ಜಾರ್ಜ್ ಫರ್ನಾಂಡೀಸ್ ನಂತಹ ಮನವತಾವಾದಿ, ಅಪ್ರತಿಮ ದೇಶ ಭಕ್ತ , ಛಲಗಾರ ಮತ್ತು ಸಾಮಾಜಿಕ ಹಾಗೂ ಧೀಮಂತ ರಾಜಕರಣಿ ಯನ್ನು ನಾವು ಕಾಣಲು ಸಾಧ್ಯವೇ ಇಲ್ಲ. ಇಂತಹ ಮಹಾನ್ಮಾ ನಾಯಕ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅಲ್ಜೈಮರ್ ಕಾಯಿಲೆಯಿಂದ ಬಳಲುತ್ತಿದ್ದು
ಇದ್ದೂ ಇಲ್ಲಂದಂಥ ಸ್ಥಿತಿಯಲ್ಲಿದ್ದಾರೆ. ಹೋರಾಟಗಾರ, ಕಾರ್ಮಿಕ ಮುಖಂಡ, ಪ್ರಖರ ಸಮಾಜವಾದಿ, ಅತ್ಯುತ್ತಮ ವಾಗ್ಮಿ ಹೀಗೆ ಏನೆಲ್ಲ ವಿಶೇಷಣಗಳನ್ನು ನೀಡಿದರೂ ಜಾರ್ಜ್‌ಗೆ ಅನ್ವರ್ಥಕವಾಗುತ್ತವೆ. ಎಲ್ಲದಕ್ಕೂ ಹೆಚ್ಚಾಗಿ ತಾವು ನಂಬಿದ ಸಿದ್ಧಾಂತವನ್ನು ತ್ಯಜಿಸದೇ ಅವರು ರಾಜಕೀಯ ಜೀವನದಲ್ಲಿ ಏರಬೇಕಾದ ಎಲ್ಲ ಮಜಲುಗಳನ್ನು ಏರಿದರು. ಹಾಗಂತ, ಸುಮ್ಮನೆ ಸಿಕ್ಕ ಅಥವಾ ಪಡೆದ ಅಧಿಕಾರದಲ್ಲಿ ವಿಜೃಂಭಿಸಿ ಇಳಿಯಲಿಲ್ಲ. ತಾವು ಏರಿದ ಪ್ರತಿ ಹುದ್ದೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದು ಅವರ ಹೆಗ್ಗಳಿಕೆ.ಹೀಗೆ ಜಾರ್ಜ್ ಫರ್ನಾಂಡೀಸ್ ಫುಟ್ ಪಾತಿನಿಂದ ಹಲವಾರು ಮಂತ್ರಿಸ್ಥಾನದ ವರೆಗೆ ಮೇಲೇರಿದರೂ ಸರ್ವೇ ಸಾಧಾರಣನಂತೆ ಬದುಕಿ, ಅಸಾಧಾರಣ ಧೈರ್ಯಶಾಲಿಯಾಗಿ ಸಾಹಸಮಯ ಬದುಕನ್ನು ನಡೆಸಿದವರು.
