ಉಳ್ಳಾಲದ ರಾಣಿ ಅಬ್ಬಕ್ಕ..


ರಾಣಿ ಅಬ್ಬಕ್ಕ ಅಥವಾ ಅಬ್ಬಕ್ಕ ಮಹಾದೇವಿ ತುಳುನಾಡನ್ನು ೧೬ನೆ ಶತಮಾನದ ಉತ್ತರಾರ್ಧದಲ್ಲಿ ಆಳಿದ ವೀರ ಮಹಿಳೆ. ಇವಳ ರಾಜಧಾನಿ ಮೂಡುಬಿದಿರೆ. ರೇವುಪಟ್ಟಣ ಉಲ್ಲಾಳ ಉಪಾಂಗ ರಾಜಧಾನಿಯಾಗಿತ್ತು. ಪೋರ್ಚುಗೀಸರು ಸತತ ನಾಲ್ಕು ದಶಕಗಳ ಕಾಲ ಉಲ್ಲಾಳನ ಮತ್ತು ನೆರೆಯ ಪಟ್ಟಣಗಳನ್ನು ಕಬಳಿಸಲು ಪ್ರಯತ್ನಿಸಿದರಾದರೂ ಪೂರ್ತಿ ಜಯಿಸಲಾಗಲ್ಲಿಲ್ಲಾ. ಕಾರಣ ಒಬ್ಬ ಮಹಿಳೆ – ಅಬ್ಬಕ್ಕ. ವೈರಿಯ ಪ್ರತಿ ದಾಳಿಯನ್ನು ವಿಫಲಗೊಳಿಸದ್ದಲ್ಲದೇ ಪ್ರತಿಯಾಗಿ ಅವರು ನೆಲೆಸಿದ್ದ ಕೋಟೆ, ಯುದ್ಧ ನೌಕಾ ನೆಲೆಗಳ ಮೇಲೇ ಪ್ರತಿಯಾಗಿ ಪ್ರಹಾರ ಮಾಡಿ ಅವರನ್ನು ಕೆಚ್ಚೆದೆಯಿಂದ ಹೋರಾಡಿ ಜಯ ಸಾಧಿಸಿದ್ದವಳು ಅಬ್ಬಕ್ಕ. ಇವಳ ಈ ಸಾಹಸದಿಂದಾಗಿಯೆ ಪೋರ್ಚಿಗೀಯರು ತಮ್ಮ ಅಧಿಕಾರವನ್ನು ದಕ್ಷಿಣ ಭಾರತ ಕರಾವಳಿಯ ಮೇಲೆ ಭದ್ರವಾಗಿ ಸ್ಥಾಪಿಸಲಾಗಲ್ಲಿಲ್ಲಾ. ಇತಿಹಾಸದಲ್ಲೆ ಇಂಥ ವೀರ ಸಾಧನೆ ಮಾಡಿದ ಮತ್ತೊಬ್ಬ ಹೆಣ್ಣು ಕಾಣಸಿಗುವುದು ಅತಿ ವಿರಳ.ಇವಳ ಸಾಧನೆಗಳ ಬಗ್ಗೆ ಪ್ರಾದೇಶಿಕ ಭಾಷಯಲ್ಲಿ ಉಲ್ಲೇಖಿತ ಮೂಲಗಳಿಂದ ಹೆಚ್ಚು ತಿಳಿಯದಿದ್ದರು, ಈಕೆ ತನ್ನ ಜೀವಿತಾ ವಧಿಯಲ್ಲೇ ಅಂತ ರಾಷ್ಟ್ರಿಯ ಪ್ರಸಿಧ್ಧಿಯನ್ನು ಗಳಿಸಿದ್ದ ಳೆಂಬುದು ತಿಳಿದು ಬರುತ್ತದೆ.! ಅರಬ್ ಮತ್ತು ಪೋರ್ಚು ಗೀಸರ ಮೂಲಗಳು ಇವಳ ದಿಟ್ಟ ಪ್ರತಿರೋಧ ಹಾಗು ಇವಳ ಸರಳ ಆಚಾರ, ದೄಢ ವಿಚಾರ, ಸಜ್ಜನಿಕೆಯ ಗುರುತುಗಳಾಗಿ ಹಲವಾರು ಘಟನೆಗಳನ್ನು ವಿವರಿಸಿ ಈಕೆಯನ್ನು ಕೊಂಡಾಡಿದ್ದಾರೆ. ಅಬ್ಬಕ್ಕಳ ಕಾಲ, ಜೀವನ, ಆಡಳಿತಗಳ ಬಗ್ಗೆ ಕ್ಲಿಷ್ಟತೆಗಳಿದ್ದರೂ ವಿದೇಶಿಯರ ಮೂಲಗಳಿಂದ (ಅವರ ದೃಷ್ಟಿಕೋನದಿಂದ ಲಿಖಿತ) ಹಾಗೂ ಕಥೆ, ಜಾನಪದಗಳಿಂದ (ಅತಿರಂಜಿತ) ಕೆಲವಷ್ಟು ಮಾಹಿತಿಗಳನ್ನು ಕೂಡಿಸಿ ಅವಳ ಜೀವನ ಇತಿಹಾಸವನ್ನು ನಿಖರವಾಗಿ ಅಲ್ಲದಿದ್ದರು ವೈಚಾರಿಕತೆಯಿಂದ ವಿವರಿಸಬಹುದು.
