ದಕ್ಷಿಣ ಕನ್ನಡ ಸೇರಿದಂತೆ ಭಾರತದಲ್ಲಿ ಬ್ರಿಟೀಷರು ಆಳ್ವಿಕೆ ನಡೆಸಿದ್ದು ಇದೀಗ
ಇತಿಹಾಸ. ಈಗ ಕಾಣುವುದು ಅವರು ಬಿಟ್ಟು ಹೋದ ಪಳೆಯುಳಿಕೆ ಮಾತ್ರ.ನಮ್ಮ ಸಂವಿಧಾನವು
ನಮ್ಮದೇ ಆದ ರೂಪು ರೇಷೆಗಳನ್ನು ಹಾಕಿಕೊಂಡು ಆಡಳಿತ ನಡೆಸುತ್ತಿದೆ.ಆದರೆ ಕೆಲವೊಂದು
ಪದ್ದತಿಗಳು, ನಿಯಮಗಳು ಮಾತ್ರ ಆ ಕಾಲದಿಂದ ಇಂದಿಗೂ ಕ್ರಮಬದ್ದವಾಗಿ ನಡೆಯುತ್ತ
ಬಂದಿವೆ.ಇದಕ್ಕೆ ಸಾಕ್ಷಿ ಕಳೆದ 200 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ
ಕಚೇರಿಯಲ್ಲಿಚಲಾವಣೆಯಲ್ಲಿರುವ 'ಜಮೇದಾರ ಬ್ಯಾಜ್'.1799 ರ ಜುಲೈ 8 ರಂದು ಮೇಜರ್ ಮುನ್ರೋ
ಅವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಜಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
2010 ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 120 ಜಿಲ್ಲಾಧಿಕಾರಿಗಳು ಸೇವೆ
ಸಲ್ಲಿಸಿದ್ದಾರೆ.1816 ರಲ್ಲಿ ಬ್ರಟೀಷ್ ಅಧಿಕಾರಿ ತೋಮಸ್ ಹ್ಯಾರಿಸ್ ಅವರು 5 ನೇ ಜಿಲ್ಲಾ
ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಅವರಿಗೆ ಈ ಬ್ಯಾಜ್ ನ ಐಡಿಯ ಬಂದು
1822 ರಲ್ಲಿ ಆತ ಜಾರಿಗೆ ತಂದೇ ಬಿಟ್ಟ.ಅಂದಿನಿಂದ ಕಲೆಕ್ಟರರ ಜವಾನರಾಗಿ ಕೆಲಸ
ನಿರ್ವಹಿಸುವವರು ಖಡ್ಡಾಯವಾಗಿ ಈ ಬ್ಯಾಜ್ ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದು ಇಂದಿಗೂ
ಚಾಲ್ತಿಯಲ್ಲಿದೆ. ಅಮದು ಜಿಲ್ಲಾಧಿಕಾರಿ ಕರ್ತವ್ಯ ನಿಮಿತ್ತ ಏಲ್ಲೇ ಹೋದರೂ ಈತ ಆತನನ್ನು
ಹಿಂಬಾಲಿಸಬೇಕಿತ್ತು. ಇದೀಗ ಕಾಲ ಬದಲಾಗಿದೆ,ಆಡಳಿತ ಶೈಲಿಯೂ ಬದಲಾಗಿದೆ. ಈ ಕರ್ತವ್ಯ
ನಿರ್ವಹಿಸುವ ಜಮೇದಾರ ಜಿಲ್ಲಾಧಿಕಾರಿ ಜೊತೆ ಹೋಗುವ ಪ್ರಮೇಯ ಕಡಿಮೇಯಾಗಿದೆ. ಆದರೆ
ಹುದ್ದೆ ಮಾತ್ರ ಈಗಲೂ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಾಲ್ತಿಯಲ್ಲಿದೆ. ಈ
ಬ್ಯಾಜ್ ಧರಿಸಲೂ ನಿಯಮಗಳಿವೆ, ಬೇಕಾಬಿಟ್ಟಿ ,ಮನಸೋ ಇಚ್ಚೆ
ಧರಿಸುವಂತಿಲ್ಲ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಇದ್ದರೇ ಮಾತ್ರ ಧರಿಸಬಹುದು.
1976
ರಿಂದ ಪ್ರಸ್ತುತ ಈ ಕರ್ತವ್ಯ ನಿರ್ವಹಿಸಿ ಕೊಂಡು ಸುಧಾಮ ಮಣಿಯಾಣಿ ಮೂಡಬೈಲು ಅವರು.ಇವರು
ಅಂದಿನ ಬಿ.ಎಸ್. ಪಾಟೀಲ ರಿಂದ ಪ್ರಸ್ತುತ ಜಿಲ್ಲಾಧಿಕಾರಿಯಾಗಿರುವ ವಿ.ಪೊನ್ನುರಾಜ್ ತನಕ
20 ಜಿಲ್ಲಾಧಿಕಾರಿಗಳ ಬಳಿ ಸೇವೆ ಸಲ್ಲಿಸಿದ್ದಾರೆ.2010 ಮಧ್ಯ ಬಾಗದಲ್ಲಿ ಸುಧಾಮ ಅವರು ಈ
ಕರ್ತವ್ಯದಿಂದ ನಿವೃತ್ತಿಯಾಗಲಿದ್ದಾರೆ.ನಿರಂತರವಾಗಿ ಕಳೆದ 36 ವರ್ಷಗಳಿಂದ 20
ಜಿಲ್ಲಾಧಿಕಾರಿಗಳಿಗೆ ಸೇವೆ ಸಲ್ಲಿಸಿದ್ದು ಬಹುಷ ಇದೊಂದು ಇತಿಹಾಸದಲ್ಲಿ ದಾಖಲೆಯಾಗಿ
ಉಳಿಯಲಿದೆ..! ಸುಧಾಮ ಅವರು ನಿವೃತ್ತಿ ಆದ ನಂತರ ಈ ಹುದ್ದೆಗೆ ಬರುವ ಹೊಸಬರು ಈ ಬ್ಯಾಜ್
ಧರಿಸಿ ಕರ್ತವ್ಯ ನಿರ್ವಹಿಸಲಿದ್ದು, ಈ ಪರಂಪರೆ ಹೀಗೇ ಮುಂದುವರೆಯಲಿದೆ..!
No comments:
Post a Comment