Posts

Showing posts from July, 2009

ಸಂತ ಅಲೋಸಿಯಸ್ ಕಾಲೇಜು (St.Aloysius Collage)

Image
ಪಶ್ಚಿಮದ ಅರಬ್ಬೀ ಸಮುದ್ರ ತೀರದಲ್ಲಿ ವಿಶಾಲವಾಗಿ ಚಾಚಿರುವ ಸುಂದರ ನಗರ ಮಂಗಳೂರು.ಕೇರಳದ ಕಾಸರಗೋಡಿನಿಂದ ಉತ್ತರದ ಕಾರವಾರದ 370 ಕೀ. ಮೀ ಉದ್ದದ ಕರಾವಳಿ ಪ್ರದೇಶಕ್ಕೆ ಇದು ಹೆಬ್ಬಾಗಿಲು.ಇಲ್ಲಿನ ಜನ ಸುಶಿಕ್ಷಿತರು,ಬುದ್ದಿವಂತರು - ಸಂಸ್ಕೃತಿ ಉಳ್ಳವರು ಎಂದು ದೇಶ ವಿದೇಶಗಳಲ್ಲಿ ಮನೆಮಾತಗಿದ್ದಾರೆ.ಇದಕ್ಕೆ ಕಾರಣ ಶಿಕ್ಷಣ ಮತ್ತು ವಿದ್ಯಾಭ್ಯಾಸ.ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಜಸ್ಟೀಸ್ ಕೆ.ಎಸ್.ಹೆಗ್ದೆ,ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಇಲ್ಲಿನ ಹಳೇ ವಿದ್ಯಾರ್ಥಿಗಳು..!ಇಲ್ಲಿಂದ ಕಲಿತ ಅನೇಕರು ದೇಶವಿದೇಶಗಳಲ್ಲಿ ರಾಜಕೀಯ ಮತ್ತ್ತು ಉದ್ಯಮದಲ್ಲಿ ಹೆಸರು ಪಡೆದ್ದಾರೆ.ಇದರ ದೊಡ್ಡ ಪಾಲು ಸಂತ ಅಲೋಸಿಯಸ್ ಶಿಕ್ಷಣ ಸಂಸ್ಥೆಗೆ ಸಲ್ಲುತ್ತದೆ ಎಂದರೆ ತಪ್ಪಾಗಲಾರದು. ಕರಾವಳಿಯ ಸುಂದರ ನಗರ ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಇಡೀ ನಗರಕ್ಕೆ ಕಿರೀಟದಂತಿರುವ ಈ ಅಲೋಸಿಯಸ್ ಕಾಲೇಜು, ಕರಾವಳಿಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಒಂದು ಹೆಮ್ಮೆ.ಇಲ್ಲಿನ ಸುಮಾರು 40 ಎಕರೆ ಪ್ರದೇಶದಲ್ಲಿ ಹರಡಿದ್ದು, ಕಳೆದ 130 ವರ್ಷಗಳಿಂದ ಬಡವ - ಬಲ್ಲಿದ ಎಂಬ ಬೇದ ಭಾವ ಇಲ್ಲದೆ ಶೈಕ್ಷಣಿಕ ಸೇವೆ ನೀಡುತ್ತ ವಿದ್ಯಾ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿರುವ ಈ ಮಹಾನ್ ಸಂಸ್ಥೆಯ ಹಿನ್ನೆಲೆಯ ಬಗ್ಗೆ ಬೆಳಕು ಚೆಲ್ಲುವ ಒಂದು ಸಣ್ಣ ಪ್ರಯತ್ನ... 1878 ರಲ್ಲಿ ಈ ಪ್ರದೇಶದಲ್ಲಿ ಕ್ರೈಸ್ತ ಮತ ಪ್ರಚಾರಕ್ಕೆ ದೂರದ ಯುರೋಪ್ ನಿಂದ...