ಪ್ರಸಿದ್ಧ ಕಾರ್ಮಿಕ ಹೋರಾಟಗಾರ, ಮಾನವ ಹಕ್ಕುಗಳ ಹೋರಾಟಗಾರ, ಪತ್ರಕರ್ತ, ಸಮಾಜವಾದಿ, ರಾಜಕಾರಣಿ, ಕ್ರಿಯಾಶೀಲ ವ್ಯಕ್ತಿ ಜಾರ್ಜ್ ಫರ್ನಾಂಡೀಸ್ ಜೂನ್ ೩, ೧೯೩೦ರ ವರ್ಷದಲ್ಲಿ ಮಂಗಳೂರಿನಲ್ಲಿ ಜನಿಸಿದರು. 1930 ಜೂನ್ 3 ರಂದು ಮಂಗಳೂರಿನ ಕ್ಯಾಥೋಲಿಕ್ ಕುಟುಂಬದ ಜೊಸೇಫ್ ಫರ್ನಾಂಡಿಸ್ ಮತ್ತು ಅಲಿಸ್ ಮಾರ್ಥಾ ಫರ್ನಾಂಡಿಸ್ ಅವರ 6 ಮಕ್ಕಳಲ್ಲಿ ಜಾರ್ಜ್ ಹಿರಿಯರು. ಈ ಸಂಪ್ರದಾಯಸ್ಥ ಕುಟುಂಬ ಜಾರ್ಜ್ ಅವರನ್ನು ಎಸ್ ಎಸ್ ಎಲ್ ಸಿ ಓದಿದ ನಂತರ ಪಾದ್ರಿ ತರಬೇತಿಗಾಗಿ ಬೆಂಗಳೂರಿಗೆ ಕಳುಹಿಸಿತು.ಅಲ್ಲಿ ಆಚಾರಕ್ಕೂ ವಿಚಾರಕ್ಕೂ ಇದ್ದ ವೆತ್ಯಯದಿಂದ ಜಿಗುಪ್ಸೆಕೊಂಡು ಹೊರಬಂದರು. ಜಾರ್ಜ್ ಒಳಗೆ ಒಬ್ಬ ಹೋರಾಟಗಾರ ಜಾಗೃತಗೊಂಡಿದ್ದು ಇದೇ ಅವಧಿಯಲ್ಲಿ. ಪಾದ್ರಿ ತರಬೇತಿಯನ್ನು ಬಿಟ್ಟು ಮುಂಬೈಗೆ ತೆರಳಿದರು. ಆಗ ಅವರಿಗೆ ಕೇವಲ 19 ವರ್ಷ!. ಮಹಾ ನಗರಿ ಮುಂಬೈಯಲ್ಲೂ ಅವರಿಗೆ ಪರಿಚಯದವರಿರಲಿಲ್ಲ. ಎಷ್ಟೋ ಸಾರಿ ಅವರು ಸಮುದ್ರ ತೀರ ಮತ್ತು ರಸ್ತೆಗಳ ಬದಿಯ ಫುಟ್ ಪಾತ್ ಗಳಲ್ಲೇ ಮಲಗಿ ರಾತ್ರಿ ಕಳೆದದ್ದೂ ಇದೆ. ನಂತರದ ದಿನಗಳಲ್ಲಿ ಸ್ಥಳೀಯ ಪತ್ರಿಕೆಯೊಂದರಲ್ಲಿ ಫ್ರೂಫ್ ರೀಡರ್ ಕೆಲಸ ಸಿಗುವವರೆಗೂ ಕೈಗೆ ಸಿಕ್ಕ ಕೆಲಸಗಳನ್ನು ಮಾಡಿದರು.
ಈ ಹಂತದಲ್ಲಿ ಪ್ಲಾಸಿಡ್ ಡಿ’ಮೆಲ್ಲೋ, ರಾಮ್ ಮನೋಹರ್ ಲೋಹಿಯಾ ಅವರ ಸಹಚರ್ಯೆಗೆ ಬಂದ ಜಾರ್ಜ್ ಫರ್ನಾಂಡೀಸ್, ಅವರುಗಳ ಕಾರ್ಯದಿಂದ ಪ್ರೇರಿತರಾಗಿ ಹೋಟೆಲ್ ಕಾರ್ಮಿಕರು ಮತ್ತು ಸಣ್ಣ ಸಣ್ಣ ಉದ್ಯಮಗಳಲ್ಲಿ ಕೂಲಿ ಮಾಡುತ್ತಿದ್ದ ಶೋಷಿತ ಕಾರ್ಮಿಕರ ಸಂಘಟನೆಗಾಗಿ ಕೆಲಸ ಮಾಡತೊಡಗಿದರು. ಹೀಗೆ ಐವತ್ತು