Posts

ಪ೦ಜೆ ಮ೦ಗೇಶರಾಯರು

Image
ಪ೦ಜೆ ಮ೦ಗೇಶರಾಯರು  1874-1937  ಮಂಗೇಶರಾಯರು   1874 ಫೆಬ್ರುವರಿ 22 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ದಲ್ಲಿ  ಜನಿಸಿದರು. ಇವರ ತಾಯಿ ಹೆಸರು ಶಾಂತಾದುರ್ಗಾ, ಅಪ್ಪ ರಾಮಪ್ಪಯ್ಯ. ಪ್ರಾಥಮಿಕ ವಿದ್ಯಾಭಾಸವ ಬಂಟ್ವಾಳಲ್ಲಿಯೇ ಮುಗುಸಿದರು. ಮುಂದೆ ಮಂಗಳೂರಿಗೆ ಆಗಮಿಸಿ ಸಣ್ಣಮಕ್ಕಳಿಗೆ  ಪಾಠ ಹೇಳಿಕೊಟ್ಟುಗೊಂಡು ವಿದ್ಯಾಭ್ಯಾಸವ ಮುಂದುವರಿಸಿದರು. 1890 ರಲ್ಲಿ ಅವರ ಅಪ್ಪ ತೀರಿಹೋಪ ಸಮಯಲ್ಲಿ ಮಂಗೇಶರಾಯರಿಂಗೆ ಹದಿನಾರು ವರ್ಷದ ಪ್ರಾಯ.ಸಂಸಾರದ ಜೆವಾಬ್ದಾರಿ ಇವರ ಹೆಗಲಿಗೆ ಬಂತು. ತಾನು ಕಲಿತು ತಮ್ಮಂದಿರಿಗೂ ವಿದ್ಯಾರ್ಜನೆ ಮಾಡಿದರು. 1894 ರಲ್ಲಿ ಬೆನಗಲ್ ರಾಮರಾಯರ  ಸಹೋದರಿ ಭವಾನಿಬಾಯಿಯೊಂದಿಗೆ ಇವರ ವಿವಾಹ ಆಯಿತು.ಕಾಲೇಜಿನ ಪ್ರಥಮ ವರ್ಷದ ಎಫ್.ಏ.(ಆರ್ಟ್ಸ್)ಪಾಸು ಮಾಡಿ, ಕನ್ನಡ ವಿಶಿಷ್ಟ ಪರೀಕ್ಷೆಯನ್ನೂ ಪಾಸು ಮಾಡಿದರು.1896 ರಲ್ಲಿ ಮಂಗಳೂರಿನ ಸರಕಾರಿ ಕಾಲೇಜಿಲಿ ಜೂನಿಯರ್ ಕನ್ನಡ ಪಂಡಿತ ಹುದ್ದೆ ಪಡೆದರು. ವಿಶೇಷ ಎಂದರೆ ಇದೇ ಹುದ್ದೆಗೆ ‘ಕವಿ ಮುದ್ದಣ’ನೂ ಅರ್ಜಿ ಹಾಕಿದ್ದರು. ಆದರೆ ರಾಯರಿಗೆ ಇಂಗ್ಳೀಷಿನ ಜ್ಞಾನ ಇದ್ದ ಕಾರಣ ಈ ಹುದ್ದೆ ಇವರಿಗೆ ಸಿಕ್ಕಿತ್ತು. ಮುದ್ದಣ ಮುಂದೆ ಉಡುಪಿಯ ಸರಕಾರಿ ಕಾಲೇಜು  ಸೇರಿದರು ಮುಂದೆ ಬಿ.ಎ. ಪರೀಕ್ಷೆ ಪಾಸು ಮಾಡಿ, ಮದ್ರಾಸಿಗೆ ಹೋಗಿ ಅಲ್ಲಿ ಎಲ್.ಟಿ.ಪದವಿಯ ಪಡದು ವಾಪಾಸು ಮಂಗ್ಳೂರಿಗೆ ಬಂದು ಉಪಾಧ್ಯಾಯರಾಗಿ ಮುಂದುವರಿದರುಮುಂದೆ ಮಂಗ...