ಅಬ್ಬಕ್ಕಳ ಸಾಹಸ ಜೀವನ
ವಿಜಯನಗರ ಸಾಮ್ರಾಜ್ಯದ ಪ್ರಾಬಲ್ಯ ಕ್ಷಿಣಿಸುತ್ತಿದ್ದಂತೆ ದಕ್ಷಿಣ ಕನ್ನಡದ ಪ್ರಮುಖ ಪಟ್ಟಣಗಳು (ಹೊನ್ನಾವರ, ಭಟ್ಕಳ, ಮಂಗ್ಳೂರು ಇ., ಅಂತರಾಷ್ಟ್ರಿಯ ರೇವುಪಟ್ಟಣಗಳು) ಕೆಳದಿಯ ನಾಯಕರ ಹಿಡಿತಕ್ಕೆ ಸೇರಿತು. ಇದೇ ಸಮಯದಲ್ಲಿ ಪೋರ್ಚುಗೀ ಕಡಲಗಳ್ಳರು ಅರಬ್ಬೀ ಸಮುದ್ರ ಮಾರ್ಗವಾಗಿ ಹೊರಟ ಹಾಗೂ ಬರುವ ವ್ಯಾಪಾರಿ ನೌಕೆಗಳನ್ನು ಕೊಳ್ಳೆ ಹೊಡೆಯಲಾರಂಭಿಸಿದ್ದರು. ಸ್ಪೇನ್ ಮತ್ತು ಪೋರ್ಚುಗಲ್ ಜೊತೆಗೂಡಿ ದಕ್ಷಿಣ ಭಾರತದ ನೌಕಾ ವ್ಯಾಪಾರ ಮಾರ್ಗವನ್ನು ಸಂಪೂರ್ಣ ಹಿಡಿತದಲ್ಲಿಟ್ಟುಕೊಂಡಿದ್ದರು. ಸಮುದ್ರ ಮಾರ್ಗವನ್ನು ಬಳಸಲು ಅನಿಮಿತ ಕಪ್ಪಾ ವಸೂಲಿಯನ್ನು ನಿರ್ದಾಕ್ಷಿಣ್ಯವಾಗಿ ಮಾಡಲಾರಂಭಿಸಿದ್ದರು.(ಇವರೆಡು ದೇಶಗಳೊಗ್ಗೂಡಿ ಅಮೇರಿಕಾ ಖಂಡವನ್ನು ವಿವೇಚನೆಯಿಲ್ಲದ ಸುಲಿಗೆ ಕೊಲೆಗಳಿಂದ ಗೆದ್ದು ಧೀಮಂತರಾಗಿದ್ದರು.)ಅಬ್ಬಕ್ಕಳಿಗೆ ಈ ದಂಧೆಯ ಏಕಸಾಮತ್ಯದಿಂದ ಆಗುತ್ತಿದ್ದ ಆರ್ಥಿಕ ಶೋಷಣೆ ತಿಳಿದು ತೀವ್ರ ವಿರೋಧ ವ್ಯಕ್ತಪಡಿಸಿದಳು. ಮುಂದೆ, ಕೆಳದಿ ನಾಯಕರ ನೆರವಿನಿಂದ ಅವಳು ಮಧ್ಯ-ಪ್ರಾಚ್ಯ ದೇಶಗಳೊಂದಿಗೆ ವ್ಯಾಪಾರವನ್ನು ಕ್ಯಾಲಿಕಟ್-ನ ಬಂದರುಗಳಿಂದ ಪ್ರಾರಂಭಿಸಿದಳು. ಆದರೆ ಪೋರ್ಚುಗೀಸರು ಇವಳ ನೌಕೆಗಳನ್ನು ಮಾರ್ಗ ಮಧ್ಯದಲ್ಲೆ ಸೆರೆ ಹಿಡಿದರು. ಇದರಿಂದ ಕುಪಿತಗೊಂಡ ಅಬ್ಬಕ್ಕ ಪೋರ್ರ್ಚುಗೀಯರ ಮಂಗಳೂರು ಕೋಟೆಯ ಮೇಲೆ ದಾಳಿ ಮಾಡಿದಳು. ಅಲ್ಲಿದ್ದ ಅವರ ಕರ್ಖಾನೆಯನ್ನು ಧ್ವಂಸಗೊಳಿಸಿದಳು. ಇದಕ್ಕೆ ಪ್ರತಿಯಾಗಿ ಉಲ್ಲಾಳದ ಮೇಲೆ ದಾಳಿ ಎಸೆಗಳು ಪೋರ್ಚುಗೀಯರು ಹೊಂಚು ಹಾಕಿದರು. ಒಳ್ಳೆಯ ಕಾಲಾವಕಾಶಕ್ಕಾಗಿ ಕಾದು ಕುಳಿತರು.
