Posts

ಪಾಣೆ ಮಂಗಳೂರು ಸೇತುವೆ

Image
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48 ರ ನೇತ್ರಾವತಿ ನದಿಗೆ ಹಾಕಲಾದ ಪಾಣೆಮಂಗಳೂರು ಸೇತುವೆ ಇತಿಹಾಸ ಉಳ್ಳದ್ದು.   ದಿ ಹಾರ್ಸ್ ವೇ ಎಂಬ ಬ್ರಿಟಿಷ್ ಕಂಪೆನಿ ಈ  ಸೇತುವೆಯನ್ನು ನಿರ್ಮಾಣ ಮಾಡಿತ್ತು. 1914 ರಲ್ಲಿ ಇದರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು 1918 ರಲ್ಲಿ ಪೂರ್ಣಗೊಂಡಿತ್ತು.  ಭಾರತದಲ್ಲಿ ಉಕ್ಕು ಉತ್ಪಾದನೆ ಇಲ್ಲದ ಕಾರಣ ಇದಕ್ಕೆ ಬಳಸಿದ ಉಕ್ಕನ್ನು  ಇಂಗ್ಲೇಡಿನಿಂದ ಆಮದು ಮಾಡಲಾಗಿತ್ತು. ಸನಿಹದಲ್ಲೇ ಹೊಸ ಸೇತುವೆ ನಿರ್ಮಾಣ ಮಾಡಿದ್ದರಿಂದ 2002 ರಲ್ಲಿ ಈ ಸೇತುವೆ ಸಂಚಾರದಿಂದ ಮುಕ್ತವಾಗಿತ್ತು. ಇವತ್ತಿಗೂ ಗಟ್ಟಿಮುಟ್ಟಾಗಿರುವ ಸೇತುವೆಯ ಕಬ್ಬಿಣ ಕರಾವಳಿಯ ಬಿಸಿಲು, ಮಳೆ-ಗಾಳಿಗೆ ಮೈಯೊಡ್ಡಿದ್ದರೂ ತುಕ್ಕು ಹಿಡಿಯದೆ ಇರುವುದು ವಿಶೇಷವೇ ಸರಿ. ಒಂದು ಕಾಲದಲ್ಲಿ ಐತಿಹಾಸಿಕ ನಾಡಾಗಿ ಪ್ರಸಿದ್ದಿ ಪಡೆದುಕೊಂಡಿದ್ದ ಪಾಣೆಮಂಗಳೂರು ಆ ಬಳಿಕ ಇಲ್ಲಿನ ಬ್ರಿಟಿಷರ ಕಾಲದ ಹಳೆಯ ನೇತ್ರಾವತಿ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡ ಬಳಿಕ ಈ ಸೇತುವೆ ಮೇಲಿಂದ ಘನ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಇದರಿಂದಾಗಿ ಸಾರಿಗೆ ವಾಹನಗಳು ಸೇರಿದಂತೆ ಘನ ವಾಹನಗಳು ಪಾಣೆಮಂಗಳೂರು ಪೇಟೆಯೊಳಗೆ ಸಂಚರಿಸದೆ ರಾಷ್ಟ್ರೀಯ ಹೆದ್ದಾರಿ ಬಳಸಿ ಸಂಚರಿಸಲು ಪ್ರಾರಂಭಿಸಿತು. ಇದರಿಂದಾಗಿ ಪರ ಊರಿನ ಜನತೆ, ಚಿಲ್ಲರೆ ವ್ಯಾಪಾರಿಗಳು ಪಾಣೆಮಂಗಳೂರು  ಬರು ಬದಲು  ಬಿ ಸಿ ರೋಡು, ಬಂಟ್...