ಅರವತ್ತರ ದಶಕದಲ್ಲಿ ಅವರು ಮುಂಬಯಿನ ಪ್ರಭಾವಿ ಕಾರ್ಮಿಕ ನಾಯಕರಾಗಿದ್ದರು. ೧೯೬೧ರಿಂದ ೧೯೬೮ರ ಅವಧಿಯಲ್ಲಿ ಮುಂಬಯಿ ಮುನಿಸಿಪಲ್ ಕಾರ್ಪೋರೇಷನ್ನಿನ ಸದಸ್ಯರಾಗಿ ಜನಪ್ರಿಯ ಸೇವೆ ಸಲ್ಲಿಸಿದರು. ೧೯೬೭ರಲ್ಲಿ ಸಂಯುಕ್ತ ಸೋಷಿಯಲಿಸ್ಟ್ ಪಕ್ಷದಿಂದ ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಪರ್ಧಿಸಿ ಸದಾಶಿವ ಕಣೋಜಿ ಪಾಟಿಲ್ ಅಂತಹ ಜನಪ್ರಿಯ ಕಾಂಗ್ರೆಸ್ ನಾಯಕರನ್ನು ಭಾರೀ ಅಂತರದಿಂದ ಸೋಲಿಸಿದರು. ಕಾರ್ಮಿಕ ಚಳವಳಿಯಲ್ಲಿ ಜಾರ್ಜ್ ಅಗ್ರಗಣ್ಯ ನಾಯಕರಾಗಿ ರೂಪುಗೊಂಡರು. ಇದೇ ಅವರನ್ನು 1961ರ ಬಾಂಬೆ ಮುನ್ಸಿಪಲ್ ಕಾರ್ಪೊರೇಷನ್‌ಗೆ ಆಯ್ಕೆಯಾಗುವಂತೆ ಮಾಡಿತು. 6 ವರ್ಷದ ಬಳಿಕ ದಕ್ಷಿಣ ಬಾಂಬೆ ಕ್ಷೇತ್ರದಿಂದ ಚುನಾವಣಾ ಸ್ಪರ್ಧೆಗಿಳಿದರು. ಅವರ ಎದುರಾಳಿಯಾಗಿದ್ದವರು ಕಾಂಗ್ರೆಸ್‌ನ ಅಂದಿನ ಜನಪ್ರಿಯ ನಾಯಕ ಎಸ್.ಕೆ. ಪಾಟೀಲ್. ಸಾಧಾರಣ ಮನುಷ್ಯ ಜಾರ್ಜ್ ಅವರನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೆ, ಫಲಿತಾಂಶ ಪ್ರಕಟವಾದಾಗ ಮಾತ್ರ ಪಾಟೀಲ್ ಅವರನ್ನು ಜಾರ್ಜ್ ಪರಾಭವಗೊಳಿಸಿದ್ದರು. ಆಗಲೇ ಇವರಿಗೆ '"George, The Giant Killer'ಎಂಬ ನಿಕ್‌ನೇಮ್ ಅಂಟಿಕೊಂಡದ್ದು.!
ಹೀಗೆ ಜಾರ್ಜ್ ರಾಜಕೀಯ ಉನ್ನತಿ ಸಾಧಿಸುತ್ತ ಸಾಗಿದರು. 1974ರ ಹೊತ್ತಿಗೆ ಜಾರ್ಜ್ ಮನೆ ಮಾತಾದರು. ಕ್ರಮೇಣವಾಗಿ ಮುಂಬಯಿನಲ್ಲಿನ ಕಾರ್ಮಿಕ ಸಂಘಟನೆಗಳಲ್ಲಿ ಜಾರ್ಜ್ ಫರ್ನಾಂಡೀಸ್ ಅವರ ಪ್ರಭಾವ ಕಡಿಮೆಯಾಗತೊಡಗಿದರೂ ಅವರು ರೈಲ್ವೇ ಫೆಡರೆಶನ್ನಿನ ಅಧ್ಯಕ್ಷರಾಗಿ ಭಾರತಾದ್ಯಂತ ರೈಲ್ವೇ ಚಳುವಳಿಯನ್ನು