ತುಳು ಚಿತ್ರರಂಗದ ಆ ದಿನಗಳು..


ತುಳು ನಾಡು ಎಂದು ಕರೆಯಲ್ಪಡುವ ಕರ್ನಾಟಕ ದಕ್ಶಿಣ ಕರಾವಳಿ ಜಿಲ್ಲೆಗಳು ಕಲಾ ವ್ಯವಸಾಯಗಳ ಆಡುಂಬೊಲ.ಇದುವೇ ಇಲ್ಲಿ ತನ್ನದೇ ಭಾಷೆಯ ಚಲನ ಚಿತ್ರರಂಗಕ್ಕೆ ನಾಂದಿಯಾಯಿತು.ಇದುವರೆಗೆ ನಾಡಿಗೆ ಸುಮಾರು 40 ಸಿನಿಮಾಗಳನ್ನು ತುಳು ಚಿತ್ರರಂಗಕ್ಕೆ 4 ದಶಕಗಳ ಇತಿಹಾಸ ಇದೆ. ಕೆಲವೇ ಲಕ್ಷ ತುಳುವರು ಇದ್ದರೂ ಈ ಸುಂದರ ಭಾಷೆಯಲ್ಲಿ ನಿರ್ಮಾಣಗೊಂಡ ಅನೇಕ ಚಿತ್ರಗಳು ಕ್ಯಾನೆ,ಕೈರೊ,ಹಾಂಕಾಂಗ್ ಗಳ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಪ್ರಶಂಸೆಯನ್ನು ಪಡೆದಿವೆ.ಶತ ದಿನವನ್ನು ಕಂಡ ಬಂಗಾರ್ ಪಟ್ಲೇರ್ ರಾಷ್ಟ್ರಪತಿಯವರ ರಜತ ಪದಕವನ್ನು ಪಡೆದಿದೆ.ಇವುಗಳ ಮಧ್ಯೆ ಅನೇಕ ಏಳು ಬೀಳುಗಳನ್ನು ಕಂಡಿರುವ ಈ ವಿಶಿಷ್ಟ ತುಳು ಚಿತ್ರರಂಗಕ್ಕೆ ತನ್ನದೇ ಆದ ಇತಿಹಾಸ ಇದೆ.ತುಳು ನಾಟಕಗಳೇ ಹೆಚ್ಚಾಗಿ ಪ್ರದರ್ಶನ ಗೊಳ್ಳುತಿರುವ ಆ ಕಾಲಕ್ಕೆ ಚಿತ್ರರಂಗ ತೀರಾ ಹೊಸತು ಎನ್ನಬಹುದು.ಇದೇ ಸಮಯದಲ್ಲಿ ಎಸ್.ಆರ್. ರಾಜನ್ ಎಂಬವರು ಇತರರ ಸಹಾಯದೊಂದಿಗೆ 1970 ರಲ್ಲಿ ಎನ್ನ ತಂಗಡಿ ಎಂಬ ಪ್ರಪ್ರಥಮ ತುಳು ಚಿತ್ರವನ್ನು ನಾಡಿಗೆ ಸಮರ್ಪಿಸಿದರು.ದಿವಂಗತ ಲೋಕಯ್ಯ ಶೆಟ್ಟಿ,ಕವಿತ,ದಿಲಿಪ್ ಮತ್ತಿತರ ತಾರಾಗಣದಲ್ಲಿ ನಿರ್ಮಾಣಗೊಂಡ ಈ ಚಿತ್ರ ತಾಂತ್ರಿಕವಾಗಿ ಕಳಪೆ ಆಗಿದ್ದರಿಂದ ಆ ದಿನಗಳಲ್ಲಿ ಅಪಾರ ನಷ್ಟ ಅನುಭವಿಸ ಬೇಕಾಯಿತು.ಆ ನಂತರ ನಿರ್ಮಾಣವಾದ ದಾರೆದ ಬೊಡೆದಿ ಮಂಗಳೂರಿನ ರೂಪವಾಣಿ ಟಾಕೀಸಿನಲ್ಲಿ 8 ವಾರಗಳ ಕಾಲ ನಡೆದಿತ್ಥು.ಕನ್ನಡದ ನಟಿ ಲೀಲಾವತಿ,ಕೆ.ಎನ್ನ್.ಟೇಲರ್ ಈ ಚಿತ್ರದಲ್ಲಿ ನಟಿಸಿದ್ದರು.ತರುವಾಯ ಬಂದ ಬಿಸತ್ತಿ ಬಾಬುಗೆ 1972 ನೇ ಸಾಲಿನ ಶ್ರೇಷ್ಟ ಪ್ರಶಸ್ಥಿ ಬಂದಿರುದು ವಿಶೇಷವಾಗಿತ್ತು. 