Posts

ಬಿ.ಎಂ. ಇದಿನಬ್ಬ: ಒಂದು ನೆನಪು

Image
ಗಾಂಧಿ ಟೋಪಿ,ಶುಭ್ರ ಖಾದಿ ಬಟ್ಟೆ,ಬಿಳಿ ಗಡ್ಡ, ಕನ್ನಡಕ, ಕಂಚಿನ ಕಂಠ. ಅದರಲ್ಲಿ ಹೊರಹೊಮ್ಮಿದ ಕಯ್ಯರ ಕಿಂಞಣ್ಣ ರೈ ಅವರ ‘‘ಐಕ್ಯವೊಂದೇ ಮಂತ್ರ...’’ ಹಾಡು. ಇಷ್ಟು ವಿವರಿಸಿದರೆ ಸಾಕು, ಅವಿಭಾಜಿತ ದಕ್ಷಿಣ ಕನ್ನಡ ಕರಾವಳಿಯಲ್ಲಿ ಯಾರನ್ನೂ ಕೇಳಿದರು ಹೇಳುತ್ತಾರೆ ‘‘ಅವರು ಇದಿನಬ್ಬ’’. ಬಿ. ಎಂ.ಇದಿನಬ್ಬ ಕನ್ನಡ ನಾಡನ್ನು ಅಗಲಿ ವರ್ಷಗಳೇ ಸಂದಿವೆ. ಅವರ ಕಂಚಿನ ಕಂಠದ ಗಮಕ ಹಾಡುಗಳಿಲ್ಲದೆ ಕರಾವಳಿಯ ವೇದಿಕೆಗಳು ಬಣಗುಟ್ಟುತ್ತಿವೆ. ಇದಿನಬ್ಬರ ಹೆಸರೇ ಸದಾ ಕೋಮು ದಳ್ಳುರಿಯಲ್ಲಿ ಬೆಂದ ಕರಾವಳಿಯ ಕೋಮುಸೌಹಾರ್ದಕ್ಕೆ ಪರ್ಯಾಯ ಪದ. ಬಹುಷ ಸೌಹಾರ್ದದ ಕುರಿತಂತೆ ಮಾತನಾಡಿದ್ದು ಬಹಳಷ್ಟು ಕಡಿಮೆ.ಬದಲಿಗೆ ಅದನ್ನು ಬದುಕಿನಲ್ಲಿ ತೋರಿಸಿಕೊಟ್ಟವರು. ಒಬ್ಬ ಮುಸ್ಲಿಮನಾಗಿದ್ದರೂ ಇದಿನಬ್ಬ ಎಂದಿಗೂ ಕೇವಲ ಮುಸ್ಲಿಮರ ನಾಯಕರಾಗಿರಲಿಲ್ಲ.ಅವರು ಎಂದೆಂದಿಗೂ ಕನ್ನಡದ ಕಟ್ಟಾಳು. ಕನ್ನಡತನ, ಸೌಹಾರ್ದ, ಸಹಕಾರ, ಸರಳತೆ, ನೇರನುಡಿ, ಪ್ರಾಮಾಣಿಕ ಬದುಕು...ಇವು ಇದಿನಬ್ಬ ನಮ್ಮ ನಡುವೆ ಊರಿ ಹೋದ ಹೆಜ್ಜೆಗಳು....ಆ ಹೆಜ್ಜೆಗಳ ಹಿಂದೆ ಹೆಜ್ಜೆಗಳನ್ನಿಟ್ಟು ಸಾಗಿದರೂ ಸಾಕು...ಕರಾವಳಿ ಮಾತ್ರವಲ್ಲ, ಇಡೀ ಕರ್ನಾಟಕವೇ ಸೌಹಾರ್ದದ ಬೀಡಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದಿನಬ್ಬರವರ ಕುಟುಂಬದ ಬಗ್ಗೆ ಮಾಹಿತಿ ಕಲೆ ಹಾಕಿದರೆ, ಇದಿನಬ್ಬರ ತಂದೆ ತೀರಿದಾಗ ಅವರು ಹತ್ತು ವರ್ಷದ ಕೂಸು. ತಾಯಿ ಗರ್ಭವತಿ. ಇದ್ದುದರಲ್ಲಿ ಇದಿನಬ್ಬರೇ ದೊಡ್ಡ ಮಗ.ತಂದೆ ನಿಧನರಾಗುವ ಮೊದಲು ತನ್ನ...

