ಪಡುಪಣಂಬೂರಿನಲ್ಲಿ ಭೋಳಾರ ಭೋಜರಾವ್ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ
ಮಂಗಳೂರಿನಲ್ಲಿ 1930ರ ಎ. 13ರಂದು ಮುಂಜಾನೆ ಉಪ್ಪು ತಯಾರಿಸಲು ಸಿದ್ಧರಾದ ಸತ್ಯಾಗ್ರಹಿಗಳ ಗುಂಪು ಬಂದರು ಪ್ರದೇಶಕ್ಕೆ ಹೊರಟಿತು. ಸತ್ಯಾಗ್ರಹಿಗಳು ಮೆರವಣಿಗೆಯಲ್ಲಿ ಹೋಗುತ್ತಿರುವಾಗ, ಪಿ. ಎಲ್. ಪುಣಿಚಿತ್ತಾಯರು ಬರೆದಿದ್ದ ಗೀತೆಯನ್ನು ಹಾಡುತ್ತಿದ್ದರು: ಉಪ್ಪಿನ ಕದನಕ್ಕೆ ಹೋರಾಡುವ ಜನರೆ ಉಪ್ಪಿಗೆ ಬೇಕಾಗಿ ಹೋರಾಡಿ ಭಟರೆ ಉಪ್ಪಿಗೂ ಗತಿ ಇಲ್ಲ. ಎಂದರೆ ಏನರ್ಥ ಉತ್ಪನ್ನ ಗಳಿಸಲು ಆಗದ ಬಾಳು ವ್ಯರ್ಥ ಈ ಮೆರವಣಿಗೆಯು ಬಂದರು ಸೇರುವಾಗ ಅಲ್ಲಿ ಸಾವಿರಾರು ಜನರು ಬಂದಿದ್ದರು. ಉಪ್ಪು ನೀರನ್ನು ಮೆರವಣಿಗೆಯಲ್ಲಿ ತಂದು ಕಾಂಗ್ರೆಸ್ ಕಚೇರಿಯಲ್ಲಿ ಆ ನೀರನ್ನು ಉಪ್ಪು ತಯಾರಿಸಿದರು. ಮಧ್ಯಾಹ್ನ ಪೊಲೀಸ್ ತಂಡದೊಂದಿಗೆ ಸರ್ಕಲ್ ಇನ್ಸ್‌ಪೆಕ್ಟರ್ ಬಂದು ಅಲ್ಲಿ ತಯಾರಿಸಿದ ಉಪ್ಪನ್ನು ಅದಕ್ಕೆ ಉಪಯೋಗಿಸಿದ ಪಾತ್ರೆಯನ್ನು ಉಳಿಸಿ ಉಳಿದ ಕಟ್ಟಿಗೆಯನ್ನು ಒಯ್ದರು. ಅಂದು ಸಂಜೆ ಕೇಂದ್ರ ಮೈದಾನಿನಲ್ಲಿ ಆರ್. ಕೆ. ಪ್ರಭು ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿತು. ಉಪ್ಪನ್ನು ಏಲಂ ಮಾಡಲು ಆರಂಭಿಸಲಾಯಿತು. ಆಗ ಪೊಲೀಸರು ಬಂದು ಉಪ್ಪನ್ನು ಸೆಳೆದುಕೊಂಡರು. ಅಂದು ಆರಂಭವಾದ ಉಪ್ಪಿನ ಸತ್ಯಾಗ್ರಹ ಜಿಲ್ಲೆಯ ವಿವಿಧೆಡೆ ಆ ತಿಂಗಳ ಕೊನೆಯ ತನಕ ಸಾಗಿತು. ಪಾನ ನಿಷೇಧಕ್ಕೆ ಒತ್ತಾಯಿಸಿ ಜಿಲ್ಲೆಯಾದ್ಯಂತ ಶೇಂದಿ, ಶರಾಬು ಅಂಗಡಿಗಳ ಎದುರು 1930ರಲ್ಲಿ ಪಿಕೆಟಿಂಗ್ ನಡೆಯಿತು. ಮೇ 5ನ್ನು ಮದ್ಯ ನಿಷೇಧ ದಿನವೆಂದು ಆಚರಿಸಲಾಯಿತು. ಆ ದಿನ ಮೆ...