Papal visit Mangalore after 25 years

Image
Mangalore:The day exactly 25 years ago (February 6, 1986) was a very special for Mangaloreans, especially the Christians, with approximately five lakh people gathering at Bajpe to have a glimpse of Pope John Paul II, the first and only Pope to visit Karnataka. Divine presence Pope John Paul II addressing the gathering during his visit to Bajpe near Mangalore on Feburary 6, 1986. Though the Pope was scheduled to visit Bangalore that year, the venue was changed to Mangalore, also known as the “Rome of the East,” as the atmosphere in Bangalore was not conducive. People cutting across religious and caste lines thronged the venue, near the Bajpe airport, from every nook and corner of the State and outside the State, for the only engagement of the Pope in Karnataka. ‘People saw God’ Many people who had witnessed the historic event attended the special mass on Sunday. Alwyn Noronha, a teacher at St Joseph PU College in Bajpe, and a 10th Standard student then said he felt he was “seeing G...

First man who landed in Mangalore Airport

Image
First man who landed in Mangalore Airport. War hero Vonthibettu Prabhakar Hegde made the first-ever landing in Mangalore, 59 years ago. His passenger: India’s first prime minister Jawaharlal Nehru . He tells Rajul Hegde the airport is tricky but not unsafe. War hero and pioneering aviator Vonthibettu Prabhakar Hegde won’t forget December 25, 1951, for as long as he lives.On that day the retired wing commander, now a spry 84, then an air force flight lieutenant, flew India first prime minister Jawaharlal Nehru on the first-ever flight to Mangalore airport (then called Bajpe Aerodrome) on a DC-3 (Dakota).Talking about the maiden flight from his home in Bangalore, Wing Commander Hegde told us, “When I landed for the first time at Bajpe, they were just digging and levelling the hill to build the runway. So it was just a non-tarmac, level ground, there was no airport as such. But the DC-3 is a small aircraft and it was easy for me to land it.”On being asked Nehru’s observation or if he c...

ಅಪ್ರತಿಮ ದೇಶ ಭಕ್ತ ' ಜಾರ್ಜ್ ಫರ್ನಾಂಡೀಸ್ '

Image
ಜಾರ್ಜ್  ಫರ್ನಾಂಡೀಸ್  ನಂತಹ ಮನವತಾವಾದಿ, ಅಪ್ರತಿಮ ದೇಶ ಭಕ್ತ , ಛಲಗಾರ ಮತ್ತು ಸಾಮಾಜಿಕ ಹಾಗೂ ಧೀಮಂತ ರಾಜಕರಣಿ ಯನ್ನು ನಾವು ಕಾಣಲು ಸಾಧ್ಯವೇ ಇಲ್ಲ. ಇಂತಹ ಮಹಾನ್ಮಾ ನಾಯಕ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್  ಅಲ್ಜೈಮರ್ ಕಾಯಿಲೆಯಿಂದ ಬಳಲುತ್ತಿದ್ದು   ಇದ್ದೂ ಇಲ್ಲಂದಂಥ ಸ್ಥಿತಿಯಲ್ಲಿದ್ದಾರೆ. ಹೋರಾಟಗಾರ, ಕಾರ್ಮಿಕ ಮುಖಂಡ, ಪ್ರಖರ ಸಮಾಜವಾದಿ, ಅತ್ಯುತ್ತಮ ವಾಗ್ಮಿ ಹೀಗೆ ಏನೆಲ್ಲ ವಿಶೇಷಣಗಳನ್ನು ನೀಡಿದರೂ ಜಾರ್ಜ್‌ಗೆ ಅನ್ವರ್ಥಕವಾಗುತ್ತವೆ. ಎಲ್ಲದಕ್ಕೂ ಹೆಚ್ಚಾಗಿ ತಾವು ನಂಬಿದ ಸಿದ್ಧಾಂತವನ್ನು ತ್ಯಜಿಸದೇ ಅವರು ರಾಜಕೀಯ ಜೀವನದಲ್ಲಿ ಏರಬೇಕಾದ ಎಲ್ಲ ಮಜಲುಗಳನ್ನು ಏರಿದರು. ಹಾಗಂತ, ಸುಮ್ಮನೆ ಸಿಕ್ಕ ಅಥವಾ ಪಡೆದ ಅಧಿಕಾರದಲ್ಲಿ ವಿಜೃಂಭಿಸಿ ಇಳಿಯಲಿಲ್ಲ. ತಾವು ಏರಿದ ಪ್ರತಿ ಹುದ್ದೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದು ಅವರ ಹೆಗ್ಗಳಿಕೆ.ಹೀಗೆ ಜಾರ್ಜ್ ಫರ್ನಾಂಡೀಸ್ ಫುಟ್ ಪಾತಿನಿಂದ ಹಲವಾರು ಮಂತ್ರಿಸ್ಥಾನದ ವರೆಗೆ ಮೇಲೇರಿದರೂ ಸರ್ವೇ ಸಾಧಾರಣನಂತೆ ಬದುಕಿ, ಅಸಾಧಾರಣ ಧೈರ್ಯಶಾಲಿಯಾಗಿ ಸಾಹಸಮಯ ಬದುಕನ್ನು ನಡೆಸಿದವರು.                ಪ್ರಸಿದ್ಧ ಕಾರ್ಮಿಕ ಹೋರಾಟಗಾರ, ಮಾನವ ಹಕ್ಕುಗಳ ಹೋರಾಟಗಾರ, ಪತ್ರಕರ್ತ, ಸಮಾಜವಾದಿ, ರಾಜಕಾರಣಿ, ಕ್ರಿಯಾಶೀಲ ವ್ಯಕ್ತಿ ಜಾರ್ಜ್ ಫರ್ನಾಂಡೀಸ್ ಜೂನ್ ೩, ೧೯೩೦ರ ವರ್ಷದಲ್ಲಿ ಮಂಗಳೂರಿನಲ್ಲಿ ಜನಿಸಿದರ...