ಮಂಗಳೂರು ಟೈಲ್ಸ್..

Image
ಒಂದು ಕಾಲಕ್ಕೆ ಮಂಗಳೂರು ಹೆಂಚು ಇಲ್ಲಿನ ಜನರ ಜೀವನಾಡಿಯಾಗಿತ್ತು. ಬಡವರು ಮನೆ ಕಟ್ಟಲು ಮುಳಿಹುಲ್ಲನ್ನು ಆಶ್ರಯಿಸುತ್ತಿ ದ್ದರೆ, ಶ್ರೀಮಂತರು ಹೆಂಚನ್ನು ಬಳಸುತ್ತಿದ್ದರು.ಸ್ವಾತಂತ್ರಪೂರ್ವದಲ್ಲೇ ಅವಿಭಜಿತ ದಕ್ಷಿಣ ಕನ್ನಡ ಹೆಂಚು ಉದ್ಯಮಕ್ಕೆ ಹೆಸರುವಾಸಿಯಾಗಿತ್ತು. ಇಲ್ಲಿನ ಹೆಂಚು ಗಳು ‘ಮಂಗಳೂರು ಹೆಂಚು’ ಎಂದೇ ಪ್ರಸಿದ್ಧಿ ಪಡೆದಿತ್ತು. ಬ್ರಿಟಿಷರು ಕೂಡ ಇಲ್ಲಿನ ಹೆಂಚಿಗೆ ತಲೆ ತೂಗಿದ್ದರು. ಯುರೋಪ್, ಆಫ್ರಿಕಾ ಖಂಡ ಗಳಿಗೆ ಹಾಗೂ ದೇಶಾ ದ್ಯಂತ ಇಲ್ಲಿಂದಲೇ ಹೆಂಚುಗಳು ರಫ್ತಾಗುತ್ತಿದ್ದವು. ನೂರಾರು ಕುಟುಂಬಗಳು ಈ ಉದ್ಯಮವನ್ನು ಆಶ್ರ ಯಿಸಿದ್ದವು. ಸಾವಿರಾರು ಕಾರ್ಮಿಕರ ಬದುಕನ್ನು ಇದು ಹಸನುಗೊಳಿಸಿತ್ತು.ಆದರೆ, ಬರಬರುತ್ತಾ ಹೆಂಚಿನ ಮನೆ, ಅಂಗಡಿಗಳು ಕಾಂಕ್ರಿಟ್ ಮಯವಾಗ ತೊಡಗಿತು. ಶ್ರೀಮಂತರು ಮಾತ್ರವಲ್ಲ ಮಧ್ಯಮ ವರ್ಗದ ಜನರೂ ಆರ್‌ಸಿಸಿ ಕಟ್ಟಡ ನಿರ್ಮಾಣ ಶುರುವಿಟ್ಟರು. ಹಾಗಾಗಿ ಇದೀಗ ನಗರ ಮಾತ್ರವಲ್ಲ ಗ್ರಾಮಾಂತರ ಪ್ರದೇಶಗಳಲ್ಲೂ ಆರ್‌ಸಿಸಿ ಮನೆಗಳನ್ನು ಕಾಣಬಹುದು. ಹೆಂಚಿನ ಮನೆ ನಿರ್ಮಾಣಕ್ಕೆ ಮುಂದಾ ದರೆ ಅಂತಹವರನ್ನು ತಾತ್ಸಾರದ ಭಾವನೆ ಯಿಂದ ನೋಡುವವರಿಗೂ ಇಂದಿನ ಕಾಲದಲ್ಲಿ ಕೊರತೆ ಇಲ್ಲ. ಹಾಗಾಗಿ ಈಗ ಎಲ್ಲೆಡೆ ಕಾಂಕ್ರಿಟ್ ಕಟ್ಟಡ ಗಳೇ ನಿರ್ಮಾಣ ವಾಗುತ್ತಿದೆ. ಇದರ ನೇರ ಪರಿಣಾಮ ಹೆಂಚು ಉದ್ಯಮದ ಮೇಲಾಗಿದೆ.ಸ್ವರ್ಣ ಯುಗ ದಲ್ಲಿದ್ದ ಮಂಗ ಳೂರು ಹೆಂಚಿನ ಸ್ಥಿತಿ ಇದೀಗ ಆದೋ ಗತಿಗೆ ಇಳಿಸಿದ್ದು, ಯಾರೂ ಕೇಳುವವರಿಲ್ಲದ ಸ್ಥಿತಿ ನಿರ್ಮ...

