ಮಂಗಳೂರಿನ ಕೆಂಪು ಕೋಟೆ 'ಕಲೆಕ್ಟರ್ ಆಫೀಸ್'...!


ವಿಶಾಲವಾದ ಕರಾವಳಿ ಪ್ರದೇಶ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಶತಮಾನಗಳ ಇತಿಹಾಸವಿದೆ.ಇದಕ್ಕೆ ಮಂಗಳೂರಿನಲ್ಲಿರುವ ಜಿಲ್ಲಾಧಿಕಾರಿ ಕಟ್ಟಡವೇ ಸಾಕ್ಷಿ.ಕೆ0ಪು ಮುರ ಕಲ್ಲಿನಿಂದ ಕಟ್ಟಿದ ಈ ಭವ್ಯವಾದ ಕಟ್ಟಡದ ನೋಟವೇ ಚೆಂದ.ಪ್ರಸ್ತುತ ಇದನ್ನು ಪುರತತ್ವ ಇಲಾಖೆಗೆ ಒಪ್ಪಿಸುವ ಕಾರ್ಯ ಆರಂಭಗೊಂಡಿದೆ.ಪೋರ್ಚುಗೀಸರು,ಮ್ಯಸೂರು ಹುಲಿ ಟಿಪ್ಪು ಸುಲ್ತಾನ್, ವಿಜಯ ನಗರದ ಅರಸರ ಆಳ್ವಿಕೆ ನಂತರ ಬ್ರಿಟಿಷರು ಇಲ್ಲಿಂದಲೇ ಆಡಳಿತ ನದೆಸಿದ್ದರು.
1914 ರಿಂದ 1919 ರ ವರೆಗೆ ನಡೆದ ಒಂದನೇ ಮಹಾ ಯುದ್ದದಲ್ಲಿ ಇದೇ ಹಳ್ಳಿಯಿಂದ 88 ಮಂದಿ ಪಾಲ್ಗೊಂಡಿದ್ದು ಅವರಲ್ಲಿ ಇಬ್ಬರು ಹುತಾತ್ಮರಾಗಿದ್ದರು. ಅವರ ಗೌರವಾರ್ಥ ಬರೆದ ಲೇಖನ ಇ0ದಿಗೂ ಈ ಕಟ್ಟಡದ ಗೋಡೆಯ ಮೇಲೆ ಕಾಣಬಹುದು.ಇದುವರೆಗೆ 120 ಜಿಲ್ಲಾಧಿಕಾರಿಗಳನ್ನು ಕಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1799 ರಲ್ಲಿ ಬ್ರಿಟೀಷ್ ಅಧಿಕಾರಿ ಮೇಜರ್ ಮುನ್ರೋ ಅವರು ಪ್ರಥಮ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು.1905 ರಲ್ಲಿ AHS ಬಹದ್ದೂರ್ ಅವರು ಅಧಿಕಾರ ವಹಿಸಿದ ಮೊದಲನೇ ಭಾರತೀಯ ಜಿಲ್ಲಾಧಿಕಾರಿಯಾಗಿದ್ದಾರೆ.M.ಸುಬ್ರಹ್ಮಣ್ಯ ಅವರು 1940 ರಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿದ ಮೊದಲ IAS ಅಧಿಕಾರಿಯಾಗಿದ್ದಾರೆ.



Comments

Post a Comment

Popular posts from this blog

'Shanthi Cathedral'History of 150 years

Lady Goschen Hospital Mangalore

ಹ್ಯಾಮಿಲ್ಟನ್ ಸರ್ಕಲ್(Hamilton circle)