Posts

Showing posts from November, 2009

ಮಂಗಳೂರು ಕ್ಲಬ್..

Image
ಮಂಗಳೂರು ಕ್ಲಬ್ ಎಂದರೆ ಮಂಗಳೂರಿಗೆ ಪರಿಚಯ ಕಡಿಮೆ.ನಗರದ ಜೆಪ್ಪುವಿನ ಪರಿಸರದಲ್ಲಿ ಇರುವ ಈ ಪ್ರಶಾಂತವಾದ ಸ್ಥಳಕ್ಕೆ ಶತಮಾನದ ಇತಿಹಾಸವಿದೆ. ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿ ದಡದಲ್ಲಿರುವ ಮಂಗಳೂರು ಕ್ಲಬನ್ನು 1876 ರಲ್ಲಿ ನಿರ್ಮಾಣ ಮಾಡಲಾಗಿತ್ತು.ಅಂದಿನ ಬ್ರಿಟೀಶ್ ಆಡಳಿತವಿದ್ದ ಕರಾವಳಿಯ ಈ ಭಾಗದಲ್ಲಿ ಇಂಗ್ಲೀಷ್ ಅಧಿಕಾರಿಗಳ ಮೋಜಿನ ತಾಣವಾಗಿತ್ತು.M.James Moss ಇದರ ಮೊದಲ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡಿದ್ದ,ಭಾರತ ಸ್ವಾತಂತ್ರ್ಯಗೊಂಡು 30 ವರ್ಷಗಳ ಬಳಿಕವೂ ಎಂದರೆ 1970 ರ ವರೆಗೂ ಇದನ್ನು ಬ್ರಿಟೀಷರೇ ನಿರ್ವಹಿಸುತ್ತಿದ್ದರು ಎಂಬುದು ಗಮನಾರ್ಹ ವಿಷಯ..! ನಂತರದ ದಿನಗಳಲ್ಲಿ ಇದು ಸ್ಥಳಿಯರ ಆಡಳಿತಕ್ಕೆ ಬಂತು. ಮಂಗಳೂರು ನಗರ ಸೇರಿದಂತೆ ನಾಡಿನ ಹೆಸರಾಂತ ಉದ್ಯಮಿಗಳು ಸೇರಿಕೊಂಡು ಸಮಿತಿ ರಚನೆ ಮಾಡಿ ಇದನ್ನು ನಿರ್ವಹಿಸುತ್ತಿದ್ದಾರೆ. ನಗರದ ಪ್ರತಿಷ್ಡಿತ ಕ್ಲಬ್ ಇದಾದ್ದರಿಂದ ಇದರ ಸದಸತ್ವ ಪಡೆಯುವುದೇ ಹೆಮ್ಮೆಯ ವಿಚಾರ,ಇದಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ಭರಿಸಬೇಕು..! ಇಂದಿನ ಕಾಲಕ್ಕೆ ತಕ್ಕಂತೆ ಇದು ಆಧುನಿಕರಣಗೊಂಡಿದ್ದು,ಸಂಪೂರ್ಣ ಹವಾನಿಯಂತ್ರಿತ. ಸುಸಜ್ಜಿತ ಈಜು ಕೊಳ, ವಿವಿಧ ಆಟಗಳಿಗಾಗಿ ಕ್ರೀಡಾಂಗಣ,ಕಾರ್ಯಕ್ರಮ ಮತ್ತು ಸಮಾರಂಭಗಳಿಗಾಗಿ ಸಭಾಂಗಣ,ಉಳಕೊಳ್ಳಲು ವಸತಿಗ್ರಹ ಸೇರಿದಂತೆ ಎಲ್ಲವೂ ಇಲ್ಲಿ ಲಭ್ಯ. ಇಂಗ್ಲೇಡ್, ಅಮೇರಿಕಾ,ದುಬೈ, ಜರ್ಮನಿ ಸೇರಿದಂತೆ ವಿಶ್ವದ 60 ಕ್ಕೂ ಹೆಚ್ಚು ರಾಷ್ಡ್ರಗಳ ಗೌರವ ಸದಸತ್ವ ಇಲ್ಲಿದೆ..!...

ಉಳ್ಳಾಲದ ರಾಣಿ ಅಬ್ಬಕ್ಕ..