ಸಂಘಟಿಸಿದರು. ಈ ಚಳುವಳಿಯಿಂದ ಇಡೀ ಭಾರತವೇ ಸ್ಥಬ್ಧವೆನಿಸಿತ್ತು. ಈ ಅವಧಿಯಲ್ಲಿ ಅವರು ರೇಲ್ವೆ ಕಾರ್ಮಿಕರ ಮುಷ್ಕರಕ್ಕೆ ಕರೆ ಕೊಟ್ಟಿದ್ದರು. ಆಗ ಅಕ್ಷರಶಃ ದೇಶ 'ಸ್ಥಗಿತ'ವಾಗಿತ್ತು. ಈ ಮುಷ್ಕರಕ್ಕೆ ಉದ್ಯಮ ವಲಯದ ಎಲ್ಲ ವಿಭಾಗಗಳಿಂದಲೂ ಅಪಾರ ಬೆಂಬಲ ದೊರೆಕಿತ್ತು. ಮೂರು ವಾರಗಳ ಈ ಭಯಂಕರ ಮುಷ್ಕರ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರಲ್ಲಿ ಅಭದ್ರತೆ ಹುಟ್ಟಿಸಿತು. ಇದೇ ಹಂತದಲ್ಲಿ ಜಯಪ್ರಕಾಶ್ ನಾರಾಯಣ್ ನೇತೃತ್ವದ Movement for changeಚಳವಳಿಯಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದರು. ಇದೆಲ್ಲದರ ಫಲವಾಗಿ ಅಂತಿಮವಾಗಿ ಇಂದಿರಾ 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿಬಿಟ್ಟರು. ಪ್ರತಿಪಕ್ಷ ನಾಯಕರನ್ನೆಲ್ಲ ಬಂಧಿಸಿ ಸೆರೆಮನೆಗೆ ಅಟ್ಟಲಾಯಿತು.ಇಂದಿರಾಗಾಂಧಿ ಅವರ ಸರ್ವಾಧಿಕಾರತ್ವದ ವಿರುದ್ಧ ಭೂಗತರಾಗಿ ಬಂಡೆದ್ದವರು ಜಾರ್ಜ್ ಫರ್ನಾಂಡೀಸ್. ಅವರನ್ನು ಇಂದಿರಾಗಾಂಧಿ ಸರ್ಕಾರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಂಧಿಸಲು ವಾರಂಟ್ ಹೊರಡಿಸಿದಾಗ ತಪ್ಪಿಸಿಕೊಂಡು ಭೂಗತ ಚಟುವಟಿಕೆಗಳಿಗೆ ಮೊದಲು ಮಾಡಿದರು. ಜಾರ್ಜ್ ಕೈಗೆ ಸಿಗದಿದ್ದಾಗ ಪೋಲೀಸರು ಅವರ ಸಹೋದರ ಲಾರೆನ್ಸ್ ಫರ್ನಾಂಡೀಸ್ ಅವರನ್ನು ಬಂಧಿಸಿ ಚಿತ್ರಹಿಂಸೆಗೆ ಒಳಪಡಿಸಿದರು. ಅವರೊಡನೆ ಸಂಪರ್ಕ ಹೊಂದಿದ್ದರೆಂಬ ಕಾರಣದಿಂದ 'ಸಂಸ್ಕಾರ' ಚಿತ್ರದ ಖ್ಯಾತಿಯ ಸ್ನೇಹಲತಾರೆಡ್ಡಿ ಅವರಿಗೆ ಅನಾರೋಗ್ಯವಿದ್ಧಾಗಿಯೂ ಬಂಧಿಸಿ ತೊಂದರೆಗೊಳಪಡಿಸಿದರು.
