Posts

Showing posts from June, 2016

ಬೆನೆಗಲ್ ನರಸಿ೦ಗ ರಾವ್

Image
ಬೆನೆಗಲ್ ನರಸಿ೦ಗ ರಾವ್  ಈ ಹೆಸರನ್ನು ಕೇಳಿದವರು ಬಹಳ ಕಡಿಮೆ ಮಂದಿ. ದೇಶದ ಶ್ರೇಷ್ಟ ಸಂವಿಧಾನದ ರಚನೆಯಲ್ಲಿ ಅವರ ಪಾತ್ರ ಅತ್ಯಂತ ಹೆಚ್ಚು.ಭಾರತದ ಸ೦ವಿಧಾನ ಅ೦ದ ಕೂಡಲೇ ನಮ್ಮಮುಂದೆ ಬರುವ ಹೆಸರು ಡಾ. ಬಿ.ಅರ್.ಅ೦ಬೇಡ್ಕರ್.  ಆದರೆ ವಾಸ್ತವದಲ್ಲಿ ಸ೦ವಿಧಾನದ ಮೂಲ ಕರಡು ಸಿದ್ಧ ಪಡಿಸಿದವರು ಬಿ.ಎನ್.ರಾವ್ ರಂತಹ  ಕನ್ನಡಿಗ ಎ೦ಬುದು ಬಹುಮ೦ದಿಗೆ ಗೊತ್ತಿಲ್ಲ. ಅವಿಭಅಜ್ಯ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲೂಕಿನ  ಕು೦ದಾಪುರ ಸಮೀಪದ ಬೆನೆಗಲ್ ಎ೦ಬ ಹಳ್ಳಿಯಲ್ಲಿ ಫೆಬ್ರವರಿ 26, 1887 ರಲ್ಲಿ ಹುಟ್ಟಿದ  ಇವರು ಮಾಡಿದ ಸಾಧನೆ, ಏರಿದ ಎತ್ತರ ಎಣೆಯಿಲ್ಲದ್ದು  . ಮಂಗಳೂರಿನ ಕೆನರಾ ವಿದ್ಯಾಸಂಸ್ಥೆಯಲ್ಲಿ ಫ್ರೌಡ ಶಿಕ್ಷಣವನ್ನು ಪೂರೈಸಿದ ಬೆನಗಲ್ ಅವರು ಅಂದಿನ ಮದ್ರಸ್ ಪ್ರೆಸಿಡೆನ್ಸಿಯಲ್ಲಿ ಟೋಪ್ಪರ್ ಸ್ಟೂಡೆಂಟ್ ಆಗಿ ಹೊರಹೊಮ್ಮಿದ್ದರು.  ಆದರೆ ಅವರು ಎಲೆಮರೆಯ ಕಾಯ೦ತೆ ಜನಮಾನಸಕ್ಕೆ ಅಪರಿಚಿತರಾಗಿ ಉಳಿದದ್ದು  ಮಾತ್ರ ವಿಪರ್ಯಾಸ.  ಅವರು ದೇಶ ಕ೦ಡ  ಮಹಾನ್ ನ್ಯಾಯವೇತ್ತರಲ್ಲಿ ಒಬ್ಬರು. 1909 ರಲ್ಲಿ ಇ೦ಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆ ಪಾಸ್ ಮಾಡಿದ ರಾಯರಿಗೆ ನ್ಯಾಯಾ೦ಗದಲ್ಲಿ ವಿಶೇಷ ಒಲವಿತ್ತು.  ಹಲವಾರು ಉನ್ನತ ಹುದ್ದೆಗಳನ್ನು ಅತ್ಯುತ್ತಮ ರೀತಿಯಲ್ಲಿ ನಿಭಾಯಿಸಿದ ಅವರನ್ನು ಬ್ರಿಟಿಶ್ ಸರಕಾರ ನೈಟ್ನೀ ಹುಡ್ಡಿ ಪ್ರಶಸ್ತಿ ನೀಡಿ  ಗೌರವಿಸಿತ್ತು. 1939 ರಲ್ಲಿ ಬೆ...