'ಮಂಗಳೂರು ಸಮಾಚಾರ " & ಮೊಗ್ಲಿಂಗ್

Image
ಮಾನವನ ಸರ್ವತೋಮುಖ ಬೆಳವಣಿಗೆಯಲ್ಲಿ ಮುದ್ರಣ ಕಲೆ ಮಹತ್ತರ ಪಾತ್ರ ವಹಿಸಿದೆ.ಮೊದಲು ಪುಸ್ತಕಗಳು ನಂತರ ನಿಯತಕಾಲಿಕೆಗಳು ಹಾಗೂ ದಿನಪತ್ರಿಕೆಗಳು ಜ್ಞಾನದ ಪ್ರಸರಣ ಆರಂಭಿಸಿದವು.ಪ್ರತಿ ವರ್ಷ ಜುಲೈ 1 ರಂದು ಕರ್ನಾಟಕದಲ್ಲಿ `ಪತ್ರಿಕಾ ದಿನ' ಆಚರಿಸಲಾಗುತ್ತದೆ.ಇವುಗಳ ಮೂಲ ಮಂಗಳೂರು ಎಂದರೆ ಹೆಚ್ಚಿನವರಿಗೆ ಗೊತ್ತಿರಿಕ್ಕಿಲ್ಲ.ರಾಜ್ಯದಲ್ಲೇ ಮೊಟ್ಟಮೊದಲ ಪತ್ರಿಕೆ ಆರಂಭವಾದದ್ದು ಮಂಗಳೂರಿನಲ್ಲಿ.ಪತ್ರಿಕೊದ್ಯಮಾ ಇಂದು ಸಾಕಷ್ಟು ಬೆಳೆದು ನಿಂತಿದೆ.ಇದು ಬೆಳೆದು ಬಂದ ಹಿನ್ನೆಲೆ ನೋಡುವ ಅಗತ್ಯವಿದೆ. ಜರ್ಮನಿಯ ಜೊಹಾನ್ ಗುಟನ್ಬರ್ಗ 1440 ರಲ್ಲಿ ಎರಕಹೊಯ್ದ ಅಚ್ಚು ಮೊಳೆ ತಯಾರಿಸಿ, ಪವಿತ್ರ ಗ್ರಂಥ `ದಿ ಬೈಬಲ್' ಅನ್ನು ದಪ್ಪನೆಯ ಹಾಳೆಯ ಮೇಲೆ ಮುದ್ರಿಸಿದಾಗ, ಅದೊಂದು ಕ್ರಾಂತಿಕಾರಕ ಆವಿಷ್ಕಾರವಾಗಿತ್ತು. ಮುದ್ರಣ ಜ್ಞಾನದ ದಾಹ ತಣಿಸುವ ಪ್ರಮುಖ ಸೆಲೆಯಾಯಿತು. ನಾಗರಿಕತೆಯ ಬೆಳವಣಿಗೆಯಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದ ಹಲವೇ ಸಾಧನೆಗಳಲ್ಲಿ ಮುದ್ರಣ ಯಂತ್ರ ಸಹ ಒಂದು ಎಂಬ ಸತ್ಯವನ್ನು ಆಧುನಿಕ ಇತಿಹಾಸಕಾರರು ಕೂಡ ಒಪ್ಪಿಕೊಂಡಿದ್ದಾರೆ.ಯೇಸುಕ್ರಿಸ್ತನ ಸಂದೇಶಗಳನ್ನು ಜಗತ್ತಿಗೆ ತಿಳಿಸಬೇಕೆಂಬ ಹಂಬಲದಿಂದ ಯುರೋಪಿನಲ್ಲಿ ಹಲವು ಧರ್ಮಪ್ರಸಾರ ಸಂಸ್ಥೆಗಳು ಹುಟ್ಟಿಕೊಂಡವು. ಜರ್ಮನಿ-ಪ್ರಾನ್ಸ್ ದೇಶಗಳ ಗಡಿಗೆ ಹೊಂದಿಕೊಂಡಿರುವ ಪುಟ್ಟ ಪಟ್ಟಣವಾದ ಬಾಸೆಲ್ ನಲ್ಲಿ ಅಂದಿನ ಜನ ಯುರೋಪಿನಲ್ಲಿನ ಯುದ್ಧಗಳಿಂದ ಬೇಸತ್ತಿದ್ದರು. ದೇವರ ಸೇವೆ ಮಾಡಿ...