ಇತ್ತ ಜಾರ್ಜ್ ಫರ್ನಾಂಡೀಸ್ ಕೆಲವೊಂದು ಸರ್ಕಾರಿ ಶೌಚಾಲಯಗಳಲ್ಲಿ ಮತ್ತು ಇಂದಿರಾ ಗಾಂಧಿಯವರು ಭಾಷಣ ಮಾಡುತ್ತಿದ್ದ ಸ್ಥಳಗಳ ಸುತ್ತಮುತ್ತ ಸಾವು ನೋವುಗಳು ಸಂಭವಿಸದ ರೀತಿಯಲ್ಲಿ ಡೈನಮೈಟ್ ಸಿಡಿಸಿ ಗಾಬರಿ ಹುಟ್ಟಿಸುವುದರ ಮೂಲಕ ಇಂದಿರಾಗಾಂಧಿ ಅವರ ತುರ್ತುಪರಿಸ್ಥಿತಿಯನ್ನು ವಿರೋಧಿಸುವ ಯೋಜನೆಗಳನ್ನು ನೇಯ್ದಿದ್ದರು. ಇಂದಿರಾ ಗಾಂಧಿ ಭಾಷಣ ಮಾಡಬೇಕಿದ್ದ ವಾರಣಾಸಿಯಲ್ಲಿ ವೇದಿಕೆಯನ್ನು ಕಾರ್ಯಕ್ರಮಕ್ಕೆ ನಾಲ್ಕು ಗಂಟೆಗಳ ಮುಂಚೆ ಸ್ಫೋಟಿಸುವ ಪ್ರಯತ್ನಗಳು ನಡೆದವು. ಇದು ಬರೋಡ ಡೈನಮೈಟ್ ಪ್ರಕರಣ ಎಂದು ಪ್ರಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಸೆರೆಸಿಕ್ಕ ಜಾರ್ಜ್ ಫರ್ನಾಂಡಿಸ್ ಅವರನ್ನು ಇಂದಿರಾಗಾಂಧಿ ಸರ್ಕಾರ ಖೈದಿಯಾಗಿ ಜೈಲಿನಲ್ಲಿರಿಸಿತು. ಆಗ ಜಾರ್ಜ್ ಮತ್ತು ಅವರ ಜತೆಗಿದ್ದವರು ಭೂಗತರಾದರು. ಬರೋಡಾದಿಂದ ಡೈನಮೈಟ್ ತಂದು ಕಚೇರಿಗಳನ್ನು ಸ್ಫೋಟಿಸುವ ಯೋಜನೆ ಹಾಕಿಕೊಂಡರು. ಆದರೆ, ಕೋಲ್ಕತಾ(ಅಂದಿನ ಕಲ್ಕತ್ತಾ)ದಲ್ಲಿ ಬಂಧನಕ್ಕೊಳಗಾದರು. ಸರ್ಕಾರಿ ಕಚೇರಿಗಳನ್ನು ಸ್ಫೋಟಿಸಲು ಡೈನಮೈಟ್ ಕದ್ದ ಆರೋಪವನ್ನು ಜಾರ್ಜ್ ಮೇಲೆ ಹೊರಿಸಿ ಬಂಧಿಸಲಾಯಿತು. ಇದೇ ಮುಂದೆ 'ಬರೋಡಾ ಡೈನಮೈಟ್' ಪ್ರಕರಣ ಎಂದು ಪ್ರಸಿದ್ಧಿಯಾಯಿತು. ಯಾವುದೇ ಚಾರ್ಜ್‌ಷೀಟ್ ಇಲ್ಲದೆಯೇ ಅವರನ್ನು 9 ತಿಂಗಳು ತಿಹಾರ್ ಜೈಲಿನಲ್ಲಿಡಲಾಯಿತು. ಅಲ್ಲಿಂದಲೇ ಅವರು ಬಿಹಾರದ ಮುಜಾಫರ್‌ನಗರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದರು. ಅವರ ಜನಪ್ರಿಯತೆ ಎಷ್ಟಿತ್ತೆಂದರೆ 3 ಲಕ್ಷ ಮತಗಳ ಅಂತರದಿಂದ ಗೆಲವು ಸಾಧಿಸಿದ್ದರು. ಇಷ್ಟಕ್ಕೆಲ್ಲ ಕಾರಣ ಜಾರ್ಜ್ ಅವರನ್ನು ಬಂಧಿಸಿದ ಕ್ಷಣದಲ್ಲಿ ಅವರ ಕೋಳ ತೊಟ್ಟು ಕೈ ಮೇಲೆತ್ತಿದ್ದ ಫೋಟೋ!
ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸೋತು ಸುಣ್ಣವಾದರೆ, ಮೊರಾರ್ಜಿ ದೇಸಾಯಿ ನೇತೃತ್ವದ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂತು. ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಿದ ನಾಯಕರೆಲ್ಲರನ್ನೂ ಬಿಡುಗಡೆ ಮಾಡಲಾಯಿತು. ಜಾರ್ಜ್ ಅವರು ಈ ಸರ್ಕಾರದಲ್ಲಿ ಕೈಗಾರಿಕೆ ಸಚಿವರಾದರು. ಜಾರ್ಜ್ ಎಷ್ಟು ಖಡಕ್ ಆಗಿದ್ದರೆಂದರೆ ಬಂಡವಾಳ ಹೂಡಿಕೆ ನಿಯಮಗಳನ್ನು ಉಲ್ಲಂಘಿಸಿದ್ದ ಅಮೆರಿಕದ ಐಬಿಎಂ ಮತ್ತು ಕೊಕಾಕೋಲಾ ಕಂಪನಿಗಳ ವಿರುದ್ಧ ಕ್ರಮಕ್ಕೆ ಮುಂದಾದರು. ಅವೆರಡೂ ಕಂಪನಿಗಳು ಭಾರತವನ್ನು ಬಿಟ್ಟು ಹೊರಡಬೇಕಾಯಿತು. ಮುಂದೆ ವಿ.ಪಿ.ಸಿಂಗ್ ನೇತೃತ್ವದ ಸರ್ಕಾರದಲ್ಲಿ ರೇಲ್ವೆ ಸಚಿವರಾಗಿ ಕೊಂಕಣ ರೇಲ್ವೆ ಯೋಜನೆಯನ್ನು ಅನುಷ್ಠಾನಗೊಳಿಸಿದರು. ಇಂದು ಮುಂಬೈಗೆ ಅತೀ ಕಡಿಮೆ ಅವಧಿ ಮತ್ತು ಕಡಿಮೇ ದರದಲ್ಲಿ ರೈಲು ಪ್ರಯಾಣ ಮಾಡುತ್ತೇವೆ ಆದರೆ ಅದಕ್ಕೆ ಮೂಲ ಕಾರಣ ಕರ್ತರು ಇದೇ ಜಾರ್ಜ್ ಫೆರ್ನಾಂಡಿಸ್ ! ಅಷ್ಟೊತ್ತಿಗೆ ಒಂದಾಗಿದ್ದ ಕಾಂಗ್ರೆಸ್ಸೇತರ ನಾಯಕರೆಲ್ಲ ಒಡೆದು ಚಿಲ್ಲಾಪಿಲ್ಲಿಯಾದರು. ಜನತಾ ದಳದ ಹಿರಿಯ ಸದಸ್ಯರಾಗಿದ್ದ ಅವರು ಮುಂದೆ ಸಮತಾ ಪಕ್ಷ ಸ್ಥಾಪಿಸಿದರು. ಮಂಗಳೂರಿನ ಬಿಜೈ ನ್ಯೂ ರೋಡ್ ನಲ್ಲಿ ಅವರ ಕಚೇರಿ ಇದ್ದು, ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಭೇಟಿ ನೀಡದೇ ಹೋದದ್ದ ಬಹಳ ಅಪರೂಪ. ರಾಜಕೀಯ ಅನಿವಾರ್ಯತೆಯ ಪರಿಸ್ಥಿತಿಯಲ್ಲಿ ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಆಡ್ವಾಣಿ ಜತೆ ಕೈಜೋಡಿಸಬೇಕಾಯಿತು. ಅಷ್ಟೇ ಅಲ್ಲ, ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್(ಎನ್‌ಡಿಎ) ಸಂಚಾಲಕರೂ ಆದರು. 