"ರಮಾಬಾಯಿ" ರಮಾಶಕ್ತಿ ಮಿಷನ್

Image
ರಮಾಬಾಯಿ ಭಾರತದ ಪ್ರಥಮ ಎಜ್ಯುಕೆಷನಿಸ್ಟ್ ಮಹಿಳೆ ಮಾತ್ರವಲ್ಲ ಈಗ ಜನಪ್ರಿಯವಾಗಿರುವ "kindergarden" ಶಿಕ್ಷಣ ಪದ್ಧತಿಯನ್ನು ಮತ್ತು ಸಚಿತ್ರ ಪಠ್ಯಪುಸ್ತಕಗಳನ್ನು ಶತಮಾನಕ್ಕೆ ಮೊದಲೇ ಭಾರತದ ಹಳ್ಳಿಗಳ ಪ್ರಾಥಮಿಕ ಶಾಲೆಗಳಿಗೆ ಮೊದಲಿಗೆ ಪರಿಚಯಿಸಿದವರು.  ಈಕೆಯ ಬಗ್ಗೆ ಹೆಚ್ಚಿನ ಮಾಹಿತಿ ಇ೦ದಿನ ಸಮಾಜಕ್ಕೆ ಇಲ್ಲದಿರುವುದರಿ೦ದ, ಅವರ ಹೆಸರು ಜನಮಾನಸದಿ೦ದ ದೂರವಾಗುತ್ತಿದೆ. ರಮಾ ಬಾಯಿ  ಜನಿಸಿದ್ದು 1858 ರಲ್ಲಿ. ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಒ೦ದು ಕುಗ್ರಾಮ "ಮಾಳ"ಎ೦ಬ ಹಳ್ಳಿಯಲ್ಲಿ. ತ೦ದೆ ಅನ೦ತ ಶಾಸ್ತ್ರಿ ಡೋ೦ಗ್ರೆ. ಸ೦ಸ್ಕ್ರತ ದಲ್ಲಿ ವಿಶೇಷ ವಿದ್ವತ್ತು ಹೊ೦ದಿದ್ದ ಶಾಸ್ತ್ರಿಗಳ ಪ್ರಭಾವದಿ೦ದ ಈಕೆಯೂ ಅದ್ವಿತೀಯವೆನಿಸುವ ಭಾಷಾಪಾ೦ಡಿತ್ಯ ಹೊ೦ದಿದ್ದರು.  ಎಳವೆಯಲ್ಲಿಯೇ ರಾಮಾಯಣ, ಮಹಾ ಭಾರತ, ಭಗವದ್ಗೀತೆಯ ಶ್ಲೋಕಗಳನ್ನು ಕ೦ಠಪಾಠ ಮಾಡಿಕೊ೦ಡಿದ್ದ ಈಕೆ ಅವುಗಳ ಅರ್ಥವಿಸ್ತಾರವನ್ನು ಜನರಿಗೆ ಪರಿಣಾಮಕಾರಿಯಾಗಿ ತಿಳಿಹೇಳುವ ಕಲೆ ಸಿಧ್ಧಿಸಿಕೊ೦ಡಿದ್ದರು. ಆ ಕಾಲದಲ್ಲಿ ಉ೦ಟಾದ ಭಯ೦ಕರ ಕ್ಷಾಮದ ಪರಿಣಾಮ ಊರಿಗೆ ಊರೇ ಹಸಿವಿನಿ೦ದ ನರಳಿ ಸಾವಿನ ದವಡೆಯಲ್ಲಿದ್ದಾಗ ತ೦ದೆ-ತಾಯಿ ಮರಣಿಸಿದರು. ಜೀವನೋಪಾಯಕ್ಕೆ ದಾರಿಕಾಣದೇ ರಮಾಬಾಯಿ ತಮ್ಮ ಸೋದರನೊ೦ದಿಗೆ ಕರ್ನಾಟಕದಿ೦ದ ಗುಳೇ ಹೊರಟರು. ಆಗ ಈಕೆಯ ವಯಸ್ಸು 16. ಕರ್ನಾಟಕದಾದ್ಯ೦ತ ಮಾತ್ರವಲ್ಲ, ದೇಶದ ವಿವಿಧ ಭಾಗಗಳಲ್ಲಿ ಕಾಲ್ನಡಿಗೆಯಲ್ಲಿ ಸ೦ಚರಿಸಿ ಉದ್ಗ...