Posts

ಗಡಾಯಿ ಕಲ್ಲು(ಜಮಲಾಬಾದ್ ಕೋಟೆ)

Image
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕೆಂದರೆ ಎಲ್ಲರ ಮುಂದೆ ಮೂಡುವ ದೃಶ್ಯ `ಗಡಾಯಿ ಕಲ್ಲು'. ಬೆಳ್ತಂಗಡಿ ತಾಲೂಕಿನಲ್ಲೇ ಅತ್ಯಂತ ಆಕರ್ಷಣೆಯ, ಚಾರಣಿಗರಿಗೆ, ಪ್ರವಾಸಿಗರಿಗೆ ಪ್ರಿಯ ತಾಣವಾಗಿ ಈ ಕಲ್ಲು ವಿರಾಜಿಸುತ್ತಿದೆ.  ಕು ದುರೆ ಮುಖ ರಾಷ್ಟ್ರೀಯ ಉದ್ಯಾನವನದಲ್ಲಿರುವ  `ನಡ' ಗ್ರಾಮಕ್ಕೆ ಸೇರಿರುವ  ಮತ್ತು ರಾಜ್ಯ ಹೆದ್ದಾರಿಗೆ ಸನಿಹದಲ್ಲಿರುವ ಈ ಗಡಾಯಿಕಲ್ಲು ಹಲವಾರು ಐತಿಹ್ಯಗಳನ್ನೂ ಚಾರಿತ್ರಿಕ ದಾಖಲೆಗಳನ್ನೂ ಹೊಂದಿದೆ. ಅದಮ್ಯ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಈ ಕಲ್ಲು ಪಶ್ಚಿಮ ಘಟ್ಟದ ಹಿನ್ನಲೆಯೊಂದಿಗೆ ಶೋಭಿಸುತ್ತಾ ಚಾರಣಿಗರನ್ನು, ಪ್ರಕೃತಿ ಪ್ರಿಯರನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿದೆ.   ಸಮುದ್ರ ಮಟ್ಟದಿಂದ 1788 ಅಡಿ ಎತ್ತರದಲ್ಲಿದೆ ಗಡಾಯಿಕಲ್ಲು. ಇದರ ಮೇಲ್ಭಾಗದಲ್ಲಿ ನರಸಿಂಹಗಡ ಅಥವಾ ಜಮಲಾಗಡ ಎಂಬ ಕೋಟೆ ಕಾಣಬಹುದಾಗಿದೆ. 2,800 ಮೆಟ್ಟಿಲುಗಳನ್ನೇರಿದಾಗ ಜಮಲಾಗಡದ ಮೇಲ್ಭಾಗ ತಲುಪಬಹುದು. ಗಡಾಯಿಕಲ್ಲಿನ ಮೇಲಕ್ಕೇರುತ್ತಾ ಸಾಗಿದಂತೆ ಒಂದು ದ್ವಾರ ಸಿಗುತ್ತದೆ. ಈ ದ್ವಾರದ ನಂತರ ಕಲ್ಲನ್ನೇ ಕಡಿದು ವಿನ್ಯಾಸಗೊಳಿಸಿ ಮೆಟ್ಟಿಲು ರಚಿಸಲ್ಪಟ್ಟಿದೆ. ತುಂಬಾ ಕಡಿದಾದ ಈ ಮೆಟ್ಟಿಲುಗಳ ಮೇಲೆ ಸಾಗುವುದೇ ಒಂದು ಪ್ರಯಾಸ ಮತ್ತು ಸಾಹಸದ ಕಾರ್ಯ. ಇಂಡೋ ಸಾರ್ಸೆನಿಕ್ ಶೈಲಿಯನ್ನು ಹೋಲುವ ಶಿಲ್ಪ ಚಿತ್ರಗಳು ಇಲ್ಲಿನ ಒಂದನೇ ಮಹಾ ದ್ವಾರಗಳಲ್ಲಿ ಕಂಡುಬರುತ್ತವೆ. ಗಡಾಯಿಕಲ್ಲಿನ ಮೇಲ್ಭ...

