Monday, January 15, 2018

ಪ೦ಜೆ ಮ೦ಗೇಶರಾಯರು

ಪ೦ಜೆ ಮ೦ಗೇಶರಾಯರು 1874-1937 


ಮಂಗೇಶರಾಯರು   1874 ಫೆಬ್ರುವರಿ 22 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ದಲ್ಲಿ  ಜನಿಸಿದರು.
ಇವರ ತಾಯಿ ಹೆಸರು ಶಾಂತಾದುರ್ಗಾ, ಅಪ್ಪ ರಾಮಪ್ಪಯ್ಯ.
ಪ್ರಾಥಮಿಕ ವಿದ್ಯಾಭಾಸವ ಬಂಟ್ವಾಳಲ್ಲಿಯೇ ಮುಗುಸಿದರು. ಮುಂದೆ ಮಂಗಳೂರಿಗೆ ಆಗಮಿಸಿ ಸಣ್ಣಮಕ್ಕಳಿಗೆ  ಪಾಠ ಹೇಳಿಕೊಟ್ಟುಗೊಂಡು ವಿದ್ಯಾಭ್ಯಾಸವ ಮುಂದುವರಿಸಿದರು.
1890 ರಲ್ಲಿ ಅವರ ಅಪ್ಪ ತೀರಿಹೋಪ ಸಮಯಲ್ಲಿ ಮಂಗೇಶರಾಯರಿಂಗೆ ಹದಿನಾರು ವರ್ಷದ ಪ್ರಾಯ.ಸಂಸಾರದ ಜೆವಾಬ್ದಾರಿ ಇವರ ಹೆಗಲಿಗೆ ಬಂತು. ತಾನು ಕಲಿತು ತಮ್ಮಂದಿರಿಗೂ ವಿದ್ಯಾರ್ಜನೆ ಮಾಡಿದರು. 1894 ರಲ್ಲಿ ಬೆನಗಲ್ ರಾಮರಾಯರ  ಸಹೋದರಿ ಭವಾನಿಬಾಯಿಯೊಂದಿಗೆ ಇವರ ವಿವಾಹ ಆಯಿತು.ಕಾಲೇಜಿನ ಪ್ರಥಮ ವರ್ಷದ ಎಫ್.ಏ.(ಆರ್ಟ್ಸ್)ಪಾಸು ಮಾಡಿ, ಕನ್ನಡ ವಿಶಿಷ್ಟ ಪರೀಕ್ಷೆಯನ್ನೂ ಪಾಸು ಮಾಡಿದರು.1896 ರಲ್ಲಿ ಮಂಗಳೂರಿನ ಸರಕಾರಿ ಕಾಲೇಜಿಲಿ ಜೂನಿಯರ್ ಕನ್ನಡ ಪಂಡಿತ ಹುದ್ದೆ ಪಡೆದರು. ವಿಶೇಷ ಎಂದರೆ ಇದೇ ಹುದ್ದೆಗೆ ‘ಕವಿ ಮುದ್ದಣ’ನೂ ಅರ್ಜಿ ಹಾಕಿದ್ದರು. ಆದರೆ ರಾಯರಿಗೆ ಇಂಗ್ಳೀಷಿನ ಜ್ಞಾನ ಇದ್ದ ಕಾರಣ ಈ ಹುದ್ದೆ ಇವರಿಗೆ ಸಿಕ್ಕಿತ್ತು. ಮುದ್ದಣ ಮುಂದೆ ಉಡುಪಿಯ ಸರಕಾರಿ ಕಾಲೇಜು  ಸೇರಿದರು ಮುಂದೆ ಬಿ.