Monday, October 24, 2011

ಭಗವಾನ್ ಬಾಹುಬಲಿ ವೇಣೂರು.

ಕರಾವಳಿ ನಾಡು ದಕ್ಷಿಣ ಕನ್ನಡ ಜಿಲ್ಲೆ ಅನೇಕ ಪುಣ್ಯ ನೆಲೆಗಳ ಬೀಡು.ವಿವಧ ಜಾತಿ- ಧರ್ಮ, ಸಂಸ್ಕೃತಿಗಳ ಜನರು ಇಲ್ಲಿದ್ದರೂ ಎಲ್ಲಾ ಧರ್ಮಿಯರು ಇಲ್ಲಿ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ.ಇವರಲ್ಲಿ ಅತ್ಯಂತ ಪುರಾತನವಾದ ಜೈನ ಧರ್ಮವು ಒಂದು.ಜೈನ ಧರ್ಮದ ಻ನೇಕ ಪುಣ್ಯ ಕ್ಷೇತ್ರಗಳು ಈ ಕರಾವಳಿ ಭಾಗದಲ್ಲಿವೆ ಇವುಗಳಲ್ಲಿ ಈ ವೇಣೂರು ಕೂಡ ಒಂದು. ವಿರಾಟ್ ವಿರಾಗಿ ವೇಣೂರ ಗೊಮ್ಮ ಟೇಶ್ವರ ನಿಗೆ ಇದೀಗ ಮಹಾ ಮಜ್ಜ ನಕ್ಕೆ ಭರದ ಸಿದ್ಧತೆ. 20 12 ಜನವರಿ 29 ರಂದು ಮಹಾ ಮಜ್ಜ ನಕ್ಕೆ ಈಗಾ ಗಲೇ ದಿನ ನಿಗಧಿ ಯಾಗಿದ್ದು,ಪೂರ್ವ ಭಾವೀ ಸಿದ್ದತೆ ಗಳು ಭರ ದಿಂದ ಸಾಗಿವೆ.ಜಗ ತ್ತಿಗೆ ಶಾಂತಿ,ತ್ಯಾಗ ಮತ್ತು ಅಹಿಂ ಸೆಯ ಸಂದೇ ಶವನ್ನು ಸಾರಿದ ಭಗ ವಾನ್ ಬಾಹು ಬಲಿಯ ಪುಣ್ಯ ಕ್ಷೇತ್ರ ಗಳಲ್ಲಿ ಒಂ ದಾದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂ ಗಡಿ ತಾಲೂ ಕಿನ ವೇಣೂರು ರಾಜ್ಯದ ಪ್ರಸಿದ್ದ ಜೈನ ತೀರ್ಥ ಕ್ಷೇತ್ರ ಗಳಲ್ಲಿ ಒಂದು. ಕ್ರಿ.ಶ. 1604 ರಲ್ಲಿ ಈ ಪ್ರದೇಶ ದಲ್ಲಿ ಆಳ್ವಿಕೆ ನಡೆಸು ತ್ತಿದ್ದ 4ನೇ ಅಜಿಲರ ಅರಸ ರಾದ ತಿಮ್ಮಣ್ಣಾಜಿಲ ಅರಸರಿಂದ ಪ್ರತಿ ಷ್ಠಾಪಿತವಾದ 35 ಅಡಿ ಎತ್ತರದ ಏಕ ಶಿಲಾ ಗೋಮ ಟೇಶ್ವರ ಮಹಾಮೂರ್ತಿ ಅತೀ ವಿರಳವಾಗಿರುವ ಮಂದಸ್ಮಿತ ಮುಖಮುದ್ರೆಯನ್ನು ಹೊಂದಿದ್ದು, ಜಾತಿ-ಭೇಧವಿಲ್ಲದೆ ಎಲ್ಲಾ ಧರ್ಮಿಯರನ್ನೂ ತನ್ನೆಡೆ ಕೈ ಬೀಸಿ ಕರೆಯುತ್ತಿದೆ.