿಯನ್ನು ಕಂಡಿತು. ಒಂದನೇ ಮತ್ತು ಎರಡನೇ ಮಹಾಯುದ್ಧದ ಸಮಯದಲ್ಲಿ ಮಂಗಳೂರಿನ ಹೆಂಚಿಗೆ ಭಾರೀ ಬೇಡಿಕೆ ಕಂಡುಕೊಂಡಿತು.ಬಳಿಕದ ದಿನಗಳಲ್ಲಿ ಹೆಂಚು ಉದ್ಯಮವು ಇಳಿಮುಖ ಕಂಡಿತು. ಕಾರ್ಮಿಕ ಸಂಘಟನೆ, ಕಾರ್ಮಿಕರು ಮತ್ತು ಉದ್ಯಮಿಗಳ ನಡುವಣ ಸಂಬಂಧ ಕೊರತೆ, ನದಿ ಕಿನಾರೆಯಲ್ಲಿರುವ ಆವೆ ಮಣ್ಣಿನಲ್ಲಿ ಪ್ಲಾಸ್ಟಿಕ್ ಹಾಗೂ ತ್ಯಾಜ್ಯಗಳ ಸೇರ್ಪಡೆ, ಇದೀಗ ಉದ್ಯಮಗಳು ಕೇಂದ್ರೀಕೃತವಾಗಿರುವ ಸ್ಥಳಗಳಿಂದ ೩೦ ಕಿ.ಮೀ. ದೂರದಲ್ಲಿ ಇವುಗಳು ದೊರೆಯುತ್ತವೆ. ಆದರೆ ಮಣ್ಣು ಸಾಗಾಟ ಸಮಸ್ಯೆಯಾಗಿದೆ. ಹೆಂಚು ಉದ್ಯಮಕ್ಕೆ ಬೇಕಾಗಿರುವ ಇನ್ನೊಂದು ಕಚ್ಛಾ ವಸ್ತುವಾಗಿರುವ ಮರದ ಸಮಸ್ಯೆ ಉದ್ಯಮಗಳು ಎದುರಿಸಬೇಕಾಯಿತು. ಹೆಂಚುಗಳನ್ನು ಸುಡಲು ಬಳಸುವ ಮರಗಳನ್ನು ಪಶ್ಚಿಮ ಘಟ್ಟ ತಪ್ಪಲಿನಿಂದ, ಕುಂದಾಪುರ, ಕಾರವಾರ, ಕುಮಟ ಸೇರಿದಂತೆ ಸಮೀಪದ ಅರಣ್ಯದಿಂದ ತರಬೇಕಾದ ಸ್ಥಿತಿ ನಿರ್ಮಾಣಗೊಂಡಿತು. ಆವೆ ಮಣ್ಣು ಮತ್ತು ಮರವನ್ನು ಸಾಗಾಟ ಮಾಡುವುದೇ ಈ ಉದ್ಯಮಕ್ಕೆ ದೊಡ್ಡ ಸಮಸ್ಯೆಯಾಗಿ ಕಚ್ಛಾ ವಸ್ತುಗಳ ಕೊರತೆಯನ್ನು ಎದುರಿಸಬೇಕಾಯಿತು.ಸೀಮೆ ಎಣ್ಣೆ, ಡೀಸೆಲ್, ವಿದ್ಯುತ್‌ನಿಂದ ಕೆಲಸ ಮಾಡಬಹುದು ಎಂದರೆ ಇವುಗಳ ಬೆಲೆಯೂ ಗಗನಕ್ಕೆ ಏರಿದೆ. ಒಂದು ಕಾಲದಲ್ಲಿ ಮಹಿಳೆಯರಿಗೆ ನಾಲ್ಕು ಅಣೆ ಮತ್ತು ಪುರುಷರಿಗೆ ೬ ಅಣೆಗೆ ಕೆಲಸ ಮಾಡುವ ಅವಧಿಯಲ್ಲಿ ಒಂದು ಸಾವಿರ ಹೆಂಚನ್ನು ೧೮ ರೂ.ಗೆ ಮಾರಲಾಗುತ್ತಿತ್ತು. ಆದರೆ ಪ್ರಸ್ತುತ ೮೦ರಿಂದ ೧೦೦ ರೂ. ವರೆಗೆ ವೇತನ ಸೇರಿದಂತೆ ಕಾನೂನು ಪ್ರಕಾರ ಸೌಲಭ್ಯ ನೀಡುವುದರಿಂದ ಒಂದು ಸಾವಿರ ಹೆಂಚನ್ನು ೪ರಿಂದ ೫ ಸಾವಿರ ರೂ.ಗೆ ಮಾರಲಾಗುತ್ತದೆ. ಈ ಮೊತ್ತವು ಹೆಂಚು ಉತ್ಪಾದನಾ ಸಂಸ್ಥೆಯ ಹೆಸರಿನ ಮೇಲೆ ಅವಲಂಬಿತವಾಗಿರುತ್ತದೆ.