ಕೆಳದಿಯ ನಾಯಕ ಮಂಗಳೂರನ್ನು ವಶಪಡಿಸಕೊಳ್ಳಲು ಸೈನ್ಯದೊಂದಿಗೆ ಹೋದಾಗ, ಉಲ್ಲಾಳ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶವು ಅರಕ್ಷಿತವಾಗಿದೆಯೆಂದು ಭಾವಿಸಿ ಪೋರ್ರ್ಚುಗೀಸರು ತಮ್ಮ ನೌಕಾ ಪಡೆಯನ್ನು ಉಲ್ಲಾಳ ಬಂದರನ್ನು ಸುತ್ತುಗಟ್ಟುತ್ತಾರೆ. ಮರುದಿನ ದಾಳಿ ಮಾಡಲು ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆಂದು ಅಬ್ಬಕ್ಕ ವಿಶ್ಲೇಷಿಸುತ್ತಾಳೆ. ಎದುರಿಗಿರುವ ವಿಪತ್ತಿನ ಪರಿಸ್ಥಿಯನ್ನು ಮನಗಾನುತ್ತಾಳೆ.ಅಂದು ಅಮವಾಸ್ಯೆಯ ರಾತ್ರಿಯಾಗಿತ್ತು. ಅಬ್ಬಕ್ಕಾಳು ಅಂದೇ ರಾತ್ರಿ ಹಠಾತ್ ದಾಳಿ ಮಾಡ ಬೇಕೆಂದು ನಿರ್ಧರಿಸಿ ತನ್ನ ಸೇನಾಪಡೆಯ ವೀರ ಮೊಗೇರ್ ಮತ್ತು ಮೋಪ್ಲಾರ್ (ಬೆಸ್ತರರು) ಸೈನಿಕರನ್ನು ನಿರ್ದೇಶಿಸಿ ಕಳುಹಿಸುತ್ತಾಳೆ. ಇವರೆಲ್ಲಾ ಕೆಲವು ಕಿರುನೌಕೆಗಳಲ್ಲಿ ಕುಳಿತು ಪೋರ್ರ್ಚುಗೀಸರ ಯುದ್ಧ ನೌಕೆಗಳನ್ನು ಸಂದೇಹ ಬರದಹಾಗೆ ಸಮೀಪಿಸಿ, ಅಬ್ಬಕ್ಕಳ ಸೂಚನೆಯಂತೆ, ನೂರಾರು ಒಣ ತೆಂಗಿನ ನಾರು ಮತ್ತು ಗರಿಗಳಿಗೆ ಬೆಂಕಿ ಹೊತ್ತಿಸಿ ವೈರಿ ನೌಕೆಗಳ ಮೇಲೆ ಒಂದೇ ಸಮನೆ ಎಸೆಯುತ್ತಾರೆ. ಇದರಿಂದ ನೌಕಾಪಟಗಳಿಗೆ ಬೆಂಕಿ ತಾಗಿ ಪೂರಾ ನೌಕೆಯನ್ನು ಬೆಂಕಿ ಆವರಿಸುತ್ತದೆ. ಪ್ರಾಣ ಉಳಿಸಿಕೊಳ್ಳಲು ಸಮುದ್ರಕ್ಕೆ ಹಾರಿ ತೀರಕ್ಕೆ ಈಜು ಬಂದವರನ್ನು ಅಬ್ಬಕ್ಕಳ ಸೈನ್ಯದಳವು ಕೊಚ್ಚಿ ಕೊಳ್ಳುತ್ತಾabbakkaರೆ. ಪೋರ್ಚುಗೀಯರ ಮೂಲಗಳ ಪ್ರಕಾರ ಅಂದು ಇನ್ನೂರು ಸೈನಿಕರು ಸಾವಿಗೀಡಾಗಿ, ಎರಡು ಯುದ್ಧನೌಕೆಗಳು ಸುಟ್ಟು ತಳ ಸೇರಿದ್ದವು. ಪೋರ್ಚುಗೀಯರು ಭಾರಿ ನಷ್ಟ ಅನುಭವಿಸಿದರು.