1998ರಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದಾಗ ಜಾರ್ಜ್ ಅವರು ದೇಶದ ರಕ್ಷಣಾ ಸಚಿವರಾದರು. ವಿಪರ್ಯಾಸವೆಂದರೆ ತಮ್ಮ ರಾಜಕೀಯ ಜೀವನದುದ್ದಕ್ಕೂ ಜಾರ್ಜ್ ಅಣ್ವಸ್ತ್ರ ವಿರೋಧಿಸುತ್ತಲೇ ಬಂದಿದ್ದರು. ಆದರೂ, ಅಂದಿನ ಪ್ರಧಾನಿ ವಾಜಪೇಯಿ ನೇತೃತ್ವದಲ್ಲಿ ಭಾರತ ಅಣ್ವಸ್ತ್ರ ಪರೀಕ್ಷೆ ಮಾಡಿತು. ಮುಂದೊಂದು ದಿನ ಅದನ್ನು ಅವರು ಸಮರ್ಥಿಸಿಕೊಂಡರು ಕೂಡಾ. ಆದರೆ, ರಕ್ಷಣಾ ಸಚಿವರಾಗಿದ್ದಾಗ ಬಾರಾಕ್ ಕ್ಷಿಪಣಿ ಮತ್ತು ತೆಹಲ್ಕಾ ಹಗರಣಗಳು ಅವರನ್ನು ಕಂಗೆಡಿಸಿದವು. ಮಂತ್ರಿ ಸ್ಥಾನವನ್ನೂ ಬಿಟ್ಟುಕೊಡಬೇಕಾಯಿತು. ಆದರೆ, ತನಿಖೆಯ ನಂತರ ಅವರು ಶುದ್ಧಹಸ್ತರು ಎಂದು ತೀರ್ಮಾನವಾದಾಗ ಮತ್ತೆ ವಾಜಪೇಯಿ ಕ್ಯಾಬಿನೇಟ್ ಸೇರಿ ರಕ್ಷಣಾ ಸಚಿವರಾದರು. ಆದರೆ, ಹಗರಣ ಬೇಟೆ ಅವರ ಬೆನ್ನು ಬಿಡಲಿಲ್ಲ. 'ಕಾಫಿನ್‌ಗೇಟ್'(ಶವಪೆಟ್ಟಿಗೆ) ಹಗರಣ ಅವರನ್ನು ಸುತ್ತಿಕೊಂಡಿತು. ಕಾರ್ಗಿಲ್ ಯುದ್ಧದ ವೇಳೆ ಸೇನೆ ಶವಪೆಟ್ಟಿಗೆಗಳನ್ನು ಖರೀದಿಸುವಾಗ ನಡೆಯಿತು ಎನ್ನಲಾದ ಹಗರಣವಿದು.
ಎಲ್ಲಕ್ಕಿಂತ ಹೆಚ್ಚಾಗಿ ಇಡೀ ಜಗತ್ತಿನ ಗಮನ ಸೆಳೆದಿದ್ದು ಜಾರ್ಜ್ ಅವರು, 'ಭಾರತದ ನಂಬರ್ 1 ವೈರಿ ಪಾಕಿಸ್ತಾನವಲ್ಲ, ಅದು ಚೀನಾ' ಎಂದಾಗ. 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಎನ್‌ಡಿಎ ಅಧಿಕಾರ ಕಳೆದುಕೊಳ್ಳಬೇಕಾಯಿತು. ಹಾಗೆಯೇ, ಜಾರ್ಜ್ ಕೂಡಾ ನೇಪಥ್ಯಕ್ಕೆ ಸರಿಯುವ ಕಾಲ ಶುರುವಾಯಿತು. ಸ್ವಲ್ಪ ದಿನದಲ್ಲಿ ಅವರಿಗೆ ಅಲ್ಜೈಮರ್ ಕಾಯಿಲೆ ಉಲ್ಬಣಗೊಂಡು ಅವರು ಸಾರ್ವಜನಿಕ ಜೀವನದಿಂದಲೇ ದೂರ ಸರಿಯಬೇಕಾಯಿತು.