ಮಂಗಳೂರಿನ ನಿಜವಾದ ರೂವಾರಿ ಯು.ಶ್ರೀನಿವಾಸ ಮಲ್ಯ

Image
ಉಳ್ಳಾಲ ಶ್ರೀನಿವಾಸ ಮಲ್ಯ ಈ ಹೆಸರು ಮಂಗಳೂರಿನ ಇತಿಹಾಸದ ಪುಟಗಳಲ್ಲಿ ಇಂದಿಗೂ ಅಮರ,ಅವರು ಆ ಕಾಲದಲ್ಲಿ ಮಂಗಳೂರಿನ ಕನಸನ್ನು ಕಟ್ಟಿರದಿದ್ದರೆ ಬಹುಷ ನಾವು ಇಂದು ಕಾಣುವ  ಭವ್ಯ ಮಂಗಳೂರನ್ನು ಊಹಿಸಲಿ ಆಸಾಧ್ಯ. ಸದ್ದುಗದ್ದಲ ಇಲ್ಲದೆ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ನೀಡಿದ ಕೊಡುಗೆ ಅನನ್ಯ. ಪ್ರಸಕ್ತ ಅವಿಭಜಿತ ದಕ್ಷಿಣ ಕನ್ನಡದ ಅಭಿವೃದ್ಧಿ ಚಿಂತನೆಯ ಮಟ್ಟಿಗೆ ಯು.ಎಸ್. ಮಲ್ಯರು ಪ್ರಾತಃಸ್ಮರಣೀಯರು.  ಅಸಾಧಾರಣ ಬುದ್ಧಿವಂತಿಕೆ, ವ್ಯವಹಾರ ಕುಶಲತೆ ಹೊಂದಿರುವ ನಮ್ಮ ಕರಾವಳಿಯ ಕೊಂಕಣ ಸಾರಸತ್ವರು ಮತ್ತು ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯ ಈ ನೆಲದ ವಿಭಿನ್ನ ರಂಗಗಳಿಗೆ ಅಸಂಖ್ಯ ಮಹನೀಯರನ್ನು ನೀಡಿದೆ. ದೇಶಭಕ್ತ ಕಾರ್ನಾಡ್ ಸದಾಶಿವರಾಯರು, ಸಾಮಾಜಿಕ ಪರಿವರ್ತನೆಯ ಹರಿಕಾರ ಕುದ್ಮುಲ್ ರಂಗರಾಯರು, ಬ್ಯಾಂಕಿಂಗ್ ಆಂದೋಲನದ ರೂವಾರಿಗಳಲ್ಲೊಬ್ಬರಾದ ಅಮ್ಮೆಂಬಳ ಸುಬ್ಬರಾಯರು, ರಾಷ್ಟ್ರಕವಿ ಎನಿಸಿದ ಗೋವಿಂದ ಪೈಗಳು… ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಉಳ್ಳಾಲ ಶ್ರೀನಿವಾಸ ಮಲ್ಯ ಕೂಡಾ ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದಿಂದ ಬಂದವರೇ. ಶ್ರೀನಿವಾಸ ಮಲ್ಯರು 1902 ಇಸವಿ ನವಂಬರ 21ರಂದು ಜಿಲ್ಲೆಯ ಹೆಸರಾಂತ ಉಳ್ಳಾಲ ಮಲ್ಯ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಶ್ರೀ ಉಳ್ಳಾಲ ಮಂಜುನಾಥ ಮಲ್ಯ ಮತ್ತು ತಾಯಿ ಸರಸ್ವತಿ ಯಾನೆ ರುಕ್ಮಾಬಾಯಿ. ಹಿರಿಯ ಅಣ್ಣ ಮಾಧವ ಮಲ್ಯ, ಇನ್ನೊಬ್ಬ ತಮ್ಮ ಜಿಲ್ಲೆಯ ಹೆಸರಾಂತ ಸಾಮಾಜಿಕ ...