ಈ ಜಮೇದಾರ ಬ್ಯಾಜ್ ಗೆ 2 ಶತಮಾನಗಳ ಇತಿಹಾಸ..!!

Image
ದಕ್ಷಿಣ ಕನ್ನಡ ಸೇರಿದಂತೆ ಭಾರತದಲ್ಲಿ ಬ್ರಿಟೀಷರು ಆಳ್ವಿಕೆ ನಡೆಸಿದ್ದು ಇದೀಗ ಇತಿಹಾಸ. ಈಗ ಕಾಣುವುದು ಅವರು ಬಿಟ್ಟು ಹೋದ ಪಳೆಯುಳಿಕೆ ಮಾತ್ರ.ನಮ್ಮ ಸಂವಿಧಾನವು ನಮ್ಮದೇ ಆದ ರೂಪು ರೇಷೆಗಳನ್ನು ಹಾಕಿಕೊಂಡು ಆಡಳಿತ ನಡೆಸುತ್ತಿದೆ.ಆದರೆ ಕೆಲವೊಂದು ಪದ್ದತಿಗಳು, ನಿಯಮಗಳು ಮಾತ್ರ ಆ ಕಾಲದಿಂದ ಇಂದಿಗೂ ಕ್ರಮಬದ್ದವಾಗಿ ನಡೆಯುತ್ತ ಬಂದಿವೆ.ಇದಕ್ಕೆ ಸಾಕ್ಷಿ ಕಳೆದ 200 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿಚಲಾವಣೆಯಲ್ಲಿರುವ 'ಜಮೇದಾರ ಬ್ಯಾಜ್'.1799 ರ ಜುಲೈ 8 ರಂದು ಮೇಜರ್ ಮುನ್ರೋ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಜಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. 2010 ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 120 ಜಿಲ್ಲಾಧಿಕಾರಿಗಳು ಸೇವೆ ಸಲ್ಲಿಸಿದ್ದಾರೆ.1816 ರಲ್ಲಿ ಬ್ರಟೀಷ್ ಅಧಿಕಾರಿ ತೋಮಸ್ ಹ್ಯಾರಿಸ್ ಅವರು 5 ನೇ ಜಿಲ್ಲಾ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಅವರಿಗೆ ಈ ಬ್ಯಾಜ್ ನ ಐಡಿಯ ಬಂದು 1822 ರಲ್ಲಿ ಆತ ಜಾರಿಗೆ ತಂದೇ ಬಿಟ್ಟ.ಅಂದಿನಿಂದ ಕಲೆಕ್ಟರರ ಜವಾನರಾಗಿ ಕೆಲಸ ನಿರ್ವಹಿಸುವವರು ಖಡ್ಡಾಯವಾಗಿ ಈ ಬ್ಯಾಜ್ ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದು ಇಂದಿಗೂ ಚಾಲ್ತಿಯಲ್ಲಿದೆ. ಅಮದು ಜಿಲ್ಲಾಧಿಕಾರಿ ಕರ್ತವ್ಯ ನಿಮಿತ್ತ ಏಲ್ಲೇ ಹೋದರೂ ಈತ ಆತನನ್ನು ಹಿಂಬಾಲಿಸಬೇಕಿತ್ತು. ಇದೀಗ ಕಾಲ ಬದಲಾಗಿದೆ,ಆಡಳಿತ ಶೈಲಿಯೂ ಬದಲಾಗಿದೆ. ಈ ಕರ್ತವ್ಯ ನಿರ್ವಹಿಸುವ ಜಮೇದಾರ ಜಿಲ...