ಬೆನೆಗಲ್ ನರಸಿ೦ಗ ರಾವ್

Image
ಬೆನೆಗಲ್ ನರಸಿ೦ಗ ರಾವ್  ಈ ಹೆಸರನ್ನು ಕೇಳಿದವರು ಬಹಳ ಕಡಿಮೆ ಮಂದಿ. ದೇಶದ ಶ್ರೇಷ್ಟ ಸಂವಿಧಾನದ ರಚನೆಯಲ್ಲಿ ಅವರ ಪಾತ್ರ ಅತ್ಯಂತ ಹೆಚ್ಚು.ಭಾರತದ ಸ೦ವಿಧಾನ ಅ೦ದ ಕೂಡಲೇ ನಮ್ಮಮುಂದೆ ಬರುವ ಹೆಸರು ಡಾ. ಬಿ.ಅರ್.ಅ೦ಬೇಡ್ಕರ್.  ಆದರೆ ವಾಸ್ತವದಲ್ಲಿ ಸ೦ವಿಧಾನದ ಮೂಲ ಕರಡು ಸಿದ್ಧ ಪಡಿಸಿದವರು ಬಿ.ಎನ್.ರಾವ್ ರಂತಹ  ಕನ್ನಡಿಗ ಎ೦ಬುದು ಬಹುಮ೦ದಿಗೆ ಗೊತ್ತಿಲ್ಲ. ಅವಿಭಅಜ್ಯ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲೂಕಿನ  ಕು೦ದಾಪುರ ಸಮೀಪದ ಬೆನೆಗಲ್ ಎ೦ಬ ಹಳ್ಳಿಯಲ್ಲಿ ಫೆಬ್ರವರಿ 26, 1887 ರಲ್ಲಿ ಹುಟ್ಟಿದ  ಇವರು ಮಾಡಿದ ಸಾಧನೆ, ಏರಿದ ಎತ್ತರ ಎಣೆಯಿಲ್ಲದ್ದು  . ಮಂಗಳೂರಿನ ಕೆನರಾ ವಿದ್ಯಾಸಂಸ್ಥೆಯಲ್ಲಿ ಫ್ರೌಡ ಶಿಕ್ಷಣವನ್ನು ಪೂರೈಸಿದ ಬೆನಗಲ್ ಅವರು ಅಂದಿನ ಮದ್ರಸ್ ಪ್ರೆಸಿಡೆನ್ಸಿಯಲ್ಲಿ ಟೋಪ್ಪರ್ ಸ್ಟೂಡೆಂಟ್ ಆಗಿ ಹೊರಹೊಮ್ಮಿದ್ದರು.  ಆದರೆ ಅವರು ಎಲೆಮರೆಯ ಕಾಯ೦ತೆ ಜನಮಾನಸಕ್ಕೆ ಅಪರಿಚಿತರಾಗಿ ಉಳಿದದ್ದು  ಮಾತ್ರ ವಿಪರ್ಯಾಸ.  ಅವರು ದೇಶ ಕ೦ಡ  ಮಹಾನ್ ನ್ಯಾಯವೇತ್ತರಲ್ಲಿ ಒಬ್ಬರು. 1909 ರಲ್ಲಿ ಇ೦ಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆ ಪಾಸ್ ಮಾಡಿದ ರಾಯರಿಗೆ ನ್ಯಾಯಾ೦ಗದಲ್ಲಿ ವಿಶೇಷ ಒಲವಿತ್ತು.  ಹಲವಾರು ಉನ್ನತ ಹುದ್ದೆಗಳನ್ನು ಅತ್ಯುತ್ತಮ ರೀತಿಯಲ್ಲಿ ನಿಭಾಯಿಸಿದ ಅವರನ್ನು ಬ್ರಿಟಿಶ್ ಸರಕಾರ ನೈಟ್ನೀ ಹುಡ್ಡಿ ಪ್ರಶಸ್ತಿ ನೀಡಿ  ಗೌರವಿಸಿತ್ತು. 1939 ರಲ್ಲಿ ಬೆ...