ಸರ್ ಜಾನ್ ಸ್ಟರಕ್ : ಕಲೆಕ್ಟರ್ ಆಫ್ ಸೌತ್ ಕೆನರಾ

Image
ಸರ್ ಜಾನ್ ಸ್ಟರಕ್ , ಈ ಹೆಸರು ಮಂಗಳೂರಿನ ಇಂದಿನ ಪೀಳಿಗೆಗೆ ಕಡಿಮೆ ಪರಿಚಯ.18 ನೇ ಶತಮಾನದಲ್ಲಿ ಕರಾವಳಿ ಜಿಲ್ಲೆಯನ್ನು ಆಳಿದ ಬ್ರಿಟೀಷ್ ಅಧಿಕಾರಿ.ಜಿಲ್ಲಾ ಕಲೆಕ್ಟರರಾಗಿ ಅನೇಕ ಉತ್ತಮ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾದವರು.1881 ರಲ್ಲಿ ಕರಾವಳಿಯ ಈ ಭಾಗ ಮದ್ರಾಸ್ ಆಡಳಿತಕ್ಕೆ ಒಳಪಟ್ಟಿದ್ದ ಈ ಸಂದರ್ಭದಲ್ಲಿ ಈ ಜಿಲ್ಲೆಯಲ್ಲಿ ಸ್ಟರಕ್ ಅವರು ಕಲೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದರು.ಇದಕ್ಕೂ ಮುನ್ನ ಅವರು ಈ ಜಿಲ್ಲೆಯಲ್ಲಿ ಅನೇಕ ಕಡೆ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. 1866-67 ರಲ್ಲಿ ಅವರು ಸೌತ್ ಕೆನರಾ ಜಿಲ್ಲೆಯ ಎಸಿಸ್ಟೆಂಟ್ ಕಲೆಕ್ಟರ್ ಆಗಿ ನೇಮಕವಾಗಿದ್ದರು. ( ಮಂಗಳೂರು ಹಳೇ ಬಂದರಿನಲ್ಲಿನ ಸ್ಟರಕ್ ವೃತ್ತ) 1873 ರಲ್ಲಿ ಸೌತ್ ಕೆನರಾ ಮತ್ತು ಮೈಸೂರು ಜಿಲ್ಲೆಗಳ ಮಹತ್ವದ ಗಡಿ ವಿವಾದವನ್ನು ಪರಿಹರಿಸುವ ನಿಟ್ಟಿನಲ್ಲಿ 750 ರೂಪಾಯಿಗಳ ವಿಶೇಷ ಸಂಭಾವನೆಯೊಂದಿಗೆ ಅವರನ್ನು ಕಮೀಶನರ್ ಆಗಿ ಬ್ರೀಟಿಷ್ ನೇಮಕ ಮಾಡಿತ್ತು.ಸ್ಥಳಿಯ ಸಮಸ್ಯೆಗಳನ್ನು ಬಗೆ ಹರಿಸಲು ಇಲ್ಲಿನ ಸ್ಥಳಿಯ ಭಾಷೆಯ ಅಗತ್ಯತೆಯನ್ನು ಕಂಡು, ಅವರು ಕನ್ನಡ, ತುಳು ಭಾಷೆಯನ್ನು ಕಲಿತರು ಮಾತ್ರವಲ್ಲ ನಿರರ್ಗಳವಾಗಿ ಮಾತಾಡುತ್ತಿದ್ದರು. ತುಳು ಭಾಷೆಯಲ್ಲಿ ಅಪಾರ ಪಾಂಡಿತ್ಯವನ್ನು ಪಡೆದಿದ್ದ ಬ್ರಾಹ್ಮಣರಿಂದ ತುಳು ಭಾಷೆಯನ್ನು ಕಲಿತರು. ಈ ಹಿನ್ನೆಲೆಯಲ್ಲಿ 1872 ರಲ್ಲಿ ಕನ್ನಡ ಭಾಷಾ ಅನುವಾದಕರಾಗಿ ಸರ್ಕಾರದಿಂದ ನೇಮಕಗೊಂಡರ...

