ಪ೦ಜೆ ಮ೦ಗೇಶರಾಯರು

ಪ೦ಜೆ ಮ೦ಗೇಶರಾಯರು 1874-1937 ಮಂಗೇಶರಾಯರು 1874 ಫೆಬ್ರುವರಿ 22 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ದಲ್ಲಿ ಜನಿಸಿದರು. ಇವರ ತಾಯಿ ಹೆಸರು ಶಾಂತಾದುರ್ಗಾ, ಅಪ್ಪ ರಾಮಪ್ಪಯ್ಯ. ಪ್ರಾಥಮಿಕ ವಿದ್ಯಾಭಾಸವ ಬಂಟ್ವಾಳಲ್ಲಿಯೇ ಮುಗುಸಿದರು. ಮುಂದೆ ಮಂಗಳೂರಿಗೆ ಆಗಮಿಸಿ ಸಣ್ಣಮಕ್ಕಳಿಗೆ ಪಾಠ ಹೇಳಿಕೊಟ್ಟುಗೊಂಡು ವಿದ್ಯಾಭ್ಯಾಸವ ಮುಂದುವರಿಸಿದರು. 1890 ರಲ್ಲಿ ಅವರ ಅಪ್ಪ ತೀರಿಹೋಪ ಸಮಯಲ್ಲಿ ಮಂಗೇಶರಾಯರಿಂಗೆ ಹದಿನಾರು ವರ್ಷದ ಪ್ರಾಯ.ಸಂಸಾರದ ಜೆವಾಬ್ದಾರಿ ಇವರ ಹೆಗಲಿಗೆ ಬಂತು. ತಾನು ಕಲಿತು ತಮ್ಮಂದಿರಿಗೂ ವಿದ್ಯಾರ್ಜನೆ ಮಾಡಿದರು. 1894 ರಲ್ಲಿ ಬೆನಗಲ್ ರಾಮರಾಯರ ಸಹೋದರಿ ಭವಾನಿಬಾಯಿಯೊಂದಿಗೆ ಇವರ ವಿವಾಹ ಆಯಿತು.ಕಾಲೇಜಿನ ಪ್ರಥಮ ವರ್ಷದ ಎಫ್.ಏ.(ಆರ್ಟ್ಸ್)ಪಾಸು ಮಾಡಿ, ಕನ್ನಡ ವಿಶಿಷ್ಟ ಪರೀಕ್ಷೆಯನ್ನೂ ಪಾಸು ಮಾಡಿದರು.1896 ರಲ್ಲಿ ಮಂಗಳೂರಿನ ಸರಕಾರಿ ಕಾಲೇಜಿಲಿ ಜೂನಿಯರ್ ಕನ್ನಡ ಪಂಡಿತ ಹುದ್ದೆ ಪಡೆದರು. ವಿಶೇಷ ಎಂದರೆ ಇದೇ ಹುದ್ದೆಗೆ ‘ಕವಿ ಮುದ್ದಣ’ನೂ ಅರ್ಜಿ ಹಾಕಿದ್ದರು. ಆದರೆ ರಾಯರಿಗೆ ಇಂಗ್ಳೀಷಿನ ಜ್ಞಾನ ಇದ್ದ ಕಾರಣ ಈ ಹುದ್ದೆ ಇವರಿಗೆ ಸಿಕ್ಕಿತ್ತು. ಮುದ್ದಣ ಮುಂದೆ ಉಡುಪಿಯ ಸರಕಾರಿ ಕಾಲೇಜು ಸೇರಿದರು ಮುಂದೆ ಬಿ.ಎ. ಪರೀಕ್ಷೆ ಪಾಸು ಮಾಡಿ, ಮದ್ರಾಸಿಗೆ ಹೋಗಿ ಅಲ್ಲಿ ಎಲ್.ಟಿ.ಪದವಿಯ ಪಡದು ವಾಪಾಸು ಮಂಗ್ಳೂರಿಗೆ ಬಂದು ಉಪಾಧ್ಯಾಯರಾಗಿ ಮುಂದುವರಿದರುಮುಂದೆ ಮಂಗ...