Posts

Showing posts from August, 2011

ಬಿ.ಎಂ. ಇದಿನಬ್ಬ: ಒಂದು ನೆನಪು

Image
ಗಾಂಧಿ ಟೋಪಿ,ಶುಭ್ರ ಖಾದಿ ಬಟ್ಟೆ,ಬಿಳಿ ಗಡ್ಡ, ಕನ್ನಡಕ, ಕಂಚಿನ ಕಂಠ. ಅದರಲ್ಲಿ ಹೊರಹೊಮ್ಮಿದ ಕಯ್ಯರ ಕಿಂಞಣ್ಣ ರೈ ಅವರ ‘‘ಐಕ್ಯವೊಂದೇ ಮಂತ್ರ...’’ ಹಾಡು. ಇಷ್ಟು ವಿವರಿಸಿದರೆ ಸಾಕು, ಅವಿಭಾಜಿತ ದಕ್ಷಿಣ ಕನ್ನಡ ಕರಾವಳಿಯಲ್ಲಿ ಯಾರನ್ನೂ ಕೇಳಿದರು ಹೇಳುತ್ತಾರೆ ‘‘ಅವರು ಇದಿನಬ್ಬ’’. ಬಿ. ಎಂ.ಇದಿನಬ್ಬ ಕನ್ನಡ ನಾಡನ್ನು ಅಗಲಿ ವರ್ಷಗಳೇ ಸಂದಿವೆ. ಅವರ ಕಂಚಿನ ಕಂಠದ ಗಮಕ ಹಾಡುಗಳಿಲ್ಲದೆ ಕರಾವಳಿಯ ವೇದಿಕೆಗಳು ಬಣಗುಟ್ಟುತ್ತಿವೆ. ಇದಿನಬ್ಬರ ಹೆಸರೇ ಸದಾ ಕೋಮು ದಳ್ಳುರಿಯಲ್ಲಿ ಬೆಂದ ಕರಾವಳಿಯ ಕೋಮುಸೌಹಾರ್ದಕ್ಕೆ ಪರ್ಯಾಯ ಪದ. ಬಹುಷ ಸೌಹಾರ್ದದ ಕುರಿತಂತೆ ಮಾತನಾಡಿದ್ದು ಬಹಳಷ್ಟು ಕಡಿಮೆ.ಬದಲಿಗೆ ಅದನ್ನು ಬದುಕಿನಲ್ಲಿ ತೋರಿಸಿಕೊಟ್ಟವರು. ಒಬ್ಬ ಮುಸ್ಲಿಮನಾಗಿದ್ದರೂ ಇದಿನಬ್ಬ ಎಂದಿಗೂ ಕೇವಲ ಮುಸ್ಲಿಮರ ನಾಯಕರಾಗಿರಲಿಲ್ಲ.ಅವರು ಎಂದೆಂದಿಗೂ ಕನ್ನಡದ ಕಟ್ಟಾಳು. ಕನ್ನಡತನ, ಸೌಹಾರ್ದ, ಸಹಕಾರ, ಸರಳತೆ, ನೇರನುಡಿ, ಪ್ರಾಮಾಣಿಕ ಬದುಕು...ಇವು ಇದಿನಬ್ಬ ನಮ್ಮ ನಡುವೆ ಊರಿ ಹೋದ ಹೆಜ್ಜೆಗಳು....ಆ ಹೆಜ್ಜೆಗಳ ಹಿಂದೆ ಹೆಜ್ಜೆಗಳನ್ನಿಟ್ಟು ಸಾಗಿದರೂ ಸಾಕು...ಕರಾವಳಿ ಮಾತ್ರವಲ್ಲ, ಇಡೀ ಕರ್ನಾಟಕವೇ ಸೌಹಾರ್ದದ ಬೀಡಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದಿನಬ್ಬರವರ ಕುಟುಂಬದ ಬಗ್ಗೆ ಮಾಹಿತಿ ಕಲೆ ಹಾಕಿದರೆ, ಇದಿನಬ್ಬರ ತಂದೆ ತೀರಿದಾಗ ಅವರು ಹತ್ತು ವರ್ಷದ ಕೂಸು. ತಾಯಿ ಗರ್ಭವತಿ. ಇದ್ದುದರಲ್ಲಿ ಇದಿನಬ್ಬರೇ ದೊಡ್ಡ ಮಗ.ತಂದೆ ನಿಧನರಾಗುವ ಮೊದಲು ತನ್ನ...