'ಕಂಬಳ' ಕೋಣಗಳ ಓಟ ಸ್ಪರ್ಧೆ

Image
'ಕಂಬಳ' ಕರಾವಳಿ ಕರ್ನಾಟಕದ ಜನಪದ ಕ್ರೀಡೆಗಳಲ್ಲಿ ಒಂದು. ಪರಶುರಾಮ ಸೃಷ್ಟಿಯೆಂದು ಕರೆಸಿಕೊಳ್ಳುವ ತುಳುನಾಡಿನಲ್ಲಿರುವ ವೈವಿಧ್ಯಮಯ ಆಚರಣೆಗಳಲ್ಲಿ ಜನಪ್ರಿಯತೆಯ ಮಜಲಿನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದೇ ಕಂಬಳ ಸ್ಪರ್ಧೆಗಳು . ಕಂಬಳಗಳಲ್ಲಿ ಹಲವು ರೀತಿಯ ಆಚರಣೆಗಳಿದ್ದು ‘ ಬಾರೆ ಕಂಬಳ ’ ಮತ್ತು ‘ ಪೂಕರೆ ಕಂಬಳ ’ ಗಳಲ್ಲಿ ಕಂಬಳದ ಆಚರಣೆಗಳನ್ನು ಸಾಂಕೇತಿಕವಾಗಿ ಪೂರೈಸಲಾಗುತ್ತದೆ . ‘ ದೇವರ ಕಂಬಳ ’ ಮತ್ತು ‘ ಅರಸು ಕಂಬಳ ’ ಸ್ಪರ್ಧಾತ್ಮಕವಾದುವು . ಅವೇ ಇಂದು ಆಧುನಿಕ ಕಂಬಳದ ಹೆಸರಿನಲ್ಲಿ ಜನಪ್ರಿಯವಾಗಿವೆ . ನವೆಂಬರ್ ‌ ನಿಂದ ಮಾರ್ಚ್ ‌ ವರೆಗಿನ ಐದು ತಿಂಗಳ ಕಾಲವೆಂದರೆ ಅದು ಕಂಬಳದ ಕಾಲ . ಆ ಸಮಯದಲ್ಲಿ ಉಡುಪಿ , ಕಾರ್ಕಳ , ಹಳೆಯಂಗಡಿ , ಮುಲ್ಕಿ , ಮಂಗಳೂರು , ಕಾಂತಾವರ , ಪುತ್ತೂರು , ಬಂಟ್ವಾಳ , ಮಂಜೇಶ್ವರ ಮೊದಲಾದೆಡೆ ಕಂಬಳ ಓಟಗಳು ವಿಜೃಂಭಣೆಯಿಂದ ಜರುಗುತ್ತವೆ .   ಎಲ್ಲ ಕಡೆಗಳಂತೆ ಇಲ್ಲಿ ಸಹಾ ಇಲ್ಲಿನ ಪ್ರಾದೇಶಿಕ ಆಚರಣೆಗಳು ನಾಗರೀಕತೆಯ ಮಾಯಾ ಪರದೆಯ ಅಡಿಯಲ್ಲಿ ಮರೆಯಾಗುತ್ತಿದ್ದರೂ ಕೆಲವಾದರೂ ಜಾನಪದ ಆಚರಣೆಗಳು ತಮ್ಮ ಮಣ್ಣಿನ ಸೊಗಡನ್ನು ಉಳಿಸಿಕೊಂಡಿವೆ . ಅಂತಹ ಜಾನಪದ ಅಚರಣೆಗಳಲ್ಲಿ ಕಂಬಳ ಪ್ರಮುಖವಾದುದು . ಮೊದಲ ಭತ್ತದ ಬೆಳೆಯ ಕೊಯ್ಲು ಮುಗಿದು ಎರಡನೆಯ ಸುಗ್ಗಿ ಬೆಳೆಗೆ ಭೂಮಿ ಹದಮಾಡುವ ಸಮಯದಲ್ಲಿ ...

ಸಂತ ಅಲೋಶಿಯಸ್‌ ಚ್ಯಾಪಲ್‌

Image
ಮಂಗಳೂರು ನಗರದ ಅತೀ ಎತ್ತರ ಪ್ರದೇಶದಲ್ಲಿ ಸ್ಥಾಪನೆಗೊಂಡ ಸಂತ ಅಲೋಸಿಯಸ್‌ ಚ್ಯಾಪಲ್‌  ಪ್ರವಾಸಿಗರ ನೆಚ್ಚಿನ ಕೆಂದ್ರ. ಪ್ರತೀ ವರ್ಷ ದೇಶ-ವಿದೇಶಗಳಿಂದ ಅಸಂಖ್ಯಾತ ಪ್ರವಾಸಿಗರು ಇಲ್ಲಿ ಭೇಟಿ ನೀಡುತ್ತಾರೆ. ಇದು ಮಂಗಳೂರಿನ ಹಳೆಯ ಮತ್ತು ಸುಂದರ ಚರ್ಚಗಳಲ್ಲಿ ಒಂದು. ಚರ್ಚ್‌ನ ಒಳಗೋಡೆ ಮತ್ತು ಮೇಲ್ಛಾವಣಿಯ ಮೇಲೆ ಬಿಡಿಸಲಾಗಿರುವ ವರ್ಣ ಚಿತ್ರಗಳು ಅತ್ಯಾಕರ್ಷಕವಾಗಿದ್ದು ಈ ಚರ್ಚ್‌ನ್ನು ಇನ್ನಷ್ಟು ಜನಪ್ರಿಯಗೊಳಿಸಿವೆ. ಇಟಲಿಯ ಕಲಾವಿದ ಅಂಟನಿ ಮೊಸೆನಿ ಸೃಷ್ಟಿಸಿದ ಈ ಕಲಾ ಚಿತ್ರಗಳು ಏಸುಕ್ರಿಸ್ತನ ಜೀವನ ಕಾಲದ ಪ್ರಮುಖ ಘಟನೆಗಳನ್ನು ಬಿಂಬಿಸುತ್ತವೆ. ಇದು ಇಲ್ಲಿ ಹೊರತು ಪಡಿಸಿದರೆ ರೋಮ್ ನ ಸಂತ ಪೀಟರ್  ಬಾಸಿಲಿಕಾ ದಲ್ಲಿ ಮಾತ್ರ ಕಾಣಬಹುದು. ಆದ್ದರಿಂದ ಮೊಸೆನಿ ಬಗ್ಗೆ ಕೆಲವು ವಿವರಗಳನ್ನು ನೀಡಲೇ ಬೇಕಿದೆ. ಅತ್ಯಂತ ಕಡಿಮೆ ಇಂಗ್ಲಿಷ್ ಬರುತ್ತಿದ್ದ ಇಟಲಿ ದೇಶದ ಅವನು, ಗೌರವಾನ್ವಿತ ಜೆಸುಯಿಟ್ ಪಾದ್ರಿಗಳ ಜೊತೆ ಬಾಳುತ್ತಿದ್ದ ಒಬ್ಬ ಬ್ರದರ್ ಮಾತ್ರ ಆಗಿದ್ದ. ಕಡಲು ದಾಟಿ ಇಲ್ಲಿಗೆ ಬಂದಿದ್ದ. ಅವನು ನಗುವುದು ಕಡಿಮೆಯಾದರೂ, ಮುಖದಲ್ಲಿ ಅದನ್ನು ಒಮ್ಮೆ ಕಂಡರೆ, ಮರೆಯಲು ಸಾಧ್ಯವಿಲ್ಲದಂತೆ ಮೂಡುತ್ತಿತ್ತು. ಹಣೆಯು ಬೆಳೆದು, ಕೂದಲು ಹಿಂಜರಿದು ಮುಖ ಅಗಲವಾಗಿತ್ತು. ತುಳುನಾಡಿನ ಗುಡ್ಡವೊಂದರ ತುದಿಯ ಕ್ರಿಸ್ತ ಪ್ರಾರ್ಥನಾ ಮಂದಿರದ ಗೋಡೆಗಳಲ್ಲಿ ಹಗಲುಪೂರ್ತಿ ಅವನು ಚಿತ್ರಗಳನ್ನು ಮೂಡಿಸುತ್ತಿದ್ದ. ಹತ್ತಿರದಲ್ಲಿ ಕಾಣುತ್ತಿದ್ದ...