ಈ ಹೀನಾಯ ಸೋಲಿನಿಂದ ರೊಚ್ಚಿಗೆದ್ದ ಪೋರ್ಚುಗೀಸರು ಗೋವಾದಿಂದ (ರಾಜಧಾನಿ) ಇನ್ನೂ ದೊಡ್ಡ ಸೈನ್ಯಬಲದಿಂದ ಎರಡನೆ ಬಾರಿ ಉಲ್ಲಾಳನ್ನು ಆಕ್ರಮಿಸುತ್ತಾರೆ. ಈ ಸಲ ಉಲ್ಲಾಳದ ತಂಗು ಪ್ರದೇಶವನ್ನು ಲೂಟಿ ಮಾಡುತ್ತಾರೆ. ಆದರೆ, ಅಬ್ಬಕ್ಕಳು ತನ್ನ ಕುಶಲ ರಾಜತಂತ್ರದಿಂದ ಕ್ಯಾಲಿಕಟ್-ನ ಝಾಮೊರಿನ್, ಅರಬ್-ದ ಮೂರ್-ರು, ಮೊಪ್ಲಾ ಜನಾಂಗ ಮತ್ತು ಕೆಳದಿ ನಾಯಕರೆಲ್ಲರನ್ನು ಒಟ್ಟುಗೂಡಿಸಿ ವೈರಿಗಳಿಗೆ ತಕ್ಕ ವಿರೋಧವನ್ನು ಒಡ್ಡುತ್ತಾಳೆ. ಯುದ್ಧತಂತ್ರವನ್ನು ಸ್ವತಃ ಅಬ್ಬಕ್ಕಳೇ ಮಾಡುತ್ತಾಳೆ. ಇವಳ ಚಾಕಚಕ್ಯತೆಯುಳ್ಳ ಸೇನಾ ನಿಯಂತ್ರಣದಿಂದ ಈ ಬಾರಿಯೂ ಪೋರ್ಚುಗೀಯರ ಮುಖಭಂಗವಾಗುತ್ತದೆ. ಇವಳ ನಿಪುಣ ರಾಜತಂತ್ರಿಕೆ, ಎದೆಗಾರಿಕೆಯ ಹೋರಾಟಗಳು ಜಾನಪದಗಳಾಗಿ ಇಂದಿಗೂ ತುಳುನಾಡಿನ ಜನರು ನೆನೆಯುತ್ತಾರೆ, ಪ್ರಭಾವ ಬೀರುತ್ತಾರೆ.ಕೆಲ ಕಾಲಾನಂತರ, ಯುದ್ಧದಲ್ಲಿ ಸೋತ ಪೋರ್ಚುಗೀಯರು, ಅವರನ್ನು ಹಾಗೂ ಅವರ ಭಾರಿ ನೌಕಾ ಶಕ್ತಿಯನ್ನೂ ಧಿಕ್ಕರಿಸಿ ಅಬ್ಬಕ್ಕಳ ಸಮುದ್ರ ವ್ಯಾಪಾರ ತೀವ್ರಗತಿಯಲ್ಲಿ ಬೆಳೆದುದನ್ನು ಕಂಡು ದಿಗಿಲುಗೊಳ್ಳುತ್ತಾರೆ. ~1568ರಲ್ಲಿ ಮತ್ತೊಮ್ಮೆ ಅವಳ ಮೇಲೆ ಯುದ್ಧ ಸಾರುತ್ತಾರೆ. ಈ ಬಾರಿ ಉಲ್ಲಾಳ ನಗರವನ್ನು ಅತಿಕ್ರಮಿಸಿ ಅರಮನೆಯನ್ನೇ ನುಗ್ಗುತ್ತಾರೆ. ಆದರೆ ಅಬ್ಬಕ್ಕ ಕೋಟೆಯಿಂದ ನುಣುಚಿಕೊಂಡು ಒಂದು ಮಸೀದಿಯಲ್ಲಿ ಆಶ್ರಯ ಪಡೆಯುತ್ತಾಳೆ. ಅದೇ ರಾತ್ರಿ, ಅವಳು ಸುಮಾರು ಇನ್ನೂರು ಸೈನಿಕರನ್ನು ಒಟ್ಟುಗೂಡಿಸಿ ಪೋರ್ಚುಗೀಯರ ಮೇಲೆ ಎಗುರುತ್ತಾಳೆ. ಈ ಕಾಳಗದಲ್ಲಿ ಅಬ್ಬಕ್ಕ ವೈರಿಯ ಸೇನಾಧಿಕಾರಿಯನ್ನು (General Peixoto) ಕೊಲ್ಲಲು ಯಶಸ್ವಿಯಾಗುತ್ತಾಳೆ. ಹಾಗೆ ಕೋಟೆಯೊಳಗಿದ್ದ ಸೈನ್ಯವನ್ನು ವೀರಾವೇಶದಿಂದ ಹೋರಾಡಿ, ಬಡಿದೋಡಿಸಿ, ಅಲ್ಲೇ ನೆಲೆಸಿದ್ದ ಪೋರ್ಚುಗೀ ನೌಕಾ ಸೇನೆಯ ಉನ್ನತ್ತಾಧಿಕಾರಿಯನ್ನೂ (Admiral Mascarenhas) ಕೊಲ್ಲುತ್ತಾಳೆ.ಇವಳ ಧೈರ್ಯದ ಎದುರು ನಿಬ್ಬೆರಗಾಗಿ ಹೋದ ಪೋರ್ಚುಗೀಯರು ಅವಳನ್ನು ತಡೆಗಟ್ಟಲು ೧೫೬೯ರಲ್ಲಿ ಮುಖಾಮುಖಿ ಯುದ್ಧ ಬಿಟ್ಟು ಕಪಟತನ ವಂಚನೆಯಿಂದ ಸದೆ ಬಡಿಯಲು ಮುಂದಾಗುತ್ತಾರೆ. ಆಕೆಯ ಗಂಡನನ್ನು (ಲಕ್ಷಮಪ್ಪಾ ಅರಸ, ಮಂಗಳೂರಿನ ಬಂಗ ರಾಜ) ಅವಳಿಂದ ದೂರ ಮಾಡುತ್ತಾರೆ. ಅವನ ರಾಜ್ಯವನ್ನು ಮೋಸದಿಂದ ಕಬಳಿಸಲು ಆತನ ಸೋದರ ಅಳಿಯನಿಗೆ ಗುಪ್ತವಾಗಿ ನೆರೆವು ನೀಡುತ್ತಾರೆ. ಹಾಗೆಯೇ ಕುಂದಾಪುರವನ್ನು ಲಪಟಾಯಿಸುತ್ತಾರೆ. ಇವರೆಡು ಸೈನ್ಯದ ನೆರವಿನಿಂದ ಮತ್ತೆ ಉಲ್ಲಾಳನ್ನು ಮುತ್ತಿಗೆ ಹಾಕುತ್ತಾರೆ. ಈ ಬಾರಿಯೂ ಅಬ್ಬಕ್ಕ ಧೈರ್ಯದಿಂದ ಕಾದಾಡುತ್ತಾಳೆ. ಆದರೆ ಯುದ್ಧವು ಯಾರ ಪರವಾಗಿಯೂ ನಿರ್ಣಯವಾಗದಾದಾಗ ಶಾಂತಿಯ ಒಡಂಬಡಿಕೆಗೆ ಬರುತ್ತಾರೆ. ಇದರ ಪರಿಣಾಮವಾಗಿ ಅಬ್ಬಕ್ಕಳು ಇಂತಿಷ್ಟು ದೇಣಿಗೆಯನ್ನು ಪೋರ್ಚುಗೀಯರಿಗೆ ಕೊಡಬೇಕೆಂದು ನಿರ್ಧರಿಸುತ್ತಾರೆ.