ರಾಜ್ಯ ಸರಕಾರದ ಕೊಡುಗೆ: ಕಳೆದ ಹಣಕಾಸು ಆಯವ್ಯಯದಲ್ಲಿ ಮಾರಾಟ ತೆರಿಗೆಯನ್ನು ಶೇ. ೪ರಿಂದ ಒಂದಕ್ಕೆ ಇಳಿಸಿರುವುದು ಹೆಂಚು ಉದ್ಯಮಕ್ಕೆ ಉಸಿರು ಬಿಡಲು ಸಹಕಾರಿಯಾಗಿದೆ.ವಿದೇಶದಿಂದ ಬೇಡಿಕೆ: ಭಾರತದ ಅದರಲ್ಲೂ ಮುಖ್ಯವಾಗಿ ಮಂಗಳೂರಿನ ಹೆಂಚುಗಳಿಗೆ ವಿದೇಶಗಳಲ್ಲಿ ಭಾರೀ ಬೇಡಿಕೆ ಇತ್ತು. ಮಂಗಳೂರಿನ ಹೆಂಚು, ಇಟ್ಟಿಗೆಗಳನ್ನು ಆಸ್ಟ್ರೇಲಿಯಾ, ಆಫ್ರಿಕಾ, ಗಲ್ಫ್, ಯುರೋಪ್‌ಗಳಿಗೆ ರಫ್ತು ಮಾಡಲಾಗುತ್ತಿತ್ತು. ಆದರೆ ಇದೀಗ ವಿದೇಶ ಬಿಡಿ ದೇಶೀಯ ಮಾರುಕಟ್ಟೆಯಲ್ಲೂ ಸ್ಪರ್ಧೆಯಿಂದಾಗಿ ಬೇಡಿಕೆ ಕುಸಿದಿದೆ.ಹೆಂಚಿನ ಕಟ್ಟಡ ನಿರ್ಮಾಣಕ್ಕೆ ತಗಲುವ ವೆಚ್ಚ, ಕಷ್ಟಗಳಿಂದಾಗಿ ಉದ್ಯಮವೇ ನಾಶದ ಅಂಚಿನಲ್ಲಿದೆ. ಫೈಬರ್ ಶೀರ್ಟ್ಸ್, ಸಿಮೆಂಟ್ ಶೀಟ್ಸ್, ಕಾಂಕ್ರೀಟ್ ಕಟ್ಟಡದಿಂದಾಗಿ ಹೆಂಚಿನ ಬೇಡಿಕೆ ಕುಸಿದಿದೆ.ಹೆಂಚು, ಇಟ್ಟಿಗೆ ಸೇರಿದಂತೆ ಆವೆ ಮಣ್ಣಿನಿಂದ ತಯಾರಿಸುವ ಉತ್ಪನ್ನಗಳ ಕುರಿತು ಸಂಶೋಧನೆ ಮತ್ತು ಅಧ್ಯಯನ ನಡೆಸುವ ಕೇಂದ್ರವನ್ನು ಕೆಆರ್‌ಇಸಿ ಪ್ರಸ್ತುತ ಇರುವ ಎನ್‌ಐಟಿಕೆಯಲ್ಲಿ ಆರಂಭಿಸಲಾಯಿತು. ಎರಡು ಕೋಟಿ ರೂ. ವೆಚ್ಚದಲ್ಲಿ ೧೯೯೩ರಲ್ಲಿ ಆರಂಭಗೊಂಡ ಈ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ, ಆಡಳಿತ ನಿರ್ವಹಣೆ ಕೊರತೆ ಹಾಗೂ ಹಣಕಾಸಿನ ಮುಗ್ಗಟ್ಟನ್ನು ಎದುರಿಸುತ್ತಿರುವ ಹೆಂಚು ಉದ್ಯಮಕ್ಕೆ ಪ್ರಯೋಜನಕಾರಿಯಾಗಲಿಲ್ಲ.ಸಂಶೋಧನೆಯು ಉತ್ಪಾದನಾ ವೆಚ್ಚವನ್ನು ಕಡಿತಗೊಳಿಸುವಲ್ಲಿ ಹಾಗೂ ವೇಸ್ಟೇಜ್ ಕಡಿತಗೊಳಿಸುವಲ್ಲಿ ೨೦೦೧ರಲ್ಲಿ ಅಧ್ಯಯನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.ಆದರೆ ಉದ್ಯಮಿ ಗಳು ಇವು ಗಳು ಪ್ರಯೋ ಜನ ವನ್ನು ಪಡೆದು ಕೊಂಡಿಲ್ಲ.