ದುರ್ಗಾಪರಮೇಶ್ವರಿ ದೇವಾಲಯ ಮುಂಡ್ಕೂರು

Image
ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕಾರಣಿಕ ದೇವಾಲಯಗಳಲ್ಲಿ ಮುಂಡ್ಕೂರಿನ ದುರ್ಗಾಪರಮೇಶ್ವರಿ ದೇವಾಲಯ ಪ್ರವಾಸಿಗರನ್ನು ಬಹುವಾಗಿ ಆಕರ್ಷಿಸುತ್ತಿರುವ 1500 ವರ್ಷಗಳ ಇತಿಹಾಸವಿರುವ ಪುಣ್ಯಕ್ಷೇತ್ರ. ದೇವಾಲಯದ ನಾಲ್ಕು ದಿಕ್ಕುಗಳಲ್ಲಿ ಶಿವನ ದೇವಾಲಯಗಳಿವೆ. ಮುಂಡಕೂರು ಎಂದಿದ್ದ ಕ್ಷೇತ್ರದ ಹೆಸರು ಮುಂಡ್ಕೂರು ಎಂದು ಬದಲಾಯಿತು. ಪೂರ್ವಾಭಿಮುಖವಾಗಿ ಇರುವ 8ನೇ ಶತಮಾನದ ದೇಗುಲದಲ್ಲಿ ದುರ್ಗಾಪರಮೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಆಸುಪಾಸಿನ 9 ಹಳ್ಳಿಗಳಲ್ಲಿನ ಅತ್ಯಂತ ಪ್ರಾಚೀನ ಕಾಲದ ದೇವಾಲಯ ಇದಾಗಿದೆ. ತುಳುನಾಡಿನ ಪಾಡ್ದನ ಎಂದು ಕರೆಯಲ್ಪಡುವ ಜಾನಪದ ಹಾಡಿನಲ್ಲಿ ಬರುವ ಕಾಂತಬಾರೆ -ಬೂದಬಾರೆ ಶೂರರು ಈ ದೇವಿಯ ಆರಾಧಕರು. ಆ ಕಾಲದಲ್ಲಿ ಕ್ಷೇತ್ರವನ್ನು ಆಳುತ್ತಿದ್ದ ವೀರವರ್ಮ ಮತ್ತು ಸಹಚರರ ಉಪಟಳವನ್ನು ತಾಳಲಾರದೆ ಇವರು ಅವರನ್ನು ಸಾಯಿಸಿ, ಕ್ಷೇತ್ರದ ಆಡಳಿತವನ್ನು ಎಂಟು ಬ್ರಾಹ್ಮಣ ಕುಟುಂಬಕ್ಕೆ ಹಸ್ತಾಂತರಿಸಿದರು. ಭಂಗ ಮತ್ತು ಚೋಟ ಜಮೀನ್ದಾರ ಕುಟುಂಬದವರು ದೇವಾಲಯದ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು ಎನ್ನುವುದು ಪುರಾಣ. ಕ್ಷೇತ್ರದಲ್ಲಿ ದುರ್ಗಿ ಅಲ್ಲದೆ ಕ್ಷಿಪ್ರಪ್ರಸಾದ ಸ್ವರೂಪಿ ಮಹಾಗಣಪತಿ, ನವಗ್ರಹ, ನಾಗ ಮುಂತಾದ ದೇವರಿಗೂ ವಿಶೇಷ ಪೂಜೆ ಸಲ್ಲುತ್ತದೆ. ಧೂಮಾವತಿ, ರಕ್ತೇಶ್ವರಿ, ಪಿಲಿಚಂಡಿ, ವಾರಾಹಿ ಪಂಜುರ್ಲಿ ಮುಂತಾದ ಭೂತಗಳಿಗೂ ಪೂಜೆ ಸಲ್ಲುತ್ತದೆ. ಕುಂಭ, ಕಾರ್ತಿಕ ಮಾಸದಲ್ಲಿ ಮತ್ತು ಶರವನ್ನವ...

