ಆ ದಿನಗಳು ಒಂದು ನೆನಪು....
ಇದು ಕೋರ್ಟ್ ಬೆಂಚ್ ಹೌದು, ಆದರೆ ನ್ಯಾಯಾಧೀಶರ ಬೆಂಚ್ ಅಲ್ಲ ! ಆದರೆ ಈ ಬೆಂಚು ಮ0ಗಳೂರಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿಯೇ ಇದೆ.ಸ್ವಾತಂತ್ರ್ಯ ಪೂರ್ವದಲ್ಲಿ ಈ ಬೆಂಚಿನ ಮೇಲೆ ಕೂರಲು ಡಿಮಾಂಡೋ ಡಿಮಾಂಡ್. ಎತ್ತರ ಪ್ರದೇಶದಲ್ಲಿ ಇದ್ದ ಬೆಂಚಿಗೆ ಅಂದು ರಾಜ ಮರ್ಯಾದೆ ಇತ್ತು. ಎಷ್ಟೋ ಜನರ ಪ್ರೀತಿ ಬೆಸುಗೆ ಬೆಂಚಿಗಿತ್ತು. ಪ್ರೇಮಿಗಳ ಪ್ರೀತಿಯ ಪಿಸುಮಾತುಗಳಿಗೆ ಮೂಕ ಸಾಕ್ಷಿಯಾಗಿತ್ತು. ಆದರೆ ಈಗ ಅಸ್ರ್ಪಶ್ಯವಾಗಿದೆ. ಬೆಂಚು ಇತ್ತೀಚೆಗಷ್ಟೆ ಹೊಸ ಬಣ್ಣ ಬಳಿದುಕೊಂಡರೂ ಅದಕ್ಕೆ ಹಳೆ ನೆನಪೇ ಸುಂದರ ಎಂದೆಸಿರಬಹುದೇನೊ?
ನವೆ0ಬರ್ 5 ರ0ದು 1941 ರಲ್ಲಿ ರಚಿಸಿದ ಅತ್ಯಂತ ಅಪರೂಪದ ಕಲಾಕೃತಿ ಹೊಂದಿರುವ ಈ ಹಾಸು ಮಾತನಾಡು ವಂತಿದ್ದರೆ ಅದೆಷ್ಟೋ ಕತೆಗಳನ್ನು ಹೇಳುತಿತ್ತೋ ಏನೋ..ವಿಠಲ್ ಶಾಂತರಂ ಎ0ಬವರು ತನ್ನ ತಂದೆ ಶಾಂತರಂ ಮಂಗೇಶ್ ನೆನಪಿಗೆ ಈ ಬೆಂಚನ್ನು ಇಲ್ಲಿ ಸ್ಥಾಪಿಸಿದ್ದರು ಎಂದು,ಇದನ್ನು ಅಂದಿನ ಜಿಲ್ಲಾ ಸತ್ರ ನ್ಯಾಯಾಧೀಶ ಕೆ.ಎನ್. ಗೋಪಾಲನ್ ಅವರು ಉದ್ಘಾಟಿಸಿದ್ದಾಗಿ ಅದರಲ್ಲಿನ ದಾಖಲೆ ಹೇಳುತ್ತದೆ.ಗುಡ್ಡದ ಎತ್ತರದಲ್ಲಿ ಈ ಬೆಂಚನ್ನು ಹಾಕಲಾಗಿದ್ದು, ಇಲ್ಲಿಂದ ಇಡೀಯ ಮಂಗಳೂರು ನೋಟ ಕಾಣುವಂತಿತ್ತು.ಆದರೆ ಈದೀಗ ಈ ಪ್ರದೇಶ ಮರ ಗಿಡ,ಕಸಕಡ್ಡಿಗಳಿ0ದ ತುಂಬಿದೆ.ಇಲ್ಲಿನ ಪುರಾತನ ಕಟ್ಟಡಗಳನ್ನು ಕಡವಿ ಹೊಸ ಕಟ್ಟಡಗಳ ಕಟ್ಟುವ ಕಾಮಗಾರಿ ನಡೆಯುತ್ತಿದೆ.ಈ ಸಂದರ್ಭದಲ್ಲಿ ಪುರಾತನ ಸಂಸ್ಕೃತಿಯನ್ನು ಬಿಂಬಿಸುವ ಇಂತಹ ಪಳೆಯುಳಿಕೆಗಳು ಭೂಗರ್ಭ ಸೇರಿದರೆ ಅಚ್ಚರಿಯಿಲ್ಲ..
super article
ReplyDelete