ಬ್ಯಾರಿಗಳು

Image
" ಬ್ಯಾರಿ " ಎಂಬ ಪದವು ತುಳುವಿನ ಬ್ಯಾರ ಎಂಬ ಶಬ್ದ ದಿಂದ ಉದ್ಭವಗೊಂಡಿದ್ದು ವ್ಯಾಪಾರ ವಹಿವಾಟು ಎಂದು ಅದರ ಅರ್ಥ. ಪ್ರಾಚೀನ ಕಾಲದಿಂದಲೂ ಈ ಜನಾಗದ ಹೆಚ್ಚಿನ ಜನರು ವ್ಯಾಪಾರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಡಿದ್ದರು. ಆದ್ದರಿಂದ ಸ್ಥಳೀಯ ತುಳುವರು ಅವರನ್ನು ಬ್ಯಾರಿಗಳೆಂದು ಕರೆಯುತ್ತಿದ್ದರು. ಕ್ರಿ.ಶ.1891ರ ಜನಗಣತಿಯ ಪ್ರಕಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆ ಕಾಲದಲ್ಲಿ 90,345 ಬ್ಯಾರಿ ವ್ಯಾಪಾರಿಗಳಿದ್ದರು. ಮತ್ತು ಇದು ಒಟ್ಟು ವರ್ತಕರ ಪ್ರಮಾಣಕ್ಕೆ ಹೋಲಿಸಿದರೆ ಸುಮಾರು ಶೇಕಡಾ 92ರಷ್ಟಾಗಿತ್ತು. ಆದ್ದರಿಂದಲೇ ಅವರನ್ನು ಬ್ಯಾರಿಗಳೆಂದು ಕರೆಯಲಾಗುತ್ತಿತ್ತು ಮತ್ತು ಇದು ಅನ್ವರ್ಥಕನಾಮವೂ ಆಗಿತ್ತು. ಬ್ಯಾರಿಗಳು ತುಳುನಾಡು ಎಂದು ಹಿಂದೆ ಕರೆಯಲಾಗುತ್ತಿದ್ದ ಕರ್ನಾಟಕದ ಈಗಿನ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ವಾಸವಾಗಿರುವ ಒಂದು ಮುಸ್ಲಿಂ ಜನಾಂಗ. ಅವರು ತಮ್ಮದೇ ಆದ ವಿಶಿಷ್ಟ ಸಂಪ್ರದಾಯ ಮತ್ತು ಸಾಂಸ್ಕೃತಿಕ ಅನನ್ಯತೆಯನ್ನು ಹೊಂದಿರುವ ಒಂದು ಸಾಮಾಜಿಕ ಪಂಗಡ. ಬ್ಯಾರಿಗಳಿಗೆ ಕೊಂಕಣ ತೀರದ ನವಾಯತರು ಮತ್ತು ಮಲಬಾರಿನ ಮಾಪಿಳ್ಳಗಳಿಗೆ ಸಮನಾದ ಒಂದು ಮಹತ್ವದ ಸಾಂಸ್ಕೃತಿಕ ಸಂಪ್ರದಾಯವಿದೆ. 1891ರ ಕೂಚ್ ಮನ್ ಸಮೀಕ್ಷಾ ವರದಿಯಲ್ಲಿ ನಮೂದಾಗಿರುವಂತೆ ಈ ಜನಾಂಗದ ಪ್ರಮುಖ ಗುರುತು ಎಂದರೆ ಪುರುಷರಿಗೆ ಬ್ಯಾರಿ ಮತ್ತು ಮಹಿಳೆಯರಿಗೆ ಬ್ಯಾರ್ದಿ ಎಂಬ ಒಕ್ಕಣೆಯಿರುವುದು. ಅಲ್ಲದೆ ಈ ಜನಾಗಕ್ಕೂ...

ಭಗವಾನ್ ಬಾಹುಬಲಿ ವೇಣೂರು.