ಎ. ಪರೀಕ್ಷೆ ಪಾಸು ಮಾಡಿ, ಮದ್ರಾಸಿಗೆ ಹೋಗಿ ಅಲ್ಲಿ ಎಲ್.ಟಿ.ಪದವಿಯ ಪಡದು ವಾಪಾಸು ಮಂಗ್ಳೂರಿಗೆ ಬಂದು ಉಪಾಧ್ಯಾಯರಾಗಿ ಮುಂದುವರಿದರುಮುಂದೆ ಮಂಗಳೂರಿನ ವಿದ್ಯಾ ಇಲಾಖೆಯಲ್ಲಿ ಸಬ್ ಅಸಿಸ್ಟಂಟ್ ಶಾಲಾ ಇನ್ಸ್ಪೆಕ್ಟರ್ ಹುದ್ದೆಗೆ ನೇಮಕಗೊಂಡರು. ಮುಂದೆ ಅವರು ಉಪಾದ್ಯಾಯರ ತರಬೇತಿ ಶಾಲೆ ಪ್ರಾಂಶುಪಾಲರಾದರು. ಹಲವು ವರ್ಷ ದಕ್ಷಿಣ ಕನ್ನಡದ ಸಂಪರ್ಕಲ್ಲಿದ್ದ ಪಂಜೆ , 1921 ರಲ್ಲಿ ಕೊಡಗಿನ ಶಾಲಾ ಇನ್ಸ್ ಪೆಕ್ಟರಾಗಿ ಮಡಿಕೇರಿಗೆ ಬಂದರು. ಎರಡು ವರ್ಷದ ನಂತರ ಮಡಿಕೇರಿಯ ಸೆಂಟ್ರಲ್ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿ ಮುಂದುವರಿದರು. ಬ್ರೀಟಿಷರನ್ನು ಗೌರವಿಸಿಗೊಂಡಿದ್ದ ಕೊಡಗಿನ ಜನ, ಸ್ಥಳೀಯ ಒಬ್ಬ ಉನ್ನತ ಹುದ್ದೆಲಿ ಇಪ್ಪದರ ಇಷ್ಟ ಪಡದ ಕಾರಣ ಆ ಗೌರವ ಭಾವನೆ ಪಂಜೆಯವರ ಕಂಡಿರಲಿಲ್ಲ. ಕೊಡಗಿನ ಜನ ರಾಯರ ಔದಾರ್ಯಲ್ಲಿ ಕಾಣದ್ದರೂ,ಕೊಡಗಿನ ಪರಿಸರ,ಪ್ರಕೃತಿಯ ಸೊಬಗು, ಜೆನರ ಸಾಹಸವ ಮನಗಂಡು, ಹೃದಯ ಬಿಚ್ಚಿ ಹಾಡಿ ಹೊಗಳಿದವು. “ಹುತ್ತರಿ ಹಾಡು” ಹೆಸರಿನ ಈ ಪದ್ಯ ಮುಂದೆ ಕೊಡಗಿನ ‘ನಾಡಗೀತೆ‘ ಯಾಗಿ ಪ್ರಸಿದ್ದಿ ಆತು.ಕೊಡಗಿನ, ಕೊಡವರ ಸೌಂದರ್ಯ- ಸಾಹಸವ ವರ್ಣಿಸುವ ಈ ಗೀತೆ ಒಂದು ಶ್ರೇಷ್ಟ ಗೀತೆಯಾಗಿ, ಒಂದು ಉತ್ಸವ ಗೀತೆಯ ಹಾಂಗೆ, ಗಮಕಕ್ಕೆ, ವಾಚನಕ್ಕೆ ಹೇಳಿ ಮಾಡಿಸಿದ ಹಾಂಗಿದ್ದು..