ಪರಶುರಾಮ ಸೃಷ್ಟಿ ಮಂಗಳೂರು...

Image
'ಮಂಗಳೂರು' ಹೆಸರೇ ಸೂಚಿಸುವಂತೆ ಮಂಗಳಾ ದೇವಿಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ.ನೆರೆಯ ಕೇರಳಿಗರಿಗೆ ಇಂದಿಗೂ ಇದು ಮಂಗಳಾಪುರ.ಇದರ ಹಿನ್ನೆಲೆ ಗಮನಿಸಿದರೆ ಇದು ಹೌದು ಕೂಡ.ಸ್ಥಳೀಯ ದೇವತೆಯಾದ ಮಂಗಳಾ ದೇವಿಯಿಂದ ಮಂಗಳೂರು ತನ್ನ ಹೆಸರನ್ನು ಪಡೆದುಕೊಂಡಿದೆ.ಮತ್ಸ್ಯೇಂದ್ರ ನಾಥನೆಂಬ ನಾಥ್ ಪಂಥದ ಸಂತ, ಪೆರುಮಳಾದೇವಿ ಎಂಬ ಕೇರಳದ ರಾಜಕುಮಾರಿಯ ಜೊತೆ ಇಲ್ಲಿಗೆ ಬಂದಿದ್ದ. ಅವನು ರಾಜಕುಮಾರಿಯನ್ನು ತನ್ನ ಪಂಥಕ್ಕೆ ಪರಿವರ್ತಿಸಿಕೊಂಡು "ಮಂಗಳಾದೇವಿ" ಎಂದು ಮರುನಾಮಕರಣ ಮಾಡಿದನು. ಸ್ವಲ್ಪ ಸಮಯದ ಅನಾರೋಗ್ಯದಿಂದ ಮಂಗಳಾದೇವಿಯು ನಿಧನ ಹೊಂದಿದ್ದರಿಂದ ಅವರು ತಮ್ಮ ಪ್ರಯಾಣವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವಳ ಹೆಸರಿನಲ್ಲಿ ಬೋಳಾರದಲ್ಲಿ ಒಂದು ದೇವಸ್ಥಾನವನ್ನು ನಿರ್ಮಿಸಲಾಯಿತು.ಇದುವೇ ಇತಿಹಾಸ ಪ್ರಸಿದ್ದ ಮಂಗಳಾ ದೇವಿ ದೇವಸ್ಥಾನ. ಅದು ನಂತರ ಕ್ರಿ.ಶ.968 ರಲ್ಲಿ ಅಲೂಪ ದೊರೆ ಕುಂದ ವರ್ಮನಿಂದ ಜೀರ್ಣೋ ದ್ಧಾರಕ್ಕೆ ಒಳಪಟ್ಟಿತು.ಈ ನಗರದ ಹಲವು ಪುರಾತನ ಉಲ್ಲೇಖಗಳಲ್ಲಿ ಒಂದನ್ನು ಪಾಂಡ್ಯ ರಾಜ ಚೆಟ್ಟಿಯನ್ ನೀಡಿದ್ದಾನೆ. ಅವನು ಕ್ರಿ.ಶ.719 ರಲ್ಲಿ ಇದನ್ನು ಮಂಗಲಾಪುರಂ ಎಂದು ಕರೆದಿದ್ದ. 11 ನೇ ಶತಮಾನದ ಅರಬ್ಬಿ ಪ್ರಯಾಣಿಕ ಇಬ್ನ ಬತೂತ ಮಂಗಳೂರನ್ನು ಮಂಜರೂರ್ ಎಂದು ಉಲ್ಲೇಖಿಸಿದ್ದಾನೆ.ಅತೀ ಸಂಪತ್ಭರಿತ ಪ್ರದೇಶವಾದ ಇದು ಕದಂಬರು, ಆಳುಪರು,ವಿಜಯನಗರದ ಅರಸರು,ಹೈದರಾಲಿ-ಟಿಪ್ಪು ಸುಲ್ತಾನರು ಆಳ್ವಿಕೆಯಲ್ಲಿತ್ತು....