ಅಬ್ಬಕ್ಕ ಇದನ್ನು ಅನುಸರಿಸುವುದಿಲ್ಲಾ. ಬದಲಾಗಿ ಆಕೆಯು ಅವರ ಮೇಲೆ ಇದರ ಪ್ರತಿಯಾಗಿ ದಂಡೆತ್ತಿ ಹೋಗುತ್ತಾಳೆ. ೧೫೭೦ರಲ್ಲಿ ಆಕೆ ವಿಜಾಪುರದ ಸುಲ್ತಾನ ಮತ್ತು ಕ್ಯಾಲಿಕಟ್-ನ ಝಾಮೊರಿನ್-ರೊಂದಿಗೆ ಜೊತೆಗೂಡಿ ಮಂಗ್ಳೂರಿನಲ್ಲಿ ಹೊಸದಾಗಿ ಕಟ್ಟಿದ ಪೋರ್ಚುಗೀಯರ ಕೋಟೆಯ ಮೇಲೆ ದಾಳಿ ಮಾಡಿ ಅದನ್ನು ನಾಶ ಮಾಡುತ್ತಾಳೆ. ಪೋರ್ಚುಗೀಯರು ಇದರಿಂದ ತಲ್ಲಣಗೊಳ್ಳುತ್ತಾರೆ. ದಿಗ್ಭ್ರಾಂತರಾಗುತ್ತಾರೆ. ಅವಳ ಸತತ ಭೀತಿ ಅವರ ಗುಂಡಿಗೆಯನ್ನೇ ಛಿದ್ರಗೊಳಿಸುತ್ತದೆ.ಆದರೆ ದುರ್ದೈವಶಾತ್ ಮಂಗ್ಳೂರಿನಲ್ಲಿ ಕೋಟೆಯನ್ನು ನಾಶ ಮಾಡಿ ಬರುವಾಗ ದಾರಿ ಮಧ್ಯದಲ್ಲಿ ಕ್ಯಾಲಿಕಟ್-ನಿಂದ ಬಂದ ಸೇನಾದಳದ ಅಧಿಕಾರಿಯನ್ನು ಪೋರ್ಚುಗೀಯ ಸೈನಿಕರು ಕೊಲ್ಲುತ್ತಾರೆ. ಮತ್ತು ಇನ್ನೊಂದಡೆ ಅಬ್ಬಕ್ಕಳ ಗಂಡನನ್ನು ಸೆರೆಯಾಳಗಿಸುತ್ತಾರೆ. ಅವಳಿಗೆ ನೆರೆರಾಜ್ಯದ ಬೆಂಬಲ ಸಿಗದಂತೆ ಚಾಲೂಗಿರಿಯಿಂದ ಅವಳನ್ನು ಸೋಲಿಸುವ ತಂತ್ರವನ್ನು ಹೂಡುತ್ತಾರೆ.೧೫೮೧ರ ಒಂದು ಮುಂಜಾವಿನಲ್ಲಿ ಗೋವಾದ ವೈಸ್ರಾಯಿ Anthony D’Noronha ತನ್ನ ೩೦೦೦ ಜನ ಸೇನಾ ಬಲದಿಂದ ಹಾಗೂ ಅನೇಕ ಯುದ್ಧ ನೌಕೆಗಳೊಂದಿಗೆ ಉಲ್ಲಾಳ ಬಂದರು ಮೇಲೆ ಅಪ್ಪಳಿಸುತ್ತಾನೆ. ಇದನ್ನು ನಿರೀಕ್ಷೆಯೆ ಮಾಡದ ಅಬ್ಬಕ್ಕ ಅಂದು ತನ್ನ ಮನೆದೇವರಾದ ಸೋಮನಾಥೇಶ್ವFinal Battle - Abbakkaರನ ಗುಡಿಯಿಂದ ಮರಳಿ ಬರುತ್ತಿರುತ್ತಾಳೆ. ಆದರೂ ಆಕ್ರಮಣದ ಸುದ್ದಿ ತಿಳಿದೊಡನೆಯೇ ಯುದ್ಧ ಉಡಪನ್ನು ಧರಿಸಿ, ಕುದುರೆ ಏರಿ, ವೈರಿಗಳನ್ನು ಒದ್ದೊಡಿಸಳು ಮುಂದಾಗುತ್ತಾಳೆ. ಈ ಸಲವೂ ಘೋರ ವಿರೋಧವನ್ನು ನೀಡುತ್ತಾಳೆ. “ತಾಯ್ನಾಡನ್ನು ರಕ್ಷಿಸಿ, ವೈರಿಗಳನ್ನು ನೆಲದ ಮೇಲಾಗಲಿ ಸಮುದ್ರದಲ್ಲಾಗಲಿ ಹೋರಾಡಿ ನಮ್ಮ ದಡದಿಂದಾಚೆ ಓಡಿಸಿ” ಹೇಳುತ್ತಾ, ಸೈನ್ಯವನ್ನು ಹುರಿದುಂಬಿಸುತ್ತಾ ಶತ್ರುಪಡೆಯನ್ನು ಎದುರಿಸುತ್ತಾಳೆ.ದುರಾದೄಷ್ಟಕರವೆಂದರೆ ಈ ಯುದ್ಧವೆ ಅಬ್ಬಕ್ಕಳ ಕಡೆಯ ಕದನವಾಯಿತು. ಈ ಯುದ್ಧದಲ್ಲಿ ಅಬ್ಬಕ್ಕಳ ಮೇಲೆ ಗುಂಡಿನ ಮಳೆಯನ್ನೇ ಹಾರಿಸಿದರು. ಗಾಯಗೊಂಡು ಬಿದ್ದ ಇವಳನ್ನು ರಣರಂಗದಿಂದ ದೂರ ತರುತ್ತಾರೆ. ಕೊನೆಯ ಉಸಿರೆಲೆಯುತ್ತಿದ್ದರೂ ತನ್ನ ಸೈನಿಕರಿಗೆ ನಾಡಿನ ಸ್ವಾತಂತ್ರಕ್ಕಾಗಿ ಪ್ರಾಣಭಯವನ್ನೂ ಬಿಟ್ಟು ಹೋರಾಡಿ ಎಂದು ಘರ್ಜಿಸುತ್ತಾ, ಉತ್ತೇಜಿಸುತ್ತಾನೇ ವೀರಮರಣ ಹೊಂದಿದಳು.ಅಬ್ಬಕ್ಕ ರಾಣಿ ಆಳ್ವಿಕೆಯ ಅನೇಕ ಕುರುಹುಗಳು,ಅವಳು ಪ್ರಾರ್ಥನೆ ಸಲ್ಲಿಸುತ್ತಿದ್ದ ಜೈನ ಬಸದಿ,ದೇವಾಲಯಗಳು ಇಂದಿಗೂ ಮಂಗಳೂರಿನ ಉಳ್ಳಾಲದಲ್ಲಿ ಕಾಣಬಹುದು.ಪ್ರತೀ ವರ್ಷ ಅಬ್ಬಕ್ಕ ರಾಣಿ ನೆನಪಿನಲ್ಲಿ ಅಬ್ಬಕ್ಕ ಉತ್ಸವವನ್ನು ಉಳ್ಳಾಲದಲ್ಲಿ ಆಚರಿಸುತ್ತಾರೆ.

Comments

Popular posts from this blog

'Shanthi Cathedral'History of 150 years

Lady Goschen Hospital Mangalore

ಹ್ಯಾಮಿಲ್ಟನ್ ಸರ್ಕಲ್(Hamilton circle)