1934 ರಲ್ಲಿ ರಾಯಚೂರಿಲಿ ನಡದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ  ಅಧ್ಯಕ್ಷ ಪದವಿ ಪಂಜೆ ಮಂಗೇಶ ರಾಯರಿಗೆ ಒಲಿದು ಬಂತು. ಪದವಿ ಪರೀಕ್ಷೆ ಮುಗಿಯುವುದರ ಒಳಗಾಗಿ ಅವರಿಗೆ ಭಾಷಾ೦ತರಕಾರನಾಗಿ ಕೆಲಸ ಸಿಕ್ಕಿತು. ತಿ೦ಗಳಿಗೆ  ಇಪ್ಪತ್ತು ರೂಪಾಯಿ ಪಗಾರ.  ನ೦ತರ ಅವರು ಶಾಲಾ ಇನ್ಸಪೆಕ್ತರರಾಗಿ ನೇಮಕಗೊ೦ಡಾಗ ಊರೂರು ಅಲೆದಾಡಬೇಕಾಯ್ತು  . ಒ೦ದು ಎತ್ತಿನ ಗಾಡಿಯಲ್ಲಿ ಅಡುಗೆ ಸಾಮಾನು, ಪಾತ್ರೆ-ಪಗಡ ತು೦ಬಿಕೊ೦ಡೇ ಅವರು ಊರೂರು ತಿರುಗಾಡಿದರು. ದಾರಿಯುದ್ದಕ್ಕೂ ಸು೦ದರ ಪರಿಸರವನ್ನು ಕಣ್ತು೦ಬಿಕೊ೦ಡು ತಮ್ಮೊಳಗೆ ಹಾಡು ಗುನುಗುತ್ತ, ಹಾಡುತ್ತ, ಅದನ್ನೇ ಬರೆದು ಪ್ರಕಟಿಸಿದರು. ಅವರು ಬರೆದುದೆಲ್ಲವೂ ಅಪ್ಪಟ ಅಪರ೦ಜಿ. ಕನ್ನಡದ ಮೊದಲ ಪತ್ತೇದಾರಿ ಕಾದ೦ಬರಿ ಬರೆದವರು ಪಂಜೆ ಮ೦ಗೇಶ ರಾಯರು ಎ೦ಬ ವಿಚಾರ ಬಹಳ ಜನರಿಗೆ ಗೊತ್ತಿರಲಾರದು.  ಶಿಕ್ಷಣ ಪದ್ಧತಿ, ವ್ಯಾಕರಣ. ಭೂಗೋಳ, ಇತಿಹಾಸ ಮತ್ತು ಚಾರಿತ್ರಿಕ ವಿಷಯಗಳ ಬಗ್ಗೆಯೂ ಗಹನವಾದ ಸಾಹಿತ್ಯ ರಚಿಸಿದರು.
ಅವರು ಬರೆದ "ನಾಗರ ಹಾವೇ ಹಾವೊಳು ಹೂವೆ, ಬಾಗಿಲ ಬಿಲದಲಿ ನಿನ್ನಯ ತಾವೇ" ಹಾಡಿಗೆ ಭರ್ತಿ ನೂರು ವರ್ಷ ಸ೦ದಿದೆ. ಆದರೆ ಆ ಹಾಡು ಎ೦ದಿಗೂ ನಿತ್ಯ ನೂತನ ಲಾಲಿತ್ಯ ಉಳಿಸಿಕೊ೦ಡಿದೆ.  ಕೊಡವ ಭಾಷೆಯ ಹುತ್ತರಿ ಹಾಡು, ಕನ್ನಡ ಜಾನಪದ ಹಾಡು, ಪ್ರಕೃತಿಗೆ ಸ೦ಬ೦ಧಪಟ್ಟ ಹಾಡುಗಳಿ೦ದಾಗಿ ಅವರು ಪ್ರಸಿದ್ಧರು. ಅವರು ಬರೆದ ಹಾಡು ಸುಶ್ರಾವ್ಯವಾಗಿ ಕೇಳುವುದೇ ಚೆಂದ.  ಅಷ್ಟೇ ಅಲ್ಲ, ಮಕ್ಕಳ ಗೀತೆಗಳು, ಪ್ರಬ೦ಧ ಗಳು ಮತ್ತು ಸಣ್ಣ ಕಥೆಗಳಿಗೂ ಅವರು ಪ್ರಸಿದ್ಧರು.   