ವೆನ್ಲಾಕ್ ಆಸ್ಪತ್ರೆ ( Wenlock Hospital)

ಮಂಗಳೂರಿನಲ್ಲಿರುವ ಈ ವೆನ್ಲಾಕ್ ಆಸ್ಪತ್ರೆ ಬಗ್ಗೆ ಎಷ್ಟು ಮಂದಿಗೆ ತಿಳಿದಿದೆಯೋ ಗೊತ್ತಿಲ್ಲ.ಇದರ ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ. 160ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಈ ಆಸ್ಪತ್ರೆ ರಾಜ್ಯದ ಒಂದು ಹೆಮ್ಮೆ.ಉಚಿತ ಸೇವೆ ನೀಡುವ ಈ ಆಸ್ಪತ್ರೆ ಬಡವರ ಪಾಲಿನ ಸಂಜೀವಿನಿ.! ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ ಹಾಸನ, ಮಡಿಕೇರಿ ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಪ್ರತಿ ವರ್ಷ 2 ಲಕ್ಷಕ್ಕೂ ಅಧಿಕ ಜನರು ಇಲ್ಲಿ ಉಚಿತ ಚಿಕಿತ್ಸೆ ಪಡೆಯುತಿದ್ದಾರೆ.ಪಕ್ಕದ ಕೇರಳ ರಾಜ್ಯದಿಂದಲೂ ನೂರಾರು ಜನರು ಇಲ್ಲಿ ಚಿಕಿತ್ಸೆಗೆ ಬರುತ್ತಿದ್ದಾರೆ.
ಶತಮಾನದ ಇತಿಹಾಸವಿರುವ ಈ ಆಸ್ಪತ್ರೆಯನ್ನು ಅಂದಿನ ಬ್ರಿಟೀಷ್ ಆಡಳಿತ 1846 ರಲ್ಲಿ ಆರಂಭಿಸಿತ್ತು.ಆರಂಭದಿಂದಲೇ ಎಲ್ಲಾ ಬಡವರಿಗೆ ಇಲ್ಲಿ ಔಷಧ ಉಚಿತ.1919 ರಲ್ಲಿ ಅಂದಿನ ಬ್ರಿಟೀಷ್ ಆಡಳಿತ ಮದ್ರಾಸ್ ಗವರ್ನರ್ ಲಾರ್ಡ್ ವೆನ್ಲಾಕ್ ಅವರು ನೂತನ ಕಟ್ಟಡಕ್ಕೆ ಶಿಲನ್ಯಾಸ ಮಾಡಿದ್ದರು.ಅಂದಿನಿಂದ ಇದು ವೆನ್ಲಾಕ್ ಆಸ್ಪತ್ರೆಯಾಗಿ ಪುನರ್ ನಾಮಕರಣಗೊಂಡಿತು.1923 ರಲ್ಲಿ ಹಾಂಕಾಂಗಿನ ಜಂಫಟ್ ಎಂಬ ವ್ಯಾಪಾರಿ 500 ರೂಪಾಯಿಗಳ ದೇಣಿಗೆ ನೀಡಿ ಇಲ್ಲಿ ಒ0ದು ಅಪರೇಶನ್ ಥಿಯೇಟರನ್ನು ನಿರ್ಮಾಣ ಮಾಡಿದರು.ಅಂದಿನಿಂದ ಇಂದಿನವರೆಗೆ 10 ಸಾವಿರಕ್ಕೂ ಅಧಿಕ ಅಪರೇಶನ್ ಗಳು ನಡೆದಿವೆ. 1938 ರಲ್ಲಿ ಮುಂಬೈಯ ಕುಡ್ಪಿ ಭುಜಂಗ ರಾವ್ ಅವರು ಮೊದಲ ಅಂಬ್ಯುಲೆನ್ಸನ್ನು ದಾನ ನೀಡಿದ್ದರು. 1947 ರಲ್ಲಿ ಭಾರತ ಸ್ವಾತಂತ್ರ್ಯದ ಸಂಭ್ರಮದಲ್ಲಿದ್ದಾಗ ವೆನ್ಲಾಕ್ ಆಸ್ಪತ್ರೆ 100 ವರ್ಷಗಳ ಶತ ಸಂಭ್ರಮದಲ್ಲಿತ್ತು..! 19 ನೇ ಶತಮಾನದಲ್ಲಿ ಜನತೆಯ ನಿದ್ದೆ ಕೆಡಿಸಿದ ಮಲೇರಿಯಾ ರೋಗವನ್ನು ಕಂಡು ಹಿಡಿದ ಡಾ. ಸರ್. ರೋನಾಲ್ಡ್ ಅವರು ಈ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದಾರೆ. 1975 ರಲ್ಲಿ ಡಾ.ಎಸ್.ಆರ್. ಬಲ್ಲಾಳ್ ಅವರು ತೆರೆದ ಶಸ್ತ್ರ ಚಿಕಿತ್ಸೆಯನ್ನು ಇಲ್ಲಿ ಮಾಡಿದ್ದು,ರಾಜ್ಯದಲ್ಲೇ ಮೊದಲ ಬಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಮಾಡಿದ ಕೀರ್ತೀ ಇದಕ್ಕೆ ಸಲ್ಲುತ್ತದೆ. ಅಂದಿನಿಂದ ಇಂದಿನವರೆಗೂ ಅತ್ಯಧುನಿಕ ಸುಸಜ್ಜಿತ ಸೌಲಭ್ಯಗಳೊಂದಿಗೆ ನೂರಾರು ವೈದ್ಯರು ಮತ್ತು ದಾದಿಯರು ಹಗಲಿರುಳು ಅತ್ಯುತ್ತಮ ಸೇವೆಯನ್ನು ಉಚಿತವಾಗಿ ಬಡವರಿಗೆ ನೀಡಿತ್ತಾ ಬಂದಿದ್ದಾರೆ.ನಿರಂತರವಾಗಿ ಇದು ಮುಂದುವರೆಯಲಿ....ಆದರೆ ಜನವರಿ 26,2013 ರಂದು ಮಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಟಿ. ರವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಸ್ಪತ್ರೆಯ ಹೆಸರನ್ನು ಬದಲಾಯಿಸಲು ನಿರ್ಣಯ ಕೈಗೊಳ್ಳಲಾಗಿದ್ದು, ವೆನ್ಲಾಕ್ ಆಸ್ಪತ್ರೆಯ ಹೆಸರನ್ನು ಕುದ್ಮುಲ್ ರಂಗ ರಾವ್ ಮತ್ತು ಲೇಡಿಗೋಶನ್ ಹೆರೆಗೆ ಆಸ್ಪತ್ರೆಗೆ ಉಳ್ಳಾಲ ರಾಣಿ ಅಬ್ಬಕ್ಕಳ ಹೆಸರನ್ನು ಇಡಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

Comments

Popular posts from this blog

'Shanthi Cathedral'History of 150 years

Lady Goschen Hospital Mangalore

ಹ್ಯಾಮಿಲ್ಟನ್ ಸರ್ಕಲ್(Hamilton circle)