ಜಾರ್ಜ್ ಫರ್ನಾಂಡೀಸ್ ತಮ್ಮ ಓದಿನ ದಿನಗಳಿಂದಲೇ ಬರವಣಿಗೆಗೆ ತೊಡಗಿದ್ದರು. ೧೯೪೯ರಲ್ಲಿ ಅವರು ‘ಕೊಂಕಣಿ ಯುವಕ್’ ಎಂಬ ಪತ್ರಿಕೆಯ ಸಂಪಾದಕರಾಗಿದ್ದರು. ಅದೇ ಸಮಯದಲ್ಲಿ ಕನ್ನಡದಲ್ಲಿ ‘ರೈತವಾಣಿ’ ಎಂಬ ಪತ್ರಿಕೆಯ ಸಂಪಾದಕರೂ ಆಗಿದ್ದರು. ೧೯೫೨-೫೩ರ ಅವಧಿಯಲ್ಲಿ ತನ್ನ ಕಾರ್ಯನಿಲ್ಲಿಸಿದ್ದ ‘Dockman’ ವಾರಪತ್ರಿಕೆಯನ್ನು ಪುನಃಚೇತನಗೊಳಿಸಿದರು. ಅವರು ರಚಿಸಿದ ವೈಚಾರಿಕ ಗ್ರಂಥಗಳೆಂದರೆ What Ails the Socialists (೧೯೭೨), The Kashmir Problem, Railway Strike of ೧೯೭೪, Dignity for All: Essays in Socialism and Democracy (೧೯೯೧), ಮತ್ತು ಅವರ ಆತ್ಮಚರಿತ್ರೆಯಾದ George Fernandes Speaks (೧೯೯೧). ಇದಲ್ಲದೆ ಅವರು ಇಂಗ್ಲಿಷ್ ಮಾಸಿಕವಾದ The Other Side ಪತ್ರಿಕೆಯ ಸಂಪಾದಕರೂ ಆಗಿದ್ದರು. ಹಿಂದಿಯಲ್ಲಿ ಮೂಡಿಬರುತ್ತಿದ್ದ ‘ಪ್ರತಿಪಕ್ಷ್’ ಪತ್ರಿಕೆಯ ಸಂಪಾದಕೀಯ ಮಂಡಲಿಯ ಅಧ್ಯಕ್ಷರಾಗಿದ್ದರು. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರಾಗಿದ್ದರು. ಮಾನವ ಹಕ್ಕುಗಳ ಹೋರಾಟಗಾರರಾಗಿ Amnesty International, People's Union for Civil Liberties ಸಂಸ್ಥೆಗಳ ಸದಸ್ಯರಾಗಿದ್ದರು.
ಕ್ರಮವಾಗಿ ಜಾರ್ಜ್ ಅವರು 4, 6, 7 9, 10, 11, 12, 13, 14ನೇ ಲೋಕಸಭೆಗೆ ಮತ್ತು 2009ರಲ್ಲಿ ರಾಜ್ಯಸಭೆ ಪ್ರವೇಶಿಸಿದ್ದರು. ಕೊಂಕಣಿ, ಇಂಗ್ಲಿಷ್, ಹಿಂದಿ, ಕನ್ನಡ, ಮರಾಠಿ, ತುಳು, ತಮಿಳು, ಉರ್ದು ಸೇರಿದಂತೆ 10 ಭಾಷೆಗಳಲ್ಲಿ ಜಾರ್ಜ್ ನಿರರ್ಗಳವಾಗಿ ಮಾತನಾಡುತ್ತಿದ್ದರು. ಸಂಸತ್‌ನಲ್ಲಿ ಅವರು ಮಾತನಾಡಲು ನಿಂತರೆ ಇಡೀ ಸಂಸತ್ತೇ ಕಿವಿಯಾಗುತ್ತಿತ್ತು. ಸಾರ್ವಜನಿಕ ಭಾಷಣಕ್ಕೆ ನಿಂತರೆ ಪ್ರಖರ ಸಮಾಜವಾದಿಯಾಗಿ ಬಿಡುತ್ತಿದ್ದರು. ಅಂಥ ವ್ಯಕ್ತಿತ್ವದ ಜಾರ್ಜ್ ಈಗ ನಿಸ್ತೇಜರಾಗಿದ್ದಾರೆ.

No comments:
Post a Comment