ಭಗವಾನ್ ಬಾಹುಬಲಿ ವೇಣೂರು.
ಕರಾವಳಿ ನಾಡು ದಕ್ಷಿಣ ಕನ್ನಡ ಜಿಲ್ಲೆ ಅನೇಕ ಪುಣ್ಯ ನೆಲೆಗಳ ಬೀಡು.ವಿವಧ ಜಾತಿ- ಧರ್ಮ, ಸಂಸ್ಕೃತಿಗಳ ಜನರು ಇಲ್ಲಿದ್ದರೂ ಎಲ್ಲಾ ಧರ್ಮಿಯರು ಇಲ್ಲಿ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ.ಇವರಲ್ಲಿ ಅತ್ಯಂತ ಪುರಾತನವಾದ ಜೈನ ಧರ್ಮವು ಒಂದು.ಜೈನ ಧರ್ಮದ ನೇಕ ಪುಣ್ಯ ಕ್ಷೇತ್ರಗಳು ಈ ಕರಾವಳಿ ಭಾಗದಲ್ಲಿವೆ ಇವುಗಳಲ್ಲಿ ಈ ವೇಣೂರು ಕೂಡ ಒಂದು. ವಿರಾಟ್ ವಿರಾಗಿ ವೇಣೂರ ಗೊಮ್ಮ ಟೇಶ್ವರ ನಿಗೆ ಇದೀಗ ಮಹಾ ಮಜ್ಜ ನಕ್ಕೆ ಭರದ ಸಿದ್ಧತೆ. 20 12 ಜನವರಿ 29 ರಂದು ಮಹಾ ಮಜ್ಜ ನಕ್ಕೆ ಈಗಾ ಗಲೇ ದಿನ ನಿಗಧಿ ಯಾಗಿದ್ದು,ಪೂರ್ವ ಭಾವೀ ಸಿದ್ದತೆ ಗಳು ಭರ ದಿಂದ ಸಾಗಿವೆ.ಜಗ ತ್ತಿಗೆ ಶಾಂತಿ,ತ್ಯಾಗ ಮತ್ತು ಅಹಿಂ ಸೆಯ ಸಂದೇ ಶವನ್ನು ಸಾರಿದ ಭಗ ವಾನ್ ಬಾಹು ಬಲಿಯ ಪುಣ್ಯ ಕ್ಷೇತ್ರ ಗಳಲ್ಲಿ ಒಂ ದಾದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂ ಗಡಿ ತಾಲೂ ಕಿನ ವೇಣೂರು ರಾಜ್ಯದ ಪ್ರಸಿದ್ದ ಜೈನ ತೀರ್ಥ ಕ್ಷೇತ್ರ ಗಳಲ್ಲಿ ಒಂದು. ಕ್ರಿ.ಶ. 1604 ರಲ್ಲಿ ಈ ಪ್ರದೇಶ ದಲ್ಲಿ ಆಳ್ವಿಕೆ ನಡೆಸು ತ್ತಿದ್ದ 4ನೇ ಅಜಿಲರ ಅರಸ ರಾದ ತಿಮ್ಮಣ್ಣಾಜಿಲ ಅರಸರಿಂದ ಪ್ರತಿ ಷ್ಠಾಪಿತವಾದ 35 ಅಡಿ ಎತ್ತರದ ಏಕ ಶಿಲಾ ಗೋಮ ಟೇಶ್ವರ ಮಹಾಮೂರ್ತಿ ಅತೀ ವಿರಳವಾಗಿರುವ ಮಂದಸ್ಮಿತ ಮುಖಮುದ್ರೆಯನ್ನು ಹೊಂದಿದ್ದು, ಜಾತಿ-ಭೇಧವಿಲ್ಲದೆ ಎಲ್ಲಾ ಧರ್ಮಿಯರನ್ನೂ ತನ್ನೆಡೆ ಕೈ ಬೀಸಿ ಕರೆಯುತ್ತಿದೆ.ಎಲ್ಲ ಬಾಹುಬಲಿ ವಿಗ್ರಹಗಳೂ ಗುಡ್ಡ- ಬೆಟ್ಟದಲ್ಲಿ ಪ್ರತಿಷ್ಠಾಪಿಸಿದ್ದರೆ, ವೇಣೂರಿನ ಈ ಬಾಹುಬಲಿ ಮೂರ್ತಿ ಮಾ...