ಸಂತ ಅಲೋಸಿಯಸ್ ಕಾಲೇಜು (St.Aloysius Collage)
ಪಶ್ಚಿಮದ ಅರಬ್ಬೀ ಸಮುದ್ರ ತೀರದಲ್ಲಿ ವಿಶಾಲವಾಗಿ ಚಾಚಿರುವ ಸುಂದರ ನಗರ ಮಂಗಳೂರು.ಕೇರಳದ ಕಾಸರಗೋಡಿನಿಂದ ಉತ್ತರದ ಕಾರವಾರದ 370 ಕೀ. ಮೀ ಉದ್ದದ ಕರಾವಳಿ ಪ್ರದೇಶಕ್ಕೆ ಇದು ಹೆಬ್ಬಾಗಿಲು.ಇಲ್ಲಿನ ಜನ ಸುಶಿಕ್ಷಿತರು,ಬುದ್ದಿವಂತರು - ಸಂಸ್ಕೃತಿ ಉಳ್ಳವರು ಎಂದು ದೇಶ ವಿದೇಶಗಳಲ್ಲಿ ಮನೆಮಾತಗಿದ್ದಾರೆ.ಇದಕ್ಕೆ ಕಾರಣ ಶಿಕ್ಷಣ ಮತ್ತು ವಿದ್ಯಾಭ್ಯಾಸ.ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಜಸ್ಟೀಸ್ ಕೆ.ಎಸ್.ಹೆಗ್ದೆ,ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಇಲ್ಲಿನ ಹಳೇ ವಿದ್ಯಾರ್ಥಿಗಳು..!ಇಲ್ಲಿಂದ ಕಲಿತ ಅನೇಕರು ದೇಶವಿದೇಶಗಳಲ್ಲಿ ರಾಜಕೀಯ ಮತ್ತ್ತು ಉದ್ಯಮದಲ್ಲಿ
ಹೆಸರು ಪಡೆದ್ದಾರೆ.ಇದರ ದೊಡ್ಡ ಪಾಲು ಸಂತ ಅಲೋಸಿಯಸ್ ಶಿಕ್ಷಣ ಸಂಸ್ಥೆಗೆ ಸಲ್ಲುತ್ತದೆ ಎಂದರೆ ತಪ್ಪಾಗಲಾರದು.
ಕರಾವಳಿಯ ಸುಂದರ ನಗರ ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಇಡೀ ನಗರಕ್ಕೆ ಕಿರೀಟದಂತಿರುವ ಈ ಅಲೋಸಿಯಸ್ ಕಾಲೇಜು, ಕರಾವಳಿಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಒಂದು ಹೆಮ್ಮೆ.ಇಲ್ಲಿನ ಸುಮಾರು 40 ಎಕರೆ ಪ್ರದೇಶದಲ್ಲಿ ಹರಡಿದ್ದು, ಕಳೆದ 130 ವರ್ಷಗಳಿಂದ ಬಡವ - ಬಲ್ಲಿದ ಎಂಬ ಬೇದ ಭಾವ ಇಲ್ಲದೆ ಶೈಕ್ಷಣಿಕ ಸೇವೆ ನೀಡುತ್ತ ವಿದ್ಯಾ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿರುವ ಈ ಮಹಾನ್ ಸಂಸ್ಥೆಯ ಹಿನ್ನೆಲೆಯ ಬಗ್ಗೆ ಬೆಳಕು ಚೆಲ್ಲುವ ಒಂದು ಸಣ್ಣ ಪ್ರಯತ್ನ...
1878 ರಲ್ಲಿ ಈ ಪ್ರದೇಶದಲ್ಲಿ ಕ್ರೈಸ್ತ ಮತ ಪ್ರಚಾರಕ್ಕೆ ದೂರದ ಯುರೋಪ್ ನಿಂದ ಬಂದ ಜೆಜ್ವಿತ್ ಮಿಶಿನರಿ ಧರ್ಮಗುರುಗಳು ಸ್ಥಳಿಯ ಬಡ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಬಾಡಿಗೆ ಕೊಣೆಯಲ್ಲಿ 3 ತರಗತಿಗಳನ್ನು ಆರಂಭಿಸಿದರು.1882 ರಲ್ಲಿ ಈ ಕಾಲೇಜು ಮದ್ರಾಸ್ ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟಿತ್ತು.1897 ಕಾಲೇಗು ತನ್ನ ಪ್ರಥಮ ಸಂಚಿಕೆಯನ್ನು ಬಿಡುಗಡೆ ಮಾಡಿತು.1955 ರಲ್ಲಿ ಕರ್ನಾಟಕ ವಿವಿ ಮತ್ತು 1956 ರಲ್ಲಿ ಮೈಸೂರು ವಿವಿ ಹಾಗೂ ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಸೇರ್ಪಡೆಗೊಂಡಿದೆ ಆದರೂ ಸ್ವಯತ್ತತೆ ಪಡೆದ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.1912 ರಲ್ಲಿ ಅಲೋಶಿಯಂ ಎಂಬ ಮ್ಯುಸಿಯಂ ಆರಂಭಿಸಿತು. 1963 ರಲ್ಲಿ ಸಂಜೆ ಕಾಲೇಜನ್ನು ಆರಂಭಿಸಿತು.125 ವರ್ಷಗಳ ಸವಿ ನೆನಪಿಗೆ ವಿಶೇಷ ಅಂಚೆ ಚೀಟಿಯನ್ನು 2004 ರಲ್ಲಿ ಆಗಿನ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಲೋಕಾರ್ಪಣೆ ಮಾಡಿದ್ದರು.
ಕಿಂಡರ್ ಗಾರ್ಡನ್ ವಿಂದ ಉತ್ತಮ ಗುಣಮಟ್ಟದ ಉನ್ನತ ವೃತ್ತಿಪರ ಪದವಿ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆಯಲ್ಲಿ 150 ಶಿಕ್ಷಕ ಮತ್ತು 160 ಕ್ಕೂ ಅಧಿಕ ಶಿಕ್ಷಕೇತರ ಸಿಬಂದಿಗಳು ತಮ್ಮ ಸೇವೆಯನ್ನು ನೀಡುತ್ತಿದ್ದಾರೆ.500 ಕ್ಕೂ ಅಧಿಕ ಮಕ್ಕಳು ಜಾತಿ - ಧರ್ಮವನ್ನು ಮೀರಿ ಇಲ್ಲಿ ಉಚಿತ ಶಿಕ್ಷಣವನ್ನು ಪಡೆಯುತ್ತಿದ್ದಾರೆ..!
ಈ ಮಹಾನ್ ಸಂಸ್ಥೆಯಿಂದ ಇನ್ನೂ ಮುಂದೆಯು ಗುಣ ಮಟ್ಟದ ಸೇವೆಯನ್ನು ನಿರೀಕ್ಷಿಸೋಣ..

Comments
Post a Comment