Image
ಕರಾವಳಿ ನಾಡು ದಕ್ಷಿಣ ಕನ್ನಡ ಜಿಲ್ಲೆ ಅನೇಕ ಪುಣ್ಯ ನೆಲೆಗಳ ಬೀಡು.ವಿವಧ ಜಾತಿ- ಧರ್ಮ, ಸಂಸ್ಕೃತಿಗಳ ಜನರು ಇಲ್ಲಿದ್ದರೂ ಎಲ್ಲಾ ಧರ್ಮಿಯರು ಇಲ್ಲಿ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ.ಇವರಲ್ಲಿ ಅತ್ಯಂತ ಪುರಾತನವಾದ ಜೈನ ಧರ್ಮವು ಒಂದು.ಜೈನ ಧರ್ಮದ ಻ನೇಕ ಪುಣ್ಯ ಕ್ಷೇತ್ರಗಳು ಈ ಕರಾವಳಿ ಭಾಗದಲ್ಲಿವೆ ಇವುಗಳಲ್ಲಿ ಈ ವೇಣೂರು ಕೂಡ ಒಂದು. ವಿರಾಟ್ ವಿರಾಗಿ ವೇಣೂರ ಗೊಮ್ಮ ಟೇಶ್ವರ ನಿಗೆ ಇದೀಗ ಮಹಾ ಮಜ್ಜ ನಕ್ಕೆ ಭರದ ಸಿದ್ಧತೆ. 20 12 ಜನವರಿ 29 ರಂದು ಮಹಾ ಮಜ್ಜ ನಕ್ಕೆ ಈಗಾ ಗಲೇ ದಿನ ನಿಗಧಿ ಯಾಗಿದ್ದು,ಪೂರ್ವ ಭಾವೀ ಸಿದ್ದತೆ ಗಳು ಭರ ದಿಂದ ಸಾಗಿವೆ.ಜಗ ತ್ತಿಗೆ ಶಾಂತಿ,ತ್ಯಾಗ ಮತ್ತು ಅಹಿಂ ಸೆಯ ಸಂದೇ ಶವನ್ನು ಸಾರಿದ ಭಗ ವಾನ್ ಬಾಹು ಬಲಿಯ ಪುಣ್ಯ ಕ್ಷೇತ್ರ ಗಳಲ್ಲಿ ಒಂ ದಾದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂ ಗಡಿ ತಾಲೂ ಕಿನ ವೇಣೂರು ರಾಜ್ಯದ ಪ್ರಸಿದ್ದ ಜೈನ ತೀರ್ಥ ಕ್ಷೇತ್ರ ಗಳಲ್ಲಿ ಒಂದು. ಕ್ರಿ.ಶ. 1604 ರಲ್ಲಿ ಈ ಪ್ರದೇಶ ದಲ್ಲಿ ಆಳ್ವಿಕೆ ನಡೆಸು ತ್ತಿದ್ದ 4ನೇ ಅಜಿಲರ ಅರಸ ರಾದ ತಿಮ್ಮಣ್ಣಾಜಿಲ ಅರಸರಿಂದ ಪ್ರತಿ ಷ್ಠಾಪಿತವಾದ 35 ಅಡಿ ಎತ್ತರದ ಏಕ ಶಿಲಾ ಗೋಮ ಟೇಶ್ವರ ಮಹಾಮೂರ್ತಿ ಅತೀ ವಿರಳವಾಗಿರುವ ಮಂದಸ್ಮಿತ ಮುಖಮುದ್ರೆಯನ್ನು ಹೊಂದಿದ್ದು, ಜಾತಿ-ಭೇಧವಿಲ್ಲದೆ ಎಲ್ಲಾ ಧರ್ಮಿಯರನ್ನೂ ತನ್ನೆಡೆ ಕೈ ಬೀಸಿ ಕರೆಯುತ್ತಿದೆ.ಎಲ್ಲ ಬಾಹುಬಲಿ ವಿಗ್ರಹಗಳೂ ಗುಡ್ಡ- ಬೆಟ್ಟದಲ್ಲಿ ಪ್ರತಿಷ್ಠಾಪಿಸಿದ್ದರೆ, ವೇಣೂರಿನ ಈ ಬಾಹುಬಲಿ ಮೂರ್ತಿ ಮಾ...