Image
ರಾಣಿ ಅಬ್ಬಕ್ಕ ಅಥವಾ ಅಬ್ಬಕ್ಕ ಮಹಾದೇವಿ ತುಳುನಾಡನ್ನು ೧೬ನೆ ಶತಮಾನದ ಉತ್ತರಾರ್ಧದಲ್ಲಿ ಆಳಿದ ವೀರ ಮಹಿಳೆ. ಇವಳ ರಾಜಧಾನಿ ಮೂಡುಬಿದಿರೆ. ರೇವುಪಟ್ಟಣ ಉಲ್ಲಾಳ ಉಪಾಂಗ ರಾಜಧಾನಿಯಾಗಿತ್ತು. ಪೋರ್ಚುಗೀಸರು ಸತತ ನಾಲ್ಕು ದಶಕಗಳ ಕಾಲ ಉಲ್ಲಾಳನ ಮತ್ತು ನೆರೆಯ ಪಟ್ಟಣಗಳನ್ನು ಕಬಳಿಸಲು ಪ್ರಯತ್ನಿಸಿದರಾದರೂ ಪೂರ್ತಿ ಜಯಿಸಲಾಗಲ್ಲಿಲ್ಲಾ. ಕಾರಣ ಒಬ್ಬ ಮಹಿಳೆ – ಅಬ್ಬಕ್ಕ. ವೈರಿಯ ಪ್ರತಿ ದಾಳಿಯನ್ನು ವಿಫಲಗೊಳಿಸದ್ದಲ್ಲದೇ ಪ್ರತಿಯಾಗಿ ಅವರು ನೆಲೆಸಿದ್ದ ಕೋಟೆ, ಯುದ್ಧ ನೌಕಾ ನೆಲೆಗಳ ಮೇಲೇ ಪ್ರತಿಯಾಗಿ ಪ್ರಹಾರ ಮಾಡಿ ಅವರನ್ನು ಕೆಚ್ಚೆದೆಯಿಂದ ಹೋರಾಡಿ ಜಯ ಸಾಧಿಸಿದ್ದವಳು ಅಬ್ಬಕ್ಕ. ಇವಳ ಈ ಸಾಹಸದಿಂದಾಗಿಯೆ ಪೋರ್ಚಿಗೀಯರು ತಮ್ಮ ಅಧಿಕಾರವನ್ನು ದಕ್ಷಿಣ ಭಾರತ ಕರಾವಳಿಯ ಮೇಲೆ ಭದ್ರವಾಗಿ ಸ್ಥಾಪಿಸಲಾಗಲ್ಲಿಲ್ಲಾ. ಇತಿಹಾಸದಲ್ಲೆ ಇಂಥ ವೀರ ಸಾಧನೆ ಮಾಡಿದ ಮತ್ತೊಬ್ಬ ಹೆಣ್ಣು ಕಾಣಸಿಗುವುದು ಅತಿ ವಿರಳ. ಇವಳ ಸಾಧನೆಗಳ ಬಗ್ಗೆ ಪ್ರಾದೇಶಿಕ ಭಾಷಯಲ್ಲಿ ಉಲ್ಲೇಖಿತ ಮೂಲಗಳಿಂದ ಹೆಚ್ಚು ತಿಳಿಯದಿದ್ದರು, ಈಕೆ ತನ್ನ ಜೀವಿತಾ ವಧಿಯಲ್ಲೇ ಅಂತ ರಾಷ್ಟ್ರಿಯ ಪ್ರಸಿಧ್ಧಿಯನ್ನು ಗಳಿಸಿದ್ದ ಳೆಂಬುದು ತಿಳಿದು ಬರುತ್ತದೆ.! ಅರಬ್ ಮತ್ತು ಪೋರ್ಚು ಗೀಸರ ಮೂಲಗಳು ಇವಳ ದಿಟ್ಟ ಪ್ರತಿರೋಧ ಹಾಗು ಇವಳ ಸರಳ ಆಚಾರ, ದೄಢ ವಿಚಾರ, ಸಜ್ಜನಿಕೆಯ ಗುರುತುಗಳಾಗಿ ಹಲವಾರು ಘಟನೆಗಳನ್ನು ವಿವರಿಸಿ ಈಕೆಯನ್ನು ಕೊಂಡಾಡಿದ್ದಾರೆ. ಅಬ್ಬಕ್ಕಳ ಕಾಲ, ಜೀವನ, ಆಡಳಿತಗಳ ಬಗ್ಗೆ ಕ್ಲಿಷ್ಟತೆಗಳಿದ್...