ಜೈನಕಾಶಿ ಮೂಡಬಿದ್ರೆ

Image
ಮಂಗಳೂರು-ಕಾರ್ಕಳ ರಸ್ತೆಯಲ್ಲಿ ಮಂಗಳೂರಿನಿಂದ 35 ಕಿಮೀ ದೂರದಲ್ಲಿರುವ ಚಿಕ್ಕ ಪಟ್ಟಣ ಮೂಡಬಿದರೆ ಜೈನಕಾಶಿ ಎಂದೇ ಖ್ಯಾತವಾಗಿದೆ. 1 7ನೆಯ ಶತಮಾನದಲ್ಲಿ ಮೂಡಬಿದರೆ  ಪುತ್ತಿಗೆಯ ಚೌಟರಸರ ರಾಜಧಾನಿಯಾಗಿ ಮೆರೆದಿತ್ತು, ಪೋರ್ಚುಗೀಸರ ವಿರುದ್ದ ಹೋರಾಡಿದ ವೀರ ಮಹಿಳೆ  ಉಳ್ಳಾಲದ ರಾಣಿ ಅಬ್ಬಕ್ಕ ಕೂಡ ಇದೇ ಊರಿನಲ್ಲಿ ಹುಟ್ಟಿದ್ದಳು. ೧೯೯೭ರಲ್ಲಿ ಅವಿಭಜಿತ ದಕ್ಷಿಣ ಕನ್ನಡವನ್ನು ವಿಭಾಗಿಸುವ ಮುನ್ನ ಕಾರ್ಕಳ ತಾಲೂಕಿಗೆ ಸೇರಿದ್ದ ಮೂಡುಬಿದಿರೆಯು ಈಗ ಮಂಗಳೂರಿನ ಭಾಗವಾಗಿದೆ. ಮೂಡುಬಿದಿರೆಯು ಬಹಳ ಹಿಂದಿನಿಂದಲೂ ವ್ಯಾಪಾರ ವಾಣಿಜ್ಯದಲ್ಲಿ ಹೆಸರುವಾಸಿಯಾಗಿದ್ದ ಪಟ್ಟಣ. ಇಲ್ಲಿನ ವ್ಯಾಪಾರಿಗಳು ದೇಶ-ವಿದೇಶಗಳ ವಿವಿಧ ಸ್ಥಳಗಳ ವ್ಯಾಪಾರಿಗಳೊಂದಿಗೆ ವ್ಯವಹಾರ ಸಂಬಂಧ ಇಟ್ಟುಕೊಂಡಿದ್ದರೆಂದು ತಿಳಿದಿದೆ. ಇದಕ್ಕೆ ಸಣ್ಣ ಉದಾಹರಣೆಯಾಗಿ ಸಾವಿರ ಕಂಭದ ಬಸದಿಯ ಗೋಡೆಯ ಮೇಲೆ ಕೆತ್ತಲಾದ ಡ್ರಾಗನ್ ಪ್ರಾಣಿಯ ಉಬ್ಬು ಚಿತ್ರವನ್ನು ಗಮನಿಸಬಹುದು. ಆ ಕಾಲದಲ್ಲೇ ವ್ಯಾಪಾರಿಗಳು ಚೀನಾದೊಂದಿಗೆ ವ್ಯಾಪಾರ ಸಂಬಂಧವಿಟ್ಟುಕೊಂಡಿದ್ದರೆಂದು ಇದರಿಂದ ತಿಳಿಯುತ್ತದೆ. ಸಾವಿರ ಕಂಬದ ಬಸದಿ ಫಲ್ಗುಣಿ ನದಿಯ ದಂಡೆಯ ಮೇಲಿರುವ ಮೂಡಬಿದರೆಯಲ್ಲಿ 18 ಬಸದಿಗಳು ಹಲವಾರು ದೇವಾಲಯಗಳಿವೆ. ಈ ಪೈಕಿ ಸಾವಿರ ಕಂಬಗಳ ಬಸದಿ ಎಂದು ಖ್ಯಾತವಾಗಿರುವ ತ್ರಿಭುವನತಿಲಕ ಚೂಡಾಮಣಿ ಚಂದ್ರಪ್ರಭಾಸ್ವಾಮಿಯ ಮಹಾಚೈತ್ಯಾಲಯ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವ...

