ಸರ್ ಜಾನ್ ಸ್ಟರಕ್ : ಕಲೆಕ್ಟರ್ ಆಫ್ ಸೌತ್ ಕೆನರಾ
ಸರ್ ಜಾನ್ ಸ್ಟರಕ್ , ಈ ಹೆಸರು ಮಂಗಳೂರಿನ ಇಂದಿನ ಪೀಳಿಗೆಗೆ ಕಡಿಮೆ ಪರಿಚಯ.18 ನೇ ಶತಮಾನದಲ್ಲಿ ಕರಾವಳಿ ಜಿಲ್ಲೆಯನ್ನು ಆಳಿದ ಬ್ರಿಟೀಷ್ ಅಧಿಕಾರಿ.ಜಿಲ್ಲಾ ಕಲೆಕ್ಟರರಾಗಿ ಅನೇಕ ಉತ್ತಮ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾದವರು.1881 ರಲ್ಲಿ ಕರಾವಳಿಯ ಈ ಭಾಗ ಮದ್ರಾಸ್ ಆಡಳಿತಕ್ಕೆ ಒಳಪಟ್ಟಿದ್ದ ಈ ಸಂದರ್ಭದಲ್ಲಿ ಈ ಜಿಲ್ಲೆಯಲ್ಲಿ ಸ್ಟರಕ್ ಅವರು ಕಲೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದರು.ಇದಕ್ಕೂ ಮುನ್ನ ಅವರು ಈ ಜಿಲ್ಲೆಯಲ್ಲಿ ಅನೇಕ ಕಡೆ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. 1866-67 ರಲ್ಲಿ ಅವರು ಸೌತ್ ಕೆನರಾ ಜಿಲ್ಲೆಯ ಎಸಿಸ್ಟೆಂಟ್ ಕಲೆಕ್ಟರ್ ಆಗಿ ನೇಮಕವಾಗಿದ್ದರು. ( ಮಂಗಳೂರು ಹಳೇ ಬಂದರಿನಲ್ಲಿನ ಸ್ಟರಕ್ ವೃತ್ತ) 1873 ರಲ್ಲಿ ಸೌತ್ ಕೆನರಾ ಮತ್ತು ಮೈಸೂರು ಜಿಲ್ಲೆಗಳ ಮಹತ್ವದ ಗಡಿ ವಿವಾದವನ್ನು ಪರಿಹರಿಸುವ ನಿಟ್ಟಿನಲ್ಲಿ 750 ರೂಪಾಯಿಗಳ ವಿಶೇಷ ಸಂಭಾವನೆಯೊಂದಿಗೆ ಅವರನ್ನು ಕಮೀಶನರ್ ಆಗಿ ಬ್ರೀಟಿಷ್ ನೇಮಕ ಮಾಡಿತ್ತು.ಸ್ಥಳಿಯ ಸಮಸ್ಯೆಗಳನ್ನು ಬಗೆ ಹರಿಸಲು ಇಲ್ಲಿನ ಸ್ಥಳಿಯ ಭಾಷೆಯ ಅಗತ್ಯತೆಯನ್ನು ಕಂಡು, ಅವರು ಕನ್ನಡ, ತುಳು ಭಾಷೆಯನ್ನು ಕಲಿತರು ಮಾತ್ರವಲ್ಲ ನಿರರ್ಗಳವಾಗಿ ಮಾತಾಡುತ್ತಿದ್ದರು. ತುಳು ಭಾಷೆಯಲ್ಲಿ ಅಪಾರ ಪಾಂಡಿತ್ಯವನ್ನು ಪಡೆದಿದ್ದ ಬ್ರಾಹ್ಮಣರಿಂದ ತುಳು ಭಾಷೆಯನ್ನು ಕಲಿತರು. ಈ ಹಿನ್ನೆಲೆಯಲ್ಲಿ 1872 ರಲ್ಲಿ ಕನ್ನಡ ಭಾಷಾ ಅನುವಾದಕರಾಗಿ ಸರ್ಕಾರದಿಂದ ನೇಮಕಗೊಂಡರ...