ಬ್ಯಾರಿಗಳು
" ಬ್ಯಾರಿ " ಎಂಬ ಪದವು ತುಳುವಿನ ಬ್ಯಾರ ಎಂಬ ಶಬ್ದ ದಿಂದ ಉದ್ಭವಗೊಂಡಿದ್ದು ವ್ಯಾಪಾರ ವಹಿವಾಟು ಎಂದು ಅದರ ಅರ್ಥ. ಪ್ರಾಚೀನ ಕಾಲದಿಂದಲೂ ಈ ಜನಾಗದ ಹೆಚ್ಚಿನ ಜನರು ವ್ಯಾಪಾರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಡಿದ್ದರು. ಆದ್ದರಿಂದ ಸ್ಥಳೀಯ ತುಳುವರು ಅವರನ್ನು ಬ್ಯಾರಿಗಳೆಂದು ಕರೆಯುತ್ತಿದ್ದರು. ಕ್ರಿ.ಶ.1891ರ ಜನಗಣತಿಯ ಪ್ರಕಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆ ಕಾಲದಲ್ಲಿ 90,345 ಬ್ಯಾರಿ ವ್ಯಾಪಾರಿಗಳಿದ್ದರು. ಮತ್ತು ಇದು ಒಟ್ಟು ವರ್ತಕರ ಪ್ರಮಾಣಕ್ಕೆ ಹೋಲಿಸಿದರೆ ಸುಮಾರು ಶೇಕಡಾ 92ರಷ್ಟಾಗಿತ್ತು. ಆದ್ದರಿಂದಲೇ ಅವರನ್ನು ಬ್ಯಾರಿಗಳೆಂದು ಕರೆಯಲಾಗುತ್ತಿತ್ತು ಮತ್ತು ಇದು ಅನ್ವರ್ಥಕನಾಮವೂ ಆಗಿತ್ತು. ಬ್ಯಾರಿಗಳು ತುಳುನಾಡು ಎಂದು ಹಿಂದೆ ಕರೆಯಲಾಗುತ್ತಿದ್ದ ಕರ್ನಾಟಕದ ಈಗಿನ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ವಾಸವಾಗಿರುವ ಒಂದು ಮುಸ್ಲಿಂ ಜನಾಂಗ. ಅವರು ತಮ್ಮದೇ ಆದ ವಿಶಿಷ್ಟ ಸಂಪ್ರದಾಯ ಮತ್ತು ಸಾಂಸ್ಕೃತಿಕ ಅನನ್ಯತೆಯನ್ನು ಹೊಂದಿರುವ ಒಂದು ಸಾಮಾಜಿಕ ಪಂಗಡ. ಬ್ಯಾರಿಗಳಿಗೆ ಕೊಂಕಣ ತೀರದ ನವಾಯತರು ಮತ್ತು ಮಲಬಾರಿನ ಮಾಪಿಳ್ಳಗಳಿಗೆ ಸಮನಾದ ಒಂದು ಮಹತ್ವದ ಸಾಂಸ್ಕೃತಿಕ ಸಂಪ್ರದಾಯವಿದೆ. 1891ರ ಕೂಚ್ ಮನ್ ಸಮೀಕ್ಷಾ ವರದಿಯಲ್ಲಿ ನಮೂದಾಗಿರುವಂತೆ ಈ ಜನಾಂಗದ ಪ್ರಮುಖ ಗುರುತು ಎಂದರೆ ಪುರುಷರಿಗೆ ಬ್ಯಾರಿ ಮತ್ತು ಮಹಿಳೆಯರಿಗೆ ಬ್ಯಾರ್ದಿ ಎಂಬ ಒಕ್ಕಣೆಯಿರುವುದು. ಅಲ್ಲದೆ ಈ ಜನಾಗಕ್ಕೂ...