'ಕಂಬಳ' ಕೋಣಗಳ ಓಟ ಸ್ಪರ್ಧೆ
'ಕಂಬಳ' ಕರಾವಳಿ ಕರ್ನಾಟಕದ ಜನಪದ ಕ್ರೀಡೆಗಳಲ್ಲಿ ಒಂದು. ಪರಶುರಾಮ ಸೃಷ್ಟಿಯೆಂದು ಕರೆಸಿಕೊಳ್ಳುವ ತುಳುನಾಡಿನಲ್ಲಿರುವ ವೈವಿಧ್ಯಮಯ ಆಚರಣೆಗಳಲ್ಲಿ ಜನಪ್ರಿಯತೆಯ ಮಜಲಿನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದೇ ಕಂಬಳ ಸ್ಪರ್ಧೆಗಳು . ಕಂಬಳಗಳಲ್ಲಿ ಹಲವು ರೀತಿಯ ಆಚರಣೆಗಳಿದ್ದು ‘ ಬಾರೆ ಕಂಬಳ ’ ಮತ್ತು ‘ ಪೂಕರೆ ಕಂಬಳ ’ ಗಳಲ್ಲಿ ಕಂಬಳದ ಆಚರಣೆಗಳನ್ನು ಸಾಂಕೇತಿಕವಾಗಿ ಪೂರೈಸಲಾಗುತ್ತದೆ . ‘ ದೇವರ ಕಂಬಳ ’ ಮತ್ತು ‘ ಅರಸು ಕಂಬಳ ’ ಸ್ಪರ್ಧಾತ್ಮಕವಾದುವು . ಅವೇ ಇಂದು ಆಧುನಿಕ ಕಂಬಳದ ಹೆಸರಿನಲ್ಲಿ ಜನಪ್ರಿಯವಾಗಿವೆ . ನವೆಂಬರ್ ನಿಂದ ಮಾರ್ಚ್ ವರೆಗಿನ ಐದು ತಿಂಗಳ ಕಾಲವೆಂದರೆ ಅದು ಕಂಬಳದ ಕಾಲ . ಆ ಸಮಯದಲ್ಲಿ ಉಡುಪಿ , ಕಾರ್ಕಳ , ಹಳೆಯಂಗಡಿ , ಮುಲ್ಕಿ , ಮಂಗಳೂರು , ಕಾಂತಾವರ , ಪುತ್ತೂರು , ಬಂಟ್ವಾಳ , ಮಂಜೇಶ್ವರ ಮೊದಲಾದೆಡೆ ಕಂಬಳ ಓಟಗಳು ವಿಜೃಂಭಣೆಯಿಂದ ಜರುಗುತ್ತವೆ . ಎಲ್ಲ ಕಡೆಗಳಂತೆ ಇಲ್ಲಿ ಸಹಾ ಇಲ್ಲಿನ ಪ್ರಾದೇಶಿಕ ಆಚರಣೆಗಳು ನಾಗರೀಕತೆಯ ಮಾಯಾ ಪರದೆಯ ಅಡಿಯಲ್ಲಿ ಮರೆಯಾಗುತ್ತಿದ್ದರೂ ಕೆಲವಾದರೂ ಜಾನಪದ ಆಚರಣೆಗಳು ತಮ್ಮ ಮಣ್ಣಿನ ಸೊಗಡನ್ನು ಉಳಿಸಿಕೊಂಡಿವೆ . ಅಂತಹ ಜಾನಪದ ಅಚರಣೆಗಳಲ್ಲಿ ಕಂಬಳ ಪ್ರಮುಖವಾದುದು . ಮೊದಲ ಭತ್ತದ ಬೆಳೆಯ ಕೊಯ್ಲು ಮುಗಿದು ಎರಡನೆಯ ಸುಗ್ಗಿ ಬೆಳೆಗೆ ಭೂಮಿ ಹದಮಾಡುವ ಸಮಯದಲ್ಲಿ ...