ಹ್ಯಾಮಿಲ್ಟನ್ ಸರ್ಕಲ್(Hamilton circle)
ಕರಾವಳಿಯ ಸುಂದರ ನಗರ ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿ ಹತ್ತಿರ ಇರುವ ಹ್ಯಾಮಿಲ್ಟನ್ ಸರ್ಕಲ್ ಪೂರ್ವ ಮಾಹಿತಿ ಹೆಚ್ಚಿನವರಿಗೆ ಗೊತ್ತಿರಕ್ಕಿಲ್ಲ. ಕರಾವಳಿ ಕರ್ನಾಟಕದ ಪ್ರಮುಖ ಬಂದರು ನಗರ ಮಂಗಳೂರು ಮತ್ತು ದೂರದ ಕೆನಡಾ ದೇಶದ ಪ್ರಮುಖ ಪಟ್ಟಣ ಹ್ಯಾಮಿಲ್ಟನ್ ನಡುವಿನ ಅವಿನಾಭಾವ ಸಂಬಂಧದ ಫಲವೇ ಈ ವ್ರತ್ತ.ಈ ಭಾಂಧಾವ್ಯ ಕುದುರಿದ ಹಿನ್ನೆಲೆ ವಿಶೇಷವಾದುದು.ಸೂಮಾರು 40 ವರ್ಷಗಳ ಹಿಂದೆ ಕೆನಡಾದ ಹ್ಯಾಮಿಲ್ಟನ್ ಮೇಯರ್ ಮಂಗಳೂರಿಗೆ ಆಗಮಿಸಿದ್ದರು,ಆ ಸಂದರ್ಭದಲ್ಲಿ ಇಲ್ಲಿನ ಪರಿಸರ,ಹವಾಮಾನ,ಪ್ರಕ್ರತಿಯ ಸೊಭಗು ಹ್ಯಾಮಿಲ್ಟನ್ ಮಾದರಿಯಲ್ಲೇ ಇರುವದನ್ನು ಕಂಡು ಮಂಗಳೂರು ಮತ್ತು ಹ್ಯಾಮಿಲ್ಟನ್ ನಡುವೆ ಭಾಂಧವ್ಯ ಹೊಂದುವ ಆಸೆ ವ್ಯಕ್ತ ಪಡಿಸಿದ್ದರು. ಈ ಭಾಂಧವ್ಯದ ಫಲವೇ ಈ ವ್ರತ್ತ.