ಮಂಗಳೂರಿನ ಹಂಪನಕಟ್ಟಾ ಸರ್ಕಾರಿ ಕಾಲೇಜ್

Image
ಮಂಗಳೂರು ಕೇಂದ್ರವಾಗಿರುವ ಈ ಶೈಕ್ಷಣಿಕ ಇತಿಹಾಸದಲ್ಲಿ ಈ ಕೆಂಪು ಕಲ್ಲಿನ ಸರ್ಕಾರಿ ಕಾಲೇಜು ತನ್ನದೇ ಆದ ಇತಿಹಾಸ ಮತ್ತು ಮಹತ್ವವನ್ನು ಪಡೆದಿದೆ. ನಗರದ ಹೃದಯ ಭಾಗದಲ್ಲಿ ಸುಮಾರು 8 ಎಕರೆ ಪ್ರದೇಶದಲ್ಲಿ ಹರಡಿರುವ ಈ ಕಾಲೇಜಿನಲ್ಲಿ ಮೂರು ಪಾರಂಪರಿಕ ಕಟ್ಟಡಗಳಿವೆ. ಆಡಳಿತ ಕಚೇರಿ, ರವಿಂದ್ರ ಕಲಾಭವನ, ಹಾಗೂ ಕಾಮರ್ಸ್ ಬ್ಲಾಕ್ ಗಳನ್ನು ಇದು ಹೊಂದಿದೆ.  ಅದ್ಬುತ ವಾಸ್ತು ಹಾಗೂ ಇಂಡೋ ಸಾರಸೆನಿಕ್ ಶೈಲಿಯಲ್ಲಿ ಕೇವಲ ಕೆಂಪುಮುರ ಕಲ್ಲು  ಹಾಗೂ ಮರಳು ಹಾಗೂ ಮಂಗಳೂರು ಹೆಂಚು ಬಳಸಿ ಕಟ್ಟಲಾದ ಈ  ಕಟ್ಟಡಗಳು ಶತಮಾನವನ್ನು ದಾಟಿವೆ. ಸಾಹಿತಿ ಮತ್ತು ಸ್ವಾತಂತ್ರ ಹೋರಾಟಗಾರರಾದ ಪಂಜೆ ಮಂಗೇಶ್ ರಾವ್, ಮಂಜೇಶ್ವರ ಗೋವಿಂದ ಪೈ, ಬೆನೆಗಲ್ ರಾಂ ರಾವ್, ಡಾ. ಶಿವರಾಂ ಕಾರಂತ್,ಡಾ. ಎ.ಬಿ. ಶೆಟ್ಟಿ, ಕಾರ್ನಾಡ್ ಸದಾಶಿವ ರಾವ್, ಡಾ.ಯು.ಪಿ ಮಲ್ಯ, ಕುದ್ಮುಲ್ ರಂಗ ರಾವ್, ಸೂರ್ಯ ನಾರಾಯಣ್ ಅಡಿಗ, ಎ.ಬಿ. ಶೆಟ್ಟಿ, ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಎ.ಬಿ. ರಾಮ್ ರಾವ್, ಕೆನರಾ ಬ್ಯಾಂಕಿನ ಸ್ಥಾಪಕ ಅಮ್ಮೆಂಬಳ ಸುಬ್ಬರಾವ್, ಹಿರಿಯ ಸಹಕಾರಿ ಮೊಳಹಳ್ಲಿ ಶಿವರಾವ್ , ಕಮಲಾ ದೇವಿ ಚಟ್ಟೋಪಾಧ್ಯಾಯ, ಅನೇಕ ಮಹಾನ್ ಸಾಧಕರು ಈ ಶಾಲೆಯಲ್ಲಿ ಕಲಿತವರು.! ಈಗಿನ ಡಾ. ವೀರಪ್ಪ ಮೊಯಿಲಿ, ಪಿ.ಎಂ. ಸಾಯಿದ್, ಡಿ.ಕೆ. ಚೌಟ, ಸಂತೋಷ್ ಕುಮಾರ್ ಗುಲ್ವಾಡಿ, ಎಂ.ವಿ. ಕಾಮತ್, ಜಸ್ಟಿಸ್ ಜಗನ್ನಾಥ ಶೆಟ್ಟಿ, ಬಿ.ರಮನಾಥ ರೈ, ಹೀಗೇ ಅನೇಕ ಮಹನೀಯರು ಇಲ್ಲಿನ ಹಳೇ ವಿದ್ಯಾರ್ಥಿ...