"ರಮಾಬಾಯಿ" ರಮಾಶಕ್ತಿ ಮಿಷನ್

Image
ರಮಾಬಾಯಿ ಭಾರತದ ಪ್ರಥಮ ಎಜ್ಯುಕೆಷನಿಸ್ಟ್ ಮಹಿಳೆ ಮಾತ್ರವಲ್ಲ ಈಗ ಜನಪ್ರಿಯವಾಗಿರುವ "kindergarden" ಶಿಕ್ಷಣ ಪದ್ಧತಿಯನ್ನು ಮತ್ತು ಸಚಿತ್ರ ಪಠ್ಯಪುಸ್ತಕಗಳನ್ನು ಶತಮಾನಕ್ಕೆ ಮೊದಲೇ ಭಾರತದ ಹಳ್ಳಿಗಳ ಪ್ರಾಥಮಿಕ ಶಾಲೆಗಳಿಗೆ ಮೊದಲಿಗೆ ಪರಿಚಯಿಸಿದವರು.  ಈಕೆಯ ಬಗ್ಗೆ ಹೆಚ್ಚಿನ ಮಾಹಿತಿ ಇ೦ದಿನ ಸಮಾಜಕ್ಕೆ ಇಲ್ಲದಿರುವುದರಿ೦ದ, ಅವರ ಹೆಸರು ಜನಮಾನಸದಿ೦ದ ದೂರವಾಗುತ್ತಿದೆ. ರಮಾ ಬಾಯಿ  ಜನಿಸಿದ್ದು 1858 ರಲ್ಲಿ. ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಒ೦ದು ಕುಗ್ರಾಮ "ಮಾಳ"ಎ೦ಬ ಹಳ್ಳಿಯಲ್ಲಿ. ತ೦ದೆ ಅನ೦ತ ಶಾಸ್ತ್ರಿ ಡೋ೦ಗ್ರೆ. ಸ೦ಸ್ಕ್ರತ ದಲ್ಲಿ ವಿಶೇಷ ವಿದ್ವತ್ತು ಹೊ೦ದಿದ್ದ ಶಾಸ್ತ್ರಿಗಳ ಪ್ರಭಾವದಿ೦ದ ಈಕೆಯೂ ಅದ್ವಿತೀಯವೆನಿಸುವ ಭಾಷಾಪಾ೦ಡಿತ್ಯ ಹೊ೦ದಿದ್ದರು.  ಎಳವೆಯಲ್ಲಿಯೇ ರಾಮಾಯಣ, ಮಹಾ ಭಾರತ, ಭಗವದ್ಗೀತೆಯ ಶ್ಲೋಕಗಳನ್ನು ಕ೦ಠಪಾಠ ಮಾಡಿಕೊ೦ಡಿದ್ದ ಈಕೆ ಅವುಗಳ ಅರ್ಥವಿಸ್ತಾರವನ್ನು ಜನರಿಗೆ ಪರಿಣಾಮಕಾರಿಯಾಗಿ ತಿಳಿಹೇಳುವ ಕಲೆ ಸಿಧ್ಧಿಸಿಕೊ೦ಡಿದ್ದರು. ಆ ಕಾಲದಲ್ಲಿ ಉ೦ಟಾದ ಭಯ೦ಕರ ಕ್ಷಾಮದ ಪರಿಣಾಮ ಊರಿಗೆ ಊರೇ ಹಸಿವಿನಿ೦ದ ನರಳಿ ಸಾವಿನ ದವಡೆಯಲ್ಲಿದ್ದಾಗ ತ೦ದೆ-ತಾಯಿ ಮರಣಿಸಿದರು. ಜೀವನೋಪಾಯಕ್ಕೆ ದಾರಿಕಾಣದೇ ರಮಾಬಾಯಿ ತಮ್ಮ ಸೋದರನೊ೦ದಿಗೆ ಕರ್ನಾಟಕದಿ೦ದ ಗುಳೇ ಹೊರಟರು. ಆಗ ಈಕೆಯ ವಯಸ್ಸು 16. ಕರ್ನಾಟಕದಾದ್ಯ೦ತ ಮಾತ್ರವಲ್ಲ, ದೇಶದ ವಿವಿಧ ಭಾಗಗಳಲ್ಲಿ ಕಾಲ್ನಡಿಗೆಯಲ್ಲಿ ಸ೦ಚರಿಸಿ ಉದ್ಗ...

ಪಡುಪಣಂಬೂರಿನಲ್ಲಿ ಭೋಳಾರ ಭೋಜರಾವ್‌ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ

Image
ಮಂಗಳೂರಿನಲ್ಲಿ 1930ರ ಎ. 13ರಂದು ಮುಂಜಾನೆ ಉಪ್ಪು ತಯಾರಿಸಲು ಸಿದ್ಧರಾದ ಸತ್ಯಾಗ್ರಹಿಗಳ ಗುಂಪು ಬಂದರು ಪ್ರದೇಶಕ್ಕೆ ಹೊರಟಿತು. ಸತ್ಯಾಗ್ರಹಿಗಳು ಮೆರವಣಿಗೆಯಲ್ಲಿ ಹೋಗುತ್ತಿರುವಾಗ, ಪಿ. ಎಲ್‌. ಪುಣಿಚಿತ್ತಾಯರು ಬರೆದಿದ್ದ ಗೀತೆಯನ್ನು ಹಾಡುತ್ತಿದ್ದರು: ಉಪ್ಪಿನ ಕದನಕ್ಕೆ ಹೋರಾಡುವ ಜನರೆ ಉಪ್ಪಿಗೆ ಬೇಕಾಗಿ ಹೋರಾಡಿ ಭಟರೆ ಉಪ್ಪಿಗೂ ಗತಿ ಇಲ್ಲ. ಎಂದರೆ ಏನರ್ಥ ಉತ್ಪನ್ನ ಗಳಿಸಲು ಆಗದ ಬಾಳು ವ್ಯರ್ಥ ಈ ಮೆರವಣಿಗೆಯು ಬಂದರು ಸೇರುವಾಗ ಅಲ್ಲಿ ಸಾವಿರಾರು ಜನರು ಬಂದಿದ್ದರು. ಉಪ್ಪು ನೀರನ್ನು ಮೆರವಣಿಗೆಯಲ್ಲಿ ತಂದು ಕಾಂಗ್ರೆಸ್‌ ಕಚೇರಿಯಲ್ಲಿ ಆ ನೀರನ್ನು ಉಪ್ಪು ತಯಾರಿಸಿದರು. ಮಧ್ಯಾಹ್ನ ಪೊಲೀಸ್‌ ತಂಡದೊಂದಿಗೆ ಸರ್ಕಲ್‌ ಇನ್ಸ್‌ಪೆಕ್ಟರ್‌ ಬಂದು ಅಲ್ಲಿ ತಯಾರಿಸಿದ ಉಪ್ಪನ್ನು ಅದಕ್ಕೆ ಉಪಯೋಗಿಸಿದ ಪಾತ್ರೆಯನ್ನು ಉಳಿಸಿ ಉಳಿದ ಕಟ್ಟಿಗೆಯನ್ನು ಒಯ್ದರು. ಅಂದು ಸಂಜೆ ಕೇಂದ್ರ ಮೈದಾನಿನಲ್ಲಿ ಆರ್‌. ಕೆ. ಪ್ರಭು ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿತು. ಉಪ್ಪನ್ನು ಏಲಂ ಮಾಡಲು ಆರಂಭಿಸಲಾಯಿತು. ಆಗ ಪೊಲೀಸರು ಬಂದು ಉಪ್ಪನ್ನು ಸೆಳೆದುಕೊಂಡರು. ಅಂದು ಆರಂಭವಾದ ಉಪ್ಪಿನ ಸತ್ಯಾಗ್ರಹ ಜಿಲ್ಲೆಯ ವಿವಿಧೆಡೆ ಆ ತಿಂಗಳ ಕೊನೆಯ ತನಕ ಸಾಗಿತು. ಪಾನ ನಿಷೇಧಕ್ಕೆ ಒತ್ತಾಯಿಸಿ ಜಿಲ್ಲೆಯಾದ್ಯಂತ ಶೇಂದಿ, ಶರಾಬು ಅಂಗಡಿಗಳ ಎದುರು 1930ರಲ್ಲಿ ಪಿಕೆಟಿಂಗ್‌ ನಡೆಯಿತು. ಮೇ 5ನ್ನು ಮದ್ಯ ನಿಷೇಧ ದಿನವೆಂದು ಆಚರಿಸಲಾಯಿತು. ಆ ದಿನ ಮೆ...