ವೆನ್ಲಾಕ್ ಆಸ್ಪತ್ರೆ ( Wenlock Hospital)

Image
ಮಂಗಳೂರಿನಲ್ಲಿರುವ ಈ ವೆನ್ಲಾಕ್ ಆಸ್ಪತ್ರೆ ಬಗ್ಗೆ ಎಷ್ಟು ಮಂದಿಗೆ ತಿಳಿದಿದೆಯೋ ಗೊತ್ತಿಲ್ಲ.ಇದರ ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ. 160ಕ್ಕೂ ಹೆ ಚ್ಚು ವರ್ಷಗಳ ಇತಿಹಾಸವಿರುವ ಈ ಆಸ್ಪತ್ರೆ ರಾಜ್ಯದ ಒಂದು ಹೆಮ್ಮೆ.ಉಚಿತ ಸೇವೆ ನೀಡುವ ಈ ಆಸ್ಪತ್ರೆ ಬಡವರ ಪಾಲಿನ ಸಂಜೀವಿನಿ.! ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ ಹಾಸನ, ಮಡಿಕೇರಿ ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಪ್ರತಿ ವರ್ಷ 2 ಲಕ್ಷಕ್ಕೂ ಅಧಿಕ ಜನರು ಇಲ್ಲಿ ಉಚಿತ ಚಿಕಿತ್ಸೆ ಪಡೆಯುತಿದ್ದಾರೆ . ಪಕ್ಕದ ಕೇರಳ ರಾಜ್ಯದಿಂದಲೂ ನೂರಾರು ಜನರು ಇಲ್ಲಿ ಚಿಕಿತ್ಸೆಗೆ ಬರುತ್ತಿದ್ದಾರೆ. ಶತಮಾನದ ಇತಿಹಾಸವಿರುವ ಈ ಆಸ್ಪತ್ರೆಯನ್ನು ಅಂದಿನ ಬ್ರಿಟೀಷ್ ಆಡಳಿತ 1846 ರಲ್ಲಿ ಆರಂಭಿಸಿತ್ತು.ಆರಂಭದಿಂದಲೇ ಎಲ್ಲಾ ಬಡವರಿಗೆ ಇಲ್ಲಿ ಔಷಧ ಉಚಿತ.1919 ರಲ್ಲಿ ಅಂದಿನ ಬ್ರಿಟೀಷ್ ಆಡಳಿತ ಮದ್ರಾಸ್ ಗವರ್ನರ್ ಲಾರ್ಡ್ ವೆನ್ಲಾಕ್ ಅವರು ನೂತನ ಕಟ್ಟಡಕ್ಕೆ ಶಿಲನ್ಯಾಸ ಮಾಡಿದ್ದರು.ಅಂದಿನಿಂದ ಇದು ವೆನ್ಲಾಕ್ ಆಸ್ಪತ್ರೆಯಾಗಿ ಪುನರ್ ನಾಮಕರಣಗೊಂಡಿತು.1923 ರಲ್ಲಿ ಹಾಂಕಾಂಗಿನ ಜಂಫಟ್ ಎಂಬ ವ್ಯಾಪಾರಿ 500 ರೂಪಾಯಿಗಳ ದೇಣಿಗೆ ನೀಡಿ ಇಲ್ಲಿ ಒ0ದು ಅಪರೇಶನ್ ಥಿಯೇಟರನ್ನು ನಿರ್ಮಾಣ ಮಾಡಿದರು.ಅಂದಿನಿಂದ ಇಂದಿನವರೆಗೆ 10 ಸಾವಿರಕ್ಕೂ ಅಧಿಕ ಅಪರೇಶನ್ ಗಳು ನಡೆದಿವೆ. 1938 ರಲ್ಲಿ ಮುಂಬೈಯ ಕುಡ್ಪಿ ಭುಜಂಗ ರಾವ್ ಅವರು ಮೊದಲ ಅಂಬ್ಯುಲೆನ್ಸನ್ನು ದಾನ ನೀಡಿದ್ದರು. 1947 ರಲ್ಲಿ ...