ಮಂಗಳೂರಿನಲ್ಲಿ ಪೋಲಿಸ್ ಇತಿಹಾಸ..

Image
ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಪೋಲಿಸರ ಪಾತ್ರ ಮಹತ್ವದ್ದು,ಇಂದಿನ ಸಂಘರ್ಷಮಯ ವಾತಾವರಣದ ಸಮಾಜದಲ್ಲಿ ಪೋಲಿಸರಿಲ್ಲದ ಸಾಮಾಜ ಊಹೆಗೂ ನಿಲುಕದ್ದು. ಆರಂಭದಲ್ಲಿ ಯಾವುದಾರೊಂದು ಗಲಭೆ, ಆಶಾಂತಿ ಸಾಮಾಜದಲ್ಲಿ ಉಂಟಾದಗ  ಆ ಸಮಾಜದ ಮುಖಂಡ ತಮ್ಮ ಯೋಧರನ್ನೇ ಬಳಸುತ್ತಿದ್ದ. ಇಟಲಿಯ ರೋಮ್ ರಾಜ್ಯದ ಚಕ್ರವರ್ತಿ ಸೀಸರ್ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಪೋಲಿಸ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದ ಎಂದು ಇತಿಹಾಸ ಹೇಳುತ್ತಿದೆ. ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದೇ ಇದರ ಕೆಲಸವಾಗಿತ್ತು. ಈ ವ್ಯವಸ್ಥೆ ಸುಮಾರು 300 ವರ್ಷಗಳ ವರೆಗೆ ಹಾಗೇ ಮುಂದು ವರೆದಿತ್ತು. ಸುಮಾರು 7 ನೇ ಶತಮಾನದಲ್ಲಿ ಭದ್ರತೆಗಾಗಿ ಪೋಲಿಸ್ ವ್ಯವಸ್ಥೆ ಬೇಕೆಂಬ ಆಲೋಚನೆ ಮೂಡಿಬಂತು. ಈ ಪೋಲಿಸ್ ಪಡೆ ಕೇವಲ ರಾಜಾಜ್ಣೆಯನ್ನು ಪಾಲಿಸುವುದಕಿಂತ ಜನತೆ ಮತ್ತು ನಾಡಿನ  ಶಾಸನವನ್ನು ಕಾಪಾಡಬೇಕೆಂಬ ಻ಗತ್ಯ ಭಾವನೆ ಜನರಲ್ಲಿ ಮೂಡಿತು. ಇದೇ ವಿಚಾರ ಆಮೇರಿಕಾ ಮತ್ತು ಬ್ರಿಟನ್ ದೇಶಗಳಿಗೂ ಹಬ್ಬಿ ಪೋಲಿಸ್ ವ್ಯವಸ್ಥೆ ಜಾರಿಗೆ ಬಂತು. ಇಂಗ್ಲೀಷರು ತಮ್ಮ ರಕ್ಷಣೆಗಾಗಿ ಈ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರು.ಅವರದೇ ಆಡಳಿತವಿದ್ದ ಭಾರತ ದೇಶದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯವರು1792 ಡಿಸೆಂಬರ್ 7 ರಂದು ಈ ವ್ಯವಸ್ಥೆಯನ್ನು ಜಾರಿಗೆ ತಂದರು.1861 ರಲ್ಲಿ ಪೋಲಿಸ್ ಕಾಯಿದೆ ಜಾರಿಗೆ ಬಂತು. ಆದರೆ ಅಂದಿನಿಂದ ಇಂದಿನವರೆಗೆ ಪೋಲಿಸ್ ಸಮವಸ್ತ್ರದಲ್ಲಿ ಹಲವಾರು ಬದಲಾವಣೆಗಳಾಗಿವೆ...