ಬಿ.ಎಂ. ಇದಿನಬ್ಬ: ಒಂದು ನೆನಪು

Image
ಗಾಂಧಿ ಟೋಪಿ,ಶುಭ್ರ ಖಾದಿ ಬಟ್ಟೆ,ಬಿಳಿ ಗಡ್ಡ, ಕನ್ನಡಕ, ಕಂಚಿನ ಕಂಠ. ಅದರಲ್ಲಿ ಹೊರಹೊಮ್ಮಿದ ಕಯ್ಯರ ಕಿಂಞಣ್ಣ ರೈ ಅವರ ‘‘ಐಕ್ಯವೊಂದೇ ಮಂತ್ರ...’’ ಹಾಡು. ಇಷ್ಟು ವಿವರಿಸಿದರೆ ಸಾಕು, ಅವಿಭಾಜಿತ ದಕ್ಷಿಣ ಕನ್ನಡ ಕರಾವಳಿಯಲ್ಲಿ ಯಾರನ್ನೂ ಕೇಳಿದರು ಹೇಳುತ್ತಾರೆ ‘‘ಅವರು ಇದಿನಬ್ಬ’’. ಬಿ. ಎಂ.ಇದಿನಬ್ಬ ಕನ್ನಡ ನಾಡನ್ನು ಅಗಲಿ ವರ್ಷಗಳೇ ಸಂದಿವೆ. ಅವರ ಕಂಚಿನ ಕಂಠದ ಗಮಕ ಹಾಡುಗಳಿಲ್ಲದೆ ಕರಾವಳಿಯ ವೇದಿಕೆಗಳು ಬಣಗುಟ್ಟುತ್ತಿವೆ. ಇದಿನಬ್ಬರ ಹೆಸರೇ ಸದಾ ಕೋಮು ದಳ್ಳುರಿಯಲ್ಲಿ ಬೆಂದ ಕರಾವಳಿಯ ಕೋಮುಸೌಹಾರ್ದಕ್ಕೆ ಪರ್ಯಾಯ ಪದ. ಬಹುಷ ಸೌಹಾರ್ದದ ಕುರಿತಂತೆ ಮಾತನಾಡಿದ್ದು ಬಹಳಷ್ಟು ಕಡಿಮೆ.ಬದಲಿಗೆ ಅದನ್ನು ಬದುಕಿನಲ್ಲಿ ತೋರಿಸಿಕೊಟ್ಟವರು. ಒಬ್ಬ ಮುಸ್ಲಿಮನಾಗಿದ್ದರೂ ಇದಿನಬ್ಬ ಎಂದಿಗೂ ಕೇವಲ ಮುಸ್ಲಿಮರ ನಾಯಕರಾಗಿರಲಿಲ್ಲ.ಅವರು ಎಂದೆಂದಿಗೂ ಕನ್ನಡದ ಕಟ್ಟಾಳು. ಕನ್ನಡತನ, ಸೌಹಾರ್ದ, ಸಹಕಾರ, ಸರಳತೆ, ನೇರನುಡಿ, ಪ್ರಾಮಾಣಿಕ ಬದುಕು...ಇವು ಇದಿನಬ್ಬ ನಮ್ಮ ನಡುವೆ ಊರಿ ಹೋದ ಹೆಜ್ಜೆಗಳು....ಆ ಹೆಜ್ಜೆಗಳ ಹಿಂದೆ ಹೆಜ್ಜೆಗಳನ್ನಿಟ್ಟು ಸಾಗಿದರೂ ಸಾಕು...ಕರಾವಳಿ ಮಾತ್ರವಲ್ಲ, ಇಡೀ ಕರ್ನಾಟಕವೇ ಸೌಹಾರ್ದದ ಬೀಡಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದಿನಬ್ಬರವರ ಕುಟುಂಬದ ಬಗ್ಗೆ ಮಾಹಿತಿ ಕಲೆ ಹಾಕಿದರೆ, ಇದಿನಬ್ಬರ ತಂದೆ ತೀರಿದಾಗ ಅವರು ಹತ್ತು ವರ್ಷದ ಕೂಸು. ತಾಯಿ ಗರ್ಭವತಿ. ಇದ್ದುದರಲ್ಲಿ ಇದಿನಬ್ಬರೇ ದೊಡ್ಡ ಮಗ.ತಂದೆ ನಿಧನರಾಗುವ ಮೊದಲು ತನ್ನ...

ಮಂಗಳೂರು ಟೈಲ್ಸ್..

