ಅಪ್ರತಿಮ ದೇಶ ಭಕ್ತ ' ಜಾರ್ಜ್ ಫರ್ನಾಂಡೀಸ್ '
ಜಾರ್ಜ್ ಫರ್ನಾಂಡೀಸ್ ನಂತಹ ಮನವತಾವಾದಿ, ಅಪ್ರತಿಮ ದೇಶ ಭಕ್ತ , ಛಲಗಾರ ಮತ್ತು ಸಾಮಾಜಿಕ ಹಾಗೂ ಧೀಮಂತ ರಾಜಕರಣಿ ಯನ್ನು ನಾವು ಕಾಣಲು ಸಾಧ್ಯವೇ ಇಲ್ಲ. ಇಂತಹ ಮಹಾನ್ಮಾ ನಾಯಕ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅಲ್ಜೈಮರ್ ಕಾಯಿಲೆಯಿಂದ ಬಳಲುತ್ತಿದ್ದು ಇದ್ದೂ ಇಲ್ಲಂದಂಥ ಸ್ಥಿತಿಯಲ್ಲಿದ್ದಾರೆ. ಹೋರಾಟಗಾರ, ಕಾರ್ಮಿಕ ಮುಖಂಡ, ಪ್ರಖರ ಸಮಾಜವಾದಿ, ಅತ್ಯುತ್ತಮ ವಾಗ್ಮಿ ಹೀಗೆ ಏನೆಲ್ಲ ವಿಶೇಷಣಗಳನ್ನು ನೀಡಿದರೂ ಜಾರ್ಜ್‌ಗೆ ಅನ್ವರ್ಥಕವಾಗುತ್ತವೆ. ಎಲ್ಲದಕ್ಕೂ ಹೆಚ್ಚಾಗಿ ತಾವು ನಂಬಿದ ಸಿದ್ಧಾಂತವನ್ನು ತ್ಯಜಿಸದೇ ಅವರು ರಾಜಕೀಯ ಜೀವನದಲ್ಲಿ ಏರಬೇಕಾದ ಎಲ್ಲ ಮಜಲುಗಳನ್ನು ಏರಿದರು. ಹಾಗಂತ, ಸುಮ್ಮನೆ ಸಿಕ್ಕ ಅಥವಾ ಪಡೆದ ಅಧಿಕಾರದಲ್ಲಿ ವಿಜೃಂಭಿಸಿ ಇಳಿಯಲಿಲ್ಲ. ತಾವು ಏರಿದ ಪ್ರತಿ ಹುದ್ದೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದು ಅವರ ಹೆಗ್ಗಳಿಕೆ.ಹೀಗೆ ಜಾರ್ಜ್ ಫರ್ನಾಂಡೀಸ್ ಫುಟ್ ಪಾತಿನಿಂದ ಹಲವಾರು ಮಂತ್ರಿಸ್ಥಾನದ ವರೆಗೆ ಮೇಲೇರಿದರೂ ಸರ್ವೇ ಸಾಧಾರಣನಂತೆ ಬದುಕಿ, ಅಸಾಧಾರಣ ಧೈರ್ಯಶಾಲಿಯಾಗಿ ಸಾಹಸಮಯ ಬದುಕನ್ನು ನಡೆಸಿದವರು. ಪ್ರಸಿದ್ಧ ಕಾರ್ಮಿಕ ಹೋರಾಟಗಾರ, ಮಾನವ ಹಕ್ಕುಗಳ ಹೋರಾಟಗಾರ, ಪತ್ರಕರ್ತ, ಸಮಾಜವಾದಿ, ರಾಜಕಾರಣಿ, ಕ್ರಿಯಾಶೀಲ ವ್ಯಕ್ತಿ ಜಾರ್ಜ್ ಫರ್ನಾಂಡೀಸ್ ಜೂನ್ ೩, ೧೯೩೦ರ ವರ್ಷದಲ್ಲಿ ಮಂಗಳೂರಿನಲ್ಲಿ ಜನಿಸಿದರ...