ಹೆಂಚು ಛಾವಣಿ ಹಾಕಿ ರುವ ಮನೆಗಳು ತಂಪಾ ಗಿದ್ದು, ಪರಿಸರ ಸ್ನೇಹಿಯಾಗಿದೆ. ಅಂದವಾದ, ಸುಂದರ ಮತ್ತು ಕಲಾತ್ಮಕವು ಇಂತಹ ಮನೆಗಳಲ್ಲಿ ಕಂಡು ಬರುತ್ತವೆ. ಒಂದು ಹೆಂಚಿಗೆ ಹಾನಿ ಯಾದರೆ ಸುಲಭ ವಾಗಿ ಬದಲಾ ಯಿಸಬಹುದು.ಕಾಂಕ್ರಿಟ್‌ಗೆ ಕಟ್ಟಡ ಗಳಿಗೆ ಹೋಲಿ ಸಿದರೆ ತಂಪು ಮಾತ್ರವಲ್ಲದೆ ಆರೋಗ್ಯದ ಹಿತದೃಷ್ಟಿಯನ್ನು ಗಣನೆಗೆ ತೆಗೆದುಕೊಂಡರೂ ಇದು ಉತ್ತಮ ಎಂಬುದು ಸತ್ಯ. ಇತ್ತೀಚಿನ ದಿನಗಳಲ್ಲಿ ವಿವಿಧ ವಿನ್ಯಾಸದ ಹೆಂಚುಗಳು ಇದೀಗ ಮಾರುಕಟ್ಟೆಗೆ ಬಂದಿದ್ದು, ಅಲ್ಪ ಪ್ರಮಾಣದಲ್ಲಿ ಬೇಡಿಕೆಗಳು ಆರಂಭಗೊಂಡಿವೆ.ಈ ನಡುವೆ ಸಂಶೋಧನೆಯ ಮೂಲಕ ವಿವಿಧ ವಿನ್ಯಾಸದ ಹಾಗೂ ಕಲಾತ್ಮಕ ಹೆಂಚುಗಳನ್ನು ತಯಾರಿಸಲು ಸಲಹೆ ನೀಡಲಾಗಿತ್ತು. ಈ ಕಲಾತ್ಮಕ ಹೆಂಚುಗಳು ಮಾರುಕಟ್ಟೆಯಲ್ಲಿ ಅಲ್ಪ ಪ್ರಮಾಣದಲ್ಲಿ ಬೇಡಿಕೆಯನ್ನು ಕುದುರಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.ಆದರೆ ಕಲಾತ್ಮಕ ಹೆಂಚು ತಯಾರಿಕೆಗೆ ಇನ್ನಷ್ಟು ಬಂಡವಾಳವನ್ನು ಉದ್ಯಮಿಗಳು ಹೂಡಬೇಕಾಗುತ್ತದೆ. ಈಗಾಗಲೇ ನಷ್ಟದಲ್ಲಿರುವ ಹೆಂಚು ಉದ್ಯಮಕ್ಕೆ ಇನ್ನಷ್ಟು ಬಂಡವಾಳ ಹೂಡಲು ಉದ್ಯಮಿಗಳು ಮುಂದಾಗುತ್ತಿಲ್ಲ. ಇನ್ನಷ್ಟು ಬಂಡವಾಳ ಹೂಡಲು ಸರಕಾರ ಸಹಾಯ ಮಾಡಬೇಕು ಎಂಬುದು ಉದ್ಯಮಿಗಳ ಬೇಡಿಕೆಯಾಗಿದೆ.ಮಂಗಳೂರು ಹೆಂಚು ಎಷ್ಟೊಂದು ಪ್ರಸಿದ್ಧ ಎಂದರೆ ಗೋವಾದಲ್ಲಿ ಇಂದಿಗೂ ಮಂಗಳೂರು ಹೆಂಚು ಬೇಡಿಕೆಯನ್ನು ಉಳಿಸಿಕೊಂಡಿದೆ. ಮುಂಬಯಿಯ ವಿಕ್ಟೋರಿಯಾ ಟರ್ಮಿನಲ್, ಚರ್ಚ್ ಗೇಟ್‌ನಲ್ಲಿ ಇಂದಿಗೂ ಮಂಗಳೂರು ಹೆಂಚುಗಳು ಇವೆ.