ಸುಲ್ತಾನ್ ಬತ್ತೇರಿ

Image
ಸುಲ್ತಾನ್ ಬತ್ತೇರಿ 1940ರಲ್ಲಿ ಕರಾವಳಿ ನಗರ ಮಂಗಳೂರು ಹಲವಾರು ಐತಿಹಾಸಿಕ ಪ್ರದೇಶಗಳಿಗೆ ಹೆಸರು ವಾಸಿಯಾಗಿದೆ. ಹಾಗೂ ಯಾತ್ರಿಕರ ಪ್ರವಾಸಿ ತಾಣವೂ ಹೌದು. ಆನಮೇಕ ರಾಜ ಮಹರಾಜರು ಈ ಪ್ರದೇಶದ ಮೇಲೆ ತಮ್ಮ ಅಧಿಪತ್ಯವನ್ನು ಸ್ಥಾಪಿಸಿದ್ದರು. ಇದರಲ್ಲಿ ಮಂಗಳೂರಿನ ಬೋಳುರಿನ ಸುಲ್ತಾನ್ ಬತ್ತೇರಿ ಒಂದು. ಬ್ರಿಟಿಷ್‌ ನೌಕೆಗಳು ಗುರುಪುರ ನದಿಯನ್ನು ಪ್ರವೇಶಿಸುವುದನ್ನು ತಡೆಗಟ್ಟಲು, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಹೋರಾಟಗಾರ ಮೈಸೂರು ಹುಲಿ ಟಿಪ್ಪುಸುಲ್ತಾನನು 1784 ರಲ್ಲಿ ಇದನ್ನು ನಿರ್ಮಿಸಿದನು. ಐತಿಹಾಸಿಕವಾಗಿ ಮಹತ್ವವಾಗಿರುವ ಈ ರಾಷ್ಟ್ರೀಯ ಸ್ಮಾರಕವು ಇತ್ತೀಚಿಗೆ ನವೀಕರಣಗೊಂಡಿದ್ದು, ಸ್ವಾತಂತ್ರ್ಯ ಹೋರಾಟದ ದಿವ್ಯ ಕುರುಹಾಗಿ ಉಳಿದಿದೆ. ಈ ಕೋಟೆಯನ್ನು ಕಪ್ಪು ಕಲ್ಲಿನಿಂದ ನಿರ್ಮಿಸಲಾಗಿದೆ. ಇದು ಒಂದು ಚಿಕ್ಕ ಕಾವಲು ಗೋಪುರ ಮಾದರಿಯ ಕೋಟೆಯಾಗಿದ್ದರೂ ಕೋಟೆಯ ಸುತ್ತಮುತ್ತ ಫಿರಂಗಿಗಳನ್ನು ಸ್ಥಾಪಿಸಲಾಗಿದೆ. ಮತ್ತು ವೈರಿಗಳ ಚಲನವಲನಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ  ರಚಿತವಾಗಿದೆ. ಈ ಕೋಟೆಯ ಅಡಿಭಾಗದಲ್ಲಿ ಸೈನಿಕರ ವಿಶ್ರಾಂತಿ ಕೋಣೆ ಇದೆ. ಮತ್ತು ಸುರಂಗ ಮಾರ್ಗವೂ ಇದೆ ಆದರೆ ಈಗ  ಸಾರ್ವಜನಿಕರಿಗೆ ಇದನ್ನು ನಿರ್ಬಂಧಿಸಲಾಗಿದೆ. ರಾಷ್ಟ್ರಿಯ ಸ್ಮಾರಕವಾಗಿ ಇದು ಘೋಷಣೆ ಯಾದ್ದರಿಂದ ಕೇಂದ್ರ ಪುರತತ್ವ ಇಲಾಖೆ ಇದರ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ.  ಸುಲ್ತಾನ್ ಬತ್ತೇರಿ ಸೂರ್ಯಾಸ್ತದ ವಿಹಂಗ...

