ರಾಂಪಣ್ಣನ ಹೋಟೆಲ್..


ಕ0ಕನಾಡಿ ರಾಂಪಣ್ಣನ ಹೋಟೆಲ್ ಎಂದರೆ ಗೊತ್ತಿರದವ ಬಹುಶ ಮಂಗಳೂರಿನಲ್ಲಿ ಇರಕ್ಕಿಲ್ಲ.ನಗರದ ಕಂಕನಾಡಿ ಮತ್ತು ಹಂಪನಕಟ್ಟೆಯಲ್ಲಿ ರಾಜ್ ಕಮಾಲ್ ಎಂಬ 2 ಹೋಟೆಲುಗಳನ್ನು ನಡೆಸುತಿದ್ದ ರಾಂಪಣ್ಣ ಕಷ್ಟಜೀವಿ.ಜೀವನವೇ ದುಸ್ತರವಾಗಿರುವ ಆ ದಿನಗಳಲ್ಲಿ ಹೊಟ್ಟೆ ತುಂಬಾ ಊಟ ಸಿಗುವ ಏಕ ಮಾತ್ರ ಹೋಟೆಲ್ ಇವರಾದಗಿತ್ತು.ತಮ್ಮದೇ ಮನೆಯಲ್ಲಿ ಮಾಡಿದ ಅಕ್ಕಿ,ತರಕಾರಿಯನ್ನು ತಂದು ಅಡುಗೆ ಮಾಡಿ ಅತ್ಯಂತ ಕಡಿಮೆ ದುಡ್ಡಿನಲ್ಲಿ ಜನರಿಗೆ ಉಣಬಡಿಸುತಿದ್ದರು ಎಂದರೆ ನೀವೂ ಲೆಕ್ಕ ಹಾಕಬಹುದು.ಅದರಲ್ಲೂ ರಾಜ್ ಕಮಾಲ್ ಘಮಘಮಿಸುವ ಬಿರಿಯಾನಿ ಮತ್ತು ಬಂಗುಡೆ-ಬೂತಾಯಿ ಪುಳಿಮುಂಚಿಗೆ ಭಾರಿ ಫೇಮಸ್ಸು.ಮಂಗಳೂರಿನ ಜನ ಅಲ್ಲದೇ ಶಾಲಾ - ಕಾಲೇಜುಗಳ ಮಕ್ಕಳು ಮದ್ಯಾಹ್ನದ ಊಟಕ್ಕೆ ಅವಲಂಬಿಸಿದ್ದದು ಇದೇ ರಾಂಪಣ್ಣನ ಹೋಟೆಲ್.ಹೊಟ್ಟೆ ತುಂಬಾ ಎಷ್ಟು ಬೇಕಾದರು ಊಟ ಮಾಡಬಹುದಾದರೂ,ಅನ್ನವನ್ನು ವ್ಯರ್ಥಮಾಡುವಂತಿರಲಿಲ್ಲ.ಮಾಡಿದರೆ ಅದಕ್ಕೆ ಎ0ಟಾಣೆ ದಂಡ ತೆರಬೇಕಾಗಿತ್ತು..!
ಅನಕ್ಷರಸ್ತರಾದರೂ,ಬಡವರ-ದೀನದಲಿತರ ಬಗ್ಗೆ ಸದಾ ಖಾಳಾಜಿ ಹೊಂದಿದ್ದ ರಾಂಪಣ್ಣ ರಿಗೆ ಕಂಬಳದ ಬಗ್ಗೆ ವಿಶೇಷ ಆಸಕ್ತಿ. ತಾವು ಕೂಡ ಕಂಬಳದ ಕೋಣಗಳನ್ನು ಸಾಕಿದ್ದರು.ರಾಜಕೀಯ ನಂಟು ಸ್ವಲ್ಪ ಹೆಚ್ಹಿತ್ತು.ಗುಂಡೂರಾವ್, ಮೊಯಿಲಿ, ಜನಾರ್ದನ ಪೂಜಾರಿ ಅವರಿಗೆ ಅತ್ಯಂತ ನಿಕಟರಾಗಿದ್ದರು, ಪೂಜಾರಿ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಧನ ಸಹಾಯ ಮಾಡಿದ್ದರು.! ಸ0ತಾನ ಭಾಗ್ಯ ಇಲ್ಲದ ರಾಂಪಣ್ಣ ಅವರು ಇಹಲೋಕ ತ್ಯಜಿಸಿ ಇಂದಿಗೆ 23 ವರ್ಷಗಳು ಕಳೆದಿವೆ.ಅವರ ಹೋಟೆಲುಗಳಲ್ಲಿ ರಾಜ್ ಕಮಲ್ ಕೂಡ ನೆಲಸಮವಾಗಿದೆ.ಕಂಕನಾಡಿ ರೆಸ್ಟೊರೆಂಟನ್ನು ಪ್ರಸ್ತುತ ಅವರ ಸೋದರ ಸಂಬಂಧಿಗಳು ನಡೆಸಿಕೊಂಡು ಹೋಗುತಿದ್ದಾರೆ.ಇವುಗಳೆಲ್ಲವೂ ಪ್ರಸ್ತುತ ನೆನಪುಗಳು ಮಾತ್ರ....

Comments

Popular posts from this blog

'Shanthi Cathedral'History of 150 years

Lady Goschen Hospital Mangalore

ಹ್ಯಾಮಿಲ್ಟನ್ ಸರ್ಕಲ್(Hamilton circle)