Image
ಒಂದು ಕಾಲಕ್ಕೆ ಮಂಗಳೂರು ಹೆಂಚು ಇಲ್ಲಿನ ಜನರ ಜೀವನಾಡಿಯಾಗಿತ್ತು. ಬಡವರು ಮನೆ ಕಟ್ಟಲು ಮುಳಿಹುಲ್ಲನ್ನು ಆಶ್ರಯಿಸುತ್ತಿ ದ್ದರೆ, ಶ್ರೀಮಂತರು ಹೆಂಚನ್ನು ಬಳಸುತ್ತಿದ್ದರು.ಸ್ವಾತಂತ್ರಪೂರ್ವದಲ್ಲೇ ಅವಿಭಜಿತ ದಕ್ಷಿಣ ಕನ್ನಡ ಹೆಂಚು ಉದ್ಯಮಕ್ಕೆ ಹೆಸರುವಾಸಿಯಾಗಿತ್ತು. ಇಲ್ಲಿನ ಹೆಂಚು ಗಳು ‘ಮಂಗಳೂರು ಹೆಂಚು’ ಎಂದೇ ಪ್ರಸಿದ್ಧಿ ಪಡೆದಿತ್ತು. ಬ್ರಿಟಿಷರು ಕೂಡ ಇಲ್ಲಿನ ಹೆಂಚಿಗೆ ತಲೆ ತೂಗಿದ್ದರು. ಯುರೋಪ್, ಆಫ್ರಿಕಾ ಖಂಡ ಗಳಿಗೆ ಹಾಗೂ ದೇಶಾ ದ್ಯಂತ ಇಲ್ಲಿಂದಲೇ ಹೆಂಚುಗಳು ರಫ್ತಾಗುತ್ತಿದ್ದವು. ನೂರಾರು ಕುಟುಂಬಗಳು ಈ ಉದ್ಯಮವನ್ನು ಆಶ್ರ ಯಿಸಿದ್ದವು. ಸಾವಿರಾರು ಕಾರ್ಮಿಕರ ಬದುಕನ್ನು ಇದು ಹಸನುಗೊಳಿಸಿತ್ತು.ಆದರೆ, ಬರಬರುತ್ತಾ ಹೆಂಚಿನ ಮನೆ, ಅಂಗಡಿಗಳು ಕಾಂಕ್ರಿಟ್ ಮಯವಾಗ ತೊಡಗಿತು. ಶ್ರೀಮಂತರು ಮಾತ್ರವಲ್ಲ ಮಧ್ಯಮ ವರ್ಗದ ಜನರೂ ಆರ್‌ಸಿಸಿ ಕಟ್ಟಡ ನಿರ್ಮಾಣ ಶುರುವಿಟ್ಟರು. ಹಾಗಾಗಿ ಇದೀಗ ನಗರ ಮಾತ್ರವಲ್ಲ ಗ್ರಾಮಾಂತರ ಪ್ರದೇಶಗಳಲ್ಲೂ ಆರ್‌ಸಿಸಿ ಮನೆಗಳನ್ನು ಕಾಣಬಹುದು. ಹೆಂಚಿನ ಮನೆ ನಿರ್ಮಾಣಕ್ಕೆ ಮುಂದಾ ದರೆ ಅಂತಹವರನ್ನು ತಾತ್ಸಾರದ ಭಾವನೆ ಯಿಂದ ನೋಡುವವರಿಗೂ ಇಂದಿನ ಕಾಲದಲ್ಲಿ ಕೊರತೆ ಇಲ್ಲ. ಹಾಗಾಗಿ ಈಗ ಎಲ್ಲೆಡೆ ಕಾಂಕ್ರಿಟ್ ಕಟ್ಟಡ ಗಳೇ ನಿರ್ಮಾಣ ವಾಗುತ್ತಿದೆ. ಇದರ ನೇರ ಪರಿಣಾಮ ಹೆಂಚು ಉದ್ಯಮದ ಮೇಲಾಗಿದೆ.ಸ್ವರ್ಣ ಯುಗ ದಲ್ಲಿದ್ದ ಮಂಗ ಳೂರು ಹೆಂಚಿನ ಸ್ಥಿತಿ ಇದೀಗ ಆದೋ ಗತಿಗೆ ಇಳಿಸಿದ್ದು, ಯಾರೂ ಕೇಳುವವರಿಲ್ಲದ ಸ್ಥಿತಿ ನಿರ್ಮ...