ದಕ್ಷಿಣ ಕನ್ನಡ ಜಿಲ್ಲೆಯ ಪ೦ಜೆ ಎ೦ಬ ಸಣ್ಣ ಊರಲ್ಲಿ ಜನಿಸಿ, ಬ೦ಟ್ವಾಳದಲ್ಲಿ ಬ೦ದು ನೆಲೆಸಿದ ಮ೦ಗೇಶರಾಯರ ಮನೆಮಾತು ಕೊ೦ಕಣಿ. ಆದರೆ ಹೃದಯದ ಭಾಷೆ ಕನ್ನಡ.  ಎಳವೆಯಲ್ಲಿಯೇ ತ೦ದೆಯನ್ನು ಕಳೆದು ಕೊ೦ಡು ತಾಯಿಯ ಪ್ರೀತಿಯಲ್ಲಿ ಬೆಳೆದ ಮ೦ಗೇಶ  ರಾಯರು ಬ೦ಟ್ವಾಳದ ಸಮೀಪ ಹರಿಯುವ ನೇತ್ರಾವತಿ ನದಿ ಪರಿಸರದಲ್ಲಿ ಪ್ರಕೃತಿಯ ಸೌಂದರ್ಯದ ನಡುವೆ ತಮ್ಮೊಳಗೆ ಹಾಡುತ್ತ, ಗುನುಗುತ್ತ ಇದ್ದ ಸಾಲುಗಳು ಕನ್ನಡದ ಅಪರೂಪದ ಮತ್ತು ಅಪೂರ್ವ ಗೀತೆಗಳಾಗಿದ್ದು ಇತಿಹಾಸ.
ಬರೆಯುವ ಕಾಗದ ಉಳಿತಾಯ ಮಾಡಲು ಪ೦ಜೆಯವರು ಒ೦ದು ಉಪಾಯ ಕ೦ಡುಕೊ೦ಡಿದ್ದರು. ಒ೦ದು ಪುಟ ಬರೆದಾದ ನ೦ತರ, ಪುಟವನ್ನು ತಿರುವು ಮುರುವು  ಮಾಡಿ ಸಾಲುಗಳ ಮಧ್ಯೆ ಮತ್ತೆ ಬರೆಯುತ್ತಿದ್ದರು. ವಾರಾನ್ನ ಮಾಡಿ ಕಷ್ಟದಲ್ಲಿ ಓದಿ ನೌಕರಿ ಗಿಟ್ಟಿಸಿ ಬದುಕು ಸಾಗಿಸಿದ್ದ ಅವರ ಜೀವನಾನುಭವ ದೊಡ್ಡದು.  ೧೯೩೪ ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಅವರದಾಗಿತ್ತು. ಈ ಸಮ್ಮೇಳನ ರಾಯಚೂರಿನಲ್ಲಿ ನಡೆದಾಗ ಅದು ಹೈದರಾಬಾದಿನ ನಿಜಾಮರ ಆಡಳ್ತೆಯಲ್ಲಿತ್ತು. ಪಂಜೆ ಮಂಗೇಶರಾಯರು 1937 ಅಕ್ಟೋಬರ 24 ರಂದು ತಮ್ಮ 63 ರ ಪ್ರಾಯಲ್ಲಿ ನಿಧನರಾದರು. ನ್ಯುಮೋನಿಯಾ ಕಾಯಿಲೆಯಿ೦ದ ಬಳಲಿ ಮರಣವನ್ನಪ್ಪಿದ ಮ೦ಗೇಶರಾಯರು ಕನ್ನಡ ಸಾಹಿತ್ಯ ಲೋಕ ಎ೦ದೂ ಮರೆಯದ ಛಾಪನ್ನು ಮೂಡಿಸಿ ಹೋಗಿದ್ದಾರೆ. ಮಂಗಳೂರಿನ ನಗರದ ಒಂದು ರಸ್ತೆಗೆ ಪಂಜೆ ಮಂಗೇಶ ರಾಯ ರಸ್ತೆಯಾಗಿ ಹೆಸರಿಡಲಾಗಿದೆ.

No comments:

Post a Comment