ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕಾರಣಿಕ ದೇವಾಲಯಗಳಲ್ಲಿ ಮುಂಡ್ಕೂರಿನ
ದುರ್ಗಾಪರಮೇಶ್ವರಿ ದೇವಾಲಯ ಪ್ರವಾಸಿಗರನ್ನು ಬಹುವಾಗಿ ಆಕರ್ಷಿಸುತ್ತಿರುವ
1500 ವರ್ಷಗಳ ಇತಿಹಾಸವಿರುವ ಪುಣ್ಯಕ್ಷೇತ್ರ. ದೇವಾಲಯದ ನಾಲ್ಕು ದಿಕ್ಕುಗಳಲ್ಲಿ ಶಿವನ ದೇವಾಲಯಗಳಿವೆ.
ಮುಂಡಕೂರು
ಎಂದಿದ್ದ ಕ್ಷೇತ್ರದ ಹೆಸರು ಮುಂಡ್ಕೂರು ಎಂದು ಬದಲಾಯಿತು. ಪೂರ್ವಾಭಿಮುಖವಾಗಿ ಇರುವ 8ನೇ
ಶತಮಾನದ ದೇಗುಲದಲ್ಲಿ ದುರ್ಗಾಪರಮೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಲಾಗಿದ್ದು,
ಆಸುಪಾಸಿನ 9 ಹಳ್ಳಿಗಳಲ್ಲಿನ ಅತ್ಯಂತ ಪ್ರಾಚೀನ ಕಾಲದ ದೇವಾಲಯ ಇದಾಗಿದೆ.
ತುಳುನಾಡಿನ ಪಾಡ್ದನ ಎಂದು ಕರೆಯಲ್ಪಡುವ ಜಾನಪದ ಹಾಡಿನಲ್ಲಿ ಬರುವ ಕಾಂತಬಾರೆ -ಬೂದಬಾರೆ
ಶೂರರು ಈ ದೇವಿಯ ಆರಾಧಕರು. ಆ ಕಾಲದಲ್ಲಿ ಕ್ಷೇತ್ರವನ್ನು ಆಳುತ್ತಿದ್ದ ವೀರವರ್ಮ ಮತ್ತು
ಸಹಚರರ ಉಪಟಳವನ್ನು ತಾಳಲಾರದೆ ಇವರು ಅವರನ್ನು ಸಾಯಿಸಿ, ಕ್ಷೇತ್ರದ ಆಡಳಿತವನ್ನು ಎಂಟು
ಬ್ರಾಹ್ಮಣ ಕುಟುಂಬಕ್ಕೆ ಹಸ್ತಾಂತರಿಸಿದರು. ಭಂಗ ಮತ್ತು ಚೋಟ ಜಮೀನ್ದಾರ ಕುಟುಂಬದವರು
ದೇವಾಲಯದ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು ಎನ್ನುವುದು ಪುರಾಣ.
ಕ್ಷೇತ್ರದಲ್ಲಿ ದುರ್ಗಿ ಅಲ್ಲದೆ ಕ್ಷಿಪ್ರಪ್ರಸಾದ ಸ್ವರೂಪಿ ಮಹಾಗಣಪತಿ, ನವಗ್ರಹ, ನಾಗ
ಮುಂತಾದ ದೇವರಿಗೂ ವಿಶೇಷ ಪೂಜೆ ಸಲ್ಲುತ್ತದೆ. ಧೂಮಾವತಿ, ರಕ್ತೇಶ್ವರಿ, ಪಿಲಿಚಂಡಿ,
ವಾರಾಹಿ ಪಂಜುರ್ಲಿ ಮುಂತಾದ ಭೂತಗಳಿಗೂ ಪೂಜೆ ಸಲ್ಲುತ್ತದೆ. ಕುಂಭ, ಕಾರ್ತಿಕ ಮಾಸದಲ್ಲಿ
ಮತ್ತು ಶರವನ್ನವರಾತ್ರಿ ಸಮಯದಲ್ಲಿ ರಥೋತ್ಸವ ಮತ್ತು ದೀಪೋತ್ಸವ ನಡೆಯುತ್ತದೆ. ಮೂರೂ
ಹೊತ್ತು ಪೂಜೆ ಸಲ್ಲಿಸಲಾಗುವ ದೇವಾಲಯಗಳಲ್ಲಿ ಈ ಕ್ಷೇತ್ರವೂ ಒಂದು.
ಹೂವಿನ ಪೂಜೆ,
|
ಮೂಡಬಿದ್ರೆ ಚೌಟರ ರಾಣಿ ದೇವರಿಗೆ ಅರ್ಪಿಸಿದ 500 ವರ್ಷಗಳಷ್ಟು ಪುರಾತನ ಅಪರೂಪದ ಆಭರಣಗಳು |
ದುರ್ಗಾನಮಸ್ಕಾರ, ರಂಗಪೂಜೆ, ತುಲಾಭಾರ, ರಜತೋತ್ಸವ, ಚಂಡಿಕಾ ಹೋಮ ಮುಂತಾದ
ಸೇವೆಗಳು ಕ್ಷೇತ್ರದಲ್ಲಿ ನಡೆಯುತ್ತಿರುತ್ತದೆ. 1978, 1992 ಮತ್ತು 2006ರಲ್ಲಿ
ಬ್ರಹ್ಮಕಲಾಶಿಭಿಷೇಕ ಗರ್ಭಗುಡಿಯಲ್ಲಿ ಕೆಲವೊಂದು ಜೀರ್ಣೋದ್ದಾರ ನಡೆದಿತ್ತು. ಮುಂಡ್ಕೂರು
ದುರ್ಗಿ ಭಾರ್ಗವ ಗೋತ್ರದ ಬ್ರಾಹ್ಮಣರಿಗೆ ಅಲ್ಲದೆ ತುಳುನಾಡಿನ ಬಿಲ್ಲವ, ದೇವಾಡಿಗ,
ಬಂಟ್ಸ್ ಮುಂತಾದವರಿಗೂ ಮನೆ ದೇವರು. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಬಾಂಧವರೂ
ದೇವಾಲಯದಲ್ಲಿ ಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷ.
No comments:
Post a Comment