1973 ರಲ್ಲಿ ವಿಶು ಕುಮಾರ್ ನಿರ್ದೆಶನದಲ್ಲಿ ಮಿನುಗು ತಾರೆ ಕಲ್ಪನಾ,ವಾಮನ ರಾಜ್,ಅಭಿನಯದ ಕೋಟಿ-ಚೆನ್ನಯ್ಯ ಚಿತ್ರ 100 ದಿನಗಳ ಪ್ರದರ್ಶನ ಕಂಡು ದಾಖಲೆಯನ್ನು ನಿರ್ಮಿಸಿತ್ತು ಇದೀಗ ಇತಿಹಾಸ.ಜ್ಯೋತಿ ಟಾಕೀಸಿನಲ್ಲಿ ಓಡಿದ ಈ ಚಿತ್ರದ ಹಿಟ್ ಸಾಂಗ್ ಎಕ್ಕ ಸಕ -ಎಕ್ಕ ಸಕ ಹಾಡು ರಚನೆ ಮಾಡಿದವರು ಡಾ.ಬಿ.ಎ.ವಿವೇಕ ರೈ ಅವರು..!ಜೋಡು ನಂದಾ ದೀಪ ಬೆಳಗುಂಡು ರಚಿಸಿದವರು ಡಾ.ಅಮ್ರತಾ ಸೋಮೇಶ್ವರ ಅವರು.! ಆ ನಂತರದ ದಿನಗಳಲ್ಲಿ ಆನೇಕ ಹಿಟ್ ಚಿತ್ರಗಳು ತುಳು ಭಾಷೆಯಲ್ಲಿ ಬಂದು ಹೋಗಿವೆ.1978 ರಲ್ಲಿ ಆರೂರು ಪಟ್ಟಾಭಿ ನಿರ್ದೇಶನದ ಕರಿಯಣಿ ಕಟ್ಟಂದಿ ಕಂಡನಿ ಪ್ರಥಮ ಕಲರ್ ಚಿತ್ರ.ಖ್ಯಾತ ತಾರೆಯರಾದ ಪಂಡರಿ ಭಾಯಿ, ಜಯಮಾಲ,ಲೀಲಾವತಿ,ಸರೋಜಿನಿ ಶೆಟ್ಟಿ,ತಾರಾ,ಉಮಾಶ್ರೀ,ತುಳು ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ.ಕಡಲ ತಡಿಯ ಭಾರ್ಗವ ಡಾ.ಶಿವರಾಂ ಕಾರಂತರು, ರಿಚರ್ಡ್ ಕ್ಯಾಸ್ಟೊಲಿನೊ ಅವರ ಸೆಪ್ಟೆಂಬರ್ 8 ರಲ್ಲಿ ಅಭಿನಯಿಸುವ ಮೂಲಕ ಅವರು ತುಳು ಚಿತ್ರರಂಗಕ್ಕೆ ಕೊಡುಗೆ ನೀಡಿರುವುದು ಗಮನಾರ್ಹ.ಖ್ಯಾತ ಗಾಯಕರಾದ ಎಸ್ಪಿ. ಬಾಲಸುಬ್ರಮಣ್ಯ,ಎಸ್.ಜಾನಕಿ,ಜೇಸುದಾಸ್,ಬಿ.ಆರ್.ಛಾಯಾ,ಬಿ.ಕೆ. ಸುಮಿತ್ರ,ವಾಣಿ ಜಯರಾಂ,ಮಂಜುಳ ಗುರುರಾಜ್ ತುಳು ಚಿತ್ರರಂಗದಲ್ಲಿ ಹಾಡಿದ್ದಾರೆ.ಈ ವಿಶಿಷ್ಟ ಭಾಷೆ ಮತ್ತು ಸಂಸ್ಕ್ರತಿಯ ಸೊಗಡಿನ ತುಳು ಚಿತ್ರರಂಗ ನೂರು ಕಾಲ ಬಾಳಲಿ...

Comments

Post a Comment

Popular posts from this blog

'Shanthi Cathedral'History of 150 years

Lady Goschen Hospital Mangalore

ಹ್ಯಾಮಿಲ್ಟನ್ ಸರ್ಕಲ್(Hamilton circle)