ಎಲ್ಲ ಬಾಹುಬಲಿ ವಿಗ್ರಹಗಳೂ ಗುಡ್ಡ- ಬೆಟ್ಟದಲ್ಲಿ ಪ್ರತಿಷ್ಠಾಪಿಸಿದ್ದರೆ, ವೇಣೂರಿನ ಈ ಬಾಹುಬಲಿ ಮೂರ್ತಿ ಮಾತ್ರ ಭೂಮಟ್ಟದಲ್ಲಿಯೇ ಇದೆ. ಆದ್ದರಿಂದ ಸುಲಭದಲ್ಲಿ ಬಾಹುಬಲಿ ದರ್ಶನ ಮಾಡಬಹುದಾದ ಅಪರೂಪದ ಕ್ಷೇತ್ರ ಇದಾಗಿದೆ. ಇಲ್ಲಿ ಶ್ರೀ ಆದೀಶ್ವರ ಸ್ವಾಮಿ ಬಸದಿ, ಶಾಂತೀಶ್ವರ ಸ್ವಾಮಿ ಬಸದಿ, 24 ತೀರ್ಥಂಕರರ ಬಸದಿ, ಅಕ್ಕಂಗಳ ಬಸದಿ, ಭಿನ್ನಾಣಿ ಬಸದಿ ಎಂಬ 7 ಜಿನ ಚೈತ್ಯಾಲಯಗಳಿವೆ.ಈ ಗೋಮ ಟೇಶ್ವರ ಮಹಾ ಮೂರ್ತಿಗೆ 19 28, 19 56, 2000 ನೇ ಇಸವಿ ಯಲ್ಲಿ ಮಹಾ ಮಸ್ತಕಾ ಭಿಷೇಕ ನಡೆ ದಿದ್ದು,ಇದೀಗ 12 ವರ್ಷಗಳ ತರು ವಾಯ ಮತ್ತೆ ಮಹಾ ಮಸ್ತಕಾ ಭಿಷೇಕ ಸಂಭ್ರಮ.ಮಸ್ತಕಾ ಭಿಷೇ ಕಕ್ಕೆ ಅನು ಕೂಲ ವಾಗು ವಂತೆ ಬಾಹುಬಲಿ ವಿಗ್ರಹದ ಹಿಂಭಾಗದಲ್ಲಿ ಈ ಬಾರಿ ಶಾಶ್ವತ ಅಟ್ಟಳಿಗೆ ರಚಿಸಲು ನಿರ್ಧರಿಸಲಾಗಿದೆ.ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಅಧ್ಯಕ್ಷತೆಯಲ್ಲಿ ಮತ್ತು ಜೈನ ಮುನಿಗಳ ಮಾರ್ಗ ದರ್ಶನದಲ್ಲಿ ಮಹಾ ಮಸ್ತಕಾಭಿಷೇಕ ಕಾರ್ಯ ಕ್ರಮಗಳು ನಡೆಯಲಿದ್ದು, ಪೂರ್ಣ ಕುಂಭ,ಚತುಷ್ಕೋಣ ಕುಂಭ,ಎಳನೀರು, ಹಾಲು, ಕಬ್ಬಿನ ಹಾಲು, ಶ್ರೀಗಂಧ, ಚಂದನ, ಅಷ್ಟಗಂಧ ಮೊದಲಾದವುಗಳಿಂದ ಮಸ್ತಕಾಭಿಷೇಕ ನಡೆಯಲಿದೆ.ಸತತ ಒಂಬತ್ತು ದಿನಗಳ ಕಾಲ ಭಗವಾನ್ ಬಾಹುಬಲಿಗೆ ಮಹಾಮಜ್ಜನದ ವೈಭವದ ಕಾರ್ಯಕ್ರಮಗಳು ನಡೆಯಲಿವೆ.ಮತ್ತೊಮ್ಮೆ ವೇಣೂರು ಮಹಾಮಜ್ಜನದ ಚಾರಿತ್ರಿಕ ಸಂಭ್ರಮಕ್ಕೆ ಸಜ್ಜಾಗುತ್ತಿದ್ದು, ಯಾತ್ರಿಕರನ್ನು ಕೈ ಬೀಸಿ ಕರೆಯುತ್ತಿದೆ.

2 comments:

  1. its not detail
    under moodbidrijain bhattarak swamiji's holy guidence
    rajas and heggdeji,dananjy and villegers support unity
    memorable one add much detail with jain religious way

    ReplyDelete