ಮಂಗಳೂರು ಕ್ಲಬ್..


ಮಂಗಳೂರು ಕ್ಲಬ್ ಎಂದರೆ ಮಂಗಳೂರಿಗೆ ಪರಿಚಯ ಕಡಿಮೆ.ನಗರದ ಜೆಪ್ಪುವಿನ ಪರಿಸರದಲ್ಲಿ ಇರುವ ಈ ಪ್ರಶಾಂತವಾದ ಸ್ಥಳಕ್ಕೆ ಶತಮಾನದ ಇತಿಹಾಸವಿದೆ. ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿ ದಡದಲ್ಲಿರುವ ಮಂಗಳೂರು ಕ್ಲಬನ್ನು 1876 ರಲ್ಲಿ ನಿರ್ಮಾಣ ಮಾಡಲಾಗಿತ್ತು.ಅಂದಿನ ಬ್ರಿಟೀಶ್ ಆಡಳಿತವಿದ್ದ ಕರಾವಳಿಯ ಈ ಭಾಗದಲ್ಲಿ ಇಂಗ್ಲೀಷ್ ಅಧಿಕಾರಿಗಳ ಮೋಜಿನ ತಾಣವಾಗಿತ್ತು.M.James Moss ಇದರ ಮೊದಲ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡಿದ್ದ,ಭಾರತ ಸ್ವಾತಂತ್ರ್ಯಗೊಂಡು 30 ವರ್ಷಗಳ ಬಳಿಕವೂ ಎಂದರೆ 1970 ರ ವರೆಗೂ ಇದನ್ನು ಬ್ರಿಟೀಷರೇ ನಿರ್ವಹಿಸುತ್ತಿದ್ದರು ಎಂಬುದು ಗಮನಾರ್ಹ ವಿಷಯ..! ನಂತರದ ದಿನಗಳಲ್ಲಿ ಇದು ಸ್ಥಳಿಯರ ಆಡಳಿತಕ್ಕೆ ಬಂತು. ಮಂಗಳೂರು ನಗರ ಸೇರಿದಂತೆ ನಾಡಿನ ಹೆಸರಾಂತ ಉದ್ಯಮಿಗಳು ಸೇರಿಕೊಂಡು ಸಮಿತಿ ರಚನೆ ಮಾಡಿ ಇದನ್ನು ನಿರ್ವಹಿಸುತ್ತಿದ್ದಾರೆ. ನಗರದ ಪ್ರತಿಷ್ಡಿತ ಕ್ಲಬ್ ಇದಾದ್ದರಿಂದ ಇದರ ಸದಸತ್ವ ಪಡೆಯುವುದೇ ಹೆಮ್ಮೆಯ ವಿಚಾರ,ಇದಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ಭರಿಸಬೇಕು..!
ಇಂದಿನ ಕಾಲಕ್ಕೆ ತಕ್ಕಂತೆ ಇದು ಆಧುನಿಕರಣಗೊಂಡಿದ್ದು,ಸಂಪೂರ್ಣ ಹವಾನಿಯಂತ್ರಿತ. ಸುಸಜ್ಜಿತ ಈಜು ಕೊಳ, ವಿವಿಧ ಆಟಗಳಿಗಾಗಿ ಕ್ರೀಡಾಂಗಣ,ಕಾರ್ಯಕ್ರಮ ಮತ್ತು ಸಮಾರಂಭಗಳಿಗಾಗಿ ಸಭಾಂಗಣ,ಉಳಕೊಳ್ಳಲು ವಸತಿಗ್ರಹ ಸೇರಿದಂತೆ ಎಲ್ಲವೂ ಇಲ್ಲಿ ಲಭ್ಯ. ಇಂಗ್ಲೇಡ್, ಅಮೇರಿಕಾ,ದುಬೈ, ಜರ್ಮನಿ ಸೇರಿದಂತೆ ವಿಶ್ವದ 60 ಕ್ಕೂ ಹೆಚ್ಚು ರಾಷ್ಡ್ರಗಳ ಗೌರವ ಸದಸತ್ವ ಇಲ್ಲಿದೆ..! ಮಂಗಳೂರಿಗೆ ಸುತ್ತಾಡಲು ಬರುವ ದೂರದ ಪ್ರವಾಸಿಗರು ಇಲ್ಲಿಯೇ ತಮ್ಮ ವಾಸ್ತವ್ಯ ಹೂಡುವುದು ಸ್ವಾಭಾವಿಕ.ಶತಮಾನಗಳ ಇತಿಹಾಸವಿರುವ ಮಂಗಳೂರಿಗೆ ಮಂಗಳೂರು ಕ್ಲಬ್ ಒಂದು ಹೆಮ್ಮಯ ಸಂಕೇತ..

Comments

  1. It's a great effort ! etho vishaya gothijjand. ereg thanks.
    Prakash Shetty, cartoonist

    ReplyDelete

Post a Comment

Popular posts from this blog

'Shanthi Cathedral'History of 150 years

Lady Goschen Hospital Mangalore

ಹ್ಯಾಮಿಲ್ಟನ್ ಸರ್ಕಲ್(Hamilton circle)