ಹೆಂಚು ಬಳಸುವುದರಿಂದ ಕಟ್ಟಡ ನಿರ್ಮಾಣದ ವೆಚ್ಚ ಅಧಿಕವಾಗಲಿದೆ. ಯಾಕೆಂದರೆ ಹೆಂಚು ಅಳವಡಿಸಿ ಮನೆ ನಿರ್ಮಿಸಬೇಕಿದ್ದರೆ ಮರಮಟ್ಟುಗಳು ಬೇಕಾಗುತ್ತದೆ. ಮರ ಮಟ್ಟುಗಳನ್ನು ಕಡಿಮೆ ಗುಣಮಟ್ಟದ್ದು ಹಾಕಿದರೆ, ಮುಂದಿನ ದಿನಗಳಲ್ಲಿ ಸಮಸ್ಯೆಯಾಗುತ್ತದೆ. ಒಂದು ವೇಳೆ ಕಬ್ಬಿಣದ ಸರಳುಗಳ ಮೂಲಕ ಹೆಂಚುಗಳನ್ನು ರಚಿಸಿ ಹೆಂಚು ಅಳವಡಿಸಿದರೂ ಸರಳುಗಳು ತುಕ್ಕು ಹಿಡಿಯಬಹುದೇ ಎಂಬುದು ಸಮಸ್ಯೆ. ಯಾಕೆಂದರೆ ಕರಾವಳಿ ತೀರ ಪ್ರದೇಶಗಳಲ್ಲಿ ವಾತಾವರಣದಲ್ಲಿ ಉಪ್ಪಿನ ಅಂಶ ಅಧಿಕ ಇರುವುದರಿಂದ ಕಬ್ಬಿಣ ಬೇಗ ತುಕ್ಕು ಹಿಡಿಯುತ್ತದೆ. ಆದುದರಿಂದ ಹೆಂಚು ಅಳವಡಿಸಬೇಕಿದ್ದರೆ ಮರಮಟ್ಟುಗಳು ಅಗತ್ಯ. ಒಂದು ಕಡೆಯಿಂದ ಮರಮಟ್ಟುಗಳ ಪೂರೈಕೆ ಕಡಿಮೆ ಇದ್ದು, ದುಬಾರಿಯಾಗಿದೆ. ಇನ್ನೊಂದೆಡೆ ಮರಮಟ್ಟುಗಳನ್ನು ಬಳಸಿ ಮನೆ ನಿರ್ಮಿಸುವುದಿದ್ದರೆ ಕಾರ್ಮಿಕರ ಬಳಕೆಯೂ ಅಧಿಕಬೇಕಾಗುತ್ತದೆ. ಮನೆ ನಿರ್ಮಾಣ ದ ಬಳಿಕ ನಿರ್ವ ಹಣೆಯೂ ಬೇಕಾ ಗುತ್ತದೆ. ಈ ಎಲ್ಲ ವಿಷಯ ವನ್ನು ಗಮನ ದಲ್ಲಿ ಟ್ಟಾಗ ಬಹು ತೇಕ ಮಂದಿ ಕಾಂಕ್ರಿಟ್ ಕಟ್ಟಡದತ್ತ ಮನಸು ವಾಲುತ್ತದೆ.ಈ ನಡುವೆ ಉತ್ತಮ ಬೆಳವಣಿಗೆ ಎಂದರೆ ಗೋವಾ ರಾಜ್ಯ ಸರಕಾರವು ಸರಕಾರಿ ಕಟ್ಟಡಗಳ ಮೇಲೆ ಕಡ್ಡಾಯವಾಗಿ ಬಳಸಲು ಶಿಫಾರಸ್ಸು ಮಾಡಿದೆ. ಕಾಂಕ್ರಿಟ್ ಕಟ್ಟಡ ನಿರ್ಮಿಸಿದರೂ ಅವುಗಳ ಮೇಲೆ ಹೆಂಚು ಅಳವಡಿಸಬೇಕು ಎಂದು ಶೀಫಾರಸ್ಸು ಮಾಡಿದೆ.ಗೋವಾ ರಾಜ್ಯದಲ್ಲಿ ತೆಗೆದುಕೊಂಡಂತೆ ರಾಜ್ಯದಲ್ಲೂ ತೀರ್ಮಾನವನ್ನು ತೆಗೆದುಕೊಳ್ಳಬೇಕು ಎಂದು ಈಗಾಗಲೇ ಹೆಂಚು ಉದ್ಯಮಿಗಳು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ ಇಂದಿನ ವರೆಗೆ ಯಾವುದೇ ಪ್ರತಿಕ್ರಿಯೆ ರಾಜ್ಯ ಸರಕಾರದಿಂದ ಬಂದಿಲ್ಲ. ರಾಜ್ಯ ಸರಕಾರ ಈ ಕುರಿತು ತೀರ್ಪು ನೀಡಿದ್ದಲ್ಲಿ ಹೆಂಚು ಉದ್ಯಮ ೧೯೭೦ರ ವೇಳೆಯಲ್ಲಿ ಕಂಡ ಸುವರ್ಣ ದಿನಗಳು ಮತ್ತೆ ಮರುಕಳಿಸುವ ದಿನಗಳು ದೂರವಿರಕ್ಕಿಲ್ಲ.
Subscribe to:
Post Comments (Atom)
No comments:
Post a Comment