ಗಡಾಯಿ ಕಲ್ಲು(ಜಮಲಾಬಾದ್ ಕೋಟೆ)

Image
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕೆಂದರೆ ಎಲ್ಲರ ಮುಂದೆ ಮೂಡುವ ದೃಶ್ಯ `ಗಡಾಯಿ ಕಲ್ಲು'. ಬೆಳ್ತಂಗಡಿ ತಾಲೂಕಿನಲ್ಲೇ ಅತ್ಯಂತ ಆಕರ್ಷಣೆಯ, ಚಾರಣಿಗರಿಗೆ, ಪ್ರವಾಸಿಗರಿಗೆ ಪ್ರಿಯ ತಾಣವಾಗಿ ಈ ಕಲ್ಲು ವಿರಾಜಿಸುತ್ತಿದೆ.  ಕು ದುರೆ ಮುಖ ರಾಷ್ಟ್ರೀಯ ಉದ್ಯಾನವನದಲ್ಲಿರುವ  `ನಡ' ಗ್ರಾಮಕ್ಕೆ ಸೇರಿರುವ  ಮತ್ತು ರಾಜ್ಯ ಹೆದ್ದಾರಿಗೆ ಸನಿಹದಲ್ಲಿರುವ ಈ ಗಡಾಯಿಕಲ್ಲು ಹಲವಾರು ಐತಿಹ್ಯಗಳನ್ನೂ ಚಾರಿತ್ರಿಕ ದಾಖಲೆಗಳನ್ನೂ ಹೊಂದಿದೆ. ಅದಮ್ಯ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಈ ಕಲ್ಲು ಪಶ್ಚಿಮ ಘಟ್ಟದ ಹಿನ್ನಲೆಯೊಂದಿಗೆ ಶೋಭಿಸುತ್ತಾ ಚಾರಣಿಗರನ್ನು, ಪ್ರಕೃತಿ ಪ್ರಿಯರನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿದೆ.   ಸಮುದ್ರ ಮಟ್ಟದಿಂದ 1788 ಅಡಿ ಎತ್ತರದಲ್ಲಿದೆ ಗಡಾಯಿಕಲ್ಲು. ಇದರ ಮೇಲ್ಭಾಗದಲ್ಲಿ ನರಸಿಂಹಗಡ ಅಥವಾ ಜಮಲಾಗಡ ಎಂಬ ಕೋಟೆ ಕಾಣಬಹುದಾಗಿದೆ. 2,800 ಮೆಟ್ಟಿಲುಗಳನ್ನೇರಿದಾಗ ಜಮಲಾಗಡದ ಮೇಲ್ಭಾಗ ತಲುಪಬಹುದು. ಗಡಾಯಿಕಲ್ಲಿನ ಮೇಲಕ್ಕೇರುತ್ತಾ ಸಾಗಿದಂತೆ ಒಂದು ದ್ವಾರ ಸಿಗುತ್ತದೆ. ಈ ದ್ವಾರದ ನಂತರ ಕಲ್ಲನ್ನೇ ಕಡಿದು ವಿನ್ಯಾಸಗೊಳಿಸಿ ಮೆಟ್ಟಿಲು ರಚಿಸಲ್ಪಟ್ಟಿದೆ. ತುಂಬಾ ಕಡಿದಾದ ಈ ಮೆಟ್ಟಿಲುಗಳ ಮೇಲೆ ಸಾಗುವುದೇ ಒಂದು ಪ್ರಯಾಸ ಮತ್ತು ಸಾಹಸದ ಕಾರ್ಯ. ಇಂಡೋ ಸಾರ್ಸೆನಿಕ್ ಶೈಲಿಯನ್ನು ಹೋಲುವ ಶಿಲ್ಪ ಚಿತ್ರಗಳು ಇಲ್ಲಿನ ಒಂದನೇ ಮಹಾ ದ್ವಾರಗಳಲ್ಲಿ ಕಂಡುಬರುತ್ತವೆ. ಗಡಾಯಿಕಲ